ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

National Highway: NH ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಖ್ಯೆ ಹೇಗೆ ನೀಡಲಾಗಿದೆ?

|
Google Oneindia Kannada News

ಭಾರತ ದೇಶದ ಹೆದ್ದಾರಿಗಳ ಸಂಖ್ಯೆಯಿಂದಲೇ ರಾಷ್ಟ್ರೀಯ ಹೆದ್ದಾರಿಗಳು ಜನರಿಗೆ ಪರಿಚಯವಾಗಿವೆ. ಇಂದು ರಾಷ್ಟ್ರೀಯ ಹೆದ್ದಾರಿಗಳು ಇಡೀ ರಾಜ್ಯಗಳನ್ನು ಸಂಪರ್ಕಿಸುವ ಉದ್ದೇಶವನ್ನು ಹೊಂದಿದ್ದು, ಹೆದ್ದಾರಿ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಒಟ್ಟು 599 ರಾಷ್ಟ್ರೀಯ ಹೆದ್ದಾರಿಗಳಿವೆ. ಅವುಗಳನ್ನು ಕಾಲಕಾಲಕ್ಕೆ ನವೀಕರಿಸಲಾಗಿದೆ.

ಭಾರತದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಒಟ್ಟು ಉದ್ದ 1,51,000 ಕಿ.ಮೀ.ನಷ್ಟಿದೆ. ನಮ್ಮ ದೇಶವು ವಿಶ್ವದ ಎರಡನೇ ಅತಿದೊಡ್ಡ ರಸ್ತೆ ಜಾಲವನ್ನು ಹೊಂದಿದೆ. ಈ ರಾಷ್ಟ್ರೀಯ ಹೆದ್ದಾರಿಗಳನ್ನು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಿರ್ಮಿಸಲಾಗಿದೆ ಮತ್ತು ರಸ್ತೆಗಳನ್ನು ನಿರ್ವಹಿಸಲಾಗುತ್ತಿದೆ. ಇನ್ನು ರಾಷ್ಟ್ರೀಯ ಹೆದ್ದಾರಿಗಳ ರಸ್ತೆ ಕಾಮಗಾರಿಯನ್ನು ಕೂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೋಡಿಕೊಳ್ಳುತ್ತದೆ.

 ವಿರೋಧದ ನಡುವೆಯೇ ರಷ್ಯಾ ಜತೆ ಆ ಒಪ್ಪಂದದಿಂದ 35 ಸಾವಿರ ಕೋಟಿ ರೂ ಉಳಿಸಿದ ಭಾರತ ವಿರೋಧದ ನಡುವೆಯೇ ರಷ್ಯಾ ಜತೆ ಆ ಒಪ್ಪಂದದಿಂದ 35 ಸಾವಿರ ಕೋಟಿ ರೂ ಉಳಿಸಿದ ಭಾರತ

ನೀವು ರಾಷ್ಟ್ರೀಯ ಹೆದ್ದಾರಿಯ ಮೂಲಕ ಹಾದು ಹೋಗುವಾಗ, ನೀವು ಅನೇಕ ಸ್ಥಳಗಳಲ್ಲಿ ಹೆದ್ದಾರಿಯಲ್ಲಿ ಸಂಖ್ಯೆಯನ್ನು ಬರೆಯುವುದನ್ನು ನೋಡಿರಬೇಕು. ಆದರೆ ಭಾರತದಲ್ಲಿ ಈ ಹೆದ್ದಾರಿಗಳನ್ನು ಹೇಗೆ ನಂಬರ್‍‌ ಬಂದಿದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?

 ಭಾರತದಲ್ಲಿ ಹೆದ್ದಾರಿಗಳ ಸಂಖ್ಯೆಗಳು

ಭಾರತದಲ್ಲಿ ಹೆದ್ದಾರಿಗಳ ಸಂಖ್ಯೆಗಳು

2010ರ ತನಕ ವ್ಯವಸ್ಥೆ ಬೇರೆ ಇತ್ತು. ಆದರೆ, 2010ರ ನಂತರ ರಾಷ್ಟ್ರೀಯ ಹೆದ್ದಾರಿಗಳ ಸಂಖ್ಯೆಯನ್ನು 1956ರ ರಾಷ್ಟ್ರೀಯ ಹೆದ್ದಾರಿ ಕಾಯಿದೆ ಅಡಿಯಲ್ಲಿ ನೀಡಲಾಯಿತು ಆದರೆ, ಆ ಸಮಯದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಂಖ್ಯೆಗಳು ಯಾವುದೇ ಸ್ಥಳ ಅಥವಾ ದಿಕ್ಕನ್ನು ಸೂಚಿಸಲಿಲ್ಲ. ಅಥವಾ ಎನ್‌ಎಚ್‌ ಹೆದ್ದಾರಿಗಳು ಯಾವ ರಾಜ್ಯಗಳನ್ನು ಪ್ರತಿನಿಧಿಸುವ ಕೋಡ್‌ ಸಂಖ್ಯೆ ಅಕ್ಷರಗಳ ಶಬ್ಧಗಳನ್ನು ಕೂಡ ಹೊಂದಿರುವುದಿಲ್ಲ ಹಾಗಾಗಿ ಮತ್ತೆ ಹೊಸ ವ್ಯವಸ್ಥೆ ಆರಂಭವಾಯಿತು. ಇಂದು ದೇಶದ ರಾಷ್ಟ್ರೀಯ ಹೆದ್ದಾರಿಗಳನ್ನು ಗುರುತಿಸುವುದು ಈ ಬೆಸ ಸಂಖ್ಯೆಗಳ ಮೂಲಕವೇ ಸರಳವಾಗಿ ಗುರುತಿಸಲಾಗಿದೆ.

 ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಖ್ಯಾಶಾಸ್ತ್ರ?

ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಖ್ಯಾಶಾಸ್ತ್ರ?

ಈ ಹೊಸ ವ್ಯವಸ್ಥೆಯ ಅಡಿಯಲ್ಲಿ, ಪೂರ್ವದಿಂದ ಪಶ್ಚಿಮಕ್ಕೆ ಅಥವಾ ಪಶ್ಚಿಮದಿಂದ ಪೂರ್ವಕ್ಕೆ ಹೋಗುವ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ಬೆಸ ಸಂಖ್ಯೆಯನ್ನು ಹೊಂದಿರುತ್ತವೆ. ಬೆಸ ಸಂಖ್ಯೆಯು 3, 5, 7 ಹೀಗೆ ಇತ್ಯಾದಿ 2ರಿಂದ ಭಾಗಿಸಲಾಗದ ಸಂಖ್ಯೆಯಾಗಿದೆ. ಉದಾಹರಣೆಗೆ, NH7 ಪಂಜಾಬ್‌ನಿಂದ ಉತ್ತರಾಖಂಡಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯಾಗಿದೆ. ಇದು ಪೂರ್ವದಿಂದ ಪಶ್ಚಿಮಕ್ಕೆ ಹೋಗುತ್ತದೆ, ಆದ್ದರಿಂದ ಅದರ ಸಂಖ್ಯೆಯಲ್ಲಿ ಬೆಸ ಸಂಖ್ಯೆ ಇದೆ. ಇದಲ್ಲದೆ, ಬೆಸ ಸಂಖ್ಯೆಯ ಹೆದ್ದಾರಿಗಳಿಗೂ ಸಹ, ಉತ್ತರದಿಂದ ದಕ್ಷಿಣಕ್ಕೆ, ಚಿಕ್ಕದರಿಂದ ದೊಡ್ಡದಕ್ಕೆ ಹೋಗುವ ದಿಕ್ಕಿನಲ್ಲಿ ಸಂಖ್ಯೆಗಳನ್ನು ನೀಡಲಾಗುತ್ತದೆ. NH1 ಜಮ್ಮು ಮತ್ತು ಕಾಶ್ಮೀರದಲ್ಲಿದ್ದರೆ, NH11 ರಾಜಸ್ಥಾನದಲ್ಲಿದೆ ಈ ಸಂಖ್ಯೆಗಳನ್ನು ನೀಡಲಾಗಿದೆ.

 ದಕ್ಷಿಣದಿಂದ ಉತ್ತರಕ್ಕೆ..

ದಕ್ಷಿಣದಿಂದ ಉತ್ತರಕ್ಕೆ..

ಅದೇ ರೀತಿ, ಉತ್ತರದಿಂದ ದಕ್ಷಿಣಕ್ಕೆ ಅಥವಾ ದಕ್ಷಿಣದಿಂದ ಉತ್ತರಕ್ಕೆ ಹೋಗುವ ಎಲ್ಲಾ ಹೆದ್ದಾರಿಗಳು ಅವುಗಳ ಸಂಖ್ಯೆಯನ್ನು ಸಮ ಸಂಖ್ಯೆಯ ಪ್ರಕಾರ ಮಾಡಲಾಗುತ್ತದೆ. ಉದಾಹರಣೆಗೆ, ಶ್ರೀನಗರದಿಂದ ಕನ್ಯಾಕುಮಾರಿವರೆಗಿನ ಹೆದ್ದಾರಿಯ ಹೆಸರು NH 44 ಎಂದು ಸಂಖ್ಯೆ ನೀಡಲಾಗಿದೆ. ಸಮ ಸಂಖ್ಯೆಯ ಹೆದ್ದಾರಿಗಳಿಗೆ, ಸಂಖ್ಯೆಗಳನ್ನು ಪೂರ್ವದಿಂದ ಪಶ್ಚಿಮಕ್ಕೆ ಚಿಕ್ಕದರಿಂದ ದೊಡ್ಡದಕ್ಕೆ ಎಣಿಸಲಾಗುತ್ತದೆ. NH2 ಅಸ್ಸಾಂನಿಂದ ಮಿಜೋರಾಂಗೆ ಸಾಗುವುದರಿಂದ, NH12 ಪಶ್ಚಿಮ ಬಂಗಾಳದಲ್ಲಿದೆ.

 NH 44 ದೇಶದ ಅತಿ ಉದ್ದದ ಹೆದ್ದಾರಿ

NH 44 ದೇಶದ ಅತಿ ಉದ್ದದ ಹೆದ್ದಾರಿ

ಈ ರಾಷ್ಟ್ರೀಯ ಹೆದ್ದಾರಿಗಳ ಶಾಖೆಗಳನ್ನು ಮೂರು ಅಂಕಿಯ ಸಂಖ್ಯೆಗಳಿಂದ ಸೂಚಿಸಲಾಗುತ್ತದೆ. ಉದಾಹರಣೆಗೆ, NH 44ರ ಶಾಖೆಗಳು 144, 244, 344 ಇತ್ಯಾದಿ. NH 44 ದೇಶದ ಅತಿ ಉದ್ದದ ಹೆದ್ದಾರಿಯಾಗಿದ್ದು, ಇದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಿಂದ ತಮಿಳುನಾಡಿನ ಕನ್ಯಾಕುಮಾರಿಯವರೆಗೆ ಹಾದು ಹೋಗುತ್ತದೆ. ಇದು 3,745 ಕಿಮೀ ಉದ್ದವಾಗಿದೆ, ಇದು 12 ರಾಜ್ಯಗಳ ಮೂಲಕ ಹಾದುಹೋಗುತ್ತದೆ, ಅಂದರೆ ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ ಮತ್ತು ಕರ್ನಾಟಕ.

English summary
National Highway: How NH National Highways were numbered Know more Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X