ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣ ಜನ್ಮಾಷ್ಟಮಿ 2022: ಶ್ರೀ ಕೃಷ್ಣ ನವಿಲು ಗರಿ, ಕೊಳಲು ಪ್ರೀತಿಸಲು ಕಾರಣವೇನು?

|
Google Oneindia Kannada News

ಶ್ರೀಕೃಷ್ಣನ ಸಂಪೂರ್ಣ ಜೀವನವು ಮಾನವ ಸಮಾಜಕ್ಕೆ ನಿರ್ದೇಶನವನ್ನು ನೀಡುತ್ತದೆ. ಅವನಿಗೆ ಸಂಬಂಧಿಸಿದ ಪ್ರತಿಯೊಂದು ವಿಷಯವೂ ವಿಶೇಷ ಮಹತ್ವವನ್ನು ಹೊಂದಿದೆ. ಅವನು ಮಾಡಿದ ಪ್ರತಿಯೊಂದು ಕೆಲಸದ ಹಿಂದೆ ಹಲವು ಉದ್ದೇಶವಿದೆ. ಆದ್ದರಿಂದ ಅವನು ಮಾನವ ಜೀವನದ ಪ್ರತಿಯೊಂದು ಅಂಶಗಳೊಂದಿಗೆ ಸಂಪರ್ಕ ಹೊಂದಿದ್ದಾನೆ. ಆತನಿಗೆ ಹದಿನೈದು ಸಾವಿರ ಗೋಪಿಕಾಸ್ತ್ರೀಯರು ಇದ್ದರು ಎಂದು ಪುರಾಣಗಳು ಹೇಳುತ್ತವೆ. ಅದೆಷ್ಟೋ ಜನ ತಮ್ಮ ಮುದ್ದು ಮಕ್ಕಳನ್ನು ಕೃಷ್ಣನಂತೆ ಅಲಂಕರಿಸಿ ಶ್ರೀಕೃಷ್ಣನನ್ನು ತಮ್ಮ ಮಕ್ಕಳಲ್ಲಿ ಕಾಣುತ್ತಾರೆ.

ಈ ಬಾರಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಬ್ಬವನ್ನು ಆಗಸ್ಟ್‌ 19 ಶುಕ್ರವಾರದಂದು ಆಚರಿಸಲಾಗುತ್ತದೆ. ಕೆಲವು ಜನರು ಆಗಸ್ಟ್ 18 ರಂದು ಪಂಚಾಂಗದ ವ್ಯತ್ಯಾಸದೊಂದಿಗೆ ಆಚರಿಸುತ್ತಿದ್ದಾರೆ. ಶ್ರಾವಣ ಕೃಷ್ಣ ಪಕ್ಷದ ರಾತ್ರಿ 7ನೇ ಮುಹೂರ್ತದ ನಂತರ 8ನೇ ಮುಹೂರ್ತವು ಇರುವಾಗ ಶ್ರೀಕೃಷ್ಣನ ಜನ್ಮವಾಯಿತು. ಆ ಸಮಯದಲ್ಲಿ ಮಧ್ಯರಾತ್ರಿಯಾಗಿತ್ತು. ಎಂಟನೆಯ ಮುಹೂರ್ತದ ಬಗ್ಗೆ ಮಾತನಾಡಿದರೆ 19 ರಂದು ಮತ್ತು ಮಧ್ಯರಾತ್ರಿಯ ಬಗ್ಗೆ ಮಾತನಾಡಿದರೆ ಅದು 18 ರಂದು ಈ ಬಾರಿ ಸಂಭವಿಸಲಿದೆ. ಸನಾತನ ಸಂಸ್ಕೃತಿಯನ್ನು ಅನುಸರಿಸುವ ಪ್ರತಿಯೊಂದು ಮನೆಯೂ ಶ್ರೀಕೃಷ್ಣನನ್ನು ಪೂಜಿಸುತ್ತದೆ. ಜನ್ಮಾಷ್ಟಮಿಯ ಸಂದರ್ಭದಲ್ಲಿ ಶ್ರೀಕೃಷ್ಣ ಬಳಸುವ ವಸ್ತುಗಳು ಮತ್ತು ಅವುಗಳ ಪ್ರಾಮುಖ್ಯತೆಯನ್ನು ತಿಳಿಯೋಣ.

Janmashtami 2022 : ಕೃಷ್ಣ ಜನ್ಮಾಷ್ಟಮಿ: ಸಮಯ, ವ್ರತ, ಉಪವಾಸ, ಪೂಜಾ ವಿಧಾನJanmashtami 2022 : ಕೃಷ್ಣ ಜನ್ಮಾಷ್ಟಮಿ: ಸಮಯ, ವ್ರತ, ಉಪವಾಸ, ಪೂಜಾ ವಿಧಾನ

ಮುರಳೀಧರನ ಮಧುರ ವಾದ್ಯ

ಮುರಳೀಧರನ ಮಧುರ ವಾದ್ಯ

ಭಗವಾನ್ ಕೃಷ್ಣನು ಕೊಳಲನ್ನು ತುಂಬಾ ಪ್ರೀತಿಸುತ್ತಿದ್ದನು. ಹೀಗಾಗಿ ಅವನ ಜನಪ್ರಿಯ ಹೆಸರುಗಳಲ್ಲಿ 'ಮುರಳೀಧರ' ಎಂಬ ಹೆಸರೂ ಕೂಡ ಒಂದು. ಕೊಳಲು ಒಂದು ಮಧುರ ವಾದ್ಯ. ನಮ್ಮ ಜೀವನವೂ ಕೊಳಲಿನಂತೆ ಮಧುರವಾಗಿರಬೇಕು ಎಂಬ ಸಂದೇಶವನ್ನು ನೀಡುತ್ತದೆ. ಯಾವುದೇ ಪರಿಸ್ಥಿತಿಯಿರಲಿ, ನಾವು ಯಾವಾಗಲೂ ಸಂತೋಷವಾಗಿರಬೇಕು ಮತ್ತು ಸಂತೋಷವನ್ನು ಹರಡಲು ಪ್ರಯತ್ನಿಸಬೇಕು.

ಬೆಣ್ಣೆ ಮತ್ತು ಮೊಸರು ಪ್ರಿಯ ಮನೋಹರ

ಬೆಣ್ಣೆ ಮತ್ತು ಮೊಸರು ಪ್ರಿಯ ಮನೋಹರ

ನವಿಲು ಗರಿ ಕೂಡ ಶ್ರೀ ಕೃಷ್ಣನ ಮೆಚ್ಚಿನವುಗಳಲ್ಲಿ ಒಂದಾಗಿದೆ. ಅವನು ಅದನ್ನು ತನ್ನ ಕಿರೀಟದಲ್ಲಿ ಇಟ್ಟುಕೊಳ್ಳುತ್ತಿದ್ದನು ಎಂಬ ಅಂಶವು ಅವನ ಜೀವನದಲ್ಲಿ ಅದರ ಪ್ರಾಮುಖ್ಯತೆಯನ್ನು ಸ್ಥಾಪಿಸುತ್ತದೆ. ಧಾರ್ಮಿಕ ಗ್ರಂಥಗಳ ಪ್ರಕಾರವೂ ನವಿಲು ಗರಿ ಮಹತ್ವದ್ದಾಗಿದೆ. ಇದು ಜೀವನದಲ್ಲಿ ತೊಂದರೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ.

ಕೃಷ್ಣನು ಬೆಣ್ಣೆಯನ್ನು ಪ್ರೀತಿಸುತ್ತಿದ್ದನು. ಅವನು ‘ಗೋಪಿಗಳಿಂದ' ಬೆಣ್ಣೆಯನ್ನು ಕದಿಯುತ್ತಿದ್ದುದರಿಂದ ಅವನಿಗೆ ‘ಮಖನ್ ಚೋರ್ ಅಥವ ಬೆಣ್ಣೆ ಕಳ್ಳ' ಎಂಬ ಹೆಸರು ಬಂದಿತು. ಅವರು ಮಖನ್ ಮಿಶ್ರಿ(ಬೆಣ್ಣೆ ಮತ್ತು ಸಕ್ಕರೆ)ಯನ್ನೂ ಪ್ರೀತಿಸುತ್ತಿದ್ದರು. ಮೊಸರನ್ನು ಕಡೆದು ತೆಗೆದ ಬೆಣ್ಣೆಗೆ ಸಕ್ಕರೆ ಹಾಕಿದರೆ ತಿನ್ನಲು ಹೆಚ್ಚು ರುಚಿಯೂ ಎಷ್ಟು ಪರಿಮಳವೋ ನಮ್ಮ ಬದುಕು ಕೂಡ ಮಖನ್ ಮಿಶ್ರಿಯಂತೆ ಬೆರೆತು ಮಧುರತೆಯನ್ನು ಒದಗಿಸಬೇಕು.

ಕಠಿಣ ಸಂದರ್ಭ ನಿಭಾಯಿಸುವ ಶಕ್ತಿ 'ವೈಜಂತಿ ಮಾಲಾ'

ಕಠಿಣ ಸಂದರ್ಭ ನಿಭಾಯಿಸುವ ಶಕ್ತಿ 'ವೈಜಂತಿ ಮಾಲಾ'

ಶಾಸ್ತ್ರಗಳ ಪ್ರಕಾರ ಕಮಲದ ಹೂವನ್ನು ಅತ್ಯಂತ ಪರಿಶುದ್ಧವೆಂದು ಪರಿಗಣಿಸಲಾಗಿದೆ. ಕೆಸರಿನಲ್ಲಿ ಬೆಳೆದರೂ ಅದು ತನ್ನ ಸೌಂದರ್ಯ, ಮೃದುತ್ವ ಮತ್ತು ಶುದ್ಧತೆಯನ್ನು ಕಳೆದುಕೊಳ್ಳುವುದಿಲ್ಲ. ಇದು ನಮಗೆ ಸರಳವಾಗಿ ಮತ್ತು ಸುಂದರವಾಗಿ ಬದುಕುವ ಪಾಠವನ್ನು ನೀಡುತ್ತದೆ.


ಶ್ರೀ ಕೃಷ್ಣನು ವೈಜಂತಿ ಮಾಲೆ ಧರಿಸುತ್ತಾನೆ. ಈ ಮಾಲಾವನ್ನು ಲೋಟಸ್ ಬೀಜಗಳಿಂದ ತಯಾರಿಸಲಾಗುತ್ತದೆ ಮತ್ತು ಈ ಬೀಜಗಳು ತುಂಬಾ ಗಟ್ಟಿಯಾಗಿರುತ್ತವೆ. ನಮ್ಮ ಜೀವನದಲ್ಲಿ ಎಷ್ಟೇ ತೊಂದರೆಗಳು ಸುತ್ತುವರಿದಿದ್ದರೂ, ನಿಮ್ಮ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ಮಾಡಿ ಮತ್ತು ಕಠಿಣ ಸಂದರ್ಭಗಳನ್ನು ನಿಭಾಯಿಸಿ ಎಂಬ ಸಂದೇಶದಿಂದ ವೈಜಂತಿ ಮಾಲಾ ನಮಗೆ ನೀಡಲಾಗುತ್ತದೆ.

ಸಮೃದ್ಧಿ ನೀಡುವ ಗೋಸೇವೆ

ಸಮೃದ್ಧಿ ನೀಡುವ ಗೋಸೇವೆ

ಸನಾತನ ಸಂಸ್ಕೃತಿಯಲ್ಲಿ ಹಸುವನ್ನು ಅತ್ಯಂತ ಶುದ್ಧ ಜೀವಿ ಎಂದು ಪರಿಗಣಿಸಲಾಗುತ್ತದೆ. ‘ಪಂಚಗವ್ಯ' ಅಂದರೆ ಹಸುವಿನ ಹಾಲು, ಗೋವಿನ ಮೊಸರು, ಗೋಮೂತ್ರ, ಹಸುವಿನ ತುಪ್ಪ, ಗೋಮಯ ಇವುಗಳನ್ನು ಧರ್ಮಗ್ರಂಥದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. 'ಗೋಸೇವೆ' ದುಃಖವನ್ನು ಕೊನೆಗೊಳಿಸಿ ಸಮೃದ್ಧಿಯನ್ನು ನೀಡುತ್ತದೆ. ಹೀಗಾಗಿ ಕೃಷ್ಣ ಬಳಸುವ ಪ್ರತಿಯೊಂದು ವಸ್ತುಗಳು ತನ್ನದೇ ಆದ ಮಹತ್ವ ಹೊಂದಿದೆ. ಹೀಗಾಗಿ ಅವುಗಳನ್ನು ಕೃಷ್ಣನ ಪೂಜೆಗೆ ಬಳಕೆ ಮಾಡಲಾಗುತ್ತದೆ.

Recommended Video

Yuvraj Singh ಅಭ್ಯಾಸದಲ್ಲಿ ಯರ್ರಾಬಿರ್ರಿ ಸಿಕ್ಸ್ ಹೊಡೆದರು | *Cricket | Oneindia Kannada

English summary
Krishna Janmashtami 2022: Here we explain the reasons Why Lord Krishna Wears Peacock Feather and Loves Flute. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X