ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಣ್ಣೂರಿನಲ್ಲಿ ಕಾಂಗ್ರೆಸ್-ಸಿಪಿಎಂ ಗುದ್ದಾಟದಲ್ಲಿ ಯಾರಿಗೆ ಮೇಲುಗೈ?

|
Google Oneindia Kannada News

ದಕ್ಷಿಣ ಭಾರತದ ರಾಜ್ಯ ಕೇರಳದ 20 ಲೋಕಸಭೆ ಕ್ಷೇತ್ರಗಳಲ್ಲಿ ಕಣ್ಣೂರು ಪ್ರಮುಖವಾಗಿ ಗಮನ ಸೆಳೆದಿದೆ.

ಕೇರಳದ ವಾಯವ್ಯ ಭಾಗದಲ್ಲಿ ಹರಡಿಕೊಂಡಿರುವ ಕಣ್ಣೂರು ಕರಾವಳಿ ಜಿಲ್ಲೆಯಲ್ಲಿ ಈ ಲೋಕಸಭೆ ಕ್ಷೇತ್ರ ವ್ಯಾಪಿಸಿದೆ. ಕಣ್ಣೂರನ್ನು ಕೇರಳದ ಕಿರೀಟ ಎಂದೂ ಕರೆಯಲಾಗುತ್ತದೆ. ಏಕೆಂದರೆ ರಾಜ್ಯದ ಈ ನೈಸರ್ಗಿಕ ಭಂಡಾರ ಪೂರ್ವ ಭಾಗದಲ್ಲಿರುವ ಪಶ್ಚಿಮ ಘಟ್ಟಗಳು, ಕೊಯಿಕ್ಕೋಡ್ ಮತ್ತು ದಕ್ಷಿಣದಲ್ಲಿ ವಯನಾಡ್‌ ಜಿಲ್ಲೆಗಳು, ಪಶ್ಚಿಮದಲ್ಲಿ ಲಕ್ಷದ್ವೀಪ ಸಮುದ್ರ, ಉತ್ತರದಲ್ಲಿ ಕಾಸರಗೋಡು ಜಿಲ್ಲೆಗಳನ್ನು ಸುತ್ತಲೂ ಹೊಂದಿದೆ.

ಕೇರಳದ ತಿರುವನಂತಪುರಂ ಲೋಕಸಭಾ ಕ್ಷೇತ್ರ ಪರಿಚಯ ಕೇರಳದ ತಿರುವನಂತಪುರಂ ಲೋಕಸಭಾ ಕ್ಷೇತ್ರ ಪರಿಚಯ

ಈ ಕ್ಷೇತ್ರ 1977ರಲ್ಲಿ ರಚನೆಯಾಯಿತು. ಆಗ ಅದಕ್ಕೆ ಕಣ್ಣನೂರು ಎಂದು ಕರೆಯಲಾಗುತ್ತಿತ್ತು. ಕಣ್ಣೂರು ವ್ಯಾಪಾರಿ ಒಕ್ಕೂಟಗಳು ಮತ್ತು ಎಡಪಂಥೀಯ ಸಂಘಟನೆಗಳು ಬಲವಾಗಿರುವ ಪ್ರದೇಶ. ಕೇರಳ ಸರ್ಕಾರದ 18 ಸಚಿವರಲ್ಲಿ ಮುಖ್ಯಮಂತ್ರಿ ಸೇರಿದಂತೆ ಮೂವರು ಕಣ್ಣೂರಿನವರು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಣ್ಣೂರು ಜಿಲ್ಲೆಯ ಧರ್ಮಾದಮ್ ವಿಧಾನಸಭೆ ಕ್ಷೇತ್ರದ ಪಿಣರಾಯಿ ಗ್ರಾಮದವರು.

ಕಣ್ಣೂರು ರಾಜ್ಯದ ಅತ್ಯಂತ ಹಿಂಸಾಚಾರ ಪೀಡಿತ ಕ್ಷೇತ್ರವೂ ಹೌದು. ವರದಿಗಳ ಪ್ರಕಾರ, ಕಳೆದ 45 ವರ್ಷಗಳಲ್ಲಿ ಸುಮಾರು 180 ಜನರನ್ನು ರಾಜಕೀಯ ಹಿಂಸಾಚಾರಗಳಲ್ಲಿ ಕಣ್ಣೂರು ಜಿಲ್ಲೆಯಲ್ಲಿ ಹತ್ಯೆ ಮಾಡಲಾಗಿದೆ. ಕೇರಳದಲ್ಲಿ ಹೆಚ್ಚಿನ ಕಾದಾಟ ಸಿಪಿಐಎಂ ಮತ್ತು ಆರೆಸ್ಸೆಸ್ ನಡುವೆ ನಡೆಯುತ್ತವೆ.

lok sabha elections 2019 kannur lok sabha constituency profile

ಕಣ್ಣೂರು ಲೋಕಸಭೆ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿದೆ. ಸಿಪಿಎಂನ ಪಿ.ಕೆ. ಶ್ರೀಮತಿ ಟೀಚರ್ ಹಾಲಿ ಸಂಸದೆ. ಸಂಸದೆಯಾಗಿ ಅವರು 479 ಪ್ರಶ್ನೆಗಳನ್ನು ಸಂಸತ್‌ನಲ್ಲಿ ಎತ್ತಿದ್ದಾರೆ. 161 ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ.

ತೆಲಂಗಾಣದ ಮೆಹಬೂಬಾನಗರ ಲೋಕಸಭಾ ಕ್ಷೇತ್ರ ಪರಿಚಯ ತೆಲಂಗಾಣದ ಮೆಹಬೂಬಾನಗರ ಲೋಕಸಭಾ ಕ್ಷೇತ್ರ ಪರಿಚಯ

1951ರಲ್ಲಿ ಇಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆಯಿತು. ಆಗ ಕಣ್ಣೂರು, ತಿರುವಂಕೂರು-ಕೊಚ್ಚಿನ್ ಕ್ಷೇತ್ರದಲ್ಲಿತ್ತು. ಸಿಪಿಎಂನ ಎ.ಕೆ. ಗೋಪಾಲನ್ ಆಯ್ಕೆಯಾಗಿದ್ದರು. 1977ರಲ್ಲಿ ಸಿಪಿಎಂನ ಸಿ.ಕೆ. ಚಂದ್ರಪ್ಪನ್ ಆಯ್ಕೆಯಾದರು. 1980ರಲ್ಲಿ ನಡೆದ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಗುರುತು ಮೂಡಿಸಿತು. ಕೆ. ಕುನ್ಹಂಬು ಜಯಗಳಿಸಿದ್ದರು.

ಕಾಂಗ್ರೆಸ್‌ನ ಮುಲಿಯಪಳ್ಳಿ ರಾಮಚಂದ್ರನ್ ಕಣ್ಣೂರು ಲೋಕಸಭೆ ಕ್ಷೇತ್ರದಲ್ಲಿ ಅತಿ ದೀರ್ಘಾವಧಿ ಲೋಕಸಭೆಗೆ ಆಯ್ಕೆಯಾಗಿದ್ದ ನಾಯಕ. ಇಲ್ಲಿ ಸಿಪಿಎಂ ಮತ್ತು ಕಾಂಗ್ರೆಸ್ ನಡುವೆ ಲೋಕಸಭೆ ಚುನಾವಣೆಗಳಲ್ಲಿ ನೇರ ಸಮಯ ನಡೆಯುತ್ತದೆ. 1984-1998ರ ಅವಧಿಯಲ್ಲಿ ಅವರು ಸಂಸದರಾಗಿದ್ದರು.

1999ರ ಚುನಾವಣೆಯಲ್ಲಿ ರಾಮಚಂದ್ರನ್, ಸಿಪಿಎಂ ಅಭ್ಯರ್ಥಿ ಎ.ಪಿ. ಅಬ್ದುಲ್ ಕುಟ್ಟಿ ಎದುರು ಸೋಲು ಅನುಭವಿಸಿದರು. ಈ ಮೂಲಕ ಸಿಪಿಎಂ ಕ್ಷೇತ್ರದಲ್ಲಿ 15 ವರ್ಷದ ಬಳಿಕ ಅಧಿಕಾರಕ್ಕೆ ಬಂದಿತು.

ವ್ಯಾಪಾರ ವಹಿವಾಟಿಗೆ ಕಣ್ಣೂರು ಹೆಸರಾದರೂ, ಜಿಲ್ಲೆ ಕೈಗಾರಿಕ ದೃಷ್ಟಿಕೋನದಿಂದ ಈಗಲೂ ಹಿಂದುಳಿದಿದೆ ಎಂದೇ ಪರಿಗಣಿಸಲಾಗಿದೆ. ಜಿಲ್ಲೆಗೆ ಮೂಲ ಆಧಾರವೇ ಕೃಷಿ. ಭತ್ತವನ್ನು ಜಿಲ್ಲೆಯಾದ್ಯಂತ ಪ್ರಧಾನವಾಗಿ ಬೆಳೆಯಲಾಗುತ್ತದೆ. ಜತೆಗೆ, ತೆಂಗು, ಅಡಿಕೆ, ಕಾಳುಮೆಣಸು, ಗೋಡಂಬಿ, ಮರಗೆಣಸು ಮತ್ತು ರಬ್ಬರ್‌ನಂತಹ ತೋಪು ಬೆಳೆಗಳನ್ನೂ ಪ್ರಮುಖವಾಗಿ ಬೆಳೆಯಲಾಗುತ್ತದೆ.

lok sabha elections 2019 kannur lok sabha constituency profile

ವಿಧಾನಸಭೆ ಕ್ಷೇತ್ರಗಳು: ಕಣ್ಣೂರು ಏಳು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಪಳಿಪರಂಬಾ, ಅಳಿಕೋಡ್, ಕಣ್ಣೂರು, ಇರಿಕ್ಕುರ್, ಧರ್ಮಾದಮ್, ಮಟ್ಟಣ್ಣೂರು, ಪೆರಾವೂರ್.

ಮುತ್ತಿನ ನಗರಿ ಹೈದರಾಬಾದ್: ಲೋಕಸಭಾ ಕ್ಷೇತ್ರ ಪರಿಚಯ ಮುತ್ತಿನ ನಗರಿ ಹೈದರಾಬಾದ್: ಲೋಕಸಭಾ ಕ್ಷೇತ್ರ ಪರಿಚಯ

ಕಳೆದ ಚುನಾವಣೆಯಲ್ಲಿ ಸಿಪಿಎಂನ ಪಿ.ಕೆ. ಶ್ರೀಮತಿ 4,27,622 ಮತಗಳನ್ನು ಪಡೆದಿದ್ದರೆ, ಅವರಿಗೆ ನಿಕಟ ಪೈಪೋಟಿ ನೀಡಿದ್ದ ಕಾಂಗ್ರೆಸ್‌ನ ಕೆ. ಸುದರ್ಶನ ಕೇವಲ 6,566 ಮತಗಳಿಂದ (4,21,056) ಸೋಲು ಅನುಭವಿಸಿದ್ದರು. ಬಿಜೆಪಿಯ ಅಭ್ಯರ್ಥಿ ಪಿ.ಸಿ. ಮೋಹನನ್ 51,636 ಮತಗಳನ್ನಷ್ಟೇ ಗಳಿಸಿದ್ದರು.

lok sabha elections 2019 kannur lok sabha constituency profile

ಜನಸಂಖ್ಯೆಯ ವಿವರ
ಕಣ್ಣೂರು ಕ್ಷೇತ್ರದಲ್ಲಿ ಒಟ್ಟು 16,72,184 ಜನಸಂಖ್ಯೆ ಇದೆ. 39.18% ಜನರು ಗ್ರಾಮೀಣ ಪ್ರದೇಶದಲ್ಲಿ ನೆಲೆಸಿದ್ದರೆ, 60.82% ಮಂದಿ ನಗರದಲ್ಲಿಯೇ ಇದ್ದಾರೆ. 3.23% ಪರಿಶಿಷ್ಟ ಜಾತಿಯ ಹಾಗೂ 2.24% ಪರಿಶಿಷ್ಟ ಪಂಗಡದ ಜನರು ಇಲ್ಲಿದ್ದಾರೆ.

lok sabha elections 2019 kannur lok sabha constituency profile

ಮತದಾರರ ವಿವರ
2014ರ ಚುನಾವಣಾ ಆಯೋಗದ ಅಂಕಿ ಅಂಶದ ಪ್ರಕಾರ, ಕಣ್ಣೂರು ಲೋಕಸಭೆ ಕ್ಷೇತ್ರದಲ್ಲಿ ಒಟ್ಟು 11,70,266 ಮತದಾರರಿದ್ದಾರೆ. ಇವರಲ್ಲಿ 5,48,454 ಪುರುಷರು, 6,21,812 ಮಹಿಳೆಯರು. ಜಿಲ್ಲೆಯ ಒಟ್ಟು ಜನಸಂಖ್ಯೆ 16,72,184.

2009ರ ಚುನಾವಣೆಯಿಂದ ಸಿಪಿಎಂ ಮತ್ತು ಕಾಂಗ್ರೆಸ್ ಇಲ್ಲಿ ತಲಾ ಒಂದು ಬಾರಿ ಅಧಿಕಾರಕ್ಕೆ ಬಂದಿದ್ದವು.

2014ರ ಚುನಾವಣೆಯಲ್ಲಿ 9,47,117 (ಶೇ 81) ಮಂದಿ ಮತ ಚಲಾಯಿಸಿದ್ದರು. ಇವರಲ್ಲಿ 4,39,557 ಪುರುಷರು ಮತ್ತು 5,07,560 ಮಹಿಳೆಯರಿದ್ದಾರೆ.

English summary
lok sabha elections 2019: Kerala's Kannur Lok Sabha constituency is a place of direct fight between Congress and CPM. CPM leader PK Sreemathy Teacher is sitting MP of this constituency. Here is a brief profile of Kannur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X