ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆಯಲ್ಲಿ ಕಾರು: ಸುರಕ್ಷಿತ ಕ್ರಮ ಮತ್ತು ದುರಸ್ತಿ ಹೇಗೆ?

|
Google Oneindia Kannada News

ಕಾರನ್ನು ಕೊಂಡರೆ ಮಳೆ, ನೀರು, ಪ್ರವಾಹದ ಪರಿಸ್ಥಿತಿಯನ್ನು ಎದುರಿಸುವುದು ಅನಿವಾರ್ಯವೇ. ನಾವಿರುವ ಪ್ರದೇಶದಲ್ಲಿ ಮಳೆಯಾಗದು ಎಂದಿಟ್ಟುಕೊಂಡರೂ ನಾವು ದೂರದ ಪ್ರದೇಶಕ್ಕೆ ಹೋದಾಗ ಅಲ್ಲಿ ಪ್ರವಾಹ ಅಥವಾ ಭಾರೀ ಮಳೆಯ ಪರಿಸ್ಥಿತಿ ಬರಬಹುದು. ಆಗೆಲ್ಲಾ ನಾವು ಯಾವ ಸುರಕ್ಷತೆ ಕ್ರಮ ಕೈಗೊಳ್ಳಬೇಕು? ವಾಹನ ನೀರಿನಲ್ಲಿ ಮುಳುಗಿದಾಗ ಏನು ಮಾಡಬೇಕು? ಎಂಬ ಗೊಂದಲಗಳು ಬರಬಹುದು.

ಕಾರು ಕೆಟ್ಟರೆ ಅದನ್ನು ದುರಸ್ತಿ ಮಾಡಿಸಲು ಸಾಕಷ್ಟು ಹಣ ವೆಚ್ಚವಾಗುವುದನ್ನು ಕಾರು ಮಾಲೀಕರೇ ಬಲ್ಲರು? ಮಳೆಗಾಲದಲ್ಲೇ ಸಾಮಾನ್ಯವಾಗಿ ಕಾರುಗಳು ಕೆಡುತ್ತವೆ. ಅದಕ್ಕೆ ಕಾರಣ ಅಸುರಕ್ಷಿತ ಚಾಲನಾ ಅಭ್ಯಾಸಗಳು.

Recommended Video

ತೇಲುವ ಸಿಟಿಯಾದ ಸಿಲಿಕಾನ್ ಸಿಟಿ; ಬೆಂಗಳೂರಿನಲ್ಲಿ ಈಥರಾ ಬದುಕಬೇಕಾ? | Oneindia Kannada

ನೀರಲ್ಲಿ ಕಾರು ನಿಂತರೆ ಸ್ಟಾರ್ಟ್ ಮಾಡದಿರಿ ಜೋಕೆ; ಇನ್ಷೂರೆನ್ಸ್ ಟಿಪ್ಸ್ನೀರಲ್ಲಿ ಕಾರು ನಿಂತರೆ ಸ್ಟಾರ್ಟ್ ಮಾಡದಿರಿ ಜೋಕೆ; ಇನ್ಷೂರೆನ್ಸ್ ಟಿಪ್ಸ್

ನೀವಿರುವ ಕಚೇರಿ ಅಥವಾ ಮನೆಯಲ್ಲಿ ಪ್ರವಾಹ ಬಂದು ನೀರು ತುಂಬಿಕೊಳ್ಳುತ್ತದೆ ಎಂದನಿಸಿದಲ್ಲಿ ಕಾರು ಪಾರ್ಕ್ ಮಾಡುವುದನ್ನು ತಪ್ಪಿಸಿ. ಎತ್ತರದಲ್ಲಿರುವ ಸುರಕ್ಷಿತ ಸ್ಥಳದಲ್ಲಿ ಕಾರನ್ನು ಪಾರ್ಕ್ ಮಾಡಿ. ನೀರು ಮೊದಲು ನುಗ್ಗುವ ಬೇಸ್ಮೆಂಟ್‌ನಲ್ಲಿ ಕಾರನ್ನು ಪಾರ್ಕ್ ಮಾಡದಿರಿ. ಕಾರನ್ನು ಇನ್ನಷ್ಟು ಎತ್ತರಿಸಿ ನಿಲ್ಲಿಸಲು ಜ್ಯಾಕ್ ಬಳಸಿ.

Know What To Do When Vehicle Stuck In The Water Or Rain

ಮಳೆ ಬರುತ್ತಿದ್ದರೆ?

ನೀವು ಕಾರನ್ನು ಡ್ರೈವ್ ಮಾಡುತ್ತಿದ್ದಾಗ ಭಾರೀ ಮಳೆ ಬರುತ್ತಿದೆ ಎಂದಾದರೆ ಏನು ಮಾಡಬೇಕು? ಎಲ್ಲಿಯಾದರೂ ಬದಿಯಲ್ಲಿ ಸುರಕ್ಷಿತ ಸ್ಥಳದಲ್ಲಿ ಪಾರ್ಕ್ ಮಾಡುವುದು ಉತ್ತಮ. ಒಂದು ವೇಳೆ ಪಾರ್ಕ್ ಮಾಡಲು ಅವಕಾಶ ಇಲ್ಲದಿದ್ದಲ್ಲಿ ಕಾರನ್ನು ಆರ್‌ಪಿಎಂ ಹೆಚ್ಚು ಇದ್ದು ಮೊದಲ ಗೇರ್‌ನಲ್ಲಿ ಡ್ರೈವ್ ಮಾಡಿರಿ. ಇದರಿಂದ ಎಕ್ಸಾಸ್ಟ್ ಸಿಸ್ಟಂ ಮೂಲಕ ನೀರು ಎಂಜಿನ್ ಪ್ರವೇಶಿಸುವುದನ್ನು ತಪ್ಪಿಸಬಹುದು.

ವಾಹನ ಚಾಲಕರೇ ಎಚ್ಚರ! ಈ ಅಗತ್ಯ ದಾಖಲೆಗಳನ್ನು ನವೀಕರಿಸದಿದ್ದರೆ ಭಾರೀ ನಷ್ಟ!ವಾಹನ ಚಾಲಕರೇ ಎಚ್ಚರ! ಈ ಅಗತ್ಯ ದಾಖಲೆಗಳನ್ನು ನವೀಕರಿಸದಿದ್ದರೆ ಭಾರೀ ನಷ್ಟ!

ಎಂಜಿನ್ ಆನ್ ಮಾಡಬೇಡಿ

ನೀವು ನೀರು ತುಂಬಿದ ರಸ್ತೆಯಲ್ಲಿ ಕಾರನ್ನು ಚಲಾಯಿಸಬೇಡಿ. ಒಂದು ವೇಳೆ ಪ್ರವಾಹದಲ್ಲಿ ನಿಮ್ಮ ಕಾರು ಸಿಲುಕಿಕೊಂಡುಬಿಟ್ಟರೆ ಎಂಜಿನ್ ಆನ್ ಮಾಡಲು ಹೋಗದಿರಿ. ಇದರಿಂದ ಎಂಜಿನ್‌ಗೆ ನೀರು ತುಂಬಿಕೊಂಡು ಹಾನಿಯಾಗಿ ಎಂಜಿನ್ ಸ್ಥಗಿತಗೊಳ್ಳಬಹುದು.

ನೀವು ಕಾರನ್ನು ಪಾರ್ಕ್ ಮಾಡಿದ್ದಾಗ ನೀರು ಕಾರಿನ ಟಯರ್ ಅನ್ನು ಸಂಪೂರ್ಣವಾಗಿ ಆವರಿಸಿದ್ದಾಗಲೂ ಕಾರನ್ನು ಸ್ಟಾರ್ಟ್ ಮಾಡಬೇಡಿ. ಕಾರನ್ನು ಟೋವ್ ಮಾಡಿ ಬೇರೆಡೆ ನಿಲ್ಲಿಸಿ, ದುರಸ್ತಿಗೆ ನೆರವು ಯಾಚಿಸಿ.

Know What To Do When Vehicle Stuck In The Water Or Rain

ಇನ್ನು ನೀರು ನಿಮ್ಮ ಕಾರಿನ ಡೋರ್ ಮಟ್ಟಕ್ಕೆ ಬಂದರೆ, ಡೋರ್ ತೆಗೆಯಲು ಹೋಗಬೇಡಿ. ಎಲೆಕ್ಟ್ರಿಕಲ್ ಸಿಸ್ಟಂ ಆನ್ ಮಾಡಬೇಡಿ. ಅಂಥ ಸಂದರ್ಭದಲ್ಲಿ ನೀವು ಸೈಡ್ ವಿಂಡೋ ಓಪನ್ ಮಾಡಬಹುದು.

ದುರಸ್ತಿ ಹೇಗೆ?

ಕಾರಿನ ಎಂಜಿನ್ ಕೀ ಆನ್ ಮಾಡದೆಯೇ ಅದನ್ನು ಟೋವಿಂಗ್ ಮಾಡಿ ಗ್ಯಾರೇಜ್‌ಗೆ ತೆಗೆದುಕೊಂಡು ಹೋಗಿ. ಬಳಿಕ ಎಂಜಿನ್ ಆಯಿಲ್, ಗೇರ್ ಆಯಿಲ್, ಏರ್ ಫಿಲ್ಟರ್ ಅನ್ನು ಮೊದಲು ಪರಿಶೀಲಿಸಿ.

ಎಂಜಿನ್ ಆಯಿಲ್‌ಗೆ ನೀರು ಹೋಗಿದ್ದರೆ ಅದೆಲ್ಲವನ್ನೂ ಹೊರ ಚೆಲ್ಲಿ ಹೊಸ ಎಂಜಿನ್ ಆಯಿಲ್ ಭರ್ತಿ ಮಾಡಿ. ಆಯಿಲ್ ಫಿಲ್ಟರ್ ಅನ್ನೂ ಬದಲಾಯಿಸಿ.

ಕಾರಿನ ಫ್ರಂಟ್ ವೀಲ್‌ಗಳನ್ನು ಜ್ಯಾಕ್ ಮಾಡಿ. 5ನೇ ಗೇರ್‌ಗೆ ಬದಲಾಯಿಸಿ ವಾಲ್ವ್‌ಗಳು ಕಾರ್ಯನಿರ್ವಹಿಸುವ ರೀತಿಯಲ್ಲಿ ಚಕ್ರಗಳನ್ನು ತುಸು ತಿರುಗಿಸಿ. ಇದರಿಂದ ಆಯಿಲ್ ಸರ್ಕುಲೇಟ್ ಆಗುತ್ತಾ ಎಂಜಿನ್‌ನೊಳಗೆ ಉಳಿದಿರುವ ನೀರಿನೊಂದಿಗೆ ಬೆರೆಯಲು ಸಾಧ್ಯವಾಗುತ್ತದೆ. ಇದನ್ನು 15 ನಿಮಿಷಗಳ ಕಾಲ ಮಾಡಿ ನಂತರ ಎಲ್ಲಾ ಎಂಜಿನ್ ಆಯಿಲ್ ಅನ್ನೂ ಡ್ರೈನ್ ಮಾಡಿ.

ಈಗ ಮತ್ತೆ ಹೊಸ ಎಂಜಿನ್ ಆಯಿಲ್ ತುಂಬಿಸಿ, ಆಯಿಲ್ ಫಿಲ್ಟರ್ ಅನ್ನೂ ಮತ್ತೆ ಬದಲಾಯಿಸಿ.

ಫ್ಲೂಯಿಡ್ ಬದಲಾವಣೆ

* ಏರ್ ಫಿಲ್ಟರ್, ಬ್ರೇಕ್ ಫ್ಲೂಯಿಡ್ ಮತ್ತು ಗೇರ್ ಟ್ರಾನ್ಸ್‌ಮಿಶನ್ ಆಯಿಲ್ ಅನ್ನು ಬದಲಾಯಿಸಬೇಕು
* ಫುಯೆಲ್ ಟ್ಯಾಂಕ್‌ನಲ್ಲಿ ನೀರು ಸೇರಿಕೊಂಡಿರುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ, ಟ್ಯಾಂಕ್‌ನಲ್ಲಿರುವ ಪೆಟ್ರೋಲ್ ಅಥವಾ ಡೀಸೆಲ್ ಅನ್ನು ಸಂಪೂರ್ಣವಾಗಿ ಹೊರ ಚೆಲ್ಲಬೇಕು
* ರೇಡಿಯೇಟರ್ ಜಾಗದಲ್ಲಿ ಮಣ್ಣು ಮತ್ತಿತರ ಕಸ ಸೇರಿಕೊಂಡಿದೆಯಾ ಪರಿಶೀಲಿಸಿ ಅದನ್ನು ಸ್ವಚ್ಛಗೊಳಿಸಬೇಕು.
* ಡೋರ್ ಹಿಂಜ್, ಲಾಕ್, ಸಸ್ಪೆನ್ಷನ್ ಭಾಗಗಳಿಗೆ ಲೂಬ್ರಿಕೇಶನ್ ಹಾಕಬೇಕು.
* ಕಾರಿನೊಳಗಿರುವ ಎಲ್ಲಾ ಎಲೆಕ್ಟ್ರಿಕಲ್ ಕನೆಕ್ಷನ್‌ಗಳನ್ನೂ ಗಾಳಿಯಲ್ಲಿ ಆರಿಸಬೇಕು. ಫ್ಯೂಸ್ ಬಾಕ್ಸ್, ಕಪ್ಲರ್ ಕನೆಕ್ಷನ್, ಎಂಜಿನ್ ಕಂಪಾರ್ಟ್ಮೆಂಟ್‌ಗಳನ್ನು ಒಣಗುವಂತೆ ನೋಡಿಕೊಳ್ಳಬೇಕು.
* ಪವರ್ ಸ್ಟೀರಿಂಗ್ ಫ್ಲ್ಯೂಡ್ ಸರಿ ಇದೆಯಾ ಪರಿಶೀಲಿಸಿ
* ಬ್ರೇಕ್ ಪ್ಯಾಡ್‌ಗಳು ಒದ್ದೆಯಾಗಿದ್ದರೆ ಬ್ರೇಕ್ ಬ್ಲೀಡ್ ಹಾಕಿ.

(ಒನ್ಇಂಡಿಯಾ ಸುದ್ದಿ)

English summary
Maintaining a car is usually more expensive than the fuel usage we do. Here are few tips for the safety of your car during rain and flood
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X