ಬೆಟ್ಟಿಂಗ್ ಬಜಾರ್ ಭವಿಷ್ಯ: ಮ್ಯಾಜಿಕ್ ನಂಬರ್ ಎನ್ಡಿಎಗೂ ಮರೀಚಿಕೆ!

Recommended Video

      ಬೆಟ್ಟಿಂಗ್ ನಲ್ಲಿ ಮ್ಯಾಜಿಕ್ ನಂಬರ್ ಸಿಕಿದ್ದು ಯಾರಿಗೆ ಗೊತ್ತಾ..? | Oneindia Kannada

      2019ರ ಲೋಕಸಭೆ ಚುನಾವಣೆಗಾಗಿ ವಿವಿಧ ಸಂಸ್ಥೆಗಳು ಸಮೀಕ್ಷೆಗಳು, ಜನಾಭಿಪ್ರಾಯಗಳನ್ನು ಸಂಗ್ರಹಿಸಿ ನೀಡುತ್ತಿವೆ. ಈ ನಡುವೆ ಚುನಾವಣೆ ಸಂದರ್ಭದಲ್ಲಿ ಬೆಟ್ಟಿಂಗ್ ಬಜಾರಿನಲ್ಲಿ ಯಾರ ಅಲೆ ಇದೆ ಎನ್ನುವುದರ ಬಗ್ಗೆ ಎರಡನೇ ವರದಿ ಇದೀಗ ಬಂದಿದೆ. ಲೋಕಸಭೆ ಚುನಾವಣೆ 5ನೇ ಹಂತದ ಮತದಾನದ ಬಳಿಕ ಬಂದ ಅಂಕಿ ಅಂಶ ಇದಾಗಿದೆ. ಸರಿ ಸುಮಾರು 12,000 ಕೋಟಿ ರು ಬೆಟ್ಟಿಂಗ್ ಬಜಾರ್ ಇದಾಗಿದೆ.

      ಹೆಚ್ಚಾಗಿ ಹಿಂದಿ ಭಾಷಿಕ ರಾಜ್ಯಗಳ ಬೆಟ್ಟಿಂಗ್ ಪ್ರಭಾವ ಹೆಚ್ಚಾಗಿದ್ದು,ರಾಜಸ್ಥಾನದ ಬೆಟ್ಟಿಂಗ್ ಬಜಾರಿನಿಂದ ಬಂದ ಮಾಹಿತಿಯಂತೆ ಭಾರತೀಯ ಜನತಾ ಪಕ್ಷಕ್ಕೆ 240 ± 10 ಸ್ಥಾನಗಳು ಲಭಿಸಲಿವೆ.

      ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

      ಬಿಜೆಪಿ ನೇತೃತ್ವದ ಎನ್ಡಿಎಗೆ 300ರಿಂದ 310 ಸ್ಥಾನಗಳು ಸುಲಭವಾಗಿ ಲಭಿಸಲಿವೆ. ರಾಜಸ್ಥಾನದಲ್ಲಿ 25 ಸ್ಥಾನಗಳ ಪೈಕಿ ಬಿಜೆಪಿಗೆ 18 ರಿಂದ 20 ಸ್ಥಾನಗಳು ಸಿಗಲಿವೆ ಎಂದು ಬೆಟ್ಟಿಂಗ್ ಮಾರುಕಟ್ಟೆಯಿಂದ ಈ ಮುಂಚೆ ವರದಿ ಬಂದಿತ್ತು.

      ಈಗ ಎನ್ಡಿಎಗೆ 250, ಯುಪಿಎಗೆ 145 ಪ್ಲಸ್ ಸಿಗಲಿದೆ. ಪ್ರಾದೇಶಿಕ ಪಕ್ಷಗಳ ಪೈಕಿ ಉತ್ತರಪ್ರದೇಶದಲ್ಲಿ ಎಸ್ಪಿ ಬಿಎಸ್ಪಿ, ತಮಿಳುನಾಡಿನಲ್ಲಿ ಡಿಎಂಕೆ, ತೃಣಮೂಲ ಕಾಂಗ್ರೆಸ್, ವೈಎಸ್ಸಾರ್ ಕಾಂಗ್ರೆಸ್, ತೆಲಂಗಾಣ ರಾಷ್ಟ್ರ ಸಮಿತಿ ಉತ್ತಮ ಫಲಿತಾಂಶ ನೀಡಲಿವೆ.

      ಹಾಪುರ್, ದೆಹಲಿ, ಫಲೋಡಿ(ರಾಜಸ್ಥಾನ), ಇಂದೋರ್, ಕೋಲ್ಕತ್ತಾ, ಆಗ್ರಾ, ಭಾವ್ನಗರ್, ಮುಂಬೈ ಹಾಗೂ ನಾಗ್ಪುರ್ ನ ಬೆಟ್ಟಿಂಗ್ ಬಜಾರಿನ ವರದಿಯಂತೆ ಮೋದಿ ಅವರು ಅಧಿಕಾರಕ್ಕೆ ಬರಲಿದ್ದಾರೆ.

      ಬಾಲಕೋಟ್ ವೈಮಾನಿಕ ದಾಳಿಯಿಂದ ಬಿಜೆಪಿಗೆ ಲಾಭ

      ಬಾಲಕೋಟ್ ವೈಮಾನಿಕ ದಾಳಿಯಿಂದ ಬಿಜೆಪಿಗೆ ಲಾಭ

      ಬಾಲಕೋಟ್ ವೈಮಾನಿಕ ದಾಳಿಯಿಂದ ಬಿಜೆಪಿಗೆ ಲಾಭವಾಗಲಿದೆ. ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಅವರೇ ಸೂಕ್ತ ಎಂಬ ಅಭಿಪ್ರಾಯಪಟ್ಟಿದ್ದಾರೆ. ಸರ್ಜಿಕಲ್ ಸ್ಟ್ರೈಕ್, ನಿರುದ್ಯೋಗ, ರಾಷ್ಟ್ರೀಯತೆ, ಕಾಂಗ್ರೆಸ್ಸಿನ ನ್ಯಾಯ್ ಸೇರಿದಂತೆ ಅಭಿವೃದ್ಧಿ ಯೋಜನೆ,ರಫೇಲ್ ಹಾಗೂ ಬೋಫೋರ್ಸ್ ಹಗರಣ ಮುಂತಾದ ವಿಷಯಗಳು ಚುನಾವಣೆ ಫಲಿತಾಂಶ ನಿರ್ಧರಿಸುವ ಅಂಶಗಳೆನಿಸಿವೆ.

      ಎನ್ಡಿಎ ಪರ ಬಿಡ್ ರೇಟ್ ಎಷ್ಟಿದೆ?

      ಎನ್ಡಿಎ ಪರ ಬಿಡ್ ರೇಟ್ ಎಷ್ಟಿದೆ?

      ಬಿಜೆಪಿ ನೇತೃತ್ವದ ಎನ್ಡಿಎ ಪರ 11 ರು ಹಾಗೂ ಕಾಂಗ್ರೆಸ್ ನೇತೃತ್ವದ ಯುಪಿಎಗೆ 33ರು ನಂತೆ ಬಾಜಿ ಕಟ್ಟಲಾಗುತ್ತಿದೆ. ಪಂಟರ್ ಗಳ ಸರಾಸರಿಯಂತೆ ಎನ್ಡಿಎಗೆ 185-220 ಸ್ಥಾನ, ಯುಪಿಎಗೆ 160 ರಿಂದ 180 ಸ್ಥಾನ ಗಳಿಸಬಹುದು. ಚುನಾವಣೆ ಘೋಷಣೆಗೂ ಮುನ್ನ ಎನ್ಡಿಎ 225 ರಿಂದ 250 ಸೀಟು ಸಿಗಬಹುದು ಎಂದು ಅಂದಾಜಿಸಲಾಗಿತ್ತು.

      ಗುಜರಾತಿನಲ್ಲಿ ಬಿಜೆಪಿಗೆ ಕೊಂಚ ಹಿನ್ನಡೆ

      ಗುಜರಾತಿನಲ್ಲಿ ಬಿಜೆಪಿಗೆ ಕೊಂಚ ಹಿನ್ನಡೆ

      ಗುಜರಾತಿನಲ್ಲಿ ಬಿಜೆಪಿಗೆ ಕೊಂಚ ಹಿನ್ನಡೆಯಾಗಲಿದ್ದು 6 ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ರಾಜಸ್ಥಾನದ ಪಂಟರ್ ಗಳು ಹೇಳಿದರೆ, ದೆಹಲಿ, ಸೂರತ್, ಮುಂಬೈ ಪಂಟರ್ ಗಳು ಗುಜರಾತಿನಲ್ಲಿ ಬಿಜೆಪಿ 22, ಕಾಂಗ್ರೆಸ್ 4 ಸ್ಥಾನಗಳಿಸಬಹುದು ಎಂದಿದ್ದಾರೆ. ಮತ್ತೊಂದು ಗುಂಪಿನ ಪ್ರಕಾರ ಬಿಜೆಪಿ 19, ಕಾಂಗ್ರೆಸ್ 7 ಸ್ಥಾನ ಪಡೆಯಲಿದೆ.

      ಉತ್ತರಪ್ರದೇಶದಲ್ಲಿ ಎನ್ಡಿಎಗೆ ಹಿನ್ನಡೆ

      ಉತ್ತರಪ್ರದೇಶದಲ್ಲಿ ಎನ್ಡಿಎಗೆ ಹಿನ್ನಡೆ

      ಉತ್ತರಪ್ರದೇಶದಲ್ಲಿ 73 ಸ್ಥಾನಗಳಿಸಿದ್ದ ಎನ್ಡಿಎ ಈ ಬಾರಿ ಮಹಾಘಟಬಂಧನ್ ನ ಪ್ರತಿರೋಧದಿಂದಾಗಿ ತನ್ನ ಪ್ರಭಾವ ಕಳೆದುಕೊಳ್ಳಲಿದ್ದು, 40 ಸ್ಥಾನ ಗಳಿಸಬಹು. ಎಸ್ ಪಿ ಬಿಎಸ್ಪಿ ಪಾಲಿಗೆ 34 ಸ್ಥಾನ ಸಿಗಲಿದೆ.

      ಬಿಹಾರ, ಪಶ್ಚಿಮ ಬಂಗಾಲದಲ್ಲಿ ಫಲಿತಾಂಶ

      ಬಿಹಾರ, ಪಶ್ಚಿಮ ಬಂಗಾಲದಲ್ಲಿ ಫಲಿತಾಂಶ

      ಬಿಹಾರದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ 15 ಸ್ಥಾನ ಮಾತ್ರ ಗಳಿಸಬಹುದು. ಕಳೆದ ಬಾರಿ 25 ಸ್ಥಾನಗಳಿಸಿತ್ತು. ಪಶ್ಚಿಮ ಬಂಗಾಲದಲ್ಲಿ ಬಿಜೆಪಿ 10 ಸ್ಥಾನ ಗಳಿಸುವ ನಿರೀಕ್ಷೆಯಿದೆ. ಮಿಕ್ಕಂತೆ ದಕ್ಷಿಣ ಭಾರತದಲ್ಲಿ ಕರ್ನಾಟಕ ಬಿಟ್ಟರೆ, ಮಿಕ್ಕ ಕಡೆಗಳಲ್ಲಿ ಬಿಜೆಪಿಯೇತರ ಪಕ್ಷಗಳು ಪ್ರಾಬಲ್ಯ ಮೆರೆಯಲಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+