ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಐ ಟ್ಯಾಗ್ ಎಂದರೇನು? ದಕ್ಷಿಣ ರಾಜ್ಯಗಳದ್ದೇ ಹೆಚ್ಚು, ಕರ್ನಾಟಕ ಮುಂದು

|
Google Oneindia Kannada News

ಇತ್ತೀಚೆಗೆ ಕಲಬುರ್ಗಿಯ ತೊಗರಿಬೇಳೆ, ಶಿರಸಿಯ ಸುಪಾರಿ ಅಡಿಕೆಗೆ ಜಿಐ ಟ್ಯಾಗ್ ಸಿಕ್ಕ ಸುದ್ದಿ ಓದಿರಬಹುದು. ಇದೇನಿದು ಜಿಐ ಟ್ಯಾಗ್ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಜಿಐ ಟ್ಯಾಗ್ ಎಂದರೆ ಜಿಯೋಗ್ರಾಫಿಕಲ್ ಇಂಡಿಕೇಶನ್ ಟ್ಯಾಗ್. ಅಂದರೆ ಭೌಗೋಳಿಕ ಸೂಚನಾ ಟ್ಯಾಗ್.

ಒಂದು ಉತ್ಪನ್ನದ ಭೌಗೋಳಿಕ ವಿಶೇಷತೆಯನ್ನು ಮಾನ್ಯ ಮಾಡಲು ಜಿಐ ಟ್ಯಾಗ್ ನೀಡಲಾಗುತ್ತದೆ. ಒಂದು ಉತ್ಪನ್ನದ ಮೂಲ ಯಾವ ಪ್ರದೇಶದ್ದು ಎಂಬುದನ್ನು ಅದು ತಿಳಿಸುತ್ತದೆ.

ಉದಾಹರಣೆಗೆ, ಕಾಂಚೀವರಂ ರೇಷ್ಮೆ ಎಂಬುದು ತಮಿಳುನಾಡಿನ ಕಾಂಚೀಪುರಂನ ಕೈಮಗ್ಗಗಳಲ್ಲಿ ನೇಯ್ದ ರೇಷ್ಮೆ ಸೀರೆ. ಇದಕ್ಕೆ ನೀಡಲಾಗಿರುವ ಜಿಐ ಟ್ಯಾಗ್‌ನಲ್ಲಿ ಕಾಂಚೀಪುರಂ ಇರುತ್ತದೆ. ಕೇಸರಿ ಪುಡಿ ಎಂಬುದು ಕಾಶ್ಮೀರದ ವಿಶೇಷತೆಯಾಗಿದೆ. ಚನ್ನಪಟ್ಟಣದ ಬೊಂಬೆ, ಇಳಕಲ್ ಸೀರೆ, ಮೈಸೂರು ರೇಷ್ಮೆ, ಉಡುಪಿ ಮಲ್ಲಿಗೆ ಇತ್ಯಾದಿ ಉತ್ಪನ್ನಗಳು ಕರ್ನಾಟಕದ ವಿಶೇಷತೆಯಾಗಿವೆ.

ಹೀಗೆ ಒಂದು ಉತ್ಪನ್ನದ ಮೂಲ ಉಗಮ ಸ್ಥಾನವನ್ನು ಜಿಐ ಟ್ಯಾಗ್ ಸೂಚಿಸುತ್ತದೆ. ಭಾರತದಲ್ಲಿ ಇಂಥ 400ಕ್ಕೂ ಹೆಚ್ಚು ಉತ್ಪನ್ನಗಳಿಗೆ ಜಿಐ ಟ್ಯಾಗ್ ನೀಡಲಾಗಿದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಅತಿ ಹೆಚ್ಚು ಜಿಐ ಟ್ಯಾಗ್ ಹೊಂದಿರುವುದು ವಿಶೇಷ.

ಜಿಐ ಟ್ಯಾಗ್ ಅಸ್ತಿತ್ವಕ್ಕೆ ಬಂದಿದ್ದು?

ಜಿಐ ಟ್ಯಾಗ್ ಅಸ್ತಿತ್ವಕ್ಕೆ ಬಂದಿದ್ದು?

ವಿಶ್ವ ವ್ಯಾಪಾರ ಸಂಸ್ಥೆ ಡಬ್ಲ್ಯೂಟಿಒ ಅಂತಾರಾಷ್ಟ್ರೀಯ ಬೌದ್ಧಿಕ ಹಕ್ಕುಗಳನ್ನು ಕಾಪಾಡಲು ಇಂಥದ್ದೊಂದು ವ್ಯವಸ್ತೆ ರೂಪಿಸಿದೆ. 1999ರಲ್ಲಿ ಸರಕುಗಳ ನೊಂದಣಿ ಮತ್ತು ರಕ್ಷಣೆಗೆ ಭೌಗೋಳಿಕ ಸೂಚನೆಗಳ ಕಾಯ್ದೆಯನ್ನು (Geographical Indications of Goods -Registration and Protection- Act, 1999) ರೂಪಿಸಲಾಗಿದೆ. ಭಾರತದಲ್ಲಿ 2003 ಸೆಪ್ಟೆಂಬರ್‌ನಲ್ಲಿ ಈ ಕಾಯ್ದೆ ಜಾರಿಗೆ ಬಂದಿದೆ.

ಕೃಷಿ, ಕರಕುಶಲ, ಆಹಾರವಸ್ತು, ಔದ್ಯಮಿಕ ಉತ್ಪನ್ನ, ಮದ್ಯ ಉತ್ಪನ್ನಗಳಿಗೆ ಜಿಐ ಟ್ಯಾಗ್ ಕೊಡಲಾಗುತ್ತದೆ. ಒಂದು ಉತ್ಪನ್ನದ ಹಕ್ಕು ಮತ್ತು ಪೇಟೆಂಟ್ ಅನ್ನು ರಕ್ಷಿಸಲು ಈ ಟ್ಯಾಗ್ ಸಹಾಯವಾಗುತ್ತದೆ.

ದಾರ್ಜಿಲಿಂಗ್ ಟೀ ಭಾರತದಲ್ಲಿ ಜಿಐ ಟ್ಯಾಗ್ ಪಡೆದ ಮೊದಲ ಉತ್ಪನ್ನ. ೪೦೦ಕ್ಕೂ ಹೆಚ್ಚು ಉತ್ಪನ್ನಗಳಿಗೆ ಭಾರತದಲ್ಲಿ ಜಿಐ ಟ್ಯಾಗ್ ಕೊಡಲಾಗಿದೆ.

ಜಿಐ ಟ್ಯಾಗ್ ನಿಯಮ ಹೇಗೆ?

ಜಿಐ ಟ್ಯಾಗ್ ನಿಯಮ ಹೇಗೆ?

ಒಂದು ಸ್ಥಳಕ್ಕೆ ವಿಶೇಷವೆನಿಸಿದ ಉತ್ಪನ್ನಕ್ಕೆ ಅದರದ್ದೇ ಮಾನದಂಡಗಳಿರುತ್ತವೆ. ಆ ಉತ್ಪನ್ನಕ್ಕೆ ಆ ಸ್ಥಳದ ಹೆಸರು ವಿಶೇಷವಾಗಿ ಜೋಡಿತವಾಗಿರುತ್ತದೆ. ಉದಾಹರಣೆಗೆ ಚನ್ನಪಟ್ಟಣದ ಬೊಂಬೆ. ಚನ್ನಪಟ್ಟಣದಲ್ಲಿ ಬೊಂಬೆಗಳ ತಯಾರಿಕೆ ಬಹಳ ವಿಶೇಷ. ಚನ್ನಪಟ್ಟಣದ ಬೊಂಬೆ ಎಂದೇ ಖ್ಯಾತ. ಅದೇ ರೀತಿಯ ಬೊಂಬೆಗಳು ಬೇರೆ ಕಡೆಯೂ ಸಿಗುತ್ತದೆ. ಬೇರೆ ಪ್ರದೇಶಗಳಲ್ಲೂ ಅಂಥ ಬೊಂಬೆಗಳನ್ನು ಮಾಡುತ್ತಾರೆ. ಆದರೆ, ಚನ್ನಪಟ್ಟಣದ ಮೂಲ ಕಸುಬದಾರರು ತಯಾರು ಮಾಡಿದರೆ ಅದನ್ನು ಚನ್ನಪಟ್ಟಣದ ಬೊಂಬೆ ಎನ್ನಬಹುದು. ಬೇರೆ ಪ್ರದೇಶದವರು ಅಂಥದ್ದೇ ಬೊಂಬೆ ಮಾಡಿ ಚನ್ನಪಟ್ಟಣ ಬೊಂಬೆ ಹೆಸರಿನಲ್ಲಿ ಮಾರಾಟ ಮಾಡುವಂತಿಲ್ಲ.

ಇದು ಮೈಸೂರು ರೇಷ್ಮೆ, ಇಳಕಲ್ ರೇಷ್ಮೆ ಇತ್ಯಾದಿಗೂ ಅನ್ವಯ ಆಗುತ್ತದೆ. ಇಳಕಲ್‌ನಲ್ಲಿ ತಯಾರಾಗದ ರೇಷ್ಮೆ ಸೀರೆಯನ್ನು ಇಳಕಲ್ ಸೀರೆ ಎಂದು ಮಾರಾಟ ಮಾಡುವವರು ಇರುತ್ತಾರೆ. ಇಂಥದ್ದನ್ನು ತಡೆಯಲು ಜಿಐ ಟ್ಯಾಗ್‌ಗಳ ವ್ಯವಸ್ಥೆ ರೂಪಿಸಲಾಗಿದೆ.

ದಕ್ಷಿಣ ರಾಜ್ಯಗಳಲ್ಲಿ ಹೆಚ್ಚು

ದಕ್ಷಿಣ ರಾಜ್ಯಗಳಲ್ಲಿ ಹೆಚ್ಚು

ಭಾರತದಲ್ಲಿ ಜಿಐ ಟ್ಯಾಗ್ ಪಡೆದ ಉತ್ಪನ್ನಗಳಲ್ಲಿ ಹೆಚ್ಚಿನವು ದಕ್ಷಿಣ ಭಾರತೀಯ ರಾಜ್ಯಗಳೇ ಆಗಿವೆ. ಕರ್ನಾಟಕದಲ್ಲಿ ಅತಿ ಹೆಚ್ಚು. ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಉತ್ಪನ್ನಗಳಿಗೆ ಹೆಚ್ಚು ಜಿಐ ಟ್ಯಾಗ್ ಸಿಕ್ಕಿವೆ.

ಕಳೆದ ವರ್ಷ ಸಚಿವ ಜಗದೀಶ್ ಶೆಟ್ಟರ್ ನೀಡಿದ ಮಾಹಿತಿ ಪ್ರಕಾರ ಕರ್ನಾಟಕದ 42 ಉತ್ಪನ್ನಗಳಿಗೆ ಜಿಐ ಟ್ಯಾಗ್ ಸಿಕ್ಕಿದೆ. ತಮಿಳುನಾಡು ಮತ್ತು ಕೇರಳದಲ್ಲಿ ತಲಾ ಮೂವತ್ತಕ್ಕೂ ಹೆಚ್ಚು ಉತ್ಪನ್ನಗಳಿಗೆ ಜಿಐ ಟ್ಯಾಗ್ ಇದೆ. ಆಂಧ್ರ ಮತ್ತು ತೆಲಂಗಾಣ ಸೇರಿ ಸುಮಾರು 35 ಉತ್ಪನ್ನಗಳು ಜಿಐ ಟ್ಯಾಗ್ ಪಡೆದಿವೆ. ದಕ್ಷಿಣ ರಾಜ್ಯಗಳನ್ನು ಬಿಟ್ಟರೆ ಮಹಾರಾಷ್ಟ್ರ, ಗುಜರಾತ್, ಒಡಿಶಾ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಹೆಚ್ಚು ಜಿಐ ಟ್ಯಾಗ್‌ಗಳಿವೆ.

ಜಿಐ ಟ್ಯಾಗ್ ಪಡೆದ ಕರ್ನಾಟಕದ ಕೆಲ ಉತ್ಪನ್ನಗಳು

ಜಿಐ ಟ್ಯಾಗ್ ಪಡೆದ ಕರ್ನಾಟಕದ ಕೆಲ ಉತ್ಪನ್ನಗಳು

ಮೈಸೂರು ರೇಷ್ಮೆ
ಬಿದ್ರಿಕಲೆ
ಚನ್ನಪಟ್ಟಣ ಬೊಂಬೆ
ಮೈಸೂರು ಬೀಟೆಮರ ಕಸೂತಿ
ಮೈಸೂರು ಸಾಂಪ್ರದಾಯಿಕ ಚಿತ್ರಕಲೆ
ಇಳಕಲ್ ಸೀರೆ
ಮೈಸೂರಿನ ಗಂಜೀಫ
ನವಲಗುಂದ ಜಮಖಾನ
ಸಂಡೂರು ಲಂಬಾಣಿ ಕರಕುಶಲ
ಕಿನ್ಹಳ ಬೊಂಬೆ
ಉಡುಪಿ ಸೀರೆ
ಮೈಸೂರು ರೇಷ್ಮೆ
ಕೊಡಗು ಆರೆಂಜ್
ಮೈಸೂರು ಎಲೆ
ನಂಜನಗೂಡು ಬಾಳೆಹಣ್ಣು
ಉಡುಪಿ ಮಲ್ಲಿಗೆ
ಮೈಸೂರು ಮಲ್ಲಿಗೆ
ಹಡಗಲಿ ಮಲ್ಲಿಗೆ
ಕೊಡಗು ಹಸಿರು ಏಲಕ್ಕಿ
ದೇವನಹಳ್ಳಿ ಚಕೋತಾ ಹಣ್ಣು
ಅಪ್ಪೆಮಿಡಿ ಮಾವು
ಕಮಲಾಪುರದ ಕೆಂಪು ಬಾಳೆ
ಬೆಂಗಳೂರಿನ ನೀಲಿ ದ್ರಾಕ್ಷಿ
ಕೊಡಗಿನ ಅರೇಬಿಕಾ ಕಾಫಿ
ಚಿಕ್ಕಮಗಳೂರು ಅರೇಬಿಕಾ ಕಾಫಿ
ಬಾಬಾಬುಡನ್‌ಗಿರಿ ಅರೇಬಿಕಾ ಕಾಫಿ
ಸಿರಸಿ ಅಡಿಕೆ
ಕಲಬುರ್ಗಿ ತೊಗರಿ ಬೇಳೆ
ಧಾರವಾಡ ಪೇಡ
ಮೈಸೂರು ಅಗರಬತ್ತಿ
ಮೈಸೂರು ಸ್ಯಾಂಡಲ್ವುಡ್ ಎಣ್ಣೆ
ಮೈಸೂರು ಸ್ಯಾಂಡಲ್ವುಡ್ ಸೋಪು

ತಮಿಳುನಾಡಿನ ಕೆಲ ಉತ್ಪನ್ನಗಳು

ತಮಿಳುನಾಡಿನ ಕೆಲ ಉತ್ಪನ್ನಗಳು

ಕಾಂಚೀಪುರಂ ರೇಷ್ಮೆ
ಮದುರೈ ಸುಂಗುಡಿ
ತಂಜಾವೂರ್ ಪೇಂಟಿಂಗ್
ಈಸ್ಟ್ ಇಂಡಿಯಾ ಲೆದರ್
ಸೇಲಂ ಸಿಲ್ಕ್
ಕೋವೈ ಕೋರಾ ಕಾಟನ್ ಸೀರೆ
ಆರಣಿ ಸಿಲ್ಕ್
ನೀಲಗಿರಿ
ವಿರೂಪಾಕ್ಷಿ ಹಿಲ್ ಬಾಳೆಹಣ್ಣು
ಸಿರುಮಲೈ ಬಾಳೆ
ಮದುರೈ ಮಲ್ಲಿ
ಪಟ್ಟಮಾದೈ ಪಾಯಿ
ಚೆಟ್ಟಿನಾಡ್ ಕೋಟ್ಟನ್
ತಂಜಾವೂರ್ ವೀಣೆ
ಮಹಾಬಲಿಪುರಂ ಕಲ್ಲು ಶಿಲ್ಪ
ಈರೋಡ್ ಅರಿಶಿಣ
ಕೊಡೈಕೆನಾಲ್ ಮಲೈ ಪೂಂಡು
ಪಳನಿ ಪಂಚಮೀರ್ತಮ್
ದಿಂಡಿಗಲ್ ಲಾಕ್
ಚಿರಿವಲ್ಲಿಪುತ್ತೂರ್ ಪಾಲ್ಕೋವಾ
ಕೋವಿಲ್‌ಪಟ್ಟಿ ಕಡಲೈ ಮಿಟಾಯ್

(ಒನ್ಇಂಡಿಯಾ ಸುದ್ದಿ)

English summary
GI is a name or a sign given to certain products that relate to a specific geographical location or origins. Karnataka is said to have highest number of GI tags in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X