ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣ ಜನ್ಮಾಷ್ಟಮಿ: ದಹಿ ಹಂಡಿ ಸ್ಪರ್ಧೆಯಲ್ಲಿ ಹುಡುಗಿಯರು ಭಾಗಿ

ಮುಂಬೈ ಆಗಸ್ಟ್ 19: ಮುಂಬೈನಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಇಂದು ಆಚರಿಸಲಾಗುತ್ತಿದೆ. ಕೃಷ್ಣ ಜನ್ಮಾಷ್ಟಮಿಯಂದು ಮುಂಬೈನಲ್ಲಿ ದಹಿ ಹಂಡಿ ಸ್ಪರ್ಧೆ ಬಹಳ ಪ್ರಸಿದ್ಧವಾಗಿದೆ. ದಹಿ ಹಂಡಿ ಸ್ಪರ್ಧೆಯಲ್ಲಿ ಹುಡುಗರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರ

|
Google Oneindia Kannada News

ಮುಂಬೈ ಆಗಸ್ಟ್ 19: ಮುಂಬೈನಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಇಂದು ಆಚರಿಸಲಾಗುತ್ತಿದೆ. ಕೃಷ್ಣ ಜನ್ಮಾಷ್ಟಮಿಯಂದು ಮುಂಬೈನಲ್ಲಿ ದಹಿ ಹಂಡಿ ಸ್ಪರ್ಧೆ ಬಹಳ ಪ್ರಸಿದ್ಧವಾಗಿದೆ. ದಹಿ ಹಂಡಿ ಸ್ಪರ್ಧೆಯಲ್ಲಿ ಹುಡುಗರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಈ ವರ್ಷ ಮುಂಬೈನಲ್ಲಿ ನಡೆದ ದಹಿ ಹಂಡಿ ಸ್ಪರ್ಧೆಯಲ್ಲಿ ಹುಡುಗಿಯರು ಭಾಗವಹಿಸಿದ್ದಾರೆ.ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ದಾದರ್ ಸ್ಟಾರ್ ಲೇನ್‌ನಲ್ಲಿ ದಹಿ ಹಂಡಿ ಸ್ಪರ್ಧೆಯಲ್ಲಿ ಹುಡುಗಿಯರು ಭಾಗವಹಿಸಿದ್ದಾರೆ. ದಹಿ ಹಂಡಿ ಸ್ಪರ್ಧೆಯಲ್ಲಿ ಬಾಲಕಿಯರ ಗುಂಪೊಂದು ಮಡಕೆ ಒಡೆದಿರುವುದನ್ನು ಕಾಣಬಹುದು. ಹುಡುಗಿಯರು ಪಿರಮಿಡ್ ಮಾಡುವ ಮೂಲಕ ಮೊಸರು ಮಡಿಕೆಯನ್ನು ಒಡೆದಿದ್ದಾರೆ.

'ದಹಿ ಹಂಡಿ'ಯನ್ನು ಅಧಿಕೃತ ಕ್ರೀಡೆ ಎಂದು ಘೋಷಿಸಿದ 'ಮಹಾ' ಸಿಎಂ'ದಹಿ ಹಂಡಿ'ಯನ್ನು ಅಧಿಕೃತ ಕ್ರೀಡೆ ಎಂದು ಘೋಷಿಸಿದ 'ಮಹಾ' ಸಿಎಂ

ದಹಿ ಹಂಡಿ ಒಂದು ಪ್ರಮುಖ ಆಚರಣೆ

ದಹಿ ಹಂಡಿ ಒಂದು ಪ್ರಮುಖ ಆಚರಣೆ

ಹಿಂದೂಗಳ ಹಬ್ಬವಾದ ಕೃಷ್ಣ ಜನ್ಮಾಷ್ಟಮಿಯನ್ನು ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಹಬ್ಬವನ್ನು ಜನ್ಮಾಷ್ಟಮಿ, ಗೋಕುಲಾಷ್ಟಮಿ, ಕೃಷ್ಣಾಷ್ಟಮಿ ಅಥವಾ ಶ್ರೀಕೃಷ್ಣ ಜಯಂತಿ ಎಂದೂ ಕರೆಯಲಾಗುತ್ತದೆ ಮತ್ತು ಇದು ಶ್ರೀಕೃಷ್ಣನ ಜನ್ಮವನ್ನು ಸೂಚಿಸುತ್ತದೆ. ಶ್ರೀಕೃಷ್ಣ ವಿಷ್ಣುವಿನ ಎಂಟನೇ ಅವತಾರ. ಭಾದ್ರಪದದ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಕೃಷ್ಣನ ಜನ್ಮವನ್ನು ಆಚರಿಸಲಾಗುತ್ತದೆ. ಈ ಹಬ್ಬದ ಅತ್ಯಂತ ದೊಡ್ಡ ಆಚರಣೆಯು ಮಥುರಾ ಮತ್ತು ವೃಂದಾವನದಲ್ಲಿ ನಡೆಯುತ್ತದೆ. ಅಲ್ಲಿ ಭಗವಾನ್ ಕೃಷ್ಣನು ಹುಟ್ಟಿ ಬೆಳೆದು ವರ್ಷಗಳನ್ನು ಕಳೆದನು. ಈ ವರ್ಷದ ಜನ್ಮಾಷ್ಟಮಿ ಆಚರಣೆಗಳು ಆಗಸ್ಟ್ 18 ರಂದು ಪ್ರಾರಂಭವಾಯಿತು ಮತ್ತು ಆಗಸ್ಟ್ 19 ರವರೆಗೆ ನಡೆಯಲಿದೆ. ದಹಿ ಹಂಡಿ ಒಂದು ಪ್ರಮುಖ ಆಚರಣೆಯಾಗಿದೆ. ಇದನ್ನು ಶುಕ್ರವಾರ 19 ಆಗಸ್ಟ್ 2022 ರಂದು ಜನ್ಮಾಷ್ಟಮಿಯ ನಂತರದ ದಿನದಂದು ಆಚರಿಸಲಾಗುತ್ತದೆ.

ಸಾಂಪ್ರದಾಯಿಕ ಆಚರಣೆ

ಸಾಂಪ್ರದಾಯಿಕ ಆಚರಣೆ

"ದಹಿ ಹಂಡಿ", ಅಂದರೆ "ಮೊಸರು ಮಡಿಕೆ". ಇದನ್ನು ಎತ್ತರದಲ್ಲಿ ಕಟ್ಟಿ ಯುವಕರ ಗುಂಪು ಪಿರಮಿಡ್ ಮೂಲಕ ಅದನ್ನು ಒಡೆಯುತ್ತಾರೆ. ಇದು ಭಗವಾನ್ ಕೃಷ್ಣನ ಜನ್ಮದಿನವಾದ ಜನ್ಮಾಷ್ಟಮಿಗೆ ಸಂಬಂಧಿಸಿದ ರಾಜ್ಯದ ಜನಪ್ರಿಯ ಕಾರ್ಯಕ್ರಮವಾಗಿದೆ. ಇದು ಸಾಂಪ್ರದಾಯಿಕ ಆಚರಣೆಯಾಗಿದೆ. ಬೆಣ್ಣೆ ಕದಿಯುವುದರಿಂದ ಬೇಸತ್ತ ಸ್ಥಳೀಯ ತಾಯಂದಿರು ಬಾಲ ಕೃಷ್ಣನಿಂದ ಬೆಣ್ಣೆಯನ್ನು ಉಳಿಸಲು ಎತ್ತರದಲ್ಲಿ ಬೆಣ್ಣೆ ಮಡಿಕೆಯನ್ನು ಕಟ್ಟಿರುತ್ತಾರೆ. ಆಗ ಬಾಲ ಕೃಷ್ಣ ಹಾಗೂ ಆತನ ಸ್ನೇಹಿತರೊಂದಿಗೆ ಪಿರಮಿಡ್ ಮಾಡುವ ಮೂಲಕ ಮಡಿಕೆ ಒಡೆದು ಮೊಸರು ಕದಿಯುತ್ತಾರೆ. ಇದು ಇಂದಿಗೂ ಕೃಷ್ಣ ಜನ್ಮಾಷ್ಟಮಿಯಂದು ಆಚರಿಸಿಕೊಂಡು ಬರಲಾಗಿದೆ.

ಇನ್ನೂ "ದಹಿ ಹಂಡಿ" ಎಂಬ ಜನಪ್ರಿಯ ಮನರಂಜನಾ ಕಾರ್ಯಕ್ರಮಕ್ಕೆ ಮಹಾರಾಷ್ಟ್ರ ಸಿಎಂ ವಿಶೇಷ ಸ್ಥಾನಮಾನ ನೀಡಿದ್ದಾರೆ. ಇದನ್ನು ರಾಜ್ಯದ ಕ್ರೀಡಾ ವಿಭಾಗದ ಅಡಿಯಲ್ಲಿ ಅಧಿಕೃತವಾಗಿ ಗುರುತಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಗುರುವಾರ ಹೇಳಿದ್ದಾರೆ. ಮಹಾರಾಷ್ಟ್ರ "ದಹಿ ಹಂಡಿ" ಎಂಬ ಶಿಸ್ತನ್ನು ಪರಿಚಯಿಸುತ್ತದೆ ಮತ್ತು ಪಂದ್ಯಾವಳಿಯಲ್ಲಿ ಭಾಗವಹಿಸಿದ "ಗೋವಿಂದಾಸ್" ಕ್ರೀಡಾ ಮಹಾರಾಷ್ಟ್ರ ಕೋಟಾದ ಅಡಿಯಲ್ಲಿ ಉದ್ಯೋಗಗಳನ್ನು ಪಡೆಯುತ್ತದೆ ಎಂದು ಶಿಂಧೆ ಹೇಳಿದರು. ಮಾತ್ರವಲ್ಲದೆ "ನಾವು ಗೋವಿಂದರಿಗೆ 10 ಲಕ್ಷ ರೂಪಾಯಿಗಳ ವಿಮಾ ರಕ್ಷಣೆಯನ್ನು ಒದಗಿಸುತ್ತೇವೆ" ಎಂದು ಶಿಂಧೆ ಹೇಳಿದರು.

ಈ ದಿನ ಉಪವಾಸ, ವಿಶೇಷ ಪೂಜೆ

ಈ ದಿನ ಉಪವಾಸ, ವಿಶೇಷ ಪೂಜೆ

ಹಿಂದೂ ಧರ್ಮಗ್ರಂಥಗಳ ಪ್ರಕಾರ, ಭಾದ್ರಪದ ಮಾಸದ (ಆಗಸ್ಟ್-ಸೆಪ್ಟೆಂಬರ್) ಎಂಟನೇ ದಿನದ (ಅಷ್ಟಮಿ) ಮಧ್ಯರಾತ್ರಿಯಲ್ಲಿ ಮಥುರಾದಲ್ಲಿ ದೇವಕಿ ಮತ್ತು ವಸುದೇವರ ಮಗನಾದ ಶ್ರೀ ಕೃಷ್ಣನು ಜನಿಸಿದನು. ಶ್ರೀ ಕೃಷ್ಣನು ಮಥುರಾದ ರಾಕ್ಷಸ ರಾಜ ಕಂಸನನ್ನು ಕೊಲ್ಲಲು ಜನಿಸಿದನೆಂದು ಹಿಂದೂ ಧರ್ಮಗ್ರಂಥಗಳು ಹೇಳುತ್ತವೆ. ಕಂಸ ಅಂದರೆ ಶ್ರೀಕೃಷ್ಣನ ತಾಯಿಯ ಸಹೋದರ. ಯಾವುದೋ ಒಂದು ಭವಿಷ್ಯವಾಣಿಯ ಮೇಲಿನ ಭಯದಿಂದ ಶ್ರೀಕೃಷ್ಣನ ಮಾವ ಕಂಸನು ಆತನ ತಂದೆ ತಾಯಿಯನ್ನು ಸೆರೆಯಲ್ಲಿಡುತ್ತಾನೆ. ಭವಿಷ್ಯವಾಣಿಯು ಕಂಸನಿಗೆ ನಿನ್ನ ತಂಗಿಯ ಮಗುವಿನಿಂದಲೇ ನಿನ್ನ ಮರಣವೆಂದು ಹೇಳಿರುತ್ತದೆ.

ಹಾಗಾಗಿ ಕಂಸನು ತನ್ನ ತಂಗಿಯ ವಿವಾಹವಾದಾಗಲೇ ಆಕೆಯನ್ನು ಹಾಗೂ ಆಕೆಯ ಪತಿಯನ್ನು ಸೆರೆಯಲ್ಲಿಡುತ್ತಾನೆ. ಆಕೆಗೆ ಜನಿಸಿದ ಎಲ್ಲಾ ಮಗುವನ್ನು ಕಂಸನು ಹುಟ್ಟಿದಾಕ್ಷಣ ಸಾಯಿಸುತ್ತಾ ಬರುತ್ತಾನೆ. ಹೀಗೆ ಹಿಂಸಾ ಮನೋಭಾವವನ್ನು ಹೊಂದಿದ್ದ ಕಂಸನು ತನ್ನ ಸಹೋದರಿಯ 7 ಮಕ್ಕಳನ್ನು ಸಾಯಿಸುತ್ತಾನೆ. ಆದರೆ 8 ನೇ ಮಗುವಾದ ಕೃಷ್ಣನು ಆತನ ಪಾಲಿನ ಯಮನಾಗುತ್ತಾನೆ. ಜನ್ಮಾಷ್ಟಮಿಯಂದು, ಭಕ್ತರು ಉಪವಾಸವನ್ನು ಆಚರಿಸುತ್ತಾರೆ, ಹೊಸ ಬಟ್ಟೆಗಳನ್ನು ಧರಿಸುತ್ತಾರೆ ಮತ್ತು ಬಾಲ ಕೃಷ್ಣನ ಮೂರ್ತಿಗಳಿಗೆ ಹೊಸ ಬಟ್ಟೆಗಳನ್ನು ಧರಿಸಿ ಮತ್ತು ತೊಟ್ಟಿಲುಗಳಲ್ಲಿ ಇರಿಸುತ್ತಾರೆ.

ನಂದ ಮತ್ತು ಯಶೋದೆಯೊಂದಿಗೆ ಬೆಳೆದ ಕೃಷ್ಣ

ನಂದ ಮತ್ತು ಯಶೋದೆಯೊಂದಿಗೆ ಬೆಳೆದ ಕೃಷ್ಣ

ಜನ್ಮಾಷ್ಟಮಿಯಂದು ಶ್ರೀಕೃಷ್ಣನು ದೇವಕಿ ಮತ್ತು ವಸುದೇವ ದಂಪತಿಗಳ ಪುತ್ರನಾಗಿ ಕಂಸನ ಸೆರೆವಾಸದಲ್ಲಿ ಜನಿಸುತ್ತಾನೆ. ಈತನೇ ದೇವಕಿಯ 8ನೇ ಮಗನಾಗಿದ್ದಾನೆ. ದೇವಕಿ ಮತ್ತು ವಸುದೇವರಿಬ್ಬರು ತಮ್ಮ 7 ಮಕ್ಕಳನ್ನು ಕಳೆದುಕೊಂಡು ಚಿಂತೆಗೆ ಒಳಗಾಗಿದ್ದರು. ತಮ್ಮ 8ನೇ ಮಗುವನ್ನಾದರು ರಕ್ಷಿಸಬೇಕೆಂಬ ಬಯಕೆ ಅವರಲ್ಲಿತ್ತು. ಆದ್ದರಿಂದ 8ನೇ ಮಗುವಾಗಿ ಕೃಷ್ಣ ಜನಿಸುತ್ತಿದ್ದಂತೆ ಆ ಶಿಶುವನ್ನು ಆತನ ತಂದೆ ವಸುದೇವ ರಾತ್ರೋರಾತ್ರಿ ಬುಟ್ಟಿಯಲ್ಲಿ ಆ ಮಗುವನ್ನಿಟ್ಟುಕೊಂಡು ಮಥುರಾದಿಂದ ಯಮುನಾ ನದಿಯತ್ತ ಸಾಗುತ್ತಾನೆ. ಅದೇ ಸಮಯದಲ್ಲಿ ಗೋಕುಲದ ಮುಖ್ಯಸ್ಥನಾದ ನಂದ ಮತ್ತು ಯಶೋಧೆಗೂ ಮಗುವಾಗುತ್ತದೆ. ಇದನ್ನು ತಿಳಿದ ವಸುದೇವನು ಯಶೋಧೆಯ ಮಗುವಿದ್ದ ಜಾಗದಲ್ಲಿ ತನ್ನ ಮಗುವನ್ನಿಟ್ಟು, ಯಶೋಧಾಳ ಮಗುವನ್ನು ತೆಗೆದುಕೊಂಡು ಪುನಃ ಮಥುರಾಗೆ ಹಿಂದಿರುಗುತ್ತಾನೆ. ಆಗ ಶ್ರೀ ಕೃಷ್ಣ ನಂದ ಮತ್ತು ಯಶೋದೆಯಿಂದ ಬೆಳೆದನು. ಬಳಿಕ ಕಂಸನಿಗೆ ಈ ವಿಷಯ ಗೊತ್ತಾಗಿ ಗೋಕುಲದ ಎಲ್ಲಾ ಮಕ್ಕಳನ್ನು ಕೊಲ್ಲಲು ತನ್ನವರನ್ನು ಕಳುಹಿಸುತ್ತಾನೆ. ಆದರೆ ಅದು ಸಾಧ್ಯವಾಗದೇ ಕೊನೆಗೆ ಕೃಷ್ಣನೇ ಕಂಸನನ್ನು ಕೊಲ್ಲುತ್ತಾನೆ.

English summary
The girls participated in the Dahi Handi competition held in Mumbai this year. This video has gone viral on social media. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X