ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವುದೋ ಕಾಲದ ಮದ್ದುಗುಂಡು ಖರೀದಿಸುತ್ತಿರುವ ರಷ್ಯಾ; ಕಾರಣವೇನು?

|
Google Oneindia Kannada News

ಉಕ್ರೇನ್ ಮೇಲೆ ಯುದ್ಧ ಮಾಡುತ್ತಾ ಮಾಡುತ್ತಾ ಹತಾಶೆಗೊಂಡಿರುವ ರಷ್ಯಾ ದೇಶ ಇದೀಗ ಉತ್ತರ ಕೊರಿಯಾದಿಂದ ಸಿಡಿಮದ್ದು, ಬಾಂಬುಗಳನ್ನು ಖರೀದಿಸುತ್ತಿರುವ ಸುದ್ದಿಯೊಂದು ಮಾಧ್ಯಮಗಳಲ್ಲಿ ಸದ್ದು ಮಾಡಿದೆ. ಉತ್ತರ ಕೊರಿಯಾ ಎಲ್ಲಿ ರಷ್ಯಾ ಎಲ್ಲಿ? ಚೀನಾಗೆ ಶಸ್ತ್ರಾಸ್ತ್ರ ಪೂರೈಸುವ ರಷ್ಯಾ ಉತ್ತರ ಕೊರಿಯಾದಿಂದ ಖರೀದಿಸುವ ಮಟ್ಟಕ್ಕೆ ಬಂದು ನಿಂತಿದೆಯಾ ಎಂದು ಅಚ್ಚರಿ ಎನಿಸಬಹುದು.

ಉತ್ತರ ಕೊರಿಯಾದಿಂದ ಕೋಟ್ಯಂತರ ಫಿರಂಗಿ ಸಿಡಿಮದ್ದುಗಳು ಮತ್ತು ರಾಕೆಟ್‌ಗಳನ್ನು ರಷ್ಯಾ ಖರೀದಿಸಲು ಮುಂದಾಗಿದೆ ಎನ್ನುವುದು ಶಾಕಿಂಗ್ ಸುದ್ದಿ. ಉತ್ತರ ಕೊರಿಯಾ ಬಹಳ ವರ್ಷಗಳಿಂದ ಶಸ್ತ್ರಾಸ್ತ್ರ ರಫ್ತು ಮಾಡುತ್ತದೆ. ಶಾಕಿಂಗ್ ಯಾಕೆಂದರೆ ಉತ್ತರ ಕೊರಿಯಾ ತಯಾರಿಸುವ ಶಸ್ತ್ರಾಸ್ತ್ರಗಳೆಲ್ಲವೂ ಸೋವಿಯತ್ ರಷ್ಯಾ ಯುಗದ ತಂತ್ರಜ್ಞಾನದಿಂದ ಆವಿಷ್ಕಾರಗೊಂಡಿರುವವೇ.

ಕಮ್ಯೂನಿಸ್ಟರಿಗೆ ವಿಲನ್, ಪಾಶ್ಚಿಮಾತ್ಯರಿಗೆ ಹೀರೋ- ಶೀತಲ ಸಮರಕ್ಕೆ ಅಂತ್ಯವಾಡಿದ್ದ ಗೋರ್ಬಿಕಮ್ಯೂನಿಸ್ಟರಿಗೆ ವಿಲನ್, ಪಾಶ್ಚಿಮಾತ್ಯರಿಗೆ ಹೀರೋ- ಶೀತಲ ಸಮರಕ್ಕೆ ಅಂತ್ಯವಾಡಿದ್ದ ಗೋರ್ಬಿ

ಉತ್ತರ ಕೊರಿಯಾ ಬಳಿ ಇಂಥ ಹಳೆಯ ಯುಗದ ಆರ್ಟಿಲೆರಿ ಶೆಲ್‌ಗಳು, ರಾಕೆಟ್‌ಗಳು ಬಹಳ ಇವೆ. ರಷ್ಯಾ ಯಾಕೆ ಈಗ ಇಂಥ ಮದ್ದುಗುಂಡುಗಳನ್ನು ಖರೀದಿಸುತ್ತಿದೆ ಎಂಬುದೇ ವಿಚಿತ್ರ. ಆದರೆ ಇದೇ ವೇಳೆ ರಷ್ಯಾ ಈ ಸುದ್ದಿಯನ್ನು ಬಲವಾಗಿ ಅಲ್ಲಗಳೆದಿದೆ. ಆದರೂ ಕೂಡ ತಜ್ಞರು ಉತ್ತರ ಕೊರಿಯಾದಿಂದ ರಷ್ಯಾ ಯಾಕೆ ಮದ್ದುಗುಂಡುಗಳನ್ನು ಖರೀದಿಸುತ್ತಿರಬಹುದು ಎಂದು ಕಾರಣಗಳನ್ನು ಹುಡುಕುತ್ತಿದ್ದಾರೆ.

ಉತ್ತರ ಕೊರಿಯಾ ಬಳಿ ಏನಿವೆ ಶಸ್ತ್ರಾಸ್ತ್ರ?

ಉತ್ತರ ಕೊರಿಯಾ ಬಳಿ ಏನಿವೆ ಶಸ್ತ್ರಾಸ್ತ್ರ?

ತಜ್ಞರ ಪ್ರಕಾರ, ಸೋವಿಯತ್ ರಷ್ಯಾ ಐವತ್ತರ ದಶಕದಲ್ಲಿ ಹೊಂದಿದ್ದ ಫಿರಂಗಿ ಸಿಡಿತಲೆಗಳು, ರಾಕೆಟ್‌ಗಳು ಉತ್ತರ ಕೊರಿಯಾದಲ್ಲಿ ಸಿಕ್ಕಾಪಟ್ಟೆ ಇವೆ. ಇವೇನೂ ಕೆಲಸಕ್ಕೆ ಬಾರದ ಶಸ್ತ್ರಗಳೇನಲ್ಲ.

107 ಎಂಎಂ ಕಟ್ಯುಶಾ ರಾಕೆಟ್, 122ಎಂಎಂ ರಾಕೆಟ್ ಲಾಂಚರ್ಸ್, 155ಎಂಎಂ ಮತ್ತು 122ಎಂಎಂ ಆರ್ಟಿಲರಿ ಶೇಲ್, ಮೆಷೀನ್ ಗನ್, ಆಟೊಮ್ಯಾಟಿಕ್ ರೈಫಲ್‌ಗಳ ಗುಂಡುಗಳು ಇತ್ಯಾದಿ ಶಸ್ತ್ರಗಳನ್ನು ಉತ್ತರ ಕೊರಿಯಾ ಹೊಂದಿರಬಹುದು ಎಂದು ಅಮೆರಿಕದ ಶಸ್ತ್ರಾಸ್ತ್ರ ಕ್ಷೇತ್ರದ ತಜ್ಞ ಬ್ರೂಸ್ ಬೆಕ್‌ಟೋಲ್ ಹೇಳಿದ್ದಾರೆ.

ಉತ್ತರ ಕೊರಿಯಾ ಬಳಿ ಇರುವ ಶಸ್ತ್ರಾಸ್ತ್ರಗಳು ಸೋವಿಯತ್ ಯುಗದಲ್ಲಿ ತಯಾರಾಗಿದ್ದಲ್ಲ. ಕೋಲ್ಡ್ ವಾರ್ ಸಮಯದಲ್ಲಿ ಕಮ್ಯೂನಿಸ್ಟ್ ದೇಶಗಳೆಲ್ಲವೂ ಸೋವಿಯತ್ ರಷ್ಯಾ ಜೊತೆ ಮೈತ್ರಿಯಲ್ಲಿದ್ದವು. ಉತ್ತರ ಕೊರಿಯಾ ಕಮ್ಯೂನಿಸ್ಟ್ ದೇಶವಾದ್ದರಿಂದ ರಷ್ಯಾ ಜೊತೆ ಮಿಲಿಟರಿ ಒಪ್ಪಂದ ಗಾಢವಾಗಿತ್ತು. ಆಗ ಸೋವಿಯತ್ ರಷ್ಯಾದ ಅನೇಕ ಶಸ್ತ್ರಾಸ್ತ್ರಗಳು ಉತ್ತರ ಕೊರಿಯಾಗೆ ದೊರಕಿದ್ದವು. ಸೋವಿಯತ್ ರಷ್ಯಾ ಪತನದ ಬಳಿಕ ರಷ್ಯಾ ದೇಶ ಉತ್ತರ ಕೊರಿಯಾದೊಂದಿಗೆ ಸಂಬಂಧ ಕಡಿತ ಮಾಡಿತು.

ಆದರೆ, ಕೋಲ್ಡ್ ವಾರ್ ಸಮಯದಲ್ಲಿ ತನ್ನ ಬಳಿ ಇದ್ದ ಸೋವಿಯತ್ ರಷ್ಯಾದ ಶಸ್ತ್ರಾಸ್ತ್ರಗಳ ತಂತ್ರಜ್ಞಾನವನ್ನು ಆಧಾರವಾಗಿಟ್ಟುಕೊಂಡು ಉತ್ತರ ಕೊರಿಯಾ ಶಸ್ತ್ರಾಸ್ತ್ರ ತಯಾರಿಕೆ ಮಾಡುತ್ತಾ ಬಂದಿದೆ. ಈಗ ಉತ್ತರ ಕೊರಿಯಾ ಬಳಿ ಇರುವ ಶಸ್ತ್ರಾಸ್ತ್ರಗಳೆಲ್ಲವನ್ನೂ ಯುಎಸ್‌ಎಸ್‌ಆರ್‌ ಕಾಲದ ಶಸ್ತ್ರಾಸ್ತ್ರಗಳ ನಕಲುಗಳೇ ಆಗಿವೆ ಎಂದು ಹೇಳಲಾಗುತ್ತದೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ರಷ್ಯಾ ವಿರುದ್ಧ ಮೊದಲ ಬಾರಿಗೆ ಭಾರತದ ಮತ!ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ರಷ್ಯಾ ವಿರುದ್ಧ ಮೊದಲ ಬಾರಿಗೆ ಭಾರತದ ಮತ!

ರಷ್ಯಾ ಹೆಜ್ಜೆ ಹಿಂದಿನ ಒಳಮರ್ಮ?

ರಷ್ಯಾ ಹೆಜ್ಜೆ ಹಿಂದಿನ ಒಳಮರ್ಮ?

ತನ್ನ ಹಳೆಯ ತಂತ್ರಜ್ಞಾನವನ್ನು ನಕಲು ಮಾಡಿ ಉತ್ತರ ಕೊರಿಯಾ ತಯಾರಿಸಿರುವ ಶಸ್ತ್ರಾಸ್ತ್ರಗಳನ್ನು ರಷ್ಯಾ ಯಾಕೆ ಖರೀದಿಸುತ್ತಿದೆ? ತಾನೇ ಖುದ್ದಾಗಿ ಅವುಗಳನ್ನು ತಯಾರಿಸಬಹುದಲ್ಲ ಎಂದು ಅಚ್ಚರಿ ಎನಿಸಬಹುದು. ರಷ್ಯಾ ಎಲ್ಲಾ ಬಿಟ್ಟು ಉತ್ತರ ಕೊರಿಯಾ ಬಳಿ ಇಂಥ ಹಳೆಯ ಕಾಲದ ಶಸ್ತ್ರಗಳನ್ನು ಖರೀದಿಸಲು ಮುಂದಾಗಿರುವುದರ ಹಿಂದೆ ಬೇರೇನೋ ಉದ್ದೇಶ ಇದೆ ಎಂಬುದು ತಜ್ಞರ ಶಂಕೆ.

ಅವರ ಪ್ರಕಾರ, ರಷ್ಯಾ ಈ ಹೆಚ್ಚುವರಿ ಮದ್ದುಗುಂಡುಗಳು, ಶಸ್ತ್ರಾಸ್ತ್ರಗಳ ಮೂಲಕ ಆಕ್ರಮಣದ ತೀವ್ರತೆ ಹೆಚ್ಚಿಸಲು ಹೊರಟಿರಬಹುದು ಎಂಬ ಅನುಮಾನ ಇದೆ. ಅಥವಾ ರಷ್ಯಾ ಮೇಲಿನ ವಿವಿಧ ನಿಷೇಧಗಳಿಂದಾಗಿ ಅದರ ಮಿಲಿಟರಿ ಕುಗ್ಗಿಹೋಗಿರಬಹುದು. ಯುದ್ಧ ಮುಂದುವರಿಸುವ ಅನಿವಾರ್ಯತೆಯಲ್ಲಿ ಉತ್ತರ ಕೊರಿಯಾದಿಂದ ಶಸ್ತ್ರಾಸ್ತ್ರ ಪಡೆಯುವ ದುರ್ಗತಿಗೆ ಬಂದು ನಿಂತಿರಬಹುದು ಎಂದು ಹೇಳುತ್ತಾರೆ.

ಉತ್ತರ ಕೊರಿಯಾ ಸಾಮಾನ್ಯನಲ್ಲ

ಉತ್ತರ ಕೊರಿಯಾ ಸಾಮಾನ್ಯನಲ್ಲ

ಉತ್ತರ ಕೊರಿಯಾ ಮೇಲೆ ಹಲವಾರು ವರ್ಷಗಳಿಂದ ಪಾಶ್ಚಿಮಾತ್ಯ ದೇಶಗಳು ನಿರ್ಬಂಧಗಳನ್ನು ಹಾಕಿವೆ. ಬೆರಳೆಣಿಕೆಯ ದೇಶ ಬಿಟ್ಟರೆ ಉಳಿದಂತೆ ಉತ್ತರ ಕೊರಿಯಾ ಏಕಾಂಗಿಯೇ. ಆದರೂ ಕೂಡ ಅದು ತಾನೇ ಸ್ವಂತವಾಗಿ ಶಸ್ತ್ರಾಸ್ತ್ರ ತಯಾರಿಸುತ್ತದೆ. ಉಕ್ರೇನ್ ಯುದ್ಧದಲ್ಲಿ ರಷ್ಯಾ ಬಳಕೆ ಮಾಡಿರುವ ಶೆಲ್‌ಗಳು, ರಾಕೆಟ್‌ಗಳು ಉತ್ತರ ಕೊರಿಯಾ ಬಳಿಯೂ ಇವೆ. ಕ್ಷಿಪಣಿಗಳು, ರಾಕೆಟ್ ಲಾಂಚರ್‌ಗಳು ಇತ್ಯಾದಿ ಅಸ್ತ್ರಗಳನ್ನು ಅದುಹೊಂದಿದೆ.

ಸಿರಿಯಾ, ಮಯನ್ಮಾರ್ ಮೊದಲಾದ ದೇಶಗಳಿಗೆ ಉತ್ತರ ಕೊರಿಯಾ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದ್ದಿದೆ. ಈ ಮೂಲಕ ವಿದೇಶ ಕರೆನ್ಸಿ ಆದಾಯ ಹೆಚ್ಚಿಸಿಕೊಳ್ಳಲು ಅಥವಾ ತೈಲ ಪಡೆದುಕೊಳ್ಳುವುದು ಕೊರಿಯನ್ನರಿಗೆ ಅನಿವಾರ್ಯವಾಗಿದೆ.

ರಷ್ಯಾ ಜೊತೆ ಡೀಲ್ ಬಹಳ ದೊಡ್ಡದು

ರಷ್ಯಾ ಜೊತೆ ಡೀಲ್ ಬಹಳ ದೊಡ್ಡದು

ಉತ್ತರ ಕೊರಿಯಾ ಯಾರಿಗೂ ಶಸ್ತ್ರಾಸ್ತ್ರ ಮಾರಾಟ ಮಾಡಬಾರದೆಂದು ಅಂತಾರಾಷ್ಟ್ರೀಯವಾಗಿ ನಿಷೇಧ ಹಾಕಲಾಗಿದೆ. ಆದರೂ ಕದ್ದು ಮುಚ್ಚಿ ಸಿರಿಯಾದಂಥ ದೇಶಗಳಿಗೆ ಉತ್ತರ ಕೊರಿಯಾ ಶಸ್ತ್ರಾಸ್ತ್ರಗಳ ಕಳ್ಳ ಸಾಗಾಣಿಕೆ ಮಾಡುತ್ತದೆ.

ಈಗ ರಷ್ಯಾ ದೇಶಕ್ಕೆ ಶಸ್ತ್ರಾಸ್ತ್ರ ಪೂರೈಸುವುದು ಉತ್ತರ ಕೊರಿಯಾಗೆ ಸುಲಭ. ತನ್ನ ಬಳಿ ಇರುವ ಬಹುತೇಕ ಶಸ್ತ್ರಾಸ್ತ್ರಗಳನ್ನು ರಷ್ಯಾಗೆ ಕೊಡುವ ಮೂಲಕ ಅದರ ವಿಶ್ವಾಸ ಹೆಚ್ಚಿಸಿಕೊಳ್ಳುವ ಅವಕಾಶ ಉತ್ತರ ಕೊರಿಯಾಗೆ ಇದೆ. ಇದರಿಂದ ಮುಂದಿನ ದಿನಗಳಲ್ಲಿ ರಷ್ಯಾದ ಸಂಪೂರ್ಣ ಬೆಂಬಲ ಉತ್ತರ ಕೊರಿಯಾಗೆ ಇರಬಹುದು.

ಇನ್ನು, ಅಂತಾರಾಷ್ಟ್ರೀಯ ನಿಷೇಧದ ನಡುವೆಯೂ ರಷ್ಯಾಗೆ ಶಸ್ತ್ರಾಸ್ತ್ರ ಪೂರೈಸುವುದು ಉತ್ತರ ಕೊರಿಯಾಗೆ ಸುಲಭ. ಸಿರಿಯಾದಂತಹ ದೇಶಗಳಿಗೆ ಶಸ್ತ್ರಾಸ್ತ್ರವನ್ನು ಹಡಗಿನಲ್ಲಿ ಕಳುಹಿಸಬೇಕಾಗುತ್ತದೆ. ಆಗ ಹಡಗನ್ನು ಜಫ್ತಿ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಪಕ್ಕದಲ್ಲೇ ಇರುವ ರಷ್ಯಾಗೆ ಸುಲಭವಾಗಿ ಶಸ್ತ್ರಾಸ್ತ್ರ ಕಳುಹಿಸಬಹುದು. ಎರಡು ದೇಶಗಳ ಮಧ್ಯೆ ರೈಲು ಸಂಪರ್ಕದ ಮೂಲಕ ಶಸ್ತ್ರಾಸ್ತ್ರಗಳ ಸಾಗಣೆ ಮಾಡುವುದು ಸುಲಭ ಮತ್ತು ಸುರಕ್ಷಿತವಾಗಿರುತ್ತದೆ.

(ಒನ್ಇಂಡಿಯಾ ಸುದ್ದಿ)

English summary
Russia could be about to buy millions of artillery shells and rockets from old Cold-War ally North Korea, says United States of America. If its true, why Russia wants to buy these dumb bombs?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X