ಚಿಂತಾಮಣಿ ಸಮೀಕ್ಷೆ: ದಕ್ಷಿಣದಲ್ಲಿ ಎನ್ಡಿಎ ವಿರುದ್ಧ ಯುಪಿಎಗೆ ಜಯ

Recommended Video

      Lok Sabha Elections 2019 : ಎಲೆಕ್ಷನ್ ವೆಬ್ ತಾಣಕ್ಕಾಗಿ ಸಂಗ್ರಹಿಸಿದ ಚಿಂತಾಮಣಿ ಅವರ ವರದಿ ಇದು

      ಲೋಕಸಭೆ ಚುನಾವಣೆ 2019 ಸಂದರ್ಭದಲ್ಲಿ ಜನಪ್ರಿಯ ರಾಜಕೀಯ ತಜ್ಞ ಚಿಂತಾಮಣಿ ಅವರು ಎಲೆಕ್ಷನ್. ಇನ್ ವೆಬ್ ತಾಣಕ್ಕಾಗಿ ಸಂಗ್ರಹಿಸಿರುವ ಜನಾಭಿಪ್ರಾಯ ಸಮೀಕ್ಷಾ ವರದಿ ಇಲ್ಲಿದೆ.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      2014ರಲ್ಲಿ ಕಾಂಗ್ರೆಸ್ ಅಧಿಪತ್ಯ ಅಂತ್ಯ ಹಾಡಿದ್ದಲ್ಲದೆ, ಕಳೆದ 30 ವರ್ಷಗಳಲ್ಲೇ ಮ್ಯಾಜಿನ್ ನಂಬರ್ (272) ದಾಟಿದ ಪಕ್ಷವಾಗಿ ಬಿಜೆಪಿ ಹೊರ ಹೊಮ್ಮಿತ್ತು. ಆದರೆ, ಈ ಬಾರಿ ಬಹುತೇಕ ಎಲ್ಲಾ ಸಮೀಕ್ಷೆಗಳಲ್ಲೂ ಬಿಜೆಪಿ ನೇತೃತ್ವದ ಎನ್ಡಿಎಗೆ ಸರಳ ಬಹುಮತ ಮಾತ್ರ ಸಿಗಲಿದೆ ಎಂಬ ವರದಿ ಸಿಕ್ಕಿದೆ.

      ಚಿಂತಾಮಣಿ 5 ಡಾಟ್ಸ್ ಸಮೀಕ್ಷಾ ವರದಿಯಂತೆ ಬಿಜೆಪಿ 271 ಗಳಿಸಲಿದ್ದು, ಎನ್ಡಿಎ 335 ಸ್ಕೋರ್ ಮಾಡಲಿದೆ. ಯುಪಿಎ 100 ಸ್ಥಾನ ಮುಟ್ಟಲು ಕಷ್ಟಪಡಲಿದೆ.

      ಕೇಂದ್ರ ಬಜೆಟ್, ಪುಲ್ವಾಮಾ ದಾಳಿ ನಂತರ ಬಾಲಕೋಟ್, ಮುಜಾಫರಬಾದ್ ಹಾಗೂ ಚಕೋತಿ ಮೇಲೆ ದಾಳಿ ನಡೆಸಿ, ಉಗ್ರರನ್ನು ಸದೆಬಡಿದ್ದು, ಮೇಲ್ವರ್ಗದಲ್ಲಿ ಆರ್ಥಿಕವಾಗಿ ದುರ್ಬಲರಾದವರಿಗೆ ಮೀಸಲಾತಿ ಕಲ್ಪಿಸುವ ಸರ್ಕಾರದ ಘೋಷಣೆ ಬಳಿಕ ಮೋದಿ ಸರ್ಕಾರದ ಮೇಲೆ ಜನರಿಗೆ ನಂಬಿಕೆ ಹೆಚ್ಚಿದೆ.

      ಚಿಂತಾಮಣಿ ಸಮೀಕ್ಷೆಯಲ್ಲಿನ ದಕ್ಷಿಣ ಭಾರತದ ಫಲಿತಾಂಶ ಮುಂದೆ ಓದಿ...

      ತಮಿಳುನಾಡು 39 ಸ್ಥಾನಗಳು

      ತಮಿಳುನಾಡು 39 ಸ್ಥಾನಗಳು

      ಬಿಜೆಪಿ ಬಲ ಸಿಕ್ಕರೂ ಎಐಎಡಿಎಂಕೆಗೆ ನಿರಾಶೆ ಕಾದಿದೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಹೆಚ್ಚಿನ ಲಾಭ ಗಳಿಸಲಿದೆ. ಬಿಜೆಪಿ ತನ್ನ ಸ್ಥಾನವನ್ನು ಹೆಚ್ಚಿಸಿಕೊಳ್ಳಲಿದೆ. ಡಿಎಂಕೆ 15(2014ರಲ್ಲಿ 0), ಕಾಂಗ್ರೆಸ್ 5(0), ಎಎಂಎಂಕೆ 3(0), ಪಿಎಂಕೆ 3(1), ಎಐಎಡಿಎಂಕೆ 10(37), ಬಿಜೆಪಿ 3(1) ಗಳಿಸಲಿದೆ ಎಂದು ಚಿಂತಾಮಣಿ 5 ಡಾಟ್ಸ್ ಸಮೀಕ್ಷೆ ತಿಳಿಸಿದೆ.

      ಕೇರಳ 20

      ಕೇರಳ 20

      ಕಾಂಗ್ರೆಸ್ ಹಾಗೂ ಎಡಪಕ್ಷಗಳ ನಡುವಿನ ಪೈಪೋಟಿಯಲ್ಲೂ ದೇವರನಾಡು ಕೇರಳದಲ್ಲಿ ಬಿಜೆಪಿ ತನ್ನ ಖಾತೆ ತೆರೆಯಲಿದೆ. ಯುಡಿಎಫ್ ವಿರುದ್ಧ ಎಲ್ ಡಿಎಫ್ ಗೆ ನಿರಾಶೆ ಕಾದಿದೆ. ಕಾಂಗ್ರೆಸ್ 11(2014ರಲ್ಲಿ 8), ಯುಡಿಎಫ್ ಪ್ಲಸ್ 15(12), ಸಿಪಿಎಂ 4(5), ಎಲ್ ಡಿ ಎಫ್ ಪ್ಲಸ್ 4(8)ಎಂದು ಚಿಂತಾಮಣಿ 5ಡಾಟ್ಸ್ ಸಮೀಕ್ಷಾ ವರದಿ ತಿಳಿಸಿದೆ.

      ಕರ್ನಾಟಕ 28

      ಕರ್ನಾಟಕ 28

      ಬಿಜೆಪಿ ವಿರುದ್ಧ ಕಾಂಗ್ರೆಸ್ -ಜೆಡಿಎಸ್ ಮೈತ್ರಿಕೂಟ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಲಿದೆ. ಬಿಜೆಪಿ 19 ಸ್ಥಾನ ಗಳಿಸಲಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾಗೆ ಗೆಲುವು ಸಿಗಲಿದೆ ಎಂದು ಸಮೀಕ್ಷೆ ಹೇಳಿದೆ, ಜೆಡಿಎಸ್ ಏಕೈಕ ಸ್ಥಾನ ಗಳಿಸಲಿದ್ದು, ಕಾಂಗ್ರೆಸ್ 7ಕ್ಕೆ ಕುಸಿಯಲಿದೆ. ಬಿಜೆಪಿ 19(2014ರಲ್ಲಿ 17), ಕಾಂಗ್ರೆಸ್ 7(9), ಜೆಡಿಎಸ್ 1(2), ಇತರೆ 1(0)ಎಂದು ಚಿಂತಾಮಣಿ -5ಡಾಟ್ಸ್ ಸಮೀಕ್ಷಾ ವರದಿ ಹೇಳಿದೆ.

      ಆಂಧ್ರಪ್ರದೇಶ 25

      ಆಂಧ್ರಪ್ರದೇಶ 25

      ಬಿಜೆಪಿ ಸಖ್ಯ ಕಳೆದುಕೊಂಡ ಬಳಿಕ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಪಕ್ಷ(ಟಿಡಿಪಿ) ತನ್ನ ಪ್ರಾಬಲ್ಯ ಕಳೆದುಕೊಂಡಿದೆ. ಕಳೆದ ಚುನಾವಣೆಯಲ್ಲಿ ಟಿಡಿಪಿ ಆಂಧ್ರದಲ್ಲಿ 15, ತೆಲಂಗಾಣದಲ್ಲಿ 1 ಸ್ಥಾನ ಗಳಿಸಿತ್ತು. ಈ ಬಾರಿ ಕೇವಲ 6 ಸ್ಥಾನಕ್ಕೆ ಕುಸಿಯಲಿದೆ. ಟಿಡಿಪಿಯ ನಷ್ಟ, ವೈಎಸ್ಸಾರ್ ಕಾಂಗ್ರೆಸ್ಸಿಗೆ ಲಾಭವಾಗಲಿದೆ. ವೈಸ್ಸಾರ್ ಕಾಂಗ್ರೆಸ್ 16 ಸ್ಥಾನ ಗಳಿಸಲಿದೆ(2014ರಲ್ಲಿ 8 ಗಳಿಸಿತ್ತು), ಬಿಜೆಪಿ 2014ರಲ್ಲಿ ಗಳಿಸಿದ್ದ 2 ಸ್ಥಾನವನ್ನು ಈ ಬಾರಿ ಕಳೆದುಕೊಳ್ಳಲಿದೆ.

      ಗೋವಾ 2

      ಗೋವಾ 2

      ಹಿರಿಯ ಬಿಜೆಪಿ ನಾಯಕ, ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ನಿಧನದ ಬಳಿಕ ಕರಾವಳಿ ರಾಜ್ಯದಲ್ಲಿ ಬಿಜೆಪಿಗೆ ಮತ್ತೊಮ್ಮೆ 2 ಸ್ಥಾನವನ್ನು ಉಳಿಸಿಕೊಳ್ಳಲಿದೆ. ಕಾಂಗ್ರೆಸ್ಸಿಗೆ 2014 ರಂತೆ ಈ ಬಾರಿ ಕೂಡಾ ಶೂನ್ಯ ಸಂಪಾದನೆ ಮಾಡಲಿದೆ.

      ತೆಲಂಗಾಣ 17

      ತೆಲಂಗಾಣ 17

      ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್ ಎಸ್ ಮತ್ತೊಮ್ಮೆ ತನ್ನ ಪ್ರಾಬಲ್ಯ ಮೆರೆಯಲಿದ್ದು, 2014ರಲ್ಲಿ ಗಳಿಸಿದ್ದಕ್ಕಿಂತ ಹೆಚ್ಚಿನ ಸ್ಥಾನ ಪಡೆಯಲಿದೆ. ಟಿಆರ್ ಎಸ್ 15(2014ರಲ್ಲಿ 11), ಬಿಜೆಪಿ 1(1), ಕಾಂಗ್ರೆಸ್ 0(2), ಎಐಎಂಐಎಂ 1(4), ಟಿಡಿಪಿ 0(1), ವೈಎಸ್ಸಾರ್ ಸಿಪಿ 0(1)

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+