ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ರಾಜಕೀಯ; ಅಳಿಯ ಸ್ಪೀಕರ್, ಮಾವ ಸಭಾಪತಿ!

|
Google Oneindia Kannada News

ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ, ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರದ ಅಸ್ತಿತ್ವಕ್ಕೆ ಬಂದಿದೆ. ಸೋಮವಾರ ಮುಖ್ಯಮಂತ್ರಿಗಳು ವಿಶ್ವಾಸಮತಯಾಚನೆ ಮಾಡಬೇಕಿದೆ. ಭಾನುವಾರ ವಿಧಾನಸಭೆಯ ಸ್ಪೀಕರ್ ಆಯ್ಕೆ ನಡೆದಿದೆ.

ಭಾನುವಾರ ನಡೆದ ಮಹಾರಾಷ್ಟ್ರ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಸ್ಪೀಕರ್ ಆಗಿ ಬಿಜೆಪಿ ಶಾಸಕ ರಾಹುಲ್ ನಾರ್ವೇಕರ್ ಆಯ್ಕೆಯಾದರು. ಅಚ್ಚರಿಯ ಸಂಗತಿ ಎಂದರೆ ರಾಹುಲ್ ನಾರ್ವೇಕರ್ ಮಾವ ವಿಧಾನ ಪರಿಷತ್ ಸಭಾಪತಿ.

ಮಹಾರಾಷ್ಟ್ರದ ಸ್ಪೀಕರ್ ಆಗಿ ರಾಹುಲ್ ನಾರ್ವೇಕರ್ ಆಯ್ಕೆ ಮಹಾರಾಷ್ಟ್ರದ ಸ್ಪೀಕರ್ ಆಗಿ ರಾಹುಲ್ ನಾರ್ವೇಕರ್ ಆಯ್ಕೆ

ಬಿಜೆಪಿಯ ಶಾಸಕ ರಾಹುಲ್ ನಾರ್ವೇಕರ್ 164 ಮತಗಳಿಂದ ಸ್ಪೀಕರ್ ಆಗಿ ಆಯ್ಕೆಯಾದರು. ಶಿವಸೇನೆಯಿಂದ ನಾಮಪತ್ರ ಸಲ್ಲಿಕೆ ಮಾಡಿದ್ದ ರಾಜನ್ ಸಾಲ್ವಿ 107 ಮತಗಳನ್ನು ಪಡೆದರು. ಸ್ಪೀಕರ್ ಚುನಾವಣೆಯಲ್ಲಿಯೂ ಅಡ್ಡ ಮತದಾನವಾಗಿದೆ. ಹಲವು ಶಾಸಕರು ವಿಪ್ ಉಲ್ಲಂಘನೆ ಮಾಡಿದ್ದಾರೆ ಎಂದು ಪಕ್ಷದ ಮುಖ್ಯ ಸಚೇತಕರು ಹೇಳಿದ್ದಾರೆ.

ಜುಲೈ 4ರಂದು ಸಿಎಂ ಏಕನಾಥ್ ಶಿಂಧೆ ಸರ್ಕಾರಕ್ಕೆ ವಿಶ್ವಾಸಮತ ಪರೀಕ್ಷೆ ಜುಲೈ 4ರಂದು ಸಿಎಂ ಏಕನಾಥ್ ಶಿಂಧೆ ಸರ್ಕಾರಕ್ಕೆ ವಿಶ್ವಾಸಮತ ಪರೀಕ್ಷೆ

Rahul Narvekar Profile

ರಾಹುಲ್ ನಾರ್ವೇಕರ್ ಪರಿಚಯ; 45 ವರ್ಷದ ರಾಹುಲ್ ನಾರ್ವೇಕರ್ ದೇಶದ ವಿಧಾನಸಭೆಗಳಲ್ಲಿಯೇ ಅತಿ ಕಿರಿ ವಯಸ್ಸಿನ ಸ್ಪೀಕರ್. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಹ ಇದನ್ನು ಖಚಿತ ಪಡಿಸಿದ್ದಾರೆ.

Eknath Shinde : ಏಕನಾಥ್ ವ್ಯಕ್ತಿಚಿತ್ರ: ಆಟೋರಾಜ ಬನ್ ಗಯಾ 'ಮಹಾ' ರಾಜEknath Shinde : ಏಕನಾಥ್ ವ್ಯಕ್ತಿಚಿತ್ರ: ಆಟೋರಾಜ ಬನ್ ಗಯಾ 'ಮಹಾ' ರಾಜ

ಮುಂಬೈನ ಕೊಲಬಾ ಕ್ಷೇತ್ರದ ಬಿಜೆಪಿ ಶಾಸಕ ರಾಹುಲ್ ನಾರ್ವೇಕರ್ ಈ ಹಿಂದೆ ಶಿವಸೇನೆ ಮತ್ತು ಎನ್‌ಸಿಪಿಯಲ್ಲಿದ್ದರು. 2019ರಲ್ಲಿ ಬಿಜೆಪಿ ಸೇರಿದ್ದರು. ಶಿವಸೇನೆಯ ಯುವ ಘಟಕದ ವಕ್ತಾರರಾಗಿ ಹಲವು ವರ್ಷ ಕಾರ್ಯ ನಿರ್ವಹಣೆ ಮಾಡಿದ್ದರು.

2014ರಲ್ಲಿ ಶಿವಸೇನೆ ತೊರೆದ ರಾಹುಲ್ ನಾರ್ವೇಕರ್ ಎನ್‌ಸಿಪಿ ಸೇರಿದರು. ಮಾವಲ್ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದು ಶಿವಸೇನೆಯ ಅಭ್ಯರ್ಥಿಯ ಎದುರು ಸೋಲುಕಂಡರು.

2019 ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೂ ಮುನ್ನ ರಾಹುಲ್ ನಾರ್ವೇಕರ್ ಬಿಜೆಪಿ ಸೇರಿದರು. ಕೊಲಬಾ ಕ್ಷೇತ್ರದಿಂದ ಕಣಕ್ಕಿಳಿದು ಕಾಂಗ್ರೆಸ್‌ನ ಅಶೋಕ್ ಜಗ್‌ಪತ್ ಸೋಲಿಸಿ, ವಿಧಾನಸಭೆ ಪ್ರವೇಶಿಸಿದರು.

ಸಾಮಾನ್ಯವಾಗಿ ಹಲವು ಬಾರಿ ಗೆದ್ದಿರುವ ಹಿರಿಯ ಶಾಸಕರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಲಾಗುತ್ತದೆ. ಆದರೆ ಮೊದಲ ಬಾರಿ ಶಾಸಕನಾಗಿ ಆಯ್ಕೆಯಾಗಿ ಸ್ಪೀಕರ್ ಆದ ಮೊದಲ ಶಾಸಕ ರಾಹುಲ್ ನಾರ್ವೇಕರ್.

Recommended Video

Kohli ಆಟದ ಬಗ್ಗೆ ಚರ್ಚೆ, Rohit ವಾಪಸ್ Reverse swing 01 | *CricketWrap | OneIndia Kannada

ಮಾವ, ಅಳಿಯ ಜೋಡಿ; ರಾಹುಲ್ ನಾರ್ವೇಕರ್ ಅಳಿಯ ರಾಮ್‌ರಾಜೇ ನಾಯಕ್ ಎನ್‌ಸಿಪಿ ಪಕ್ಷದಲ್ಲಿದ್ದಾರೆ. ಅವರು ವಿಧಾನ ಪರಿಷತ್ ಸಭಾಪತಿಯಾಗಿದ್ದಾರೆ. ಈಗ ಅಳಿಯ ವಿಧಾನಸಭೆ ಸ್ಪೀಕರ್ ಆಗಿ ಆಯ್ಕೆಯಾಗಿದ್ದು, ಎರಡು ಸಂವಿಧಾನಿಕ ಹುದ್ದೆಗಳಿಗೆ ಕುಟುಂಬದ ಇಬ್ಬರು ಆಯ್ಕೆಯಾಗಿರುವುದು ದೇಶದಲ್ಲೇ ಮೊದಲು.

English summary
Colaba BJP MLA Rahul Narvekar elected as the Maharashtra assembly speaker. His father-in-law Ramraje Naik of NCP is the chairperson of the legislative council.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X