Royal Enfield: ರಾಯಲ್‌ ಎನ್‌ಫೀಲ್ಡ್‌ ಹೊಸ ಬೈಕ್‌ನ ದರ, ವಿಶೇಷತೆ ತಿಳಿಯಿರಿ

Royal Enfield: ದ್ವಿಚಕ್ರ ವಾಹನಗಳ ವಿಭಾಗಕ್ಕೆ ಬಂದರೆ, ರಾಯಲ್‌ ಎನ್‌ಫೀಲ್ಡ್‌ ಗತ್ತು ಇನ್ನೂ ಕೂಡ ಕಡಿಮೆಯಾಗಿಲ್ಲ. ಎನ್‌ಫೀಲ್ಡ್‌ ಏರುವ ಆಸೆ ಯಾರಿಗೆ ಇರಲ್ಲ ಹೇಳಿ. ಎಂಥವರಿಗೂ ಇದರ ಮೇಲೆ ಒಂದು ಬಾರಿಯಾದರೂ ಸವಾರಿ ಮಾಡುವ ಆಸೆ ಇದ್ದೇ ಇರುತ್ತದೆ. ಅದರಲ್ಲೂ ಸೋಲೋ ರೈಡ್‌, ದೂರದ ಪ್ರಯಾಣಕ್ಕೆ ಹೇಳಿ ಮಾಡಿಸಿದ ಬೈಕ್‌ ಇದಾಗಿದ್ದು, ಇದರಲ್ಲೇ ಇದೀಗ ಹೊಸ ಮಾದರಿಯ ಬೈಕ್‌ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ. ಹಾಗಾದರೆ ಇದರ ದರ ಹಾಗೂ ವಿಶೇಷತೆಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ರಾಯಲ್ ಎನ್‌ಫೀಲ್ಡ್ ತನ್ನ ಗೆರಿಲ್ಲಾ 450 ಬೈಕ್ ಅನ್ನು ಬಿಡುಗಡೆ ಮಾಡಿದ್ದು, ಇದು 450 ಸಿಸಿ ವಿಭಾಗದಲ್ಲಿ ಇತರ ಕಂಪನಿಗಳ ಹಿಮಾಲಯನ್ 450 ಮತ್ತು 400-450 ಸಿಸಿ ಬೈಕ್‌ಗಳಿಗೆ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಸ್ಪೇನ್‌ನ ಬಾರ್ಸಿಲೋನಾದಲ್ಲಿರುವ ಐಷರ್ ಮೋಟಾರ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಸಿದ್ಧಾರ್ಥ್ ಲಾಲ್ ಅವರು ಗೆರಿಲ್ಲಾ 450 ಅನ್ನು ಜಾಗತಿಕವಾಗಿ ಬಿಡುಗಡೆ ಮಾಡಿದ್ದು, ಇದರ ಶೋ ರೂಂ ಬೆಲೆ 2.39 ಲಕ್ಷ ರೂಪಾಯಿನಿಂದ ಆರಂಭ ಆಗಲಿದೆ.

Know Royal Enfield s New Bike Price features

ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಸಿಸಿಯ ಬೈಕ್‌ ಅನ್ನು ಅನಲಾಗ್, ಡ್ಯಾಶ್ ಮತ್ತು ಫ್ಲ್ಯಾಶ್ ಎಂಬ 3 ರೂಪಾಂತರಗಳಲ್ಲಿ ಪರಿಚಯಿಸಿದೆ. ಇದು ವಿವಿಧ ಬಣ್ಣಗಳಲ್ಲಿ ಲಭ್ಯವಿದೆ. ಗೆರಿಲ್ಲಾ 450ಯ ಅನಲಾಗ್ ರೂಪಾಂತರವು ಸ್ಮೋಕ್ ಸಿಲ್ವರ್ ಮತ್ತು ಪ್ಲಾಯಾ ಬ್ಲ್ಯಾಕ್‌ನಂತಹ ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಇದರ ಎಕ್ಸ್ ಶೋ ರೂಂ ಬೆಲೆ 2,39,000 ರೂಪಾಯಿ ಆಗಿದೆ.

ಗೆರಿಲ್ಲಾ 450ಯ ಡ್ಯಾಶ್ ರೂಪಾಂತರವು ಪ್ಲೇಯಾ ಬ್ಲಾಕ್ ಮತ್ತು ಗೋಲ್ಡ್ ಡಿಪ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದ್ದು, ಇದರ ಎಕ್ಸ್ ಶೋ ರೂಂ ಬೆಲೆ 2,49,000 ರೂಪಾಯಿ ಆಗಿದೆ. ಟಾಪ್ ರೂಪಾಂತರವು ಹಳದಿ ರಿಬ್ಬನ್ ಮತ್ತು ಬ್ರಾವಾ ಬ್ಲೂ ಎರಡು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದ್ದು, ಇದರ ಎಕ್ಸ್ ಶೋ ರೂಂ ಬೆಲೆ 2,54,000 ರೂಪಾಯಿ ಆಗಿದೆ.

ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಆಧುನಿಕ ರೆಟ್ರೋ ಮೋಟಾರ್‌ ಸೈಕಲ್‌ನಂತೆ ಕಾಣುತ್ತದೆ. ಡೈನಾಮಿಕ್ ಚಾಸಿಸ್ ಹೊಂದಿರುವ ಈ ಬೈಕ್ ಸ್ಟೆಪ್ಡ್ ಬೆಂಚ್ ಸೀಟ್, 11 ಲೀಟರ್ ಇಂಧನ ಟ್ಯಾಂಕ್, ರೌಂಡ್ ಎಲ್‌ಇಡಿ ಹೆಡ್‌ಲ್ಯಾಂಪ್, ಇಂಟಿಗ್ರೇಟೆಡ್ ಟೈಲ್ ಲ್ಯಾಂಪ್‌ನೊಂದಿಗೆ ಟರ್ನ್ ಇಂಡಿಕೇಟರ್‌ಗಳು, ಅಪ್‌ಸ್ವೆಪ್ಟ್ ಸೈಲೆನ್ಸರ್, ಸ್ಲಿಮ್ ಟೈಲ್ ಸೆಕ್ಷನ್, ಟ್ಯೂಬುಲರ್ ಗ್ರಾಬ್ ಹ್ಯಾಂಡಲ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಲುಕ್‌ಗೆ ಗ್ರಾಹಕರು ಫಿಧಾ ಆಗಿದ್ದಾರೆ.

ಈ ಬೈಕ್‌ ಟಾಪ್ ಮತ್ತು ಮಧ್ಯದ ರೂಪಾಂತರಗಳು 4-ಇಂಚಿನ ಇನ್ಫೋಟೈನ್‌ಮೆಂಟ್ ಕ್ಲಸ್ಟರ್ ಅನ್ನು ಹೊಂದಿವೆ. ಇದರಲ್ಲಿ ನೀವು ರಾಯಲ್ ಎನ್‌ಫೀಲ್ಡ್ ಅಪ್ಲಿಕೇಶನ್ ಅನ್ನು ಸಂಪರ್ಕಿಸಬಹುದು. ಮತ್ತು ಪ್ರವಾಸಕ್ಕೆ ಸಂಬಂಧಿಸಿದ ಮಾಹಿತಿಯ ಜೊತೆಗೆ ಅನೇಕ ಮಾಹಿತಿಯನ್ನು ಪಡೆಯಬಹುದಾಗಿದೆ. ನ್ಯಾವಿಗೇಷನ್, ಮ್ಯೂಸಿಕ್ ಕಂಟ್ರೋಲ್, ಹವಾಮಾನ ಮುನ್ಸೂಚನೆಯನ್ನು ಕೂಡ ತಿಳಿಯಬಹುದಾಗಿದೆ.

ಹಿಮಾಲಯನ್ 450 ಸಿಸಿಯಂತೆ, ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಹೊಸ ಮತ್ತು ಸುಧಾರಿತ 452 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಶೆರ್ಪಾ ಎಂಜಿನ್ ಅನ್ನು ಒಳಗೊಂಡಿದೆ. ಇದು 8,000 ಆರ್‌ಪಿಎಂನಲ್ಲಿ 40 ಪಿಎಸ್ ಗರಿಷ್ಠ ಶಕ್ತಿಯನ್ನು ಮತ್ತು 5,500 ಆರ್‌ಪಿಎಂನಲ್ಲಿ 40 ನ್ಯೂಟನ್ ಮೀಟರ್‌ಗಳ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 85 ಪ್ರತಿಶತ ಟಾರ್ಕ್ ಅನ್ನು 3,000 ಆರ್‌ಪಿಎಂವರೆಗೆ ಸಾಧಿಸುತ್ತದೆ ಎಂದು ಕಂಪನಿ ಮೂಲಗಿಂದ ತಿಳಿದುಬಂದಿದೆ.

ಇದರಲ್ಲಿ ವಾಟರ್ ಕೂಲ್ಡ್ ಸಿಸ್ಟಮ್ ಸೌಲಭ್ಯವನ್ನು ಕೂಡ ಅಳವಡಿಕೆ ಮಾಡಲಾಗಿದ್ದು, ಇದು ತಾಪಮಾನವನ್ನು ನಿಯಂತ್ರಿಸುವ ಇಂಟಿಗ್ರೇಟೆಡ್ ವಾಟರ್ ಪಂಪ್, ಟ್ವಿನ್ ಪಾಸ್ ರೇಡಿಯೇಟರ್ ಬೈಪಾಸ್‌ನಂತಹ ಸೌಲಭ್ಯಗಳನ್ನು ಒಳಗೊಂಡಿದೆ.

ಉತ್ತಮ ಗುಣಮಟ್ಟದ ಫ್ರಂಟ್-ಬ್ಯಾಕ್ ಟ್ಯೂಬ್‌ಲೆಸ್ ಟೈರ್‌ಗಳನ್ನು ಒಳಗೊಂಡಿದ್ದು, ಎರಡೂ ಚಕ್ರಗಳು ಡಿಸ್ಕ್ ಬ್ರೇಕ್ ಮತ್ತು 43 ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಮತ್ತು ಲಿಂಕೇಜ್ ಟೈಪ್ ಮೊನೊಶಾಕ್ ಸಸ್ಪೆನ್ಷನ್ ಅನ್ನು ಒಳಗೊಂಡಿದೆ. ಇದಕ್ಕೆ ಅಲ್ಟ್ರಾ ರೆಸ್ಪಾನ್ಸಿವ್ ಮ್ಯಾನೇಜ್‌ಮೆಂಟ್ ಸಿಸ್ಟಂ ಮತ್ತು ರೈಡ್ ಬೈ ವೈರ್ ಟೆಕ್ನಾಲಜಿ ಜೊತೆ ಎರಡು ರೈಡ್ ಮೋಡ್‌ಗಳಾದ ಬಿ ಪರ್ಫಾರ್ಮೆನ್ಸ್ ಮೋಡ್ ಮತ್ತು ಇಕೋ ಮೋಡ್ ಅನ್ನು ಸಹ ನೀಡಲಾಗಿದೆ. ಈಗಾಗಲೇ ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಸಿಸಿ ಭಾರತ ಮತ್ತು ವಿದೇಶಗಳಲ್ಲಿ ಬುಕ್ಕಿಂಗ್‌ ಪ್ರಾರಂಭವಾಗಿದ್ದು, ಇದರ ಮಾರಾಟ ಆಗಸ್ಟ್ 1ರಿಂದ ಆರಂಭವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+