Get Updates
Get notified of breaking news, exclusive insights, and must-see stories!

ಮಹಾರಾಷ್ಟ್ರ, ಹರ್ಯಾಣ ಫಲಿತಾಂಶ 2019: ಗೆದ್ದವರು, ಸೋತವರು

ಲೋಕಸಭೆ ಚುನಾವಣೆ ನಂತರ ಮೊದಲ ಬಾರಿಗೆ ಎರಡು ರಾಜ್ಯಗಳ ವಿಧಾನಸಭೆ ಹಾಗೂ ಹಲವು ರಾಜ್ಯಗಳಲ್ಲಿನ ಉಪ ಚುನಾವಣೆಯ ಫಲಿತಾಂಶವನ್ನು ಅಕ್ಟೋಬರ್ 24ರಂದು ಇಡೀ ದೇಶವೇ ಕಾತುರದಿಂದ ಎದುರು ನೋಡುತ್ತಿದೆ. ಮಹಾರಾಷ್ಟ್ರ ಹಾಗೂ ಹರ್ಯಾಣದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ತನ್ನ ಅಡಳಿತ ಮುಂದುವರೆಸುವುದೇ ಅಥವಾ ಹೊಸ ಸರ್ಕಾರ ಬರುವುದೇ ಎಂಬುದು ಇನ್ನೇನು ತಿಳಿಯಲಿದೆ. ಇದಕ್ಕೂ ಮುನ್ನ ಘಟಾನುಘಟಿ ನಾಯಕರು ಈ ಬಾರಿ ಸೋತು ಸುಣ್ಣವಾಗಿದ್ದಾರೆ. ಕೆಲವರು ಅಚ್ಚರಿಯ ಫಲಿತಾಂಶ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಬಿಜೆಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, ಕಾಂಗ್ರೆಸ್ ಮತ್ತು ಎನ್ ಸಿಪಿ ಮೈತ್ರಿ ಮಾಡಿಕೊಂಡಿವೆ. ಎರಡೂ ರಾಜ್ಯಗಳಲ್ಲಿ ಪ್ರಸ್ತುತ ಬಿಜೆಪಿ ಅಧಿಕಾರದಲ್ಲಿದ್ದು, ಈ ಬಾರಿಯ ಫಲಿತಾಂಶ ಕುತೂಹಲ ಕೆರಳಿಸಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 164 ಮತ್ತು ಶಿವಸೇನೆ 126 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದವು. ಹರ್ಯಾಣ ವಿಧಾನಸಭೆಯ 90 ಸೀಟು ಹಾಗೂ ಮಹಾರಾಷ್ಟ್ರದ 288 ಸ್ಥಾನಗಳ ಫಲಿತಾಂಶ ಅಕ್ಟೋಬರ್ 24ರಂದು ಸಿಗಲಿದೆ.

ಮಹಾರಾಷ್ಟ್ರದಲ್ಲಿ 2014 ರಲ್ಲೂ ಉಭಯ ಪಕ್ಷಗಳ ನಡುವೆ ಸೀಟು ಹಂಚಿಕೆ ವಿಷಯದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಶಿವಸೇನೆ ಸ್ವತಂತ್ರವಾಗಿ ಸ್ಪರ್ಧಿಸಿತ್ತು. ಆ ನಂತರ ಬಿಜೆಪಿ 122(288), ಶಿವಸೇನೆ 63 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. ಕೆಲವು ತಿಂಗಳ ನಂತರ ಉಭಯ ಪಕ್ಷಗಳೂ ಮೈತ್ರಿ ಮಾಡಿಕೊಂಡಿದ್ದವು.

Maharashtra & Haryana polls 2019: Biggest winners and losers

ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ನಾಗಪುರ ಪಶ್ಚಿಮ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಆಶೀಶ್ ದೇಶ್ ಮುಖ್ ರನ್ನು ಎದುರಿಸುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರು ಪುಣೆಯ ಕೋತ್ರಾಡ್ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧೆಗಿಳಿದಿದ್ದಾರೆ. ಬಿಜೆಪಿಯ ಪಂಕಜಾ ಮುಂಡೆ ಹಾಗೂ ಸುಧೀರ್ ಮುಂಗತಿವಾರ್ ಅವರು ಪಾರ್ಲಿ ಹಾಗೂ ಬಳ್ಳಾರ್ ಪುರ್ ಕ್ಷೇತ್ರದಲ್ಲಿ ಕಣದಲ್ಲಿದ್ದಾರೆ. ಶಿವಸೇನಾ ಸ್ಥಾಪಕ ಬಾಳಾ ಠಾಕ್ರೆ ಅವರ ಕುಟುಂಬದಿಂದ ಮೊದಲ ಬಾರಿಗೆ ಅವರ ಮೊಮ್ಮಗ ಆದಿತ್ಯ ಕಣಕ್ಕಿಳಿದಿದ್ದಾರೆ.

ಕಾಂಗ್ರೆಸ್ಸಿನಿಂದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್(ನಾಂದೇಡ್ ಜಿಲ್ಲೆಯ ಭೋಕಾರ್), ಪೃಥ್ವಿರಾಜ್ ಚವಾಣ್(ಸತಾರಾ ಜಿಲ್ಲೆಯ ಕರಡ್ ದಕ್ಷಿಣ), ಎನ್ ಸ್ಪಿ ನಾಯಕ, ಮಾಜಿ ಡಿಸಿಎಂ ಅಜಿತ್ ಪವಾರ್ ಅವರು ಪುಣೆಯ ಬಾರಾಮತಿಯಿಂದ ಮತ್ತೊಮ್ಮೆ ವಿಧಾನಸಭೆಗೆ ಪ್ರವೇಶ ಬಯಸಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಶಿವಸೇನಾ, ಎನ್ಸಿಪಿ ಅಲ್ಲದೆ, ರಾಜ್ ಠಾಕ್ರೆ ಅವರ ಎಂಎನ್ಎಸ್, ಎಐಎಂಐಎಂ, ವಂಚಿತ್ ಬಹುಜನ್ ಅಘಾಡಿ, ಸ್ವಾಭಿಮಾನಿ ಶೇತ್ಕಾರಿ ಸಂಘಟನಾ ಮುಂತಾದ ಸಣ್ಣ ಪುಟ್ಟ ಪಕ್ಷಗಳು ತಮ್ಮ ಛಾಪು ಮೂಡಿಸಲು ಮುಂದಾಗಿವೆ.

ಮಹಾರಾಷ್ಟ್ರ, ಹರ್ಯಾಣ ಅಖಾಡದಲ್ಲಿ ಸೋತವರು/ಗೆದ್ದವರು:
ಗೆದ್ದವರು/ಬಹುತೇಕ ಗೆಲುವು ಖಚಿತವಾದವರು

* ದೇವೇಂದ್ರ ಫಡ್ನವೀಸ್(ಬಿಜೆಪಿ)-ನಾಗ್ಪುರ್ ದಕ್ಷಿಣ
* ಮನೋಹರ್ ಲಾಲ್ ಖಟ್ಟರ್ (ಬಿಜೆಪಿ)- ಕರ್ನಾಲ್
* ಭೂಪಿಂದರ್ ಸಿಂಗ್ ಹೂಡಾ (ಕಾಂಗ್ರೆಸ್)- ಗರ್ಹಿ ಸಂಪಲಾ-ಕಿಲೋಯಿ
* ಅದಿತ್ಯ ಠಾಕ್ರೆ(ಶಿವಸೇನಾ)- ವರ್ಲಿ
* ದುಷ್ಯಂತ್ ಚೌಟಾಲ (ಜೆಜೆಪಿ)- ಉಚ್ಚನಾ ಕಲಾನ್
* ಕುಲದೀಪ್ ಬಿಷ್ನೋಯಿ(ಕಾಂಗ್ರೆಸ್)- ಆದಂಪುರ್
* ಅಶೋಕ್ ಚವಾಣ್ (ಕಾಂಗ್ರೆಸ್)- ಭೊಕಾರ್
* ಛಗನ್ ಭುಜ್ ಬುಲ್ (ಎನ್ಸಿಪಿ)-ಯವ್ಲಾ
* ಚಂದ್ರಕಾಂತ್ ಪಾಟೀಲ್ (ಬಿಜೆಪಿ)-ಕೊಥ್ರಾಡ್
* ಅನಿಲ್ ವಿಜ್(ಬಿಜೆಪಿ)- ಅಂಬಾಲಾ ಕಂಟೋನ್ಮೆಂಟ್
* ಅಶೀಶ್ ಶೇಲಾರ್ (ಬಿಜೆಪಿ) -ವಾಂದ್ರೆ ಪಶ್ಚಿಮ
* ಅಜಿತ್ ಪವಾರ್ (ಎನ್ಸಿಪಿ) -ಗೆಲುವು, ಬಾರಾಮತಿ
* ಪೃಥ್ವಿರಾಜ್ ಚವಾಣ್ (ಕಾಂಗ್ರೆಸ್)-ಕರಾಡ್(ದಕ್ಷಿಣ)
* ಅಭಯ್ ಸಿಂಗ್ ಚೌಟಾಲ(ಐಎನ್ಎಲ್ ಡಿ) ಎಲೆನಾಬಾದ್
* ರಾಧಕೃಷ್ಣ ವಿಖೆ ಪಾಟೀಲ್ (ಬಿಜೆಪಿ) ಗೆ ಗೆಲುವು, ಕಾಂಗ್ರೆಸ್ಸಿನ ಸುರೇಶ್ ಜಗನ್ನಾಥ್ ಗೆ ಸೋಲು
* ರೋಹಿತ್ ಪವಾರ್ (ಎನ್ಸಿಪಿ) ಕಜ್ರಾತ್ ಜಾಮ್ ಖೇಡ್

ಸೋತವರು/ಬಹುತೇಕ ಸೋಲು ಖಚಿತವಾದವರು
* ರಣದೀಪ್ ಸಿಂಗ್ ಸುರ್ಜೆವಾಲ(ಕಾಂಗ್ರೆಸ್)-ಸೋಲು, ಬಿಜೆಪಿಯ ಲಿಲಾ ರಾಮ್ ಗೆ 567 ಮತಗಳಿಂದ ಗೆಲುವು.
* ಬಬಿತಾ ಫೋಗಟ್(ಬಿಜೆಪಿ)- ದಾದ್ರಿ
* ಪಂಕಜಾ ಮುಂಡೆ (ಬಿಜೆಪಿ)ಗೆ ಸೋಲು-ಪಾರ್ಲಿ (ಎನ್ಸಿಪಿಯ ಧನಂಜಯ್ ಮುಂಡೆಗೆ ಗೆಲುವು)
* ಯೋಗೇಶ್ವರ್ ದತ್ (ಬಿಜೆಪಿ) ಸೋಲು- ಕಾಂಗ್ರೆಸ್ಸಿನ ಕ್ರಿಷನ್ ಹೂಡಾಗೆ ಗೆಲುವು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+