ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Lemon Price: ಹುಳಿ ಹಿಂಡುವ ನಿಂಬೆ ಬೆಲೆ; ಇಷ್ಟು ದುಬಾರಿಗೇನು ಕಾರಣ?

|
Google Oneindia Kannada News

ನಿಂಬೆ ಹಣ್ಣು ಸಿಕ್ಕಾಪಟ್ಟೆ ದುಬಾರಿ ಆಗಿದೆ. ಹತ್ತು ರೂಪಾಯಿ ಕೊಟ್ಟರೆ ಮೂರ್ನಾಲ್ಕು ಸಿಗುತ್ತಿದ್ದ ನಿಂಬೆ ಹಣ್ಣು ಈಗ ಒಂದು ಸಿಕ್ಕರೆ ಕಷ್ಟ ಎನ್ನುವಂತಾಗಿದೆ. ಮೊಟ್ಟೆಗಿಂತಲೂ ನಿಂಬೆ ಬೆಲೆ ಹೆಚ್ಚಾಗಿದೆ.

ಬೆಂಗಳೂರಿನ ಮಾರುಕಟ್ಟೆಯಲ್ಲಿ ಕೆಜಿ ನಿಂಬೆ ಹಣ್ಣಿಗೆ ಹೋಲ್‌ಸೇಲ್ ದರದಲ್ಲಿ 250 ರೂ ಬೆಲೆ ಇದೆ. ಎಪಿಎಂಸಿಗಳಲ್ಲಿ ಒಂದು ಚೀಲ ನಿಂಬೆ ಹಣ್ಣು ಏಳೆಂಟು ಸಾವಿರಕ್ಕೆ ಖರೀದಿ ಆಗುತ್ತಿದೆ. ಕಿಲೋ ಲೆಕ್ಕದಲ್ಲಿ ಮಾವಿನಹಣ್ಣು, ಸೇಬಿನ ಬೆಲೆಯನ್ನೂ ಮೀರಿಸುತ್ತಿದೆ ನಿಂಬೆ ಹಣ್ಣು. ಕರ್ನಾಟಕದ ಉಡುಪಿ, ದಾವಣಗೆರೆ ಮೊದಲಾದ ಎಪಿಎಂಸಿ ಮಾರುಕಟ್ಟೆಗಳಲ್ಲಿ ನಿಂಬೆ ಬೆಲೆ ಇನ್ನೂ ಹೆಚ್ಚಿದೆ. ಇದು ಕರ್ನಾಟಕದಲ್ಲಷ್ಟೇ ಅಲ್ಲ ದೇಶಾದ್ಯಂತ ವಿವಿಧೆಡೆ ನಿಂಬೆ ಸಿಗುವುದೇ ದುಸ್ತರ ಎಂಬಂತಾಗಿದೆ. ಹಲವು ರೀಟೇಲ್ ಮಾರುಕಟ್ಟೆಗಳಲ್ಲಿ ಒಂದು ನಿಂಬೆ ಹಣ್ಣು 10-15 ರೂಪಾಯಿಗೆ ಮಾರಾಟವಾಗುತ್ತಿದೆ.

ವಿಚಿತ್ರವೆಂದರೆ ಭಾರತದಲ್ಲೇ ಅತಿ ಹೆಚ್ಚು ನಿಂಬೆ ಬೆಳೆಯುವ ರಾಜ್ಯವೆನಿಸಿರುವ ಗುಜರಾತ್‌ನಲ್ಲೇ ಒಂದು ನಿಂಬೆ ಹಣ್ಣು 25 ರೂ ವರೆಗೆ ಮಾರಾಟವಾಗುತ್ತಿದೆ. ಜೋಧಪುರ್ ಮೊದಲಾದ ನಗರಗಳಲ್ಲಿ ಹೋಲ್‌ಸೇಲ್ ಮಾರುಕಟ್ಟೆಗಳಲ್ಲಿ ಒಂದು ಕಿಲೋ ನಿಂಬೆ ಹಣ್ಣು 400 ರೂಗೆ ಬಿಕರಿಯಾಗುತ್ತಿದೆ.

Know Why Lemon Has Become Very Costly in India

ಈ ಹಿಂದೆ ನಾವು ಒಂದು ಚೀಲ ನಿಂಬೆ ಹಣ್ಣನ್ನು 700 ರೂಪಾಯಿಗೆ ಖರೀದಿ ಮಾಡುತ್ತಿದ್ದೆವು. ಈಗ 3500 ರೂ ಕೊಟ್ಟು ಕೊಳ್ಳಬೇಕಿದೆ. ಒಂದು ನಿಂಬೆ ಹಣ್ಣನ್ನು 10 ರೂಪಾಯಿಗೆ ಮಾರುತ್ತಿದ್ದೇವೆ. ಆದರೆ, ಯಾರೂ ಅದನ್ನ ಕೊಳ್ಳಲು ಮುಂದೆ ಬರುತ್ತಿಲ್ಲ. ನಿಂಬೆ ಇಷ್ಟು ದುಬಾರಿಯಾಗಿದೆ ಎಂದು ಹೇಳಿದರೆ ನಂಬುವ ಸ್ಥಿತಿಯಲ್ಲಿ ಜನರು ಇಲ್ಲ. ನಮ್ಮಂಥ ವ್ಯಾಪಾರಿಗಳಿಗೆ ಕಷ್ಟವಾಗಿದೆ ಎಂದು ಮಾರಾಟಗಾರರೊಬ್ಬರು ಪರಿಪಾಟಲು ಪಟ್ಟನೆಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

Know Why Lemon Has Become Very Costly in India

ನಿಂಬೆ ಹಣ್ಣು ಬೆಲೆ ಹೆಚ್ಚಾಗಲು ಏನು ಕಾರಣ?
* ಮೊದಲಿಗೆ ಇದು ಬೇಸಿಗೆ ಕಾಲದ ಆರಂಭ. ತಂಪು ಪಾನೀಯಕ್ಕೆ ಅಗತ್ಯವಾಗಿರುವ ನಿಂಬೆ ಹಣ್ಣಿಗೆ ಹೆಚ್ಚೇ ಡಿಮ್ಯಾಂಡ್ ಇದೆ.
* ಬೇಸಿಗೆಯಲ್ಲಿನ ಬೇಡಿಕೆಗಿಂತಲೂ ಹೆಚ್ಚಾಗಿ ನಿಂಬೆ ಹಣ್ಣು ದುಬಾರಿ ಆಗಲು ಬೆಳೆ ಕುಸಿತವೇ ಪ್ರಮುಖ ಕಾರಣ. ಈ ವರ್ಷ ಮಾಮೂಲಿಗಿಂತ ತೀಕ್ಷ್ಣ ಬಿಸಿಲಿನ ಕರಾಮತ್ತಿಗೆ ನಿಂಬೆ ಕರಗಿಹೋಗಿದೆ. ಬಹುತೇಕ ಪ್ರದೇಶಗಳಲ್ಲಿ ಕೊಯ್ಲಿಗೆ ಸಿದ್ಧವಾಗಿದ್ದ ನಿಂಬೆ ಹಣ್ಣು ಬೆಳೆಗಳು ಬಿಸಿಲಿನ ಪ್ರಖರತೆಗೆ ಸಾಕಷ್ಟು ನಾಶಗೊಂಡಿವೆ. ಇದು ಬೆಲೆ ಏರಿಕೆಗೆ ಮುಖ್ಯ ಕಾರಣ.
* ನಿಂಬೆ ಹಣ್ಣು ಹೆಚ್ಚು ಬೆಳೆಯುವ ರಾಜ್ಯಗಳಾದ ಗುಜರಾತ್, ಮಹಾರಾಷ್ಟ್ರ, ಆಂಧ್ರ ಪ್ರದೇಶದಲ್ಲಿ ಈ ವರ್ಷ ಭಾರೀ ತಾಪಮಾನ ಏರಿಕೆ ಆಗಿದೆ. ಕರ್ನಾಟಕದಲ್ಲೂ ಇದೇ ಕಥೆ. ಬಿಸಿಲಷ್ಟೇ ಅಲ್ಲ ಈ ರಾಜ್ಯಗಳಲ್ಲಿ ಚಂಡಮಾರುತದಿಂದಲೂ ನಿಂಬೆ ಬೆಳೆಗೆ ಹಾನಿಯಾಗಿದೆ.
* ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯೂ ನಿಂಬೆ ಹಣ್ಣು ದುಬಾರಿಯಾಗಲು ಸಹಾಯಕವಾಗಿದೆ. ಡೀಸೆಲ್ ಬೆಲೆ ಹೆಚ್ಚಳದಿಂದಾಗಿ ಸಾಗಣೆ ವೆಚ್ಚ ಸಹಜವಾಗಿಯೇ ಹೆಚ್ಚಾಗುತ್ತದೆ. ಇದು ನಿಂಬೆ ಹಣ್ಣು ಸೇರಿ ಎಲ್ಲಾ ವಸ್ತುಗಳ ಬೆಲೆ ಏರಿಕೆಯಲ್ಲಿ ಒಂದು ಪಾತ್ರವಾಗಿರುತ್ತದೆ.

Know Why Lemon Has Become Very Costly in India

ಭಾರತದಲ್ಲಿ ಅತಿಹೆಚ್ಚು ನಿಂಬೆ ಹಣ್ಣು ಬೆಳೆಯುವುದು ಈ ರಾಜ್ಯಗಳಲ್ಲಿ:
1) ಗುಜರಾತ್: ವರ್ಷಕ್ಕೆ 605.62 ಟನ್ ನಿಂಬೆ
2) ಆಂಧ್ರ ಪ್ರದೇಶ: 562.01 ಟನ್
3) ಮಧ್ಯ ಪ್ರದೇಶ: 306.73 ಟನ್
4) ಕರ್ನಾಟಕ: 306.21 ಟನ್
5) ಒಡಿಶಾ: 259.83 ಟನ್
6) ಮಹಾರಾಷ್ಟ್ರ: 250.62 ಟನ್
7) ತೆಲಂಗಾಣ: 178.26 ಟನ್
8) ತಮಿಳುನಾಡು: 118.46 ಟನ್
9) ಬಿಹಾರ: 113.19 ಟನ್
10) ಅಸ್ಸಾಮ್: 112.40

(ಗಮನಿಸಿ: ಈ ಮೇಲಿನ ಪಟ್ಟಿಯಲ್ಲಿರುವ ಅಂಕಿ ಅಂಶ 2018ರದ್ದು. ಈ ವರ್ಷದ ನಿಂಬೆ ಉತ್ಪನ್ನದ ವಿವರ ಇದಲ್ಲ)

(ಒನ್ಇಂಡಿಯಾ ಸುದ್ದಿ)

Recommended Video

ಆಟಕ್ಕಿಂತ ಹೆಸ್ರು ಮಾಡಿದ್ದ ಆಕೆ ಹಿಡಿದಿದ್ದ ಆ ಬ್ಯಾನರ್ ! | Oneindia Kannada

English summary
Lemon has been selling at Rs 10-20 price across India, making it costlier than mango and apple per KG. A look at the multiple reasons for this price hike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X