ವರ್ಷಕ್ಕೆ ₹2. ಕೋಟಿ ಸಂಬಳದ ಮೈಕ್ರೋಸಾಫ್ಟ್‌ ಕೆಲಸಕ್ಕೆ ಗುಡ್‌ಬೈ! 25ರ ಯುವಕನಿಂದ AI ಸ್ಟಾರ್ಟ್‌ಅಪ್‌ ಸಾಹಸ

ಟೆಕ್‌ ಜಗತ್ತಿನಲ್ಲಿ ಸ್ವಂತ ಉದ್ಯಮ ಕಟ್ಟುವ ಕನಸಿಗಾಗಿ ಲಕ್ಷಾಂತರ ರೂಪಾಯಿ ಸಂಬಳದ ಕೆಲಸವನ್ನೇ ತೊರೆದ ಯುವಕನ ಕಥೆ ಈಗ ಗಮನ ಸೆಳೆಯುತ್ತಿದೆ. ವರ್ಷಕ್ಕೆ 2 ಲಕ್ಷ ಡಾಲರ್‌ಗೂ ಅಧಿಕ ಸಂಬಳ ಪಡೆಯುತ್ತಿದ್ದ ಮೈಕ್ರೋಸಾಫ್ಟ್‌ ಕಂಪನಿಯ 25 ವರ್ಷದ ಮಾಜಿ ಎಂಜಿನಿಯರ್‌ ಜುನೈದ್ ಖಾನ್‌, ತಮ್ಮದೇ ಕೃತಕ ಬುದ್ಧಿಮತ್ತೆ (AI) ಸ್ಟಾರ್ಟ್‌ಅಪ್‌ ಆರಂಭಿಸಲು ನಿರ್ಧರಿಸಿದ್ದಾರೆ. ಕೈತುಂಬಾ ಸಂಬಳ, ಪ್ರತಿಷ್ಠಿತ ಕಂಪನಿಯ ಉದ್ಯೋಗ ಇದ್ದರೂ, ತಮಗೆ ಬೇಕಾದ ಕೌಶಲಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಭಾವನೆ ಅವರ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ.

Mirosoft engineer 25-Year-Old Khan Quits Microsoft Job Paying Over 200 000 a Year to Build AI Startup

₹1.7 ಕೋಟಿಗೂ ಅಧಿಕ ಸಂಬಳದ ಕೆಲಸ ಬಿಟ್ಟಿದ್ದೇಕೆ?

ಅಮೆರಿಕದ ಸಿಯಾಟಲ್‌ನಲ್ಲಿ ವಾಸಿಸುವ ಜುನೈದ್ ಖಾನ್‌ 2023ರಲ್ಲಿ ಪದವಿ ಮುಗಿಸಿದ ಬಳಿಕ ಮೈಕ್ರೋಸಾಫ್ಟ್‌ ಕಂಪನಿಗೆ ಸೇರಿದ್ದರು. ಕಂಪನಿಯ ಜಾಗತಿಕ ಡೇಟಾ ಸೆಂಟರ್‌ ವಿಸ್ತರಣೆಯ ಕೆಲಸದಲ್ಲಿ ಆರಂಭದಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡಿದ್ದರು.

ಆದರೆ, 2025ರ ಆರಂಭದಲ್ಲಿ ಕಂಪನಿಯ ಆದ್ಯತೆಗಳಲ್ಲಿ ಬದಲಾವಣೆ ಕಂಡುಬಂದಿತು. ಹಲವು ಸೇವೆಗಳ ವ್ಯತ್ಯಯಗಳ ಬಳಿಕ ಭದ್ರತೆ ಮತ್ತು ಸೇವೆಗಳ ಸ್ಥಿರತೆಗೆ ಹೆಚ್ಚಿನ ಒತ್ತು ನೀಡಲಾಯಿತು. ಇದರಿಂದ ಹೊಸ ಉತ್ಪನ್ನಗಳು ಹಾಗೂ ವೈಶಿಷ್ಟ್ಯಗಳನ್ನು ಅಭಿವೃದ್ಧಿಪಡಿಸುವ ಕೆಲಸದ ವೇಗ ಕಡಿಮೆಯಾದಂತೆ ಅವರಿಗೆ ಅನಿಸತೊಡಗಿತು.

2024ರಲ್ಲಿ ಬೋನಸ್‌ ಮತ್ತು ಷೇರುಗಳೂ ಸೇರಿದಂತೆ ಅವರು 2 ಲಕ್ಷ ಡಾಲರ್‌ಗೂ ಅಧಿಕ ಆದಾಯ ಗಳಿಸಿದ್ದರು. ಭಾರತೀಯ ರೂಪಾಯಿಗಳಲ್ಲಿ ಇದು ವರ್ಷಕ್ಕೆ ಸುಮಾರು ₹1.7 ಕೋಟಿಗೂ ಹೆಚ್ಚು. ಇಷ್ಟೊಂದು ಆದಾಯವಿದ್ದರೂ, ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ತಮಗೆ ಬೇಕಾದ ಅನುಭವ ಮತ್ತು ಕೌಶಲಗಳನ್ನು ಬೆಳೆಸಿಕೊಳ್ಳಲು ಹೆಚ್ಚಿನ ಅವಕಾಶ ಬೇಕೆಂದು ಅವರು ಬಯಸಿದರು.

ಉದ್ಯೋಗದ ಜೊತೆಯಲ್ಲೇ ಸ್ಟಾರ್ಟ್‌ಅಪ್‌ ಸಿದ್ಧತೆ

ಬ್ರಿಟನ್‌ನಲ್ಲಿ ಬೆಳೆದ ಜುನೈದ್ ಖಾನ್‌ 2019ರಲ್ಲಿ ಅಮೆರಿಕಕ್ಕೆ ತೆರಳಿದ್ದರು. ನಾರ್ತ್ ಕೆರೊಲಿನಾ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್‌ ಸೈನ್ಸ್‌ ಅಧ್ಯಯನ ಮಾಡುತ್ತಿದ್ದಾಗಲೇ 'ಟ್ರೆಷರಿ' (Treasury) ಎಂಬ ಸ್ಟಾರ್ಟ್‌ಅಪ್‌ ಕಲ್ಪನೆ ಮೂಡಿತ್ತು.

ಎರಡು ದೇಶಗಳಲ್ಲಿ ತಮ್ಮ ಹಣಕಾಸು ವ್ಯವಹಾರಗಳನ್ನು ನಿರ್ವಹಿಸುವಾಗ ಎದುರಾದ ಅನುಭವಗಳೇ ಈ ಆಲೋಚನೆಗೆ ಪ್ರೇರಣೆಯಾಗಿದ್ದವು. ಸಾಮಾನ್ಯ ಜನರಿಗೂ ಸುಲಭವಾಗಿ ಲಭ್ಯವಾಗುವ ಎಐ ಆಧಾರಿತ ಹಣಕಾಸು ಮಾರ್ಗದರ್ಶನ ವೇದಿಕೆಯನ್ನು ನಿರ್ಮಿಸುವುದು ಅವರ ಉದ್ದೇಶವಾಗಿತ್ತು. ಸುಮಾರು ಎರಡು ವರ್ಷಗಳ ಕಾಲ ಮೈಕ್ರೋಸಾಫ್ಟ್‌ ಉದ್ಯೋಗದ ಜೊತೆಯಲ್ಲೇ ಸಂಜೆ ಮತ್ತು ವಾರಾಂತ್ಯಗಳಲ್ಲಿ ಸ್ಟಾರ್ಟ್‌ಅಪ್‌ ಅಭಿವೃದ್ಧಿಗೆ ಸಮಯ ಮೀಸಲಿಟ್ಟರು.

ಗಳಿಸಿದ ಉಳಿತಾಯದ ಹಣದಿಂದಲೇ ಉದ್ಯಮ

ಆರಂಭದಲ್ಲಿ ವೈ ಕಾಂಬಿನೇಟರ್‌ (Y Combinator) ನಂತಹ ಸ್ಟಾರ್ಟ್‌ಅಪ್‌ ವೇಗವರ್ಧಕ ಕಾರ್ಯಕ್ರಮಕ್ಕೆ ಆಯ್ಕೆಯಾದ ಬಳಿಕ ಕೆಲಸ ಬಿಡಲು ಯೋಜಿಸಿದ್ದರು. ಆದರೆ, ಅವರ ಅರ್ಜಿಗಳು ಯಶಸ್ವಿಯಾಗಲಿಲ್ಲ. ಇದರಿಂದ ತಮ್ಮ ಕನಸನ್ನು ಕೈಬಿಡುವ ಬದಲು, ಮೈಕ್ರೋಸಾಫ್ಟ್‌ನಲ್ಲಿ ಗಳಿಸಿದ ಉಳಿತಾಯದ ಹಣದಿಂದಲೇ ಉದ್ಯಮ ಆರಂಭಿಸಲು ನಿರ್ಧರಿಸಿದರು.

ಕಂಪನಿಯ ಕೆಲವು ಷೇರುಗಳು ತಮ್ಮದಾಗುವ ಅವಧಿ ಪೂರ್ಣಗೊಂಡಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಮತ್ತು ಸೇರ್ಪಡೆ ಬೋನಸ್‌ನ ಒಂದು ಭಾಗವನ್ನು ಹಿಂದಿರುಗಿಸುವ ಪರಿಸ್ಥಿತಿ ತಪ್ಪಿಸಿಕೊಂಡ ನಂತರ, 2025ರ ಆಗಸ್ಟ್‌ನಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿದರು.

Microsoft engineer: ಈಗ ಹೇಗಿದೆ ಅವರ AI ಸ್ಟಾರ್ಟ್‌ಅಪ್‌?

2025ರ ಅಕ್ಟೋಬರ್‌ನಲ್ಲಿ ಟ್ರೆಷರಿ ಸ್ಟಾರ್ಟ್‌ಅಪ್‌ ಆರಂಭವಾಯಿತು. ವಿಶೇಷವೆಂದರೆ, ಈ ಉದ್ಯಮದಲ್ಲಿ ಜುನೈದ್ ಅವರೇ ಏಕೈಕ ಉದ್ಯೋಗಿ. ಸಹ-ಸಂಸ್ಥಾಪಕರಿಲ್ಲದಿದ್ದರೂ, ಎಐ ಕೋಡಿಂಗ್‌ ಸಾಧನಗಳಾದ ಕ್ಲಾಡ್‌ ಕೋಡ್‌ (Claude Code) ಮತ್ತು ಕೋಡೆಕ್ಸ್‌ (Codex) ನೆರವಿನಿಂದ ಉತ್ಪನ್ನವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.

ವರದಿಯ ಪ್ರಕಾರ, ಅವರ ಉದ್ಯಮವು 6,000 ಡಾಲರ್‌ಗೂ ಹೆಚ್ಚು ಆದಾಯ ಗಳಿಸಿದ್ದು, ಪಾವತಿಸಿ ಸೇವೆ ಪಡೆಯುವ ಗ್ರಾಹಕರನ್ನೂ ಹೊಂದಿದೆ. ಭಾರತೀಯ ರೂಪಾಯಿಗಳಲ್ಲಿ ಈ ಆದಾಯ ಸುಮಾರು ₹5 ಲಕ್ಷಕ್ಕೂ ಅಧಿಕವಾಗುತ್ತದೆ. ಆದರೂ, ಸದ್ಯಕ್ಕೆ ಅವರು ತಮ್ಮ ಉದ್ಯಮದಿಂದ ಸಂಬಳ ಪಡೆಯುತ್ತಿಲ್ಲ. ಬದಲಾಗಿ, ಹಿಂದಿನ ಉದ್ಯೋಗದ ಉಳಿತಾಯದ ಹಣವನ್ನು ಅವಲಂಬಿಸಿದ್ದಾರೆ. ತಮ್ಮ ಉದ್ಯಮದ ಪಯಣವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಸುಮಾರು 30,000 ಜನರ ಅನುಯಾಯಿಗಳನ್ನೂ ಗಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+