ಕೃಷ್ಣ ಜನ್ಮಾಷ್ಟಮಿ: ಮಥುರಾದಲ್ಲಿ ಸಕಲ ಸಿದ್ಧತೆ; ಕೃಷ್ಣನ ಉಡುಗೆಗೆ ವಿದೇಶದಲ್ಲಿ ಭಾರಿ ಬೇಡಿಕೆ
ಮಥುರಾ, ಆಗಸ್ಟ್ 17: ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಉತ್ತರ ಪ್ರದೇಶದ ಮಥುರಾ ಹಾಗೂ ವೃಂದಾವನ ನಗರಗಳಲ್ಲಿ ಎರಡು ತಿಂಗಳಿಂದಲೂ ಸಕಲ ಸಿದ್ಧತೆಗಳು ನಡೆದಿವೆ. ಆಗಸ್ಟ್ 18ರಂದು ಗುರುವಾರ ಹಾಗೂ ಆಗಸ್ಟ್ 19ರಂದು ಶುಕ್ರವಾರ ಸಂಭ್ರಮದಿಂದ ಅದ್ಧೂರಿಯಾಗಿ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ.
ಹಿಂದೂಗಳ ಪಾಲಿನ ವಿಶೇಷ ಹಬ್ಬವಾದ ಈ ಜನ್ಮಾಷ್ಟಮಿಯನ್ನು 'ಶ್ರೀ ಕೃಷ್ಣ ಜನ್ಮಾಷ್ಟಮಿ, ಗೋಕುಲಾಷ್ಟಮಿ, ಕೃಷ್ಣಾಷ್ಟಮಿ ಅಥವಾ ಶ್ರೀ ಕೃಷ್ಣ ಜಯಂತಿ ಎಂದೂ ಕರೆಯಲಾಗುತ್ತದೆ. ಇದು ಭಗವಾನ್ ಶ್ರೀ ಕೃಷ್ಣನ ಜನ್ಮವನ್ನು ಸೂಚಿಸುತ್ತದೆ. ಹೀಗಾಗಿಯೇ ಶ್ರೀ ಕೃಷ್ಣನು ಮಥುರಾ ಹಾಗೂ ವೃಂದಾವನ ನಗರಗಳಲ್ಲಿ ಹುಟ್ಟಿ ಬೆಳೆದಿದ್ದಾನೆ. ಅನೇಕ ವರ್ಷಗಳನ್ನು ಇಲ್ಲಿ ಕಳೆದಿದ್ದಾನೆ ಎಂಬ ನಂಬಿಕೆ ಜನರಲ್ಲಿಗೆ. ಹೀಗಾಗಿ ಈ ಭಾಗದಲ್ಲಿ ಜನ್ಮಾಷ್ಟಮಿ ಹೆಚ್ಚು ವಿಶೇಷತೆ ಪಡೆದುಕೊಂಡಿದೆ.
ವೇದ ಪಂಚಾಂಗದಂತೆ ಶ್ರೀಕೃಷ್ಣ ಜನ್ಮಾಷ್ಟಮಿ ತಿಥಿಯು ಆಗಸ್ಟ್ 18 ರಾತ್ರಿ 9:21ಕ್ಕೆ ಪ್ರಾರಂಭವಾಗಿ ಆಗಸ್ಟ್ 19ರಂದು ರಾತ್ರಿ 10.59ಗಂಟೆಗೆ ಕೊನೆಗೊಳ್ಳುತ್ತದೆ. ಒಟ್ಟು ಎರಡು ದಿನದ ಈ ಅವಧಿಯಲ್ಲಿ ವಿಶಿಷ್ಟ ಪೂಜೆ ಕಾರ್ಯಕ್ರಮ ನಡೆಸಲಾಗುತ್ತದೆ. ಮಥುರಾದಲ್ಲಿ ಈ ವರ್ಷ ಅದ್ಧೂರಿಯಾಗಿ ಜನ್ಮಾಷ್ಟಮಿ ನಡೆಸಲು ಕಳೆದ ಎರಡು ತಿಂಗಳನಿಂದ ಪೂರ್ವ ಸಿದ್ಧತೆ ಆರಂಭವಾಗಿದೆ. ಈ ಹಿಂದಿನ ಎರಡು ವರ್ಷದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ಆಚರಣೆಗಳು, ಪೂಜೆ ಪುನಸ್ಕಾರಗಳು ನಡೆದಿದ್ದವು.

ವಿದೇಶಗಳಲ್ಲೂ ಶ್ರೀ ಕೃಷ್ಣ ಉಡುಗೆಗೆ ಬೇಡಿಕೆ
ಈ ವಿಶೇಷ, ಅದ್ಧೂರಿ ಕೃಷ್ಣ ಜನ್ಮಾಷ್ಟಮಿಯ ಆಚರಣೆ ಅಂಗವಾಗಿ ಕೃಷ್ಣನ ವಿಗ್ರಹಗಳಿಗೆ ಬಣ್ಣಬಣ್ಣದ ಬಟ್ಟೆಗಳನ್ನು ಉಡಿಸಲಾಗುತ್ತದೆ. ಈ ಬಟ್ಟೆಗಳು ಮಥುರಾದ ಮನೆ ಮನೆಗಳಲ್ಲಿ ತಯಾರಿಸಲಾಗಿದೆ. ಭಗವಾನ್ ಕೃಷ್ಣನ ಬಣ್ಣ ಬಣ್ಣದ ಹಾಗೂ ವರ್ಣರಂಜಿತ ಮಥುರಾದ ಉಡುಗೆ ತೊಡುಗೆಗಳಿಗೆ ಭಾರತ ಮಾತ್ರವಲ್ಲದೆ, ಯುಎಸ್ಎ, ರಷ್ಯಾ, ದುಬೈ, ಕೆನಡಾ ಹಾಗೂ ಪೋಲೆಂಡ್‌ನಂತಹ ಒಟ್ಟು 18ಕ್ಕಿಂತಲೂ ಅಧಿಕ ದೇಶಗಳಲ್ಲಿ ಭಾರಿ ಬೇಡಿಕೆ ಇದೆ.

ಅಂದಾಜು ರೂ.500ಕೋಟಿ ಮೌಲ್ಯದ ಬಟ್ಟೆ ಮಾರಾಟದ ಗುರಿ
ವಿದೇಶಿ ಮಾರುಕಟ್ಟೆಗಳಿಗೆ ಶ್ರೀ ಕೃಷ್ಣನ ಕಲರ್‌ಫುಲ್ ಬಟ್ಟೆಗಳು ಪ್ರವೇಶಿಸುತ್ತಿದ್ದಂತೆ ಸೋಲ್ಡ್‌ಔಟ್ ಆಗುತ್ತವೆ ಎನ್ನಲಾಗಿದೆ. ಈ ವರ್ಷ ಮಥುರಾದ ವ್ಯಾಪಾರಿಗಳು ಜನ್ಮಾಷ್ಟಮಿ ಆಚರಣೆ ಕುರಿತು ಅಂದಾಜು ರೂ.500ಕೋಟಿ ಮೌಲ್ಯದ ಬಟ್ಟೆಗಳನ್ನು ಮಾರಾಟ ಮಾಡುವ ಉದ್ದೇಶ ಹೊಂದಿದೆ. ಈ ಸಂಬಂಧ ಕುಶಲಕರ್ಮಿಗಳು, ವ್ಯಾಪಾರಿಗಳು ಕೃಷ್ಣನ ಬಟ್ಟೆ ತಯಾರಿಸುವಲ್ಲಿ ಹಗಲಿರುಳು ಶ್ರಮಿಸುತ್ತಾ ಮಗ್ನರಾಗಿದ್ದಾರೆ ಎಂದು ತಿಳಿದು ಬಂದಿದೆ.

2ತಿಂಗಳಿನಿಂದ ಉಡುಗೆ ಮಾರಾಟಕ್ಕೆ ಸಿದ್ಧತೆ
ಶ್ರೀ ಕೃಷ್ಣ ಜನ್ಮಾಷ್ಟಮಿ ಆರಂಭಕ್ಕೂ ಮುನ್ನ ಎರಡು ತಿಂಗಳು ವರ್ಣಮಯವಾದ ಉಡುಗೆಗಳ ವ್ಯಾಪಾರ, ತರಯಾರಿಕೆ, ವಹೀವಾಟಿನ ಸಿದ್ಧತೆ ಕನಿಷ್ಠ ಎರಡು ತಿಂಗಳ ಮುಂಚಿತವಾಗಿ ಶುರುವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಮಥುರಾ ವೃಂದಾವನ ನಗರಗಳ ಸುಮಾರು 20,000 ಹೆಚ್ಚು ಮಂದಿ ತೊಡಗಿಕೊಂಡಿರುತ್ತಾರೆ. ಇದರಲ್ಲಿ ಕುಶಲಕರ್ಮಿಗಳು, ಕಚ್ಚಾ ವಸ್ತುಗಳ ಮಾರಾಟಗಾರರು, ಉಡುಗೆ ತಯಾರಕರು, ವ್ಯಾಪಾರಿಗಳು ಒಳಗೊಂಡಿದ್ದಾರೆ.
ಹಬ್ಬದ ಆಚರಣೆಗೆ ಬಟ್ಟೆ ತಯಾರಿಸಲು, ಅವನ್ನು ವಿದೇಶಗಳಿಗೆ ಕಳುಹಿಸುವ ಕಾರ್ಯದಲ್ಲಿ ತೊಡಗಿರುವವರು ಕುಶಲಕರ್ಮಿಗಳು ಪ್ರತಿನಿತ್ಯ ಕನಿಷ್ಠ 12 ಗಂಟೆಯಿಂದ 14 ತಾಸುಗಳ ಕಾಲ ಶ್ರಮಿಸುತ್ತಿದ್ದಾರೆ. ಜನ್ಮಾಷ್ಟಮಿಗೂ ಎರಡು ತಿಂಗಳು ಮುನ್ನದಿಂದಲೇ ಬಟ್ಟೆಗಳ ಆರ್ಡರ್ ಪಡೆಯುವುದನ್ನು ಮಾಡುತ್ತಿದ್ದಾರೆ. ಇದರಿಂದ ಭಾರತದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ, ಆಚರಣೆಗಳ ಮಹತ್ವ ವಿದೇಶಗಳಿಗೂ ತಲುಪುತ್ತಿದೆ.

ದೇಶಾದ್ಯಂತ ಕೃಷ್ಣ ಹುಟ್ಟಿದ ದಿನ ಜನ್ಮಾಷ್ಟಮಿ ಆಚರಣೆ
ಕೇವಲ ಮಥುರಾ ಮಾತ್ರವಲ್ಲದೇ ದೇಶಾದ್ಯಂತ ಎಲ್ಲೆಡೆ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಸಂಭ್ರಮ, ಸಡಗರ ಮನೆ ಮಾಡಿದೆ. ತ್ರಿಮೂರ್ತಿಗಳಲ್ಲಿ ಒಬ್ಬರಾಗಿರುವ ವಿಷ್ಣುವಿನ ಎಂಟನೇ ಅವತಾರ ಎನ್ನಲಾಗುವ ಶ್ರೀ ಕೃಷ್ಣನು ಹಿಂದುಗಳ ಅಚ್ಚುಮೆಚ್ಚಿನ ದೇವರು ಸಹ ಆಗಿದ್ದಾನೆ. ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಭಗವಾನ್ ಶ್ರೀ ಕೃಷ್ಣ ಹುಟ್ಟಿದ್ದರಿಂದ ಈ ದಿನವನ್ನು ಜನ್ಮಾಷ್ಟಮಿಯಾಗಿ ನಾಡಿನಾದ್ಯಂತ ಆಚರಿಸಲಾಗುತ್ತಿದೆ.












Click it and Unblock the Notifications