ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಕ್‌ಗೆ ಸಿಡಿಲು ಬಡಿದ ದೃಶ್ಯ ಸೆರೆಹಿಡಿದ ಮಹಿಳೆ: ವೈರಲ್ ವಿಡಿಯೋ

|
Google Oneindia Kannada News

ಭಾರತದಲ್ಲಿ ಹಲವೆಡೆ ಭಾರೀ ಮಳೆಯಾಗುತ್ತಿದೆ. ಮನೆಗಳು, ರಸ್ತೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಗಾಲ ಅಂದರೆ ಮೋಡ, ಗಾಳಿ, ಗುಡುಗು, ಮಿಂಚು ಇವೆಲ್ಲಾ ಸಾಮಾನ್ಯ. ಹೀಗಾಗಿ ಮಳೆಗಾಲದಲ್ಲಿ ಹೆಚ್ಚು ಜನ ಮನೆಯಿಂದ ಹೊರಬರಲು ಹೆದರುತ್ತಾರೆ.

ಕೊಂಚ ಮಳೆ ಗುಡುಗು ಕಾಣಿಸಿಕೊಂಡರೆ ಸಾಕು ಜನ ಮನೆ ಸೇರಿಕೊಳ್ಳಲು ಹಾತೊರೆಯುತ್ತಾರೆ. ಇದರ ನಡುವೆ ಸಿಡಿಲು ಶಬ್ದ ಕೇಳಿದರೆ ಹೇಗಾಗಬೇಡ. ಇದರ ಶಬ್ದ ಹೇಳುವುದಕ್ಕೆ ಎದೆ ಗುಂಡಿಗೆ ಗಟ್ಟಿಯಾಗಿರಬೇಕು. ಹೀಗಿರುವಾಗ ಹತ್ತಿರದಿಂದ ನೋಡುವುದು ದೂರದ ಮಾತು.

ಕೊಡಗಿನಲ್ಲಿ ಮಳೆಗಾಲ ಬಿರುಸು, ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಣೆ ಕೊಡಗಿನಲ್ಲಿ ಮಳೆಗಾಲ ಬಿರುಸು, ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಣೆ

ಹೀಗೊಂದು ವಿಡಿಯೋದಲ್ಲಿ ಸಿಡಿಲು ಬಡಿದ ವಿಡಿಯೋ ವೈರಲ್ ಆಗಿದೆ. ಅಮೆರಿಕಾದಲ್ಲಿ ರಸ್ತೆ ಮೇಲೆ ಚಲಿಸುತ್ತಿದ್ದ ವಾಹನಕ್ಕೆ ಸಿಡಿಲು ಬಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

Lightning Hits Truck Woman Captures Video Goes Viral

ಇತ್ತೀಚೆಗಷ್ಟೇ ಅಮೆರಿಕದ ಫ್ಲೋರಿಡಾದಿಂದ ವಾಹನವೊಂದಕ್ಕೆ ಸಿಡಿಲು ಬಡಿದಿರುವುದನ್ನು ನೆಟ್ಟಿಗರು ನೋಡಿ ಬೆರಗಾದ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಟ್ರಕ್‌ವೊಂದಕ್ಕೆ ಸಿಡಿಲು ಬಡಿದ ವಿಡಿಯೋ ಹತ್ತಿರದಿಂದ ಮತ್ತು ಸ್ಪಷ್ಟವಾಗಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಟ್ರಕ್‌ಗೆ ಸಿಡಿಲು ಬಡಿದಿದೆ. ಹಿಂಬದಿ ಕಾರಿನಿಂದ ವಿಡಿಯೋ ಸೆರೆಯಾಗಿದೆ.

ಈ ಭಯಾನಕ ಘಟನೆಯನ್ನು ಕ್ಯಾಮೆರಾದಲ್ಲಿ ಅದ್ಭುತ ರೀತಿಯಲ್ಲಿ ಸೆರೆಹಿಡಿಯಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಟ್ರಕ್ ಚಾಲಕನ ಹಿಂದೆ ಕಾರು ಚಲಾಯಿಸುತ್ತಿದ್ದ ಮಹಿಳೆಯೊಬ್ಬರು ದೃಶ್ಯವನ್ನು ಹಂಚಿಕೊಂಡಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಅದು ಅನೇಕ ಹೃದಯಗಳನ್ನು ಗೆದ್ದಿದೆ.

ಎಡ್ವರ್ಡ್ ಬಾಲೆನ್ ಎಂಬ ವ್ಯಕ್ತಿ ಜುಲೈ 1 ರಂದು ಮನೆಗೆ ಹೋಗುವ ಹೆದ್ದಾರಿಯಲ್ಲಿ ಸಣ್ಣ ಟ್ರಕ್‌ನಲ್ಲಿ ಹೋಗುತ್ತಿದ್ದರು. ಅವರು ತಮ್ಮ ಮೂವರು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಸಿಡಿಲು ಬಡಿದಿದೆ. ವಿಡಿಯೋದಲ್ಲಿ ನೋಡಿದಂತೆ, ಮಿಂಚು ಬಡಿದ ತಕ್ಷಣ ವ್ಯಕ್ತಿಯ ಟ್ರಕ್‌ಗೆ ಬೆಂಕಿ ಹೊತ್ತಿಕೊಂಡಿದೆ. ಘಟನೆ ಬಳಿಕ ಇಡೀ ಕುಟುಂಬ ಸುರಕ್ಷಿತವಾಗಿದೆ. ವಿಡಿಯೋವನ್ನು ಹಿಲ್ಸ್ಬರೋ ಕೌಂಟಿ ಶೆರಿಫ್ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ 37.2k ಕ್ಕಿಂತ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.

English summary
A recent video from Florida, USA has gone viral on the internet as netizens are amazed to watch lightning strike a vehicle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X