
ಮಹಾಪರಿನಿರ್ವಾಣ ದಿವಸ್: ಡಾ. ಭೀಮ್ ರಾವ್ ಅಂಬೇಡ್ಕರ್ ಪುಣ್ಯತಿಥಿ ಬಗ್ಗೆ ತಿಳಿಯಿರಿ
ನವದೆಹಲಿ, ಡಿಸೆಂಬರ್ 06: ಭಾರತದ ಸಂವಿಧಾನದ ಶಿಲ್ಪಿ ಡಾ. ಭೀಮ್ ರಾವ್ ಅಂಬೇಡ್ಕರ್ ಪುಣ್ಯತಿಥಿಯ ನೆನಪಿಗಾಗಿ ಮಹಾಪರಿನಿರ್ವಾಣ ದಿವಸ್ ಅನ್ನು ಡಿಸೆಂಬರ್ 6ರಂದು ಆಚರಿಸಲಾಗುತ್ತದೆ. ಬಾಬಾಸಾಹೇಬ್ ಅಂಬೇಡ್ಕರ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಅವರು ಇಂದಿನ ಭಾರತವನ್ನು ರೂಪಿಸುವಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ.
ಮಹಾಪರಿನಿರ್ವಾಣ ದಿವಸ್ 2021 ಡಾ. ಬಿ ಆರ್ ಅಂಬೇಡ್ಕರ್ ಅವರ 65 ನೇ ಪುಣ್ಯತಿಥಿಯಾಗಿದ್ದು, ಅವರು ಅರ್ಥಶಾಸ್ತ್ರಜ್ಞರಾಗಿ, ಕಾರ್ಯಕರ್ತರಾಗಿ ಮತ್ತು ಭಾರತದಲ್ಲಿ ದಲಿತ ಕ್ರಿಯಾವಾದದ ಧ್ವಜಧಾರಿಯಾಗಿ ಅವರು ನಿರ್ವಹಿಸಿದ ಪಾತ್ರವನ್ನು ನೆನಪಿಸುತ್ತದೆ.
ಉಸಿರುಗಟ್ಟುವ ವಾತಾವರಣದಲ್ಲಿ ಅಂಬೇಡ್ಕರ್ ಹಾಸ್ಟೆಲ್ ವಿದ್ಯಾರ್ಥಿಗಳು
ಡಿಸೆಂಬರ್ 6, 1956ರಂದು ಕೊನೆಯುಸಿರೆಳೆದ ಬಾಬಾಸಾಹೇಬ್ ಅಂಬೇಡ್ಕರ್, 14ನೇ ಮತ್ತು ಕೊನೆಯ ಮಗುವಾಗಿ ಮಧ್ಯಪ್ರದೇಶದಲ್ಲಿ ಜನಿಸಿದರು. ಮಹಾಪರಿನಿರ್ವಾಣ ದಿವಸ್ ಕುರಿತಾದ ಇತಿಹಾಸದ ಬಗ್ಗೆ ಇನ್ನಷ್ಟು ಓದೋಣ ತಿಳಿಯೋಣ.
ಡಿಸೆಂಬರ್ 6 ರಂದು ಡಾ. ಬಿ ಆರ್ ಅಂಬೇಡ್ಕರ್ ಪುಣ್ಯತಿಥಿ:
ಭಾರತದಲ್ಲಿ ಡಿಸೆಂಬರ್ 6 ರಂದು ಡಾ. ಭೀಮ್ ರಾವ್ ಅಂಬೇಡ್ಕರ್ ಅವರ ಪುಣ್ಯತಿಥಿಯಂದು ಮಹಾಪರಿನಿರ್ವಾಣ ದಿವಸ್ ಆಗಿ ಆಚರಿಸಲಾಗುತ್ತದೆ.
ಪರಿನಿರ್ಮಾಣ ಎಂದರೇನು?:
ಬೌದ್ಧ ಸಂಪ್ರದಾಯದಲ್ಲಿ, 'ಪರಿನಿರ್ವಾಣ' ಎಂದರೆ ಮತ್ತು ತನ್ನ ಜೀವಿತಾವಧಿಯಲ್ಲಿ ಮತ್ತು ಮರಣಾನಂತರ ನಿರ್ವಾಣವನ್ನು ಪಡೆದ ವ್ಯಕ್ತಿಯನ್ನು ಸೂಚಿಸುತ್ತದೆ. ಬಿಆರ್ ಅಂಬೇಡ್ಕರ್ ಪುಣ್ಯತಿಥಿಯನ್ನು ಮಹಾಪರಿನಿರ್ವಾಣ ದಿವಸ್ ಎಂದು ಕರೆಯಲಾಗುತ್ತದೆ, ಏಕೆಂದರೆ ಅವರು ಹಿಂದೂ ಧರ್ಮವನ್ನು ತ್ಯಜಿಸಿದ್ದು, ದೇಶದಲ್ಲಿ ದಲಿತ ಬೌದ್ಧ ಚಳವಳಿಗೆ ಸ್ಫೂರ್ತಿ ನೀಡಿದರು. ಮಹಾಪರಿನಿರ್ವಾಣ ದಿವಸ್ ಬಿ ಆರ್ ಅಂಬೇಡ್ಕರ್ ಅವರು ಭಾರತಕ್ಕೆ ಕಲ್ಪಿಸಿದ ಸಮಾಜದ ಸಮಾನತೆಯನ್ನು ಸೂಚಿಸುತ್ತದೆ.
ಮಹಾಪರಿನಿರ್ವಾಣ ದಿವಸ್ 2021 ರ ಮಹತ್ವ:
ಮಹಾಪರಿನಿರ್ವಾಣ ದಿವಸ್ 2021 ಡಾ. ಬಾಬಾಸಾಹೇಬ್ ಅಂಬೇಡ್ಕರ್ ಕೆಲಸ ಮತ್ತು ಆದರ್ಶಗಳು ಮತ್ತು ಸ್ವಾತಂತ್ರ್ಯದ ನಂತರ ದೇಶವನ್ನು ರೂಪಿಸುವಲ್ಲಿ ವಹಿಸಿದ ಪ್ರಮುಖ ಪಾತ್ರದ ಮೇಲೆ ಬೆಳಕು ಚೆಲ್ಲುತ್ತದೆ. ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷ ಬಿ.ಆರ್.ಅಂಬೇಡ್ಕರ್ ಬೌದ್ಧ ಧರ್ಮದ ತತ್ವಶಾಸ್ತ್ರವನ್ನು ಅಳವಡಿಸಿಕೊಂಡರು. ಕಠಿಣ ಮತ್ತು ಅನ್ಯಾಯದ ಜಾತಿ ವ್ಯವಸ್ಥೆಯ ಸಂಕೋಲೆಯಿಂದ ಮುಕ್ತವಾದ ಸಮಾಜವನ್ನು ಉತ್ತೇಜಿಸಿದರು.
ಡಾ. ಬಿ ಆರ್ ಅಂಬೇಡ್ಕರ್ ಕುರಿತಾದ ಆಸಕ್ತಿದಾಯಕ ವಿಷಯಗಳು:
* ಕಳೆದ 1956ರಲ್ಲಿ ಬೌದ್ಧ ಧರ್ಮವನ್ನು ತ್ಯಜಿಸಿದ ಬಿ ಆರ್ ಅಂಬೇಡ್ಕರ್ ಮಹಾರಾಷ್ಟ್ರದ ಮಹಾರ್ ಜಾತಿಯ ಹಿಂದೂ ಕುಟುಂಬದಲ್ಲಿ ಜನಿಸಿದರು. ಇದನ್ನು ಕೆಳಜಾತಿ ಎಂದು ಪರಿಗಣಿಸಲಾಯಿತು ಮತ್ತು ಅದೇ ಜನರನ್ನು 'ಅಸ್ಪೃಶ್ಯರು' ಎಂದು ಉಲ್ಲೇಖಿಸಲಾಗಿದೆ.
* ಡಾ. ಬಿ ಆರ್ ಅಂಬೇಡ್ಕರ್ ಅವರು ತಮ್ಮ ಶೈಕ್ಷಣಿಕ ಸಾಧನೆಗಳಿಗೆ ಹೆಸರುವಾಸಿಯಾಗಿದ್ದಾರೆ, ಅವರು 64 ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, 21 ವರ್ಷಗಳ ಕಾಲ ಪ್ರಪಂಚದಾದ್ಯಂತ ಅಧ್ಯಯನ ಮಾಡಿದ್ದಾರೆ. ಡಾಕ್ಟರೇಟ್ ಪದವಿ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
* ಲಂಡನ್‌ನ ಮ್ಯೂಸಿಯಂನಲ್ಲಿ ಕಾರ್ಲ್ ಮಾರ್ಕ್ಸ್ ಜೊತೆಗೆ ಪ್ರತಿಮೆಯನ್ನು ಸ್ಥಾಪಿಸಿದ ಏಕೈಕ ಭಾರತೀಯ ಡಾ. ಬಿ ಆರ್ ಅಂಬೇಡ್ಕರ್.
* ಬಿ ಆರ್ ಅಂಬೇಡ್ಕರ್ ಅವರು ಭಾರತದಲ್ಲಿ ಕೆಳ ಜಾತಿಗೆ ಸೇರಿದ ಮೊದಲ ವಕೀಲರಾದರು.
* ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಭಾರತ ಸರ್ಕಾರವು ಮರಣೋತ್ತರವಾಗಿ ಭಾರತ ರತ್ನವನ್ನು ನೀಡಿತು. ಇದು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.