ರಸ್ಕಿನ್ ಬಾಂಡ್ ಕೃತಿ ಲೋಕಾರ್ಪಣೆ ಮಾಡಿದ ನಟಿ ಕಾಜೋಲ್
ಬೆಂಗಳೂರು, ಅಕ್ಟೋಬರ್ 18: ವಿಶ್ವದ ಅಗ್ರಗಣ್ಯ ಸೋಪ್ ಬ್ರ್ಯಾಂಡ್ ಆಗಿರುವ ಲೈಫ್ಬಾಯ್ ಈ ವರ್ಷ ಇದೇ ಮೊದಲ ಬಾರಿಗೆ ವರ್ಣಮಾಲೆ ಪುಸ್ತಕ ''ಎಚ್ ಫಾರ್ ಹ್ಯಾಂಡ್ವಾಶಿಂಗ್'' ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ ಗ್ಲೋಬಲ್ ಹ್ಯಾಂಡ್ವಾಶಿಂಗ್ ಡೇ (ಜಿಎಚ್ಡಿ)ಯನ್ನು ಆಚರಿಸಿದೆ. ಈ ಪುಸ್ತಕವನ್ನು ಖ್ಯಾತ ಲೇಖಕ ರಸ್ಕಿನ್ ಬಾಂಡ್ ಅವರು ಬರೆದಿದ್ದು, ಕೈಗಳ ನೈರ್ಮಲ್ಯದ ಪರಿಕಲ್ಪನೆಗಳನ್ನು ಇಂಗ್ಲೀಷ್ ವರ್ಣಮಾಲೆಯೊಂದಿಗೆ ಅತ್ಯುತ್ತಮವಾಗಿ ಸಂಯೋಜಿಸಿದ್ದಾರೆ. ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಈ ಪುಸ್ತಕವನ್ನು ದೇಶದ ಶಾಲೆಗಳಲ್ಲಿ ಪ್ರಸಾರ ಮಾಡುವ ದಿಸೆಯಲ್ಲಿ ಸರ್ಕಾರೇತರ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಮಾಡಿಕೊಂಡಿದೆ.
ಲೇಖಕ ರಸ್ಕಿನ್ ಬಾಂಡ್, ಎಚ್ಯುಎಲ್ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಮೆಹ್ತಾ, ಲೈಫ್ಬಾಯ್ನ ಹ್ಯಾಂಡ್ವಾಶಿಂಗ್ ರಾಯಭಾರಿ ಕಾಜೋಲ್ ಮತ್ತು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಗಳು ಈ ಪುಸ್ತಕ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಅಧ್ಯಕ್ಷ & ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಮೆಹ್ತಾ ಅವರು ಮಾತನಾಡಿ, ''ಇಂದಿಗೂ ಸಹ ಜಾಗತಿಕವಾಗಿ ಐದು ವರ್ಷಕ್ಕಿಂತ ಕಡಿಮೆ ವಯೋಮಾನದ 1 ಮಿಲಿಯನ್ಗೂ ಅಧಿಕ ಮಕ್ಕಳು ಡಯೇರಿಯಾ ಮತ್ತು ನ್ಯುಮೋನಿಯಾದಂತಹ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಸಾಬೂನಿನಿಂದ ಕೈತೊಳೆದುಕೊಳ್ಳುವಂತಹ ಸುಲಭ ವಿಧಾನಗಳ ಮೂಲಕ ಇಂತಹ ರೋಗಗಳನ್ನು ತಡೆಗಟ್ಟಬಹುದಾಗಿದೆ. ಈ ಸಾಂಕ್ರಾಮಿಕವು ಕೈತೊಳೆಯುವುದು ಅತ್ಯಂತ ಪ್ರಮುಖ ಮತ್ತು ನಿರ್ಣಾಯಕ ವಿಷಯ ಎಂಬುದನ್ನು ಸಾಬೀತುಪಡಿಸಿದೆ,''.

ಕೈತೊಳೆಯುವ ಒಳ್ಳೆಯ ಅಭ್ಯಾಸಗಳನ್ನು ಕಲಿಸುತ್ತದೆ
''ಇಂದು, ನಾವು ಮಕ್ಕಳಲ್ಲಿ ಕೈತೊಳೆಯುವ ಪದ್ಧತಿಯ ಬದಲಾವಣೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳನ್ನಿಡುತ್ತಿದ್ದೇವೆ. ಏಕೆಂದರೆ, ಕೈತೊಳೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ನಾವು ನಮ್ಮ ಮೊದಲ ಪುಸ್ತಕವನ್ನು ಬಿಡುಗಡೆ ಮಾಡುತ್ತಿದ್ದೇವೆ. ಇದು ಮಕ್ಕಳಲ್ಲಿ ಕೈತೊಳೆಯುವ ಒಳ್ಳೆಯ ಅಭ್ಯಾಸಗಳನ್ನು ಕಲಿಸುತ್ತದೆ. ಈ ಪುಸ್ತಕವನ್ನು ಖ್ಯಾತ ಲೇಖಕ ರಸ್ಕಿನ್ ಬಾಂಡ್ ಅವರು ಬರೆದಿದ್ದಾರೆ. ಇವರು ಕೇವಲ ಲೇಖಕರಷ್ಟೇ ಅಲ್ಲ, ಇವರು ಮಕ್ಕಳನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಇವರು ಅತ್ಯದ್ಭುತವಾಗಿ ಪುಸ್ತಕವನ್ನು ರಚಿಸಿದ್ದಾರೆ ಮತ್ತು ಮಕ್ಕಳಲ್ಲಿ ಕೈತೊಳೆದುಕೊಳ್ಳುವ ಮಹತ್ವವನ್ನು ಪುನರುಚ್ಚರಿಸಲು ಸಹಕಾರಿಯಾಗಲಿದೆ,'' ಎಂದರು.
''ನಮ್ಮ ಎಚ್ ಫಾರ್ ಹ್ಯಾಂಡ್ವಾಶಿಂಗ್ ಪುಸ್ತಕ ಉಪಕ್ರಮವನ್ನು ಜಾರಿಗೊಳಿಸಲು ಸಹಕಾರ ನೀಡಿದ್ದಕ್ಕಾಗಿ ಶಿಕ್ಷಣ ಸಚಿವಾಲಯಕ್ಕೆ ನಾವು ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ. ಕೈತೊಳೆದುಕೊಳ್ಳುವುದು ಜಾಗತಿಕವಾಗಿ ಅಗತ್ಯವಾಗಿ ಪರಿಣಮಿಸಿದೆ. ವಿಶೇಷವಾಗಿ ಕಳೆದ ಎರಡು ವರ್ಷಗಳಿಂದ ಇದು ಅತ್ಯಗತ್ಯವೆನಿಸಿದೆ. ಆದರೆ, ನಮ್ಮ ಭವಿಷ್ಯದ ಪೀಳಿಗೆಗಳು ಅದರ ಮಹತ್ವವನ್ನು ಅರ್ಥ ಮಾಡಿಕೊಳ್ಳಲು ಸಾಂಕ್ರಾಮಿಕ ರೋಗದಂತಹ ಭೀಕರವಾದುದು ಸಂಭವಿಸುವುದಕ್ಕೆ ಕಾಯಬೇಕಿಲ್ಲ ಎಂಬುದನ್ನು ಖಚಿತಪಡಿಸುವ ಸಮಯ ಈಗ ಬಂದಿದೆ,'' ಎಂದು ತಿಳಿಸಿದರು.

ರಾಯಭಾರಿ ಕಾಜೋಲ್ ಮಾತನಾಡಿ
ಲೈಫ್ಬಾಯ್ ಹ್ಯಾಂಡ್ವಾಶಿಂಗ್ ರಾಯಭಾರಿ ಕಾಜೋಲ್ ಮಾತನಾಡಿ, ''ಒಂದು ದಶಕದಿಂದಲೂ ನಾನು ಲೈಫ್ಬಾಯ್ ಜೊತೆಗೆ ಸಹಭಾಗಿತ್ವ ಹೊಂದಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ. ಇದು ನನಗೆ ಅತ್ಯಂತ ವಿಶೇಷವಾಗಿದೆ. ಏಕೆಂದರೆ, ತಾಯಂದಿರಾಗಿ ನಾವು ಸ್ವಚ್ಛತೆ ಮತ್ತು ನೈರ್ಮಲ್ಯದ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕೆಂಬುದನ್ನು ಮನಗಂಡಿದ್ದೇವೆ. ಮಕ್ಕಳು ಇನ್ನೂ ಪ್ರಭಾವಶಾಲಿಗಳಾಗಿರುವಾಗ ಮತ್ತು ಹೊಸ ಹೊಸ ವಿಷಯಗಳನ್ನು ಕಲಿಯುವಾಗ ಅಭ್ಯಾಸಗಳು ಉತ್ತಮವಾಗಿ ರೂಪುಗೊಳ್ಳುತ್ತವೆ ಎಂಬುದನ್ನು ನಾನು ನಂಬುತ್ತೇನೆ. ಈ ಅಭ್ಯಾಸಗಳು ನನಗೆ ವಿಶೇಷವಾದ ಸಂತೋಷವನ್ನು ಉಂಟುಮಾಡುತ್ತವೆ. ಏಕೆಂದರೆ, ನನ್ನ ನೆಚ್ಚಿನ ಲೇಖಕರಲ್ಲಿ ಒಬ್ಬರಾಗಿರುವ ರಸ್ಕಿನ್ ಬಾಂಡ್ ಅವರು ಇದರಲ್ಲಿ ಭಾಗಿಯಾಗಿದ್ದಾರೆ. ಪ್ರತಿಯೊಬ್ಬ ಪೋಷಕರ ಪರವಾಗಿ ಈ ಅದ್ಭುತವಾದ ಮತ್ತು ಕಲ್ಪನಾತ್ಮಕವಾದ ಪುಸ್ತಕ ರೂಪದ ಅಭ್ಯಾಸದ ಉಪಕ್ರಮಕ್ಕೆ ಪ್ರೋತ್ಸಾಹ ನೀಡುತ್ತಿರುವ ಶಿಕ್ಷಣ ಸಚಿವಾಲಯಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ,'' ಎಂದು ಹೇಳಿದರು.

ಲೇಖಕ ರಸ್ಕಿನ್ ಬಾಂಡ್ ಮಾತನಾಡಿ
ವರ್ಣಮಾಲೆ ಪುಸ್ತಕದ ಲೇಖಕ ರಸ್ಕಿನ್ ಬಾಂಡ್ ಮಾತನಾಡಿ, ''ಮಕ್ಕಳಿಗಾಗಿ ನಾನು ಪುಸ್ತಕಗಳನ್ನು ಬರೆಯುತ್ತೇನೆ. ಆದರೆ, ಈ ಬಾರಿಯ ನನ್ನ ಬರವಣಿಗೆ ವಿಭಿನ್ನವಾಗಿದೆ. ಈ ಪರಿಕಲ್ಪನೆಯೊಂದಿಗೆ ಲೈಫ್ಬಾಯ್ ತಂಡ ಬಂದಾಗ ನನಗೆ ಆಶ್ಚರ್ಯ ಮತ್ತು ಕುತೂಹಲ ಉಂಟಾಗಿತ್ತು. ಏಕೆಂದರೆ, ನಾನು ಈ ಹಿಂದೆ ಮಾಡಿದ ಕೆಲಸಕ್ಕಿಂತ ಇದು ಭಿನ್ನವಾಗಿತ್ತು. ಎಚ್ ಫಾರ್ ಹ್ಯಾಂಡ್ವಾಶಿಂಗ್ ವರ್ಣಮಾಲೆ ಪುಸ್ತಕ ಯಾವಾಗಲೂ ವಿಶೇಷವಾಗಿದೆ. ಏಕೆಂದರೆ, ಇದು ಮೊದಲ ಬಾರಿ ಮಕ್ಕಳಿಗಾಗಿ ಬರೆದಿರುವ ವಿಶೇಷವಾದ ಪುಸ್ತಕವಾಗಿದ್ದು, ಅರ್ಥಪೂರ್ಣವಾಗಿದೆ. ಲೈಫ್ಬಾಯ್ ಅನುಷ್ಠಾನಗೊಳಿಸಿರುವ ಎಚ್ ಫಾರ್ ಹ್ಯಾಂಡ್ವಾಶಿಂಗ್ ಅಭಿಯಾನವು ಒಂದು ಅದ್ಭುತವಾದ ಉಪಕ್ರಮವಾಗಿದೆ. ಈ ವರ್ಣಮಾಲೆ ಪುಸ್ತಕವು ಕೈಗಳ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಮಹತ್ವದ ಬಗ್ಗೆ ಭವಿಷ್ಯದ ಪೀಳಿಗೆಗೆ ಅರಿವು ಮೂಡಿಸುವಲ್ಲಿ ಅತ್ಯಂತ ಮಹತ್ವಪೂರ್ಣವಾದ ಪಾತ್ರವನ್ನು ವಹಿಸುತ್ತದೆ,'' ಎಂದು ತಿಳಿಸಿದರು.

ಜಾಗತಿಕ ಕೈತೊಳೆದುಕೊಳ್ಳುವ ದಿನ
2008 ರಲ್ಲಿ ಜಾಗತಿಕ ಕೈತೊಳೆದುಕೊಳ್ಳುವ ಪಾಲುದಾರಿಕೆಯೊಂದಿಗೆ ಲೈಫ್ಬಾಯ್ ಜಾಗತಿಕ ಕೈತೊಳೆದುಕೊಳ್ಳುವ ದಿನವನ್ನು ಸಹ-ಸಂಸ್ಥಾಪನೆ ಮಾಡಿದೆ. ಈ ಬ್ರ್ಯಾಂಡ್ ವಿಶ್ವದ ಅತಿದೊಡ್ಡ ನೈರ್ಮಲ್ಯ ಕಾರ್ಯಕ್ರಮವನ್ನು ನಡೆಸುತ್ತಿದೆ. ಇದಕ್ಕೆ 2010 ರಿಂದ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾದ 30 ಕ್ಕೂ ಹೆಚ್ಚು ದೇಶಗಳ 1 ಬಿಲಿಯನ್ಗೂ ಅಧಿಕ ಜನರಿಗೆ ಈ ಅಭಿಯಾನ ತಲುಪಿದೆ.
ಕಳೆದ ವರ್ಷ, ಲೈಫ್ಬಾಯ್ ಜಾಗತಿಕ ಮಟ್ಟದಲ್ಲಿ ಪ್ರಶಸ್ತಿ ವಿಜೇತ ಎಚ್ ಫಾರ್ ಹ್ಯಾಂಡ್ವಾಶಿಂಗ್ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನವು ಕೈಗಳ ನೈರ್ಮಲ್ಯ ನಡವಳಿಕೆಯ ಬದಲಾವಣೆಯನ್ನು ಶಾಲಾ ಪಠ್ಯಕ್ರಮದೊಂದಿಗೆ ಸಂಯೋಜನೆ ಮಾಡುವ ಮೂಲಕ ಪ್ರೋತ್ಸಾಹ ನೀಡುವ ಸಾಧನವಾಗಿ ಪರಿಣಮಿಸಿದೆ. ಮಕ್ಕಳ ಬೆಳವಣಿಗೆ ಹಂತದಲ್ಲಿಯೇ ವರ್ಣಮಾಲೆಯ ಮೂಲಕ ಅರಿವನ್ನು ಮೂಡಿಸಲಾಗುತ್ತದೆ. ಇದರಲ್ಲಿ ಎಚ್ ಎಂಬ ಇಂಗ್ಲೀಷ್ ಅಕ್ಷರವು ಕೇವಲ ಹ್ಯಾಟ್, ಹಾರ್ಸ್, ಹಿಪ್ಪೋ ಇತ್ಯಾದಿಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ, ಇನ್ನು ಮುಂದೆ ಕೈತೊಳೆಯುವುದನ್ನೂ ಅಂದರೆ, ಹ್ಯಾಂಡ್ವಾಶಿಂಗ್ ಅನ್ನೂ ಸೂಚಿಸುತ್ತದೆ.
-
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ












Click it and Unblock the Notifications