
ಗುಟ್ಕಾ ಉಗಿಯಲು ವಿಮಾನದ ಕಿಟಕಿ ತೆರೆಯುವಂತೆ ಗಗನಸಖಿಗೆ ಹೇಳಿದ ವ್ಯಕ್ತಿ: ವಿಡಿಯೋ ವೈರಲ್- ನೋಡಿ
ಬೆಂಗಳೂರು, ಜನವರಿ 23: ವಿಮಾನಗಳಲ್ಲಿ ಪ್ರಯಾಣಿಕರು ಅಶಿಸ್ತಿನ ವರ್ತನೆಯ ಹಲವಾರು ಘಟನೆಗಳು ವರದಿಯಾದ ಸಮಯದಲ್ಲಿ, ಗುಟ್ಕಾವನ್ನು ಉಗುಳಲು ವಿಮಾನದ ಕಿಟಕಿಯನ್ನು ತೆರೆವಂತೆ ವ್ಯಕ್ತಿಯೊಬ್ಬ ಗಗನಸಖಿಯೊಬ್ಬರಿಗೆ ಕೇಳುವ ವೀಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಘಟನೆಯನ್ನು ವಿಕ್ಷೀಸುತ್ತಿದ್ದ ಅನೇಕರು ಬೆಚ್ಚಿಬಿದ್ದಿದ್ದಾರೆ. ಇದು ವೀಡಿಯೊ ಪ್ರಾರಂಭದಲ್ಲಿ ಕಾಣುತ್ತದೆ.
'ನಿಮ್ಮ ಗುಟ್ಕಾ ಪ್ರೇಮಿ ಸ್ನೇಹಿತನನ್ನು ಟ್ಯಾಗ್ ಮಾಡಿ' ಎಂಬ ಶೀರ್ಷಿಕೆಯೊಂದಿಗೆ ಗೋವಿಂದ್ ಶರ್ಮಾ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ಇದನ್ನು ಹಂಚಿಕೊಂಡ ನಂತರ ವೀಡಿಯೊ ವೈರಲ್ ಆಗಿದೆ. ಇಂಡಿಗೋ ವಿಮಾನದಲ್ಲಿ ಈ ತಮಾಷೆಯ ಘಟನೆ ನಡೆದಿದೆ.
ವೀಡಿಯೊದಲ್ಲಿ, ಸೀಟಿನ ಮೇಲೆ ಕುಳಿತಿರುವ ವ್ಯಕ್ತಿಯೊಬ್ಬರು ತಮ್ಮ ಅಂಗೈಯಲ್ಲಿ ಗುಟ್ಕಾ ಉಜ್ಜುತ್ತಿರುವುದನ್ನು ಕಾಣಬಹುದು. ಅವನು ಇದ್ದಕ್ಕಿದ್ದಂತೆ ತನ್ನ ಬಳಿ ಬರುವ ಗಗನಸಖಿಯನ್ನು ಕರೆಯುತ್ತಾನೆ. 'ನನ್ನನ್ನು ಕ್ಷಮಿಸಿ, ದಯವಿಟ್ಟು ಕಿಡಿಕಿ ತೆಗೆಯುತ್ತೀರಾ, ಗುಟ್ಕಾವನ್ನು ಉಗುಳಬೇಕು' ಎಂದು ಆತ ಹೇಳುವುದನ್ನು ಕೇಳಬಹುದು.
ವ್ಯಕ್ತಿಯ ಮಾತು ಕೇಳಿ ಗಗನಸಖಿ ಹಾಗೂ ಇತರ ಪ್ರಯಾಣಿಕರು ನಕ್ಕಿದ್ದಾರೆ. ವಿಚಿತ್ರವಾದ ವಿನಂತಿಯನ್ನು ಮಾಡಿದ ವ್ಯಕ್ತಿ ಕೂಡ ತಮಾಷೆ ಮಾಡಿದ್ದರಿಂದ ನಗಲು ಪ್ರಾರಂಭಿಸುತ್ತಾನೆ. ಎಲ್ಲರೂ ಅದನ್ನು ತಮಾಷೆಯಾಗಿ ಕಂಡುಕೊಂಡಿದ್ದಾರೆ. ಇದು ವಿಡಿಯೊದಲ್ಲಿ ಸೆರೆಯಾಗಿದೆ.
ನವೆಂಬರ್ 26 ರಂದು ಏರ್ ಇಂಡಿಯಾದ ಬ್ಯುಸಿನೆಸ್ ವರ್ಗದ ವಿಮಾನದಲ್ಲಿ ತನ್ನ ಮೇಲೆ ಮೂತ್ರ ವಿಸರ್ಜಿಸಿದ್ದಾನೆ ಎಂದು ಮಹಿಳಾ ಪ್ರಯಾಣಿಕರೊಬ್ಬರು ಆರೋಪಿಸಿದ್ದರು. ಇದು ದೇಶದಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಈ ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ಈ ವಿಮಾನವು ಅಮೆರಿಕದ ನ್ಯೂಯಾರ್ಕ್‌ನಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ಬರುತ್ತಿತ್ತು. ಈ ಘಟನೆಯಾದ ಒಂದು ತಿಂಗಳ ಬಳಿಕ ಬೆಳಕಿಗೆ ಬಂದಿತು.
ಏರ್ ಇಂಡಿಯಾ ಸಮೂಹದ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರಿಗೆ ಸಂತ್ರಸ್ತೆ ಪತ್ರ ಬರೆದಿದ್ದರು. ಏರ್‌ಲೈನ್‌ನ ಯಾವುದೇ ಕ್ರಮವನ್ನು ಎದುರಿಸದೆ ವ್ಯಕ್ತಿ ಹೊರಟುಹೋದನು ಎಂದು ತಿಳಿಸಿದ್ದರು. ಈ ಬಗ್ಗೆ ಪರಿಶೀಲಿಸಲು ಆಂತರಿಕ ಸಮಿತಿಯನ್ನು ರಚಿಸಲಾಯಿತು. ಈಗ ಆರೋಪಿಗಳಿಗೆ 30 ದಿನಗಳ ಪ್ರಯಾಣವನ್ನು ನಿಷೇಧಿಸಿದ್ದಾರೆ. ಆ ನಂತರ ಪ್ರಕರಣವನ್ನು ಮುಂದಿನ ಕ್ರಮಕ್ಕಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ (ಡಿಜಿಸಿಎ) ಕಳುಹಿಸಲಾಯಿತು.

ಈ ವಿಚಾರವಾಗಿ ಹೇಳಿಕೆ ಬಿಡುಗಡೆ ಮಾಡಿರುವ ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್, ವಿಮಾನಯಾನ ಸಂಸ್ಥೆಯು ತನ್ನ ಪ್ರತಿಕ್ರಿಯೆಯನ್ನು ಬೇಗನೇ ನೀಡಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
'ಅಂತಹ ಅಶಿಸ್ತಿನ ಸ್ವಭಾವದ ಯಾವುದೇ ಘಟನೆಗಳನ್ನು ತಡೆಗಟ್ಟಲು ಅಥವಾ ಪರಿಹರಿಸಲು ನಾವು ಪ್ರತಿ ಪ್ರಕ್ರಿಯೆಯನ್ನು ಪರಿಶೀಲಿಸುತ್ತೇವೆ ಮತ್ತು ಸರಿಪಡಿಸುತ್ತೇವೆ' ಎಂದು ಅವರು ಹೇಳಿದ್ದಾರೆ.
ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಕ್ಯಾಂಪ್‌ಬೆಲ್ ವಿಲ್ಸನ್ ಸಹ ಈ ಘಟನೆಯನ್ನು ಖಂಡಿಸಿದ್ದರು. ಈ ಬಗ್ಗೆ 'ವಿಷಾದ' ಹಾಗೂ 'ನೋವು' ಇದೆ ಎಂದು ಹೇಳಿದ್ದರು.
ಮಹಿಳೆಯ ಕುಟುಂಬದ ಕೋರಿಕೆಯ ಮೇರೆಗೆ ಏರ್‌ಲೈನ್ಸ್ ಅಂತಿಮವಾಗಿ ಡಿಸೆಂಬರ್ 28 ರಂದು ಘಟನೆಯ ಬಗ್ಗೆ ಪೊಲೀಸ್ ದೂರು ದಾಖಲಿಸಿದೆ.