• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಗ್ಲೀಷ್ ಬರಲ್ಲವೆಂದು ಅವಮಾನಿತನಾಗಿದ್ದವ ಈಗ ಬ್ರಿಟನ್‌ನ ಹೊಸ ಹಣಕಾಸು ಮಂತ್ರಿ

|
Google Oneindia Kannada News

ಲಂಡನ್, ಜುಲೈ 6: ಇರಾಕ್ ಮೂಲದ ನಧೀಂ ಜಹಾವಿ ಈಗ ಬ್ರಿಟನ್ ದೇಶದ ಹೊಸ ಹಣಕಾಸು ಮಂತ್ರಿಯಾಗಿದ್ದಾರೆ. ಭಾರತ ಮೂಲದ ರಿಷಿ ಸುಣಕ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಜಹಾವಿ ಆಗಮಿಸಿದ್ದಾರೆ.

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತವರ ಸರಕಾರದ ಸುತ್ತ ವಿವಾದಗಳು ಮುತ್ತಿಕೊಂಡ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಋಷಿ ಸುಣಕ್ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹಾಗೆಯೆ, ಆರೋಗ್ಯ ಸಚಿವ ಸಾಜಿದ್ ಜಾವೀದ್ ಕೂಡ ಸರಕಾರದಿಂದ ಹೊರಬಿದ್ದಿದ್ದಾರೆ. ಜೂನ್ 15ರಂದು ಪ್ರಧಾನಿ ಜಾನ್ಸನ್ ಅವರಿಗೆ ಎಥಿಕ್ಸ್ ಅಡ್ವೈಸರ್ ಆಗಿದ್ದ ಕ್ರಿಸ್ಟೋಫರ್ ಗೇಡಟ್ ಅವರೂ ರಾಜೀನಾಮೆ ನೀಡಿದ್ದರು.

ಸ್ಪೋರ್ಟ್ಸ್‌ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ, ತಮ್ಮ ಕರಾಳ ಅನುಭವ ಬಿಚ್ಚಿಟ್ಟ ದ್ಯುತಿಸ್ಪೋರ್ಟ್ಸ್‌ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ, ತಮ್ಮ ಕರಾಳ ಅನುಭವ ಬಿಚ್ಚಿಟ್ಟ ದ್ಯುತಿ

ಕೋವಿಡ್ ವೇಳೆ ನಿಯಮ ಮೀರಿ ಪಾರ್ಟಿಗಳನ್ನು ಮಾಡಿದ್ದು ಬೋರಿಸ್ ಜಾನ್ಸನ್ ಅವರನ್ನು ವಿವಾದದ ಕೇಂದ್ರಬಿಂದುವಾಗಿಸಿದೆ. ಹಾಗೆಯೇ, ಅವರ ಕನ್ಸರ್ವೇಟಿವ್ ಪಕ್ಷದ ಮುಖಂಡ ಕ್ರಿಸ್ ಪಿಂಚರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹಾಗೂ ಹಲ್ಲೆ ಆರೋಪಗಳು ಕೇಳಿಬಂದಿವೆ. ಹಾಗೆಯೇ ಬೋರಿಸ್ ಜಾನ್ಸನ್ ವಿರುದ್ಧ ಅವರ ಸ್ವಂತ ಪಕ್ಷದಲ್ಲೇ ಬಂಡಾಯ ಎದ್ದಿತ್ತು. ಅವಿಶ್ವಾಸ ನಿರ್ಣಯದಲ್ಲಿ ಅವರು 211-148 ಮತಗಳಿಂದ ಗೆದ್ದರಾದರೂ ಪಕ್ಷದೊಳಗಿನ ಬಂಡಾಯವು ಅವರ ಅಧಿಕಾರವನ್ನು ಅಲುಗಾಡಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಬೋರಿಸ್ ಜಾನ್ಸನ್ ಅವರ ತಂಡದ ಸದಸ್ಯರು ನಾಯಕತ್ವದ ಮೇಲೆ ವಿಶ್ವಾಸ ಕಳೆದುಕೊಂಡು ಸರಣಿಯಾಗಿ ರಾಜೀನಾಮೆ ನೀಡುತ್ತಿದ್ಧಾರೆ. ಈಗ ರಿಷಿ ಸುಣಕ್ ರಾಜೀನಾಮೆಯಿಂದ ತೆರವಾಗಿರುವ ಹಣಕಾಸು ಸಚಿವ ಸ್ಥಾನಕ್ಕೆ ನದೀಂ ಜಹಾವಿ ಬಂದಿದ್ದಾರೆ.

ಯಾರು ಈ ನದೀಮ್ ಜಹಾವಿ?

ಯಾರು ಈ ನದೀಮ್ ಜಹಾವಿ?

55 ವರ್ಷದ ನದೀಂ ಜಹಾವಿ ಅವರು ಇರಾಕ್ ಮೂಲದವರು. ಬಾಗ್ದಾದ್‌ನಲ್ಲಿ ಜನಿಸಿದವರು. ನದೀಮ್ ಜಹಾವಿಯ ತಂದೆ ಉದ್ಯಮಿಯಾಗಿದ್ದರೆ ತಾಯಿ ದಂತವೈದ್ಯೆಯಾಗಿದ್ದರು. ಇವರದ್ದು ಕುರ್ದ್ ಜನಾಂಗ.

ಇರಾಕ್‌ನಲ್ಲಿ ಸದ್ದಾಂ ಹುಸೇನ್ ಆಡಳಿತದ ದೌರ್ಜನ್ಯಕ್ಕೆ ಕುರ್ದ್ ಸಮುದಾಯದವರು ನಲುಗಿಹೋಗಿದ್ದರು. ಆಗ 1976ರಲ್ಲಿ ನದೀಂ ಜಹಾವಿ ಅವರ ಕುಟುಂಬ ಬ್ರಿಟನ್ ದೇಶಕ್ಕೆ ವಲಸೆ ಹೋಯಿತು. ಆಗ ನದೀಂ ವಯಸ್ಸು 11 ವರ್ಷ.

ನದೀಮ್ ಬೆಳೆದ ಬಗೆ

ನದೀಮ್ ಬೆಳೆದ ಬಗೆ

ಬ್ರಿಟನ್‌ಗೆ ಬಂದ ಮೇಲೆ ಖಾಸಗಿಯಾಗಿ ಶಿಕ್ಷಣ ಪಡೆದ ನದೀಮ್ ಜಹಾವಿ ಬಳಿಕ ವ್ಯಾಪಾರ ವೃತ್ತಿಗೆ ಇಳಿದರು. ತೊಂಬತ್ತರ ದಶಕದಲ್ಲಿ ಅವರು ಲೇಖಕ ಜೆಫ್ರೆ ಆರ್ಚರ್ ಅವರಿಗೆ ಸಹಾಯಕರಾಗಿದ್ದರು.

2001ರಲ್ಲಿ ನದೀಂ ಜಹಾವಿ 2000 ರ ವರ್ಷದಲ್ಲಿ YouGov ಎಂಬ ಪೋಲಿಂಗ್ ಕಂಪನಿಯೊಂದನ್ನು ಸ್ಥಾಪಿಸಿ ಹತ್ತು ವರ್ಷ ಕಾಲ ಅದರ ಸಿಇಒ ಆಗಿದ್ದರು.

2010ರಲ್ಲಿ ಅವರು ಲಂಡನ್‌ನಲ್ಲಿ ಕನ್ಸರ್ವೇಟಿವ್ ಪಕ್ಷದ ಜೊತೆ ಸಕ್ರಿಯರಾದರು. ಸಂಸದರೂ ಆದರು.

ಕಾರ್ಯಕ್ಷಮತೆಗೆ ಪ್ರಶಂಸೆ

ಕಾರ್ಯಕ್ಷಮತೆಗೆ ಪ್ರಶಂಸೆ

ರಾಜಕೀಯಕ್ಕೆ ಬರುವ ಮುನ್ನ ನದೀಂ ಜಹಾವಿ ಒಬ್ಬ ಯಶಸ್ವಿ ಉದ್ಯಮಿ ಎನಿಸಿದ್ದರು. ಅವರು ಸಂಸದರಾದ ಬಳಿಕ ಅಂದಿನ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರಾನ್ ಅವರು ತಮ್ಮ ಸರಕಾರದ ನೀತಿ ರೂಪಕರ ತಂಡಕ್ಕೆ ಜಹಾವಿಯನ್ನು ನೇಮಕ ಮಾಡಿದರು.

ಬೋರಿಸ್ ಜಾನ್ಸನ್ ಪ್ರಧಾನಿಯಾದ ಬಳಿಕ 2020ರಲ್ಲಿ ಕೋವಿಡ್ ಲಸಿಕೆ ವಿತರಣೆ ಕಾರ್ಯಕ್ರಮದ ಉಸ್ತುವಾರಿ ಮಂತ್ರಿಯಾಗಿ ನದೀಮ್ ಜಹಾವಿಗೆ ಜವಾಬ್ದಾರಿ ನೀಡಲಾಯಿತು. ಕೋವಿಡ್ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸುವ ಮೂಲಕ ನದೀಮ್ ಗಮನ ಸೆಳೆದಿದ್ದರು.

ನಂತರ ಬೋರಿಸ್ ಜಾನ್ಸನ್ ತಮ್ಮ ಸಂಪುಟದಲ್ಲಿ ನದೀಮ್ ಅವರಿಗೆ ಶಿಕ್ಷಣ ಕಾರ್ಯದರ್ಶಿ ಸ್ಥಾನ ನೀಡಿದರು. ಅಲ್ಲಿ ಅವರು ತೋರಿದ ಕಾರ್ಯದಕ್ಷತೆಯ ಫಲವಾಗಿ ನದೀಮ್‌ಗೆ ಹಣಕಾಸು ಸಚಿವ ಸ್ಥಾನದಂಥ ಗುರುತರ ಜವಾಬ್ದಾರಿ ಸಿಕ್ಕಿದೆ.

ಇಂಗ್ಲೀಷ್ ಬರಲ್ಲವೆಂದಿದ್ದರು

ಇಂಗ್ಲೀಷ್ ಬರಲ್ಲವೆಂದಿದ್ದರು

ನದೀಂ ಜಹಾವಿ ಚಿಕ್ಕಂದಿನಲ್ಲಿ ಇಂಗ್ಲೀಷ್ ಭಾಷೆ ಎಂದರೆ ಪರದಾಡುವಂತಿದ್ದರು. ಇಂಗ್ಲೀಷ್ ಮಾತನಾಡಲು ತಡವರಿಸುತ್ತಿದ್ದರು. ಅವರಿಗೆ ಪಾಠ ಹೇಳಿಕೊಡುತ್ತಿದ್ದ ಶಿಕ್ಷಕರು ಈ ವಿಚಾರವನ್ನು ಎತ್ತಿ ಜಹಾವಿಯ ಪೋಷಕರಲ್ಲಿ ಎಚ್ಚರಿಸುತ್ತಿದ್ದರು. ಜಹಾವಿ ಮುಂದೆ ಓದುವುದು ಕಷ್ಟ ಎಂದು ಹೇಳುತ್ತಿದ್ದರು.

ಆದಾಗ್ಯೂ ನದೀಮ್ ಜಹಾವಿ ಬೆಳವಣಿಗೆಯನ್ನು ಇಂಗ್ಲೀಷ್ ಭಾಷೆ ತಡೆಯಲಾಗಲಿಲ್ಲ. ಒಬ್ಬ ಯಶಸ್ವಿ ಉದ್ಯಮಿಯಾಗಿ ಬೆಳೆದ ಅವರು ಬಳಿಕ ರಾಜಕೀಯಕ್ಕೂ ಕಾಲಿಟ್ಟು ಅಲ್ಲಿಯೂ ಯಶಸ್ಸು ಕಂಡಿದ್ದಾರೆ. ಈಗ ಬ್ರಿಟನ್ ದೇಶದ ನೂತನ ಹಣಕಾಸು ಸಚಿವರಾಗಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Nadhim Zahawi the successful entrepreneur turned politician has climbed up ladder to become Britain's new finance minister at a crucial juncture when the government facing troubles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X