ಚುನಾವಣಾ ಅಕ್ರಮ ವರದಿ : ಸಿ-ವಿಜಿಲ್ ಆಪ್ ಬಳಸುವುದು ಹೇಗೆ?
ಲೋಕಸಭೆ ಚುನಾವಣೆ 2019 ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತಿರುವುದು ಕಂಡರೆ ನಾಗರೀಕರು ನೇರವಾಗಿ ಚುನಾವಣಾ ಆಯೋಗಕ್ಕೆ ತಂತ್ರಜ್ಞಾನದ ಮೂಲಕ ವಿಷಯ ಮುಟ್ಟಿಸಬಹುದು. ಅಭ್ಯರ್ಥಿಗಳು, ಕಾರ್ಯಕರ್ತರು ಅಕ್ರಮಗಳನ್ನು ಎಸಗದಂತೆ ತಡೆಯಲು ಅನೇಕ ವ್ಯವಸ್ಥೆಯನ್ನು ಆಯೋಗ ಈ ಬಾರಿ ಮಾಡುತ್ತಿದೆ.
ಬೆಂಗಳೂರಿನಲ್ಲಿ ಪ್ರಯೋಗಕ್ಕೆ ಬಂದು ಸಫಲವಾದ ಸಿ-ವಿಜಿಲ್ ಅಪ್ಲಿಕೇಷನ್ ತಂತ್ರಜ್ಞಾನವು ಈಗ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ದೇಶದೆಲ್ಲೆಡೆ ಬಳಕೆಗೆ ಬರಲಿದೆ. ಈ ಸಿವಿಜಿಲ್ ಆಪ್ ಅಸ್ತ್ರ ಬಳಸಿ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಯಾರು ಬೇಕಾದರೂ ದೂರು ಕೊಡಬಹುದು.
ಕೇಂದ್ರ ಚುನಾವಣಾ ಆಯೋಗ ಮೊದಲ ಬಾರಿಗೆ ಸಿ.ವಿಜಿಲ್ (ಜಾಗೃತ ಮತದಾರ ) ಎಂಬ ಮೊಬೈಲ್ ಅಪ್ಲಿಕೇಷನ್ ಪೂರ್ಣಪ್ರಮಾಣವಾಗಿ ಬಳಸುತ್ತಿದೆ. ಚುನಾವಣಾ ಅಕ್ರಮ ಸಂಬಂಧ ಸಾರ್ವಜನಿಕರು ಘಟನೆಗೆ ಸಂಬಂಧಿಸಿದಂತೆ ಲೈವ ಫೋಟೋ/ವೀಡಿಯೋ ಅಪ್ಲೋಡ್ ಮಾಡಿದರೆ ಸಾಕು, ತಕ್ಷಣವೇ ಮಾಹಿತಿ ಜಿಲ್ಲಾ ಚುನಾವಣಾ ಶಾಖೆಗೆ ರವಾನೆಯಾಗುತ್ತದೆ.
ಗೂಗಲ್ ಪ್ಲೇಸ್ಟೋರ್ ನಿಂದ ಸಿ-ವಿಜಿಲ್ ಆಪ್ ಡೌನ್‍ಲೋಡ್ ಮಾಡಿ, ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಛಾಯಾಚಿತ್ರ, ವಿಡಿಯೊ ಅಪ್‍ಲೊಡ್ ಮಾಡಬಹುದಾಗಿದೆ. ಇದಲ್ಲದೆ, ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರು, ಅಹವಾಲು, ಸಲಹೆಗಳನ್ನು ಸಲ್ಲಿಸಲು 24X7 ಕಂಟ್ರೋಲ್ ರೂಮ್ ತೆರೆಯಲಾಗಿದ್ದು, 1950 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಸಾರ್ವಜನಿಕರು ಅಹವಾಲು ದಾಖಲಿಸಬಹುದಾಗಿದೆ.

ಮಾಹಿತಿದಾರರ ಹೆಸರು, ಊರು ನೀಡುವುದು ಐಚ್ಛಿಕ
ಆಪ್ನಲ್ಲಿ ಮಾಹಿತಿದಾರ ಹೆಸರು, ಊರು ಬಹಿರಂಗಪಡಿಸುವುದು ಐಚ್ಛಿಕ. ಯಾವ ಸ್ಥಳದಲ್ಲಿ ಇದನ್ನು ತೆಗೆಯಲಾಗಿದೆ ಎಂಬುದು ಗೂಗಲ್ ಮ್ಯಾಪ್ನಿಂದ ತಿಳಿದುಬರಲಿದೆ. ಜಿಐಎಸ್ ತಂತ್ರಜ್ಞಾನ ಬಳಸುವ ಈ ಆಪ್ ನಿಂದ ದಾಖಲಾಗುವ ದೂರಿನ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿ, ನ್ಯಾಯಾಲಯದಲ್ಲಿ ಸಾಕ್ಷ್ಯ ಒದಗಿಸಬಹುದಾಗಿದೆ.

ಗೂಗಲ್ ನಲ್ಲಿ ಸರ್ಚ್ ಕೊಟ್ಟಾಗ ಗೂಗಲ್ ಪ್ಲೇ ಸ್ಟೋರಿನಿಂದ ಡೌನ್ ಲೋಡ್
ಭಾರತೀಯ ಚುನಾವಣಾ ಆಯೋಗ(ECI) ಅಕೌಂಟಿನಲ್ಲಿರುವ cVIGIL ಎಂಬ ಆಪ್ ಸಿಗಲಿದೆ. ಇದನ್ನು ನಿಮ್ಮ ಮೊಬೈಲಿಗೆ ಅನುಷ್ಠಾನಗೊಳಿಸಿ ಉಪಯೋಗಿಸಿ, ಹೇಗೆ ಬಳಸಬಹುದು ಎಂಬುದಕ್ಕೆ ಪ್ರಾತ್ಯಕ್ಷಿಕೆ ವಿಡಿಯೋ ಕೂಡಾ ಇದೆ. ಬಳಸುವ ಮುನ್ನ ಒಮ್ಮೆ ತಪ್ಪದೇ ವೀಕ್ಷಿಸಿ.

ತಾಂತ್ರಿಕ ವಿವರಗಳು
ಮಾರ್ಚ್ 10, 2019ರಂದು ರಿಲೀಸ್ ಆಗಿರುವ ಸಿವಿಜಿಲ್ ಆಪ್ ಇಲ್ಲಿ ತನಕ 1,00,000ಕ್ಕೂ ಅಧಿಕ ಡೌನ್ ಲೋಡ್ ಆಗಿದೆ. 12ಎಂಬಿ ತೂಕವುಳ್ಳ ಈ ಅಪ್ಲಿಕೇಷನ್ ಬಳಸಲು ಆಂಡ್ರಾಯ್ಡ್ 4.1 ಅಥವಾ ಅದಕ್ಕಿಂತ ಹೆಚ್ಚಿನ ಆವೃತ್ತಿ ಆಪರೇಟಿಂಗ್ ಸಿಸ್ಟಮ್ ಅಗತ್ಯ. ನಿಮಗೆ ಅಪ್ಲಿಕೇಷನ್ ಕುರಿತು ಏನಾದರೂ ಸಮಸ್ಯೆಗಳು ಕಂಡುಬಂದರೆ, [email protected] ಗೆ ಇಮೇಲ್ ಮಾಡಬಹುದು. ಇಲ್ಲದಿದ್ದರೆ 1950ಗೆ ಕರೆ ಮಾಡಿ ಸಹಾಯ ಕೋರಬಹುದು.ಅಪ್ಲಿಕೇಷನ್ ಡೌನ್ ಲೋಡ್ ಲಿಂಕ್

ದೂರುದಾರರ ನೋಂದಣಿ ಅಗತ್ಯ
ಚುನಾವಣಾ ಅಕ್ರಮ ವರದಿ ಮಾಡುವವರ ವಿವರ, ನೋಂದಣಿ ಆಗತ್ಯವಾಗಿದ್ದು, ಹೆಸರು, ಊರು ನೀಡುವುದು ನಿಮ್ಮ ಇಚ್ಛೆಗೆ ಬಿಟ್ಟಿದ್ದು, ಹೆಸರು, ವಿಳಾಸ, ರಾಜ್ಯ, ಜಿಲ್ಲೆ, ಯಾವ ಕ್ಷೇತ್ರ, ಪಿನ್ ಕೋಡ್ ಭರ್ತಿ ಮಾಡಿದ ಬಳಿಕ ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ. ಒಟಿಪಿಯನ್ನು ಹಾಕಿ, ನಿಮ್ಮ ಖಾತೆಯನ್ನು ದೃಢಗೊಳಿಸಬೇಕು.
ನಂತರ ಚುನಾವಣಾ ಆಕ್ರಮ ಕುರಿತ ಫೋಟೊ/ವಿಡಿಯೋ ಮಾಹಿತಿಯನ್ನು ನಿಮ್ಮ ಹೆಸರುಳ್ಳ ಖಾತೆಯಿಂದ ಅಥವಾ ಅನಾಮಿಕರಾಗಿ ಕಳಿಸಬಹುದು, ಯಾವ ಸ್ಥಳ, ಯಾವ ರೀತಿ ಅಕ್ರಮ ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಬೇಕುತ್ತದೆ. ಇದಕ್ಕೆ 5 ನಿಮಿಷಗಳ ಅವಧಿ ಇರುತ್ತದೆ.

ದೂರು ಸ್ವೀಕರಿಸಿದ ಬಳಿಕ ಏನಾಗಲಿದೆ?
ತಕ್ಷಣವೇ ಮಾಹಿತಿ ಜಿಲ್ಲಾ ಚುನಾವಣಾ ಶಾಖೆಗೆ ರವಾನೆಯಾಗುತ್ತದೆ. ನಂತರ ಮತಗಟ್ಟೆ ವ್ಯಾಪ್ತಿಯಲ್ಲಿರುವ ಸೆಕ್ಟರ್ ಅಧಿಕಾರಿಗಳಿಗೆ ಸಂದೇಶ ತಲುಪುತ್ತದೆ. ನಿಮ್ಮ ದೂರು ಯಾವ ಅಧಿಕಾರಿಗೆ ರವಾನೆಯಾಗಿದೆ. ಯಾವ ರೀತಿ ಅಕ್ರಮ ಎಂಬುದನ್ನು ತೋರಿಸಲಾಗುತ್ತದೆ. ನಿಮ್ಮ ದೂರಿನ ಬಗ್ಗೆ ಕ್ರಮ ತೆಗೆದುಕೊಳ್ಳಲಾಗಿದೆಯೆ ಇಲ್ಲವೆ? ಯಾವ ಹಂತದಲ್ಲಿ ದೂರಿನ ಬಗ್ಗೆ ಅಧಿಕಾರಿಗಳು ಪ್ರತಿಕ್ರಿಯಿಸುತ್ತಿದ್ದಾರೆ(ಇದಕ್ಕೆ13 ನಿಮಿಷಗಳ ಅವಧಿ ನೀಡಲಾಗಿದೆ) ಎಂಬುದು ತಿಳಿಯಲಿದೆ. ಚುನಾವಣಾ ಅಕ್ರಮ ನಡೆದ ಸ್ಥಳಕ್ಕೆ ಅಧಿಕಾರಿಗಳು ತೆರಳಿ ಮಹಜರು ನಡೆಸಲಿದ್ದಾರೆ ಹಾಗೂ ಪ್ರತಿ ದೂರುಗಳನ್ನು 100ನಿಮಿಷಗಳ ಒಳಗಾಗಿ ಬಗೆಹರಿಸಬೇಕಾಗುತ್ತದೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications