ದಲಿತ ಹೋರಾಟಗಾರ್ತಿ ತೇನ್‌ಮೊಳಿ ಕಾರ್ಯಕ್ರಮ ರದ್ದು; 'ಬ್ರಾಹ್ಮಣ' ಗೂಗಲ್ ಸಿಇಒ ಮೇಲೆ ಆಕ್ರೋಶ
ನವದೆಹಲಿ: ಅಮೆರಿಕದಲ್ಲಿ ದಲಿತರ ಹಕ್ಕು ಹೋರಾಟಗಾರ್ತಿ ತೇನ್‌ಮೊಳಿ ಸೌಂದರರಾಜನ್ ಗೂಗಲ್‌ನ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಲಿದ್ದ ಕಾರ್ಯಕ್ರಮ ರದ್ದಾಗಿರುವುದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಗೂಗಲ್‌ನ ಸಿಇಒ ಸುಂದರ್ ಪಿಚೈ ಬ್ರಾಹ್ಮಣ ಸಮುದಾಯದವರಾದ್ದರಿಂದ ಅನೇಕ ಮಂದಿಯ ಆಕ್ರೋಶದ ಬಾಣಗಳು ಅವರತ್ತಲೇ ನೆಟ್ಟಿವೆ.
ತೇನ್‌ಮೊಳಿ ಸೌಂದರರಾಜನ್ ದಲಿತ ಹಕ್ಕುಗಳಿಗೆ ಹೋರಾಡುವ ದಲಿತ್ ಲ್ಯಾಬೊರೇಟರಿ (ಈಕ್ವಾಲಿಟಿ ಲ್ಯಾಬ್ಸ್) ಎಂಬ ಸಂಘಟನೆಯ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ದಾರೆ. ಇವರು ದಲಿತರ ಹಕ್ಕುಗಳ ಪರ ನಿಲ್ಲುವುದರ ಜೊತೆಗೆ 'ಬ್ರಾಹ್ಮಣ ವಿರೋಧಿ' ನಿಲುವಿನ ಹಣೆಪಟ್ಟಿಯನ್ನೂ ಹೊಂದಿದ್ದಾರೆ. ಇವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ ಗೂಗಲ್‌ನ ಸೀನಿಯರ್ ಮ್ಯಾನೇಜರ್ ತನುಜಾ ಗುಪ್ತಾ ರಾಜೀನಾಮೆ ನೀಡಿದ್ಧಾರೆ. ಇಬ್ಬರು ಗೂಗಲ್ ಉದ್ಯೋಗಿಗಳಿಗೆ ಕಂಪನಿಯೊಳಗೆ ಜಾತಿ ತಾರತಮ್ಯವಾಗಿರುವ ಆರೋಪ ಬಂದ ಹಿನ್ನೆಲೆಯಲ್ಲಿ ತೇನ್‌ಮೊಳಿ ಅವರನ್ನು ಕರೆಸುವ ಉದ್ದೇಶ ಇತ್ತು ಎಂದು ತನುಜಾ ಗುಪ್ತಾ ಹೇಳಿಕೊಂಡಿದ್ದಾರೆ.
ದಲಿತ ಹೋರಾಟಗಾರ್ತಿ ತೇನ್‌ಮೊಳಿ ಗೂಗಲ್ ಸಿಇಒ ಸುಂದರ್ ಪಿಚೈಗೆ ಪತ್ರ ಬರೆದು ಅಸಮಾಧಾನ ತೋಡಿಕೊಂಡಿದ್ದಾರೆ. ತಾವಿಬ್ಬರೂ ತಮಿಳರಾದರೂ ತಾವು ಬ್ರಾಹ್ಮಣ ಮತ್ತು ತಾನು ದಲಿತೆ. ತಮಗೆ ಜಾತಿ ತಾರತಮ್ಯತೆ ನೀಗಿಸಲು ಇದ್ದ ಅವಕಾಶವನ್ನು ಕೈಚೆಲ್ಲಿದ್ದೀರಿ ಎಂದು ಅಂಬೇಡ್ಕರ್ ವಾದಿಯೂ ಆಗಿರುವ ತೇನ್‌ಮೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದೂವರೆ ತಿಂಗಳ ಹಿಂದಿನ ಬೆಳವಣಿಗೆ
ಇದು ನಿನ್ನೆ ಮೊನ್ನೆ ನಡೆದ ಬೆಳವಣಿಗೆಯಲ್ಲ. ಏಪ್ರಿಲ್ 18ರಂದು ತೇನ್‌ಮೊಳಿ ಅವರು ಗೂಗಲ್‌ನ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡುವ ಸಂವಾದ ಕಾರ್ಯಕ್ರಮ ಇತ್ತು. ಗೂಗಲ್‌ನ ವೈವಿಧ್ಯತೆ, ಸಮಾನತೆ ಮತ್ತು ಒಳಗೊಳ್ಳುವಿಕೆ (DEI- Diversity Equity Inclusion) ಯೋಜನೆಯ ಭಾಗವಾಗಿ ಕಾರ್ಯಕ್ರಮ ನಡೆಸಲಾಗಿತ್ತು. ಆದರೆ, ಕಾರ್ಯಕ್ರಮ ರದ್ದಾಗುತ್ತಿದ್ದಂತೆಯೇ ಸೀನಿಯರ್ ಮ್ಯಾನೇಜರ್ ತನುಜಾ ಗುಪ್ತ ರಾಜೀನಾಮೆ ಕೊಟ್ಟರು. ಅದಾದ ಬಳಿಕ ಅವರು ಮೇ 4ರಂದು ಯೂಟ್ಯೂಬ್‌ನಲ್ಲಿ ತೇನ್‌ಮೊಳಿಯವರ ಸಂದರ್ಶನ ನಡೆಸುವ ಮೂಲಕ ಗೂಗಲ್‌ಗೆ ಸೆಡ್ಡುಹೊಡೆದರು. ವಿಪರ್ಯಾಸ ಎಂದರೆ ಯೂಟ್ಯೂಬ್ ಕೂಡ ಗೂಗಲ್ ಮಾಲಕತ್ವದಲ್ಲಿರುವ ಅಂತರ್ಜಾಲ ತಾಣವಾಗಿದೆ.

ಟೀಕಿಸುವವರಿಗೆ ಅವಕಾಶ ಇಲ್ಲ
ಗೂಗಲ್ ಸಂಸ್ಥೆಗೆ ರಾಜೀನಾಮೆ ಕೊಟ್ಟ ಬಳಿಕ ತನುಜಾ ಗುಪ್ತಾ ಕೆಲವೊಂದಿಷ್ಟು ಕಹಿ ವಿಚಾರಗಳನ್ನು ಹೊರಗೆಡವಿದ್ದಾರೆ. ಗೂಗಲ್ ಸಂಸ್ಥೆಯೊಳಗೆ ಆಂತರಿಕವಾಗಿ ವ್ಯಕ್ತವಾಗುವ ಟೀಕೆಗಳನ್ನು ಸಹಿಸಿಕೊಳ್ಳುವ ಗುಣವೇ ಇಲ್ಲವಾಗಿದೆ. ಟೀಕಿಸುವ ಉದ್ಯೋಗಿಗಳನ್ನು, ಅದರಲ್ಲೂ ಮಹಿಳಾ ಉದ್ಯೋಗಿಗಳನ್ನು ಬೆದರಿಸುವ ಪ್ರವೃತ್ತಿ ಇದೆ ಎಂದು ತನುಜಾ ಗುಪ್ತಾ ಹೇಳುತ್ತಾರೆ.

ಕಾರ್ಮಿಕರ ಒಕ್ಕೂಟ ಆಕ್ರೋಶ
ಸಂಸ್ಥೆಯೊಳಗಿನ ಜಾತಿ ತಾರತಮ್ಯತೆ ಬಗ್ಗೆ ಮಾತನಾಡಬೇಕಿದ್ದ ತೇನ್‌ಮೊಳಿ ಸೌಂದರರಾಜನ್ ಅವರ ಕಾರ್ಯಕ್ರಮವನ್ನು ರದ್ದು ಮಾಡಿದ ಘಟನೆಯನ್ನು ಆಲ್ಫಬೆಟ್ ವರ್ಕರ್ಸ್ ಯೂನಿಯನ್ ಬಲವಾಗಿ ಖಂಡಿಸಿದೆ. ಗೂಗಲ್‌ನೊಳಗಿರುವ ಹಿಂದೂ ಪರ ಗುಂಪುಗಳ ಚಿತಾವಣೆ ಇದು ಎಂದು ಈ ಸಂಘಟನೆಯ ಆರೋಪಿಸಿದೆ. ತೇನ್‌ಮೊಳಿ 'ಹಿಂದೂ ಫೋಬಿಕ್', 'ಹಿಂದೂ ವಿರೋಧಿ' ಎಂಬಿತ್ಯಾದಿ ಹಣೆಪಟ್ಟಿ ಕಟ್ಟಿ ಆಂತರಿಕವಾಗಿ ಅಸಂಖ್ಯಾತ ಇಮೇಲೆ ಸಂದೇಶಗಳನ್ನು ಹರಿದಾಡಿಸಲಾಗಿತ್ತು ಎಂದು ಹೇಳಿರುವ ಆಲ್ಫಾಬೆಟ್ ಉದ್ಯೋಗಿಗಳ ಒಕ್ಕೂಟವು, ತೇನ್‌ಮೊಳಿಯವರ ಕಾರ್ಯಕ್ರಮವನ್ನು ಮತ್ತೆ ನಿಗದಿ ಮಾಡುವಂತೆ ಗೂಗಲ್‌ಗೆ ಆಗ್ರಹಿಸಿದೆ. ಅಷ್ಟೇ ಅಲ್ಲ, ಇನ್ನೂ ಹೆಚ್ಚು ದಲಿತ ಮತ್ತು ತುಳಿತಕ್ಕೊಳಗಾದ ಸಮುದಾಯಗಳಿಗೆ ಸೇರಿದ ಭಾಷಣಕಾರರನ್ನು ಕರೆಸಿ ಕಾರ್ಯಕ್ರಮ ಆಯೋಜಿಸಬೇಕೆಂದೂ ಒತ್ತಾಯಿಸಿದೆ. ಆಲ್ಫಬೆಟ್ ಎಂಬುದು ಗೂಗಲ್‌ನ ಮಾತೃ ಸಂಸ್ಥೆಯಾಗಿದೆ.

ಗೂಗಲ್ ಸಿಇಒ ಹೆಸರು
ತೇನ್‌ಮೊಳಿ ಸೌಂದರರಾಜನ್ ಅವರ ಕಾರ್ಯಕ್ರಮ ರದ್ದು ಮಾಡಿದ ಗೂಗಲ್ ಕ್ರಮಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಹಲವರಿಂದ ಆಕ್ರೋಶ ವ್ಯಕ್ತವಾಗಿದೆ. ಗೂಗಲ್ ಸಂಸ್ಥೆಯ ಉದ್ಯೋಗಿಗಳ ಮಧ್ಯೆ ಇದೆ ಎನ್ನಲಾದ ಜಾತಿ ತಾರತಮ್ಯ ವಿಚಾರವಾಗಿ ಮಾತನಾಡಲು ತೇನ್‌ಮೊಳಿಗೆ ಅವರಿಗೆ ಅವಕಾಶ ನಿರಾಕರಣೆ ಮಾಡುವ ಮೂಲಕ ಗೂಗಲ್ ಜಾತಿವಾದಿ ಎನಿಸಿದೆ ಎಂದು ಹಲವು ಟೀಕಿಸಿದ್ದಾರೆ.
ಗೂಗಲ್ ಮತ್ತು ಆಲ್ಫಾಬೆಟ್‌ನ ಸಿಇಒ ಸುಂದರ್ ಪಿಚೈ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾದ್ದರಿಂದ ಗೂಗಲ್ ಜಾತಿ ವಿಷ ಇಟ್ಟುಕೊಂಡಿದೆ ಎಂದು ಕೆಲವರು ನಿಂದಿಸಿದ್ದಾರೆ.
ಗೂಗಲ್‌ನಲ್ಲಿ ತಮ್ಮ ಕಾರ್ಯಕ್ರಮ ಕಾರ್ಯಕ್ರಮ ರದ್ದಾದ ಬಳಿಕ ತೇನ್‌ಮೊಳಿ ಸೌಂದರರಾಜನ್ ಅವರು ಗೂಗಲ್ ಸಿಇಒ ಸುಂದರ್ ಪಿಚೈಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದರು. "ಗೂಗಲ್ ಸಂಸ್ಥೆ ತನ್ನ ಉದ್ಯೋಗಿಗಳ ಮೇಲೆ ಮತ್ತು ನನ್ನ ಮೇಲೆ ತೆಗೆದುಕೊಳ್ಳಲಾಗುತ್ತಿರುವ ಕ್ರಮ ಎಷ್ಟು ಯಾತನೆ ಸೃಷ್ಟಿಸುತ್ತದೆ ಎಂದು ಪದಗಳಲ್ಲಿ ಹೇಳಲು ಸಾಧ್ಯವಾಗುತ್ತಿಲ್ಲ. ಜಾತಿ ಸಮಾನತೆ ಬಗ್ಗೆ ಇದ್ದ ಚರ್ಚಾ ಕಾರ್ಯಕ್ರಮವನ್ನು ಸಂಸ್ಥೆ ಅಕ್ರಮವಾಗಿ ರದ್ದು ಮಾಡಿದೆ. ಗೂಗಲ್ ಮೊದಲು ತನ್ನ ಉದ್ಯೋಗಿಗಳ ಮಧ್ಯೆ ಇರುವ ಜಾತೀಯತೆಯ ಸಮಸ್ಯೆಯನ್ನು ಬಗೆಹರಿಸಬೇಕು" ಎಂದು ತೇನ್‌ಮೊಳಿ ತಮ್ಮ ಪತ್ರದಲ್ಲಿ ಬರೆದಿದ್ದರು.

ಗೂಗಲ್ ಹೇಳುವುದೇನು?
ತೇನ್‌ಮೊಳಿ ಕಾರ್ಯಕ್ರಮ ರದ್ದು ಮಾಡಿದ ವಿಚಾರದ ಬಗ್ಗೆ ಮಾತನಾಡಿದ ಗೂಗಲ್ ಸಂಸ್ಥೆಯ ವಕ್ತಾರೆ ಶಾನೋನ್ ನ್ಯೂಬೆರಿ, "ನಮ್ಮ ಉದ್ಯೋಗಸ್ಥಳದಲ್ಲಿ ಯಾವುದೇ ಜಾತಿ ತಾರತಮ್ಯ ಇಲ್ಲ. ತಾರತಮ್ಯ, ಸೇಡಿನ ಕ್ರಮ ಬಗ್ಗೆ ನಮ್ಮಲ್ಲಿ ಸ್ಪಷ್ಟ ನೀತಿ ಇದೆ. ನಮ್ಮ ಸಮುದಾಯವನ್ನು ಒಗ್ಗೂಡಿಸಿ ಜಾಗೃತಿ ಮೂಡಿಸುವ ಬದಲು ಪರಸ್ಪರ ಹಗೆತನ ಉತ್ತೇಜಿಸಬಹುದು ಎಂದು ಆ ಕಾರ್ಯಕ್ರಮವನ್ನು ಆಯೋಜಿಸದೇ ಇರಲು ನಿರ್ಧರಿಸಿದೆವು" ಎಂದು ಶಾನೋನ್ ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ) (ಒನ್ಇಂಡಿಯಾ ಸುದ್ದಿ)
Recommended Video
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications