ಕ್ಷೇತ್ರ ಪರಿಚಯ: ಕೃಷ್ಣಾ ನದಿ ತಟದ ಕ್ಷೇತ್ರ ವಿಜಯವಾಡ
ಕೃಷ್ಣಾ ನದಿಯ ತಟದಲ್ಲಿರುವ ವಿಜಯವಾಡ, ಆಂಧ್ರಪ್ರದೇಶದ ಮೂರನೇ ಅತಿದೊಡ್ಡ ನಗರವಾಗಿದೆ. ಮಹಿಷಾಸುರನನ್ನು ಸಂಹರಿಸಿ, ವಿಜಯ ಸಾಧಿಸಿ ವಿಶ್ರಾಂತಿ ಪಡೆದ ಸ್ಥಳ ಇದು ಎಂಬ ನಂಬಿಕೆ ಇದೆ.
ಮಹಾಭಾರತ ಕಾಲದಲ್ಲಿ ಪರಮಶಿವನಿಂದ ಅರ್ಜುನನು ಪಾಶುಪತಾಸ್ತ್ರ ಪಡೆದ ಸ್ಥಳ ಇದಾಗಿದ್ದು, ಬೆಜವಾಡ, ಕನಕಪ್ರಭ, ಕನಕವಾದ,ವಿಜಯವಾಟಿಕ ನಂತರ ವಿಜಯವಾಡ ಎಂದಾಗಿದೆ ಎಂಬ ನಂಬಿಕೆಯಿದೆ. ಚಾಲುಕ್ಯರು, ಚೋಳರು, ಮಾಧವ ವರ್ಮ, ಕುತುಬ್ ಶಾಹಿ ಮನೆತನವರು ಇಲ್ಲಿ ರಾಜಭಾರ ಮಾಡಿದ್ದಾರೆ.
ದೇಶದ ದೊಡ್ಡ ಮಾವು ಉತ್ಪಾದನಾ ಪ್ರದೇಶವಾಗಿ ಗುರುತಿಸಿಕೊಂಡಿರುವ ವಿಜಯವಾಡದಲ್ಲಿ ಕೃಷಿ, ತೋಟಗಾರಿಕೆ ಪ್ರಮುಖ ಕಸುಬು. ದೇಶದ ಪ್ರಮುಖ ತೈಲ ಕಂಪನಿಗಳಾದ ಬಿಪಿಸಿಎಲ್, ಎಚ್ ಪಿ ಸಿಎಲ್ ಹಾಗೂ ಐಒಸಿ ಶೇಖರಣೆ, ಸಾಗಣೆಯ ಕೇಂದ್ರವಾಗಿದೆ.

ಪ್ರಕಾಶ್ ಬರಾಜ್, ರಾಜೀವ್ ಗಾಂಧಿ ಪಾರ್ಕ್, ಉಂಡವಳ್ಳಿ ಗುಹೆ, ಮೊಗಲರಾಜಪುರಂ ಗುಹೆ, ವಿಕ್ಟೋರಿಯ ಮ್ಯೂಸಿಯಂ, ಗಾಂಧಿ ಬೆಟ್ಟ ಹೀಗೆ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ಕೃಷ್ಣದೇವರಾಯ ನಿರ್ಮಿತ ಕೊಂಡಪಲ್ಲಿ ಕೋಟೆ ವಾಣಿಜ್ಯ ಕೇಂದ್ರ, ಬ್ರಿಟಿಷರ ಕಾಲದಲ್ಲಿ ಮಿಲಿಟರಿ ಕೇಂದ್ರವಾಗಿತ್ತು. ಕೊಂಡಪಲ್ಲಿಯ ಮರದ ಬೊಂಬೆಗಳು ಜನಪ್ರಿಯವಾಗಿವೆ.
ತಿರುವುರು, ವಿಜಯವಾಡ ಪಶ್ಚಿಮ, ವಿಜಯವಾಡ ಸೆಂಟ್ರಲ್, ವಿಜಯವಾಡ ಪೂರ್ವ, ಮೈಲಾವರಂ, ನಂದಿಗ್ರಾಮ, ಜಗ್ಗಯ್ಯಪೇಟ ವಿಧಾನಸಭಾ ಕ್ಷೇತ್ರಗಳನ್ನು ವಿಜಯವಾಡ ಲೋಕಸಭಾ ಕ್ಷೇತ್ರ ಹೊಂದಿದೆ.
1952ರಲ್ಲಿ ಮೊದಲ ಬಾರಿಗೆ ನಡೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಹರೀಂದ್ರನಾಥ್ ಚಟ್ಟೋಪಾಧ್ಯಾಯ ಅವರು ಗೆಲುವು ಸಾಧಿಸಿದ್ದರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ತೆಲುಗು ದೇಶಂ ಪಾರ್ಟಿಯದ್ದೇ ಪೈಪೋಟಿ ಕಂಡು ಬರುತ್ತದೆ. ಕಾಂಗ್ರೆಸ್ ಆರಂಭದಲ್ಲಿ ಸತತವಾಗಿ 6 ಬಾರಿ ಗೆಲುವು ಸಾಧಿಸಿತ್ತು. 1984ರಲ್ಲಿ ಟಿಡಿಪಿ ಮೊದಲ ಗೆಲುವು ಸಾಧಿಸಿತು. ನಂತರ ನಾಲ್ಕು ಬಾರಿ ಜಯ ದಾಖಲಿಸಿದೆ.

ತೆಲುಗು ದೇಶಂ ಪಾರ್ಟಿಯ ಹಾಲಿ ಸಂಸದ 52 ವರ್ಷ ವಯಸ್ಸಿನ ಕೇಸಿನೇನಿ ಶ್ರೀನಿವಾಸ್ ಅವರು ಸಂಸತ್ತಿನಲ್ಲಿ ಶೇ82ರಷ್ಟು ಹಾಜರಾತಿ ಹೊಂದಿದ್ದಾರೆ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಸಿಗಬೇಕು ಎಂದು ಆಗ್ರಹಿಸಿ, ಮೋದಿ ಸರ್ಕಾರದ ವಿರುದ್ಧ ಅಭಿಯಾನ ನಡೆಸಿದವರಲ್ಲಿ ಕೇಸಿನೇನಿ ಶ್ರೀನಿವಾಸ್ ಕೂಡಾ ಪ್ರಮುಖರು. ಸಂಸತ್ತಿನಲ್ಲಿ ಶೇ83ರಷ್ಟು ಹಾಜರಾತಿ ಹೊಂದಿದ್ದು, 298 ಪ್ರಶ್ನೆಗಳನ್ನು ಕೇಳಿದ್ದು, 27 ಚರ್ಚೆಗಳಲ್ಲಿ ಪಾಲ್ಗೊಂಡಿದ್ದಾರೆ.
2014ರಲ್ಲಿ ಕೇಸಿನೇನಿ ಶ್ರೀನಿವಾಸ್ ಅವರು 5,92,696 ಮತಗಳನ್ನು (49.59% ಮತಗಳು) ಪಡೆದರೆ, ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಕೊನೇರು ರಾಜೇಂದ್ರ ಪ್ರಸಾದ್ ಅವರು 5,17,834 ಮತಗಳನ್ನು (43.72%) ಪಡೆದು ಸೋಲು ಕಂಡಿದ್ದರು. 2014ರಲ್ಲಿ ಒಟ್ಟು 11,95,075 ಮತಗಳ ಪೈಕಿ 6,02,198 ಪುರುಷ ಮತಗಳು ಹಾಗೂ 5,92,877 ಮಹಿಳಾ ಮತಗಳು ದಾಖಲಾಗಿವೆ.

ಈ ಕ್ಷೇತ್ರದಲ್ಲಿ 15,64,513 ಮತದಾರರಿದ್ದು, 7,81,156 ಪುರುಷರು ಹಾಗೂ 7,83,357 ಮಹಿಳೆಯರಿದ್ದಾರೆ. ನಗರವಾಸಿಗಳನ್ನು ಹೆಚ್ಚಾಗಿ ಹೊಂದಿರುವ ಈ ಕ್ಷೇತ್ರದಲ್ಲಿ ಚಂದ್ರಬಾಬು ನಾಯ್ಡು ಅವರ ಚುನಾವಣಾ ಪ್ರಚಾರ ಪರಿಣಾಮ ಬೀರುವ ಎಲ್ಲಾ ಸಾಧ್ಯತೆಗಳಿವೆ.
ಒಟ್ಟು ಜನಸಂಖ್ಯೆ 21,28,486 ರಷ್ಟಿದ್ದು, ಶೇ 57.28ರಷ್ಟು ಮಂದಿ ನಗರವಾಸಿಗಳಾಗಿದ್ದರೆ, ಶೇ 42.72ರಷ್ಟು ಗ್ರಾಮೀಣ ಭಾಗದಲ್ಲಿದ್ದಾರೆ. ಶೇ 18.45ರಷ್ಟು ಪರಿಶಿಷ್ಟ ಜಾತಿ ಹಾಗೂ ಶೇ 3.77ರಷ್ಟು ಮಂದಿ ಪರಿಶಿಷ್ಟ ಪಂಗಡದವರಿದ್ದಾರೆ.

1957ರಿಂದ ಇಲ್ಲಿ ತನಕದ ಸ್ಟ್ರೈಕ್ ರೇಟ್ ನೋಡಿದರೆ, ಕಾಂಗ್ರೆಸ್ ಶೇ 71ರಷ್ಟು ಗೆಲುವು ಫಲಿತಾಂಶದೊಂದಿಗೆ 10 ಬಾರಿ ಜಯಿಸಿದೆ. ಟಿಡಿಪಿ 4 ಬಾರಿ ಜಯಗಳಿಸಿ ಶೇ 29ರಷ್ಟು ಜಯ ಕಂಡಿದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications