ಗಾರ್ಮೆಂಟ್ಸ್, ಅನಾಥಾಶ್ರಮ, ವೃದ್ಧಾಶ್ರಮಗಳಲ್ಲಿ ಮಹಿಳೆಯರು ಎದುರಿಸುವ ಸವಾಲುಗಳು
ಹೆಣ್ಣು ದೇಶದ ಕಣ್ಣು. ಜೀವನದ ಪ್ರತಿಯೊಂದು ಹಂತದಲ್ಲೂ ಅವಳೊಬ್ಬ ಸಾಧಕಿ. ಯಾವುದೇ ಆಪೇಕ್ಷೆ ಇಲ್ಲದೆ ದುಡಿಯುವ ಕರುಣಾಮಯಿ. ಹೆಣ್ಣಿಲ್ಲದೆ ಜೀವನವಿಲ್ಲ. ಹೆಣ್ಣು ಮನೆಯ ನಂದಾ ದೀಪ. ಹೆಣ್ಣಿಲ್ಲದ ಬದುಕು ಕತ್ತಲೆ ಇಂತೆಲ್ಲಾ ಮಾತುಗಳು ನಮಗೆಲ್ಲಾ ನೆನಪಿಗೆ ಬರುವುದು ಮಹಿಳಾ ದಿನಾಚರಣೆಗೆ ಮಾತ್ರ. ಆ ನಂತರ ಹೆಣ್ಣನ್ನ ಗಂಡಿನಷ್ಟೆ ಸರಿಸಮಾನಳಾಗಿ ಕಾಣುವುದು ಅಷ್ಟಕಷ್ಟೆ. ಹೀಗಾಗಿ ಆಕೆ ಜೀವನದುದ್ದಕ್ಕೂ ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸುತ್ತಲೇ ಬರುತ್ತಾಳೆ. ವಿಶೇಷವಾಗಿ ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರು ಎದುರಿಸುವ ಸಮಸ್ಯೆಗಳು ಅಷ್ಟಿಷ್ಟಲ್ಲ.
ಹಾಗಾದರೆ ನಿತ್ಯ ಗಾರ್ಮೆಂಟ್ಸ್ ಗಳಲ್ಲಿ, ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಲ್ಲಿ ಕೆಲಸ ಮಾಡುವ ಮಹಿಳೆಯರು ಯಾವೆಲ್ಲಾ ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸುತ್ತಾರೆ. ತಮ್ಮ ಬದುಕು ಕಟ್ಟಿಕೊಳ್ಳಲು ಎಷ್ಟೆಲ್ಲಾ ಶ್ರಮ ವಹಿಸುತ್ತಾರೆ. ಆಕೆಗೆ ಎದುರಾಗುವ ಸಂಕಷ್ಟಗಳು ಯಾವುವು? ಎಲ್ಲದರ ಬಗ್ಗೆ ಈಗ ತಿಳಿಯೋಣ.

ಗಾರ್ಮೆಂಟ್ ಕಾರ್ಖಾನೆಗಳಲ್ಲಿ ಮಹಿಳೆಯರು ಎದುರಿಸುವ ಸವಾಲುಗಳು
* ಶೌಚಾಲಯಗಳ ಕೊರತೆ
* ನೀರಿನ ಸೌಲಭ್ಯ ಇಲ್ಲದೇ ಇರುವುದು
* ಸಾರಿಗೆ ಸೌಲಭ್ಯ ಕೊರತೆ
* ವಿಶ್ರಾಂತಿ ಕೊಠಡಿಗಳು
* ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿ
* ದೌರ್ಜನ್ಯ, ಕಿರುಕುಳ, ತಾರತಮ್ಯ
* ಸರಿಯಾಗಿ ಸಂಬಳ ಕೊಡದೇ ಇರುವುದು
* ಹೆಚ್ಚಿನ ಕೆಲಸ ಕಡಿಮೆ ಸಂಬಳ
* ರಜೆ ಇಲ್ಲದ ದುಡಿಮೆ

ವೃದ್ಧಾಶ್ರಮಗಳಲ್ಲಿ ಮಹಿಳೆಯರು ಎದುರಿಸುವ ಸವಾಲುಗಳು
* ಅನಾರೋಗ್ಯ ಸಮಸ್ಯೆ
* ಹೆತ್ತ ಮಕ್ಕಳಿಂದಲೇ ಪೋಷಕರ ಕಡೆಗಣನೆ
* ವೃದ್ದಾಪ್ಯದಲ್ಲಿ ದೌರ್ಜನ್ಯ
* ಮಾನಸಿಕ ಕಿರುಕುಳ
* ಆಹಾರದ ಕೊರತೆ
* ಸ್ವಚ್ಚತೆಯ ಸಮಸ್ಯೆ
* ಅಸಾಹಾಯಕತೆಯ ದುರುಪಯೋಗ
* ಕೀಳಿರಿಮೆ
* ಮೂಲಭೂತ ಸೌಲಭ್ಯಗಳ ಅವ್ಯವಸ್ಥೆ
* ಸರಿಯಾಗಿ ಚಿಕಿತ್ಸೆಯ ಸಿಗದಿರುವುದು
* ಅಂಗಾಗಗಳ ಮಾರಾಟ

ಅನಾಥಾಶ್ರಮಗಳಲ್ಲಿ ಮಹಿಳೆಯರು ಎದುರಿಸುವ ಸವಾಲುಗಳು
* ಶಿಕ್ಷಣದ ಕೊರತೆ
* ಆರ್ಥಿಕ ಸಹಾಯದ ಸಮಸ್ಯೆಗಳು
* ಲೈಂಗಿಕ ದೌರ್ಜನ್ಯ
* ಮಾನಸಿಕ ಕಿರುಕುಳ
* ಮೂಲಭೂತ ಸೌಲಭ್ಯಗಳ ಕೊರತೆ
* ಹೆಣ್ಣು ಮಕ್ಕಳ ಮಾರಾಟ
* ಆರೋಗ್ಯಕರ ಆಹಾರದ ಕೊರತೆ
* ಶುದ್ಧತೆ ಸಮಸ್ಯೆ
* ಅಂಗಾಗಗಳ ಮಾರಾಟ
* ಅಂಗವಿಕಲ ಮಕ್ಕಳ ಹಾರೈಕೆಯಲ್ಲಿ ಹಿನ್ನಡೆಯ
* ತಾರತಮ್ಯ
* ವೈದ್ಯಕೀಯ ಚಿಕಿತ್ಸೆಯಲ್ಲಿ ವಿಫಲ

ಇಂತೆಲ್ಲಾ ಸಾವಾಲುಗಳನ್ನು ಮಧ್ಯಮ ವರ್ಗದ ಮಹಿಳೆಯರು ಇಂದಿನ ಕಾಲದಲ್ಲಿ ಅನುಭವಿಸುತ್ತಿದ್ದಾರೆ. ಮತ್ತೊಂದು ವಿಚಾರ ಅಂದರೆ ಇಂತಹ ಅದೆಷ್ಟೋ ಸಮಸ್ಯೆಗಳು ಕಣ್ಣಿಗೆ ನೋಡಲು ಕಾಣುವುದಿಲ್ಲ. ಆದರೆ ಕೌನ್ಸಲ್ಲಿಂಗ್, ಪ್ರತ್ಯೇಕ ಭೇಟಿ ಅಥವಾ ಪರಸ್ಪರ ಚರ್ಚೆಗಳು ನಡೆದಾಗ ಇವೆಲ್ಲಾ ಸಮಸ್ಯೆಗಳು ಕಣ್ಣೆದುರಿಗೆ ಬರುತ್ತವೆ. ಇಂದಿಗೂ ಕೂಡ ಮಹಿಳೆ ಎಲ್ಲಾ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿರಬಹುದು. ಆದರೆ ಪುರುಷರಷ್ಟೇ ಸರಿಸಮಾನವಾಗಿ ದುಡಿದರೂ ಕೂಡ ಆಕೆಗೆ ತಕ್ಕ ಸಂಬಳವಾಗಲಿ, ಪ್ರಾಶಸ್ತ್ಯವಾಗಲಿ, ಪ್ರಾಮುಖ್ಯತೆಯಾಗಲಿ ಸಿಗುತ್ತಿಲ್ಲ. ಜೊತೆಗೆ ನಾನಾ ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸಿ ಆಕೆ ನಿಲ್ಲಬೇಕಾದ ಸ್ಥಿತಿ ಇಂದಿಗೂ ಕೂಡ ಇದೆ.












Click it and Unblock the Notifications