ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಲ್‌ಬಾಗ್ ಮಾದರಿಯಲ್ಲಿ ಲಿಂಗಾಂಬುಧಿ ಕೆರೆ ಆವರಣದಲ್ಲಿ ಬೊಟಾನಿಕಲ್ ಗಾರ್ಡನ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರಿಗೆ ಮತ್ತೊಂದು ಪ್ರೇಕ್ಷಣೀಯ ಸ್ಥಳ ಸೇರ್ಪಡೆಗೊಳ್ಳುತ್ತಿದ್ದು, ರಾಮಕೃಷ್ಣನಗರ ಎಚ್. ಬ್ಲಾಕ್‌ನಲ್ಲಿರುವ ಲಿಂಗಾಂಬುಧಿ ಕೆರೆದಂಡೆಯಲ್ಲಿನ ಸಸ್ಯವನ (ಬೊಟಾನಿಕಲ್ ಗಾರ್ಡನ್) ಉದ್ಘಾಟನೆಗೆ ಸಜ್ಜಾಗಿದೆ. ಬೆಂಗಳೂರಿನ ಲಾಲ್‌ಬಾಗ್, ತುಮಕೂರು ಹಾಗೂ ಊಟಿ ಮಾದರಿಯಲ್ಲಿ ಈ ಉದ್ಯಾನ ನಿರ್ಮಿಸಲಾಗಿದೆ.

ಇತಿಹಾಸದ ಪ್ರಕಾರ, ಈ ಕೆರೆಯನ್ನು ಮಹಾರಾಣಿ ಕೃಷ್ಣ ವಿಲಾಸ ಲಿಂಗಜಮ್ಮಣ್ಣಿಯ ಸವಿನೆನಪಿಗಾಗಿ 1828 ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರು ನಿರ್ಮಿಸಿದರು. ಇದು 250 ಎಕರೆ ವಿಸ್ತೀರ್ಣವನ್ನು ಹೊಂದಿದೆ, ಇದರಲ್ಲಿ ಲಿಂಗಾಂಬುಧಿ ಸರ್ವೇ ಸಂಖ್ಯೆ 23ರ ಅಡಿಯಲ್ಲಿ ಬರುವ 51.3 ಎಕರೆ, ದಟ್ಟಗಳ್ಳಿ ಸರ್ವೆ ಸಂಖ್ಯೆ 82 ರ ಅಡಿಯಲ್ಲಿ ಬರುವ 136.11 ಎಕರೆ ಮತ್ತು ಅಯ್ಯಜ್ಜಯನಹುಂಡಿ ಸರ್ವೇ ಸಂಖ್ಯೆ 11ರ ಅಡಿಯಲ್ಲಿ ಬರುವ 28.23 ಎಕರೆ ಸೇರಿವೆ.

ಕರ್ನಾಟಕದಲ್ಲಿ 6, ಬೆಂಗಳೂರಲ್ಲಿ 4 ಸ್ಯಾಟ್‌ಲೈಟ್ ಪಟ್ಟಣ ನಿರ್ಮಾಣ: ಏನಿದು ಸ್ಯಾಟ್‌ಲೈಟ್ ಪಟ್ಟಣ?ಕರ್ನಾಟಕದಲ್ಲಿ 6, ಬೆಂಗಳೂರಲ್ಲಿ 4 ಸ್ಯಾಟ್‌ಲೈಟ್ ಪಟ್ಟಣ ನಿರ್ಮಾಣ: ಏನಿದು ಸ್ಯಾಟ್‌ಲೈಟ್ ಪಟ್ಟಣ?

ಲಿಂಗಾಂಬುಧಿ ಕೆರೆ ಆವರಣ 250 ಎಕರೆ ವಿಸ್ತೀರ್ಣ ಹೊಂದಿದ್ದು, ಇದರಲ್ಲಿ ಕೆರೆ 150 ಎಕರೆಯಲ್ಲಿ ನೀರಿನಿಂದ ಆವೃತವಾಗಿದ್ದರೆ, ಉಳಿದ 100 ಎಕರೆಯನ್ನು ಮೀಸಲು ಅರಣ್ಯ ಪ್ರದೇಶವೆಂದು ಘೋಷಿಸಲಾಗಿದೆ.

ಜಲಮೂಲಕ್ಕೆ ಹೊಸ ರೂಪ

ಜಲಮೂಲಕ್ಕೆ ಹೊಸ ರೂಪ

ಸುಂದರವಾದ ಬೊಟಾನಿಕಲ್ ಗಾರ್ಡನ್ ಈ ನೈಸರ್ಗಿಕ ಜಲಮೂಲಕ್ಕೆ ಮತ್ತಷ್ಟು ಮೆರುಗು ನೀಡುವ ಉದ್ದೇಶದಿಂದ, ತೋಟಗಾರಿಕೆ ಇಲಾಖೆ ಅರಣ್ಯ ಇಲಾಖೆಯಿಂದ ಹಸ್ತಾಂತರಿಸಲ್ಪಟ್ಟ 30 ಎಕರೆ ಪ್ರದೇಶದಲ್ಲಿ 15 ಎಕರೆಯಲ್ಲಿ ಮನಮೋಹಕ ಸಸ್ಯವನ ಅಭಿವೃದ್ಧಿಪಡಿಸಿದೆ. ಈ ನೈಸರ್ಗಿಕ ಜಲಮೂಲಕ್ಕೆ ಹೊಸ ರೂಪ ನೀಡುವ ಉದ್ದೇಶದಿಂದ ತೋಟಗಾರಿಕೆ ಇಲಾಖೆ ಸುಂದರವಾದ ತೋಟ ಅಭಿವೃದ್ಧಿಪಡಿಸಿದ್ದು , ಇದು ರಾಜ್ಯ ಮೂರನೇ ಅತಿ ದೊಡ್ಡ ಸಸ್ಯೋದ್ಯಾನವಾಗಲಿದೆ.

ಭಾರತ ಜೋಡೋ ಯಾತ್ರೆ ಟ್ರಕ್ ಕಂಟೈನರ್‌ನಲ್ಲಿ ರಾಹುಲ್ ಮನೆ! ಹೇಗಿದೆ ನೋಡಿ.ಭಾರತ ಜೋಡೋ ಯಾತ್ರೆ ಟ್ರಕ್ ಕಂಟೈನರ್‌ನಲ್ಲಿ ರಾಹುಲ್ ಮನೆ! ಹೇಗಿದೆ ನೋಡಿ.

 ಅಳಿವಿನಂಚಿನಲ್ಲಿರುವ ಗಿಡಗಳ ರಕ್ಷಣೆ

ಅಳಿವಿನಂಚಿನಲ್ಲಿರುವ ಗಿಡಗಳ ರಕ್ಷಣೆ

2011ರಲ್ಲಿ ಐದು ಹೊಸ ಬೊಟಾನಿಕಲ್ ಗಾರ್ಡನ್ ನಿರ್ಮಾಣಕ್ಕೆ ಸರಕಾರ ಅನುಮೋದನೆ ನೀಡಿತ್ತು. ಅದರಲ್ಲಿ ಲಿಂಗಾಂಬುಧಿ ಕೂಡ ಒಂದು. ಇಲ್ಲಿ ಅಳಿವಿನಂಚಿನಲ್ಲಿರುವ ಗಿಡ, ಮರಗಳನ್ನು ಸಂರಕ್ಷಿಸುವ ಉದ್ದೇಶ ಹೊಂದಲಾಗಿದೆ. ಅದಕ್ಕಾಗಿ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಗಿಡಗಳನ್ನು ತಂದು ಪೋಷಿಸಲಾಗುತ್ತಿದೆ. ಜತೆಗೆ ಔಷಧ ಸಸ್ಯಗಳು, ಹೂವಿನ ಗಿಡಗಳು ಹಾಗೂ ಹೊಂಗೆ, ಮಾವು, ಬಗನಿ, ಬಿಲ್ವಪತ್ರೆ, ನಾಗಸಂಪಿಗೆ, ನಂದಿಮರ, ಸಂಪಿಗೆ, ಸಾಗವಾನಿ, ಸುರಹೊನ್ನೆ, ಹಲಸು, ಶ್ರೀಗಂಧ, ರಾಮಪತ್ರೆ, ರುದ್ರಾಕ್ಷಿ, ಬೇವು, ಬೆಟ್ಟನೆಲ್ಲಿ, ಗುಲ್‌ಮೊಹರ್, ದೇವದಾರಿ, ನಂದಿ ಸೇರಿದಂತೆ ದೇಶ, ವಿದೇಶಗಳ ಗಿಡ, ಮರಗಳು ಇಲ್ಲಿವೆ.

ಮುಖ್ಯಮಂತ್ರಿಗಳಿಂದ ಉದ್ಘಾಟನೆ

ಮುಖ್ಯಮಂತ್ರಿಗಳಿಂದ ಉದ್ಘಾಟನೆ

ಲಾಲ್‌ಬಾಗ್‌ ಮಾದರಿಯಲ್ಲೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಟಾನಿಕಲ್‌ ಗಾರ್ಡನ್‌ ನಿರ್ಮಾಣವಾಗಿದೆ. ಈ ಬೊಟಾನಿಕಲ್ ಗಾರ್ಡನ್‌ನ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಅಂತಿಮ ಹಂತದ ಸಿದ್ಧತೆ ನಡೆಸಲಾಗುತ್ತಿದೆ. ಈ ದಸರೆಗೆ ಸಸ್ಯೋದ್ಯಾನವನ್ನು ಮುಖ್ಯಮಂತ್ರಿ ಅವರಿಂದ ಉದ್ಘಾಟಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕೆ.ರುದ್ರೇಶ್ ತಿಳಿಸಿದ್ದಾರೆ.

25ಕ್ಕೂ ಹೆಚ್ಚು ಜಾತಿಯ ಫಿಕಸ್ ಮರ

25ಕ್ಕೂ ಹೆಚ್ಚು ಜಾತಿಯ ಫಿಕಸ್ ಮರ

ಔಷಧೀಯ ಮತ್ತು ಸುಗಂಧ ಸಸ್ಯ ಉದ್ಯಾನ, ಗುಲಾಬಿ, ಟೋಪಿಯರಿ, ಚಿಟ್ಟೆ ಉದ್ಯಾನ, ಬಿದಿರಿನ ಬ್ಲಾಕ್, ಕಾಡಿನ ಬಂಡೆಗಳಿಂದ ನಿರ್ಮಿಸಿದ ರಾಕರಿ, ಆರ್ಬೊರೇಟಮ್ಸ್‌ , ಪಾಲ್ಮಾಟಮ್, ಹಣ್ಣಿನ ಮರಗಳ ಉದ್ಯಾನ, ಪಕ್ಷಿಗಳನ್ನು ಆಕರ್ಷಿಸಲು ಕೊಳಗಳು ಇದರಲ್ಲಿ ಸೇರಿವೆ. ಇದಲ್ಲದೆ 25ಕ್ಕೂ ಹೆಚ್ಚು ಜಾತಿಯ ಫಿಕಸ್ ಮರಗಳನ್ನು ಹೊಂದಿದ್ದು , ತೋಟದ ಉದ್ದಕ್ಕೂ ಹರಡಿರುವ ಫಿಕಸ್ ಮರಗಳು, ಬಳ್ಳಿಗಳು, ಶೋವಿ ಸಿಲ್ಕ್ ಕಾಟನ್ ಟ್ರೀ, ಆಫ್ರಿಕನ್ ಲೋಕಸ್ಟ್ ಬೀನ್, ಟ್ರೀ ಆ್ ಸ್ಯಾಡ್‌ನೆಸ್, ಒಂಟಿ ಫಿಶ್‌ಟೈಲ್ ಪಾಮ್, ಕೃಷ್ಣ ಫಿಗ್, ವುಡಾ ಆಪಲ್, ಬರ್ಪ್ಲವರ್ ಟ್ರೀ , ಅಶ್ವತ್ಥ ಮರ, ಜಾಕ್‌ರೂಟ್ ಟ್ರೀಘಿ, ಅಂಬ್ರೆಲಾ ಟ್ರೀ , ಜಾಮೂನ್ ಮರ, ಮೈಸೂರು ಅಂಜೂರ ಇತ್ಯಾದಿಗಳು ಇಡೀ ಸಸ್ಯೋದ್ಯಾನಕ್ಕೆ ವಿಶೇಷ ಸೌಂದರ್ಯ ಕಲ್ಪಿಸಿವೆ.

English summary
Karnataka's second Botanical Garden is set to inauguration in the Lingambudhi Lake in the second stage of Srirampura in Ramakrishna Nagar, Mysuru during dasara 2022 event by Chief Minister Basavaraj Bommai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X