Karnataka election 2023; ಬೆಂಗಳೂರು ದಕ್ಷಿಣದ ಟಿಕೆಟ್ ಆಕಾಂಕ್ಷಿಗಳು

ಉದ್ಯಾನ ನಗರಿ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳನ್ನು ತನ್ನ ಒಡಲಲ್ಲಿ ಹೊಂದಿದೆ ದಕ್ಷಿಣ ಲೋಕಸಭಾ ಕ್ಷೇತ್ರ. ಈ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 7 ವಿಧಾನಸಭಾ ಕ್ಷೇತ್ರಗಳಿವೆ. ಬಹುತೇಕ ನಗರ ಪ್ರದೇಶವನ್ನೇ ಒಳಗೊಂಡಿರುವ ಕ್ಷೇತ್ರದಲ್ಲಿ ಸಮಸ್ಯೆಗಳಿಗೇನು ಕಡಿಮೆ ಇಲ್ಲ.

ಒಟ್ಟು 7 ವಿಧಾನಸಭಾ ಕ್ಷೇತ್ರಗಳ ಪೈಕಿ 4ರಲ್ಲಿ ಬಿಜೆಪಿ ಮತ್ತು 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿದ್ದಾರೆ. ಯಾವುದೇ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರು ಇಲ್ಲ. ಮುಂದಿನ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಪಕ್ಷದ ಶಾಸಕರು ಆಯ್ಕೆಯಾಗಬೇಕು ಎಂದು ಪಕ್ಷ ಈಗಾಗಲೇ ತಂತ್ರ ರೂಪಿಸಿದೆ.

ಮಕರ ಸಂಕ್ರಾಂತಿ ವಿಶೇಷ ಪುಟ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಗೋವಿಂದರಾಜನಗರ ಮತ್ತು ಪದ್ಮನಾಭನಗರ ವಿಧಾನಸಭಾ ಕ್ಷೇತ್ರಗಳು ಸಹ ಒಳಪಡುತ್ತವೆ. ಈ ಎರಡೂ ಕ್ಷೇತ್ರಗಳ ಬಿಜೆಪಿ ಶಾಸಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವರು. ಅಷ್ಟೇ ಅಲ್ಲದೇ ನಗರದ ರಾಜಕೀಯದ ಮೇಲೆ ತಮ್ಮದೇ ಆದ ಪ್ರಭಾವವನ್ನು ಹೊಂದಿದ್ದಾರೆ.

ಕ್ಷೇತ್ರದ ಹಾಲಿ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರ ಪೈಕಿ ಮತ್ತೆ ಯಾರಿಗೆ ಟಿಕೆಟ್ ಸಿಗಲಿದೆ?, ಯಾರಿಗೆ ಟಿಕೆಟ್ ಕೈತಪ್ಪಲಿದೆ? ಎಂಬುದನ್ನು ಎರಡೂ ರಾಷ್ಟ್ರೀಯ ಪಕ್ಷಗಳ ಹೈಕಮಾಂಡ್ ನಾಯಕರೇ ಹೇಳಬೇಕು. ಯಾವ ಶಾಸಕರಿಗೂ ಟಿಕೆಟ್ ಇಲ್ಲ ಎಂದು ಹೇಳುವಷ್ಟು ಪ್ರಭಾವವನ್ನು ಅವರು ಹೊಂದಿದ್ದಾರೆ. ಆದರೆ ಹೊಸಬರಿಗೆ ಮಣೆ ಹಾಕಿದರೆ ಲೆಕ್ಕಾಚಾರ ಬದಲಾಗಬಹುದು... ಮೂರು ಪ್ರಮುಖ ಪಕ್ಷಗಳ ಶಾಸಕರು, ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹೀಗಿದೆ ನೋಡಿ.....

ಗೋವಿಂದರಾಜನಗರ; ವಿ. ಸೋಮಣ್ಣ

ಗೋವಿಂದರಾಜನಗರ; ವಿ. ಸೋಮಣ್ಣ

ಗೋವಿಂದರಾಜನಗರದ ಶಾಸಕರು ಬಿಜೆಪಿಯ ವಿ. ಸೋಮಣ್ಣ. ಬಿಜೆಪಿಯ ಹಿರಿಯ ನಾಯಕ ರಾಜ್ಯ, ಬೆಂಗಳೂರು ರಾಜಕೀಯದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ವಸತಿ ಮತ್ತು ಮೂಲಕ ಸೌಕರ್ಯ ಖಾತೆ ಸಚಿವರು. ಮುಂದಿನ ಚುನಾವಣೆಗೆ ಸಹ ಟಿಕೆಟ್ ಆಕಾಂಕ್ಷಿ. ಟಿಕೆಟ್ ನಿರಾಕರಿಸಲು ಯಾವುದೇ ಕಾರಣವೂ ಇಲ್ಲ. ಕಳೆದ ವಾರ ಕೇಂದ್ರ ಸಹಕಾರ ಸಚಿವ, ಬಿಜೆಪಿ ಪ್ರಭಾವಿ ನಾಯಕ ಅಮಿತ್ ಶಾ ಸೋಮಣ್ಣ ಮನೆಗೆ ಭೇಟಿ ನೀಡಿದ್ದರು.

ಕಾಂಗ್ರೆಸ್‌ನಿಂದ ಯುವ ನಾಯಕ ಪ್ರಿಯ ಕೃಷ್ಣ ಟಿಕೆಟ್ ಆಕಾಂಕ್ಷಿ. ಕ್ಷೇತ್ರದಲ್ಲಿ 2013ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಅವರು 2018ರ ಚುನಾವಣೆಯಲ್ಲಿ ವಿ. ಸೋಮಣ್ಣ ವಿರುದ್ಧ ಸೋಲು ಕಂಡಿದ್ದರು. ಮುಂದಿನ ಚುನಾವಣೆಯಲ್ಲಿಯೂ ಕಾಂಗ್ರೆಸ್ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ.

ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ಅಧಿಕವಾಗಿದೆ. ಜೆಡಿಎಸ್‌ ಪ್ರಭಾವ ಅಷ್ಟಕಷ್ಟೇ. ಪಕ್ಷ ಯಾರಿಗೆ ಟಿಕೆಟ್ ನೀಡಲಿದೆ ಎಂಬುದು ಇನ್ನೂ ಗುಟ್ಟಾಗಿಯೇ ಉಳಿದಿದೆ. ಆಮ್‌ ಆದ್ಮಿ ಪಕ್ಷ ಸಹ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.

ಮತದಾರರು; ಕಳೆದ ಚುನಾವಣೆಯ ಮಾಹಿತಿಯಂತೆ ಕ್ಷೇತ್ರದ ಮತದಾರರು 2,88,251. 1,50,961 ಪುರುಷರು, 1,37,233 ಮಹಿಳಾ ಮತದಾರರು. 54 ಇತರರು.

ವಿಜಯನಗರ ಎಂ. ಕೃಷ್ಣಪ್ಪ (ಕಾಂಗ್ರೆಸ್)

ವಿಜಯನಗರ ಎಂ. ಕೃಷ್ಣಪ್ಪ (ಕಾಂಗ್ರೆಸ್)

ಬೆಂಗಳೂರು ನಗರದ ವಿಜಯನಗರ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಹೇಳಬಹುದು. ಪ್ರತಿ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಬೇರೆ-ಬೇರೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತದೆ. ಇದರಿಂದಾಗಿ ಕಾಂಗ್ರೆಸ್‌ನ ಎಂ. ಕೃಷ್ಣಪ್ಪ ಗೆಲುವು ಸಾಧಿಸುತ್ತಿದ್ದಾರೆ. 2018ರ ಚುನಾವಣೆಯಲ್ಲಿಯೂ ಎಂ. ಕೃಷ್ಣಪ್ಪ ಜಯಗಳಿಸುವ ಮೂಲಕ ಹ್ಯಾಟ್ರಿಕ್ ಬಾರಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿಯೂ ಅವರಿಗೆ ಟಿಕೆಟ್ ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ.

ಬಿಜೆಪಿ ಕಳೆದ ಚುನಾವಣೆಯಲ್ಲಿ ಮಾಜಿ ಬಿಬಿಎಂಪಿ ಸದಸ್ಯ ಹೆಚ್. ರವೀಂದ್ರಗೆ ಟಿಕೆಟ್ ನೀಡಿತ್ತು. 70,353 ಮತಗಳನ್ನು ಪಡೆದು ಅವರು ಸೋಲು ಅನುಭವಿಸಿದರು. ಈ ಬಾರಿ ಯಾರಿಗೆ ಟಿಕೆಟ್ ನೀಡಲಾಗುತ್ತದೆ ಎಂಬುದು ಬಹಿರಂಗವಾಗಿಲ್ಲ.

ಜೆಡಿಎಸ್ ಸಹ ಈ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿಲ್ಲ. ಪರಮಶಿವಯ್ಯ ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿದ್ದರು. ಪಡೆದ ಮತಗಳು ಕೇವಲ 8,174.

ಮತದಾರರ ವಿವರ; ವಿಜಯನಗರ ಕ್ಷೇತ್ರದ ಒಟ್ಟು ಮತದಾರರು 3,05,392. ಪುರುಷರು 1,60,151 ಮತ್ತು ಮಹಿಳೆಯರು 1,45,099, ಇತರರು 136.

ಬಸವನಗುಡಿ; ಬಿಜೆಪಿ ರವಿ ಸುಬ್ರಮಣ್ಯ

ಬಸವನಗುಡಿ; ಬಿಜೆಪಿ ರವಿ ಸುಬ್ರಮಣ್ಯ

ಬಸವನಗುಡಿ ಕ್ಷೇತ್ರದ ಹಾಲಿ ಶಾಸಕರು ಬಿಜೆಪಿಯ ರವಿ ಸುಬ್ರಮಣ್ಯ. ಮುಂದಿನ ಚುನಾವಣೆಯಲ್ಲಿಯೂ ಅವರಿಗೆ ಟಿಕೆಟ್ ಸಿಗುವ ನಿರೀಕ್ಷೆ ಇದೆ. ಬಿಬಿಎಂಪಿ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಹೆಸರು ಸಹ ಬಿಜೆಪಿ ಟಿಕೆಟ್‌ಗೆ ಕಳೆದ ಬಾರಿ ಕೇಳಿ ಬಂದಿತ್ತು. ಈ ಬಾರಿ ಹೊಸ ಮುಖಗಳಿಗೆ ಅವಕಾಶ ನೀಡಿದರೂ ಅಚ್ಚರಿ ಇಲ್ಲ.

ಕಾಂಗ್ರೆಸ್‌ನಿಂದ ವಿಧಾನ ಪರಿಷತ್ ಸದಸ್ಯ ಯು. ಬಿ. ವೆಂಕಟೇಶ್ ಟಿಕೆಟ್ ಆಕಾಂಕ್ಷಿ. ಕ್ಷೇತ್ರದ ಸಮಾರಂಭದಲ್ಲಿ ಭಾಗವಹಿಸುವುದು, ಪಾರ್ಕ್‌ನಲ್ಲಿ ವಾಯುವಿಹಾರಿಗಳನ್ನು ಭೇಟಿ ಮಾಡುವುದು ಸೇರಿದಂತೆ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಎಂ. ಬೊರೇಗೌಡ ಅಭ್ಯರ್ಥಿಯಾಗಿದ್ದರು, ಕೇವಲ 11767 ಮತ ಪಡೆದಿದ್ದರು.

ಜೆಡಿಎಸ್‌ ಪಕ್ಷದಿಂದ ಈ ಬಾರಿ ಅರಮನೆ ಶಂಕರ್ ಟಿಕೆಟ್ ಆಕಾಂಕ್ಷಿ. ಕಳೆದ ಚುನಾವಣೆಯಲ್ಲಿ ಕೆ. ಬಾಗೇಗೌಡ ಅಭ್ಯರ್ಥಿಯಾಗಿದ್ದರು. 38,009 ಮತಗಳನ್ನು ಪಡೆದಿದ್ದರು.

ಬಸವನಗುಡಿ ಕ್ಷೇತ್ರದ ಮತದಾರರು ಸುಮಾರು 2,38,617. ಇವರಲ್ಲಿ1,22,455 ಪುರುಷ, 1,16,135 ಮಹಿಳಾ ಮತ್ತು 24 ಇತರ ಮತದಾರರು ಸೇರಿದ್ದಾರೆ.

ಪದ್ಮನಾಭನಗರ; ಬಿಜೆಪಿಯ ಆರ್.‌ ಅಶೋಕ

ಪದ್ಮನಾಭನಗರ; ಬಿಜೆಪಿಯ ಆರ್.‌ ಅಶೋಕ

ಪದ್ಮನಾಭನನಗರ ಕ್ಷೇತ್ರದ ಹಾಲಿ ಶಾಸಕರು ಬಿಜೆಪಿಯ ಆರ್. ಅಶೋಕ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಕಂದಾಯ ಸಚಿವರು. ಮುಂದಿನ ಚುನಾವಣೆಯಲ್ಲಿ ಟಿಕೆಟ್ ನಿರಾಕರಣೆ ಮಾಡಲು ಕಾರಣಗಳೇ ಇಲ್ಲ. ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ. ರಾಜ್ಯ ಮತ್ತು ಬೆಂಗಳೂರು ನಗರದ ರಾಜಕೀಯದಲ್ಲಿಯೂ ಸಾಕಷ್ಟು ಹಿಡಿತ ಹೊಂದಿದ್ದಾರೆ.

ಕಳೆದ ಬಾರಿ ಕಾಂಗ್ರೆಸ್‌ನಿಂದ ಎಂ. ಶ್ರೀನಿವಾಸ್ ಕಣಕ್ಕಿಳಿದಿದ್ದರು. 33,400 ಮತಗಳನ್ನು ಪಡೆದು 3ನೇ ಸ್ಥಾನ ಪಡೆದಿದ್ದರು. ಈ ಬಾರಿ ಅಭ್ಯರ್ಥಿ ಬದಲಾಗುವ ನಿರೀಕ್ಷೆ ಇದೆ. ಆದರೆ ಯಾರಿಗೆ ಟಿಕೆಟ್ ಸಿಗಲಿದೆ? ಎಂಬುದು ಕುತೂಹಲ ಮೂಡಿಸಿದೆ.

ಜೆಡಿಎಸ್‌ನಿಂದ ಕಳೆದ ಬಾರಿ ವಿ. ಕೆ. ಗೋಪಾಲ್ ಅಭ್ಯರ್ಥಿಯಾಗಿದ್ದರು. 45,702 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದಿದ್ದರು. ಜೆಡಿಎಸ್‌ ಟಿಕೆಟ್‌ಗೆ ಹೆಚ್ಚಿನ ಪೈಪೋಟಿ ಇಲ್ಲ.

ಪದ್ಮನಾಭನಗರ ಕ್ಷೇತ್ರದ ಒಟ್ಟು ಮತದಾರರು 2,67,869. ಪುರುಷರು 1,37,870 ಮತ್ತು ಮಹಿಳೆಯರು 1,29,982, ಇತರರು 13.

ಬಿಟಿಎಂ ಲೇಔಟ್; ರಾಮಲಿಂಗಾ ರೆಡ್ಡಿ (ಕಾಂಗ್ರೆಸ್)

ಬಿಟಿಎಂ ಲೇಔಟ್; ರಾಮಲಿಂಗಾ ರೆಡ್ಡಿ (ಕಾಂಗ್ರೆಸ್)

ಬಿಟಿಎಂ ಲೇಔಟ್ ಕ್ಷೇತ್ರದ ಹಾಲಿ ಶಾಸಕರು ಮಾಜಿ ಸಚಿವ, ಕಾಂಗ್ರೆಸ್‌ನ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ. ಕ್ಷೇತ್ರದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದಾರೆ. ಮುಂದಿನ ಚುನಾವಣೆಯಲ್ಲಿಯೂ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬುದು ಖಚಿತ.

ಬಿಜೆಪಿ ಕಳೆದ ಬಾರಿ ಲಲ್ಲೇಶ್ ರೆಡ್ಡಿಯನ್ನು ಅಭ್ಯರ್ಥಿ ಮಾಡಿತ್ತು. 46,607 ಮತಗಳನ್ನು ಪಡೆದು ಸೋಲು ಕಂಡಿದ್ದರು. ಈ ಬಾರಿಯ ಟಿಕೆಟ್‌ಗಾಗಿ ಕೆ. ಆರ್. ಶ್ರೀಧರ್‌ ರೆಡ್ಡಿ ಪ್ರಯತ್ನ ಪಡುತ್ತಿದ್ದಾರೆ. ಕ್ಷೇತ್ರದಲ್ಲಿ ಸಂಚಾರ ನಡೆಸುತ್ತಿದ್ದಾರೆ.

ಕಳೆದ ಬಾರಿ ಜೆಡಿಎಸ್‌ನಿಂದ ಕೆ. ದೇವದಾಸ್ ಅಭ್ಯರ್ಥಿಯಾಗಿದ್ದರು. 17,307 ಮತಗಳನ್ನು ಪಡೆದಿದ್ದರು. ಕ್ಷೇತ್ರದಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ನೇರ ಪೈಪೋಟಿ ಇದೆ. ಜೆಡಿಎಸ್‌ ಪ್ರಭಾವ ಕಡಿಮೆ ಇದೆ.

ಬಿಟಿಎಂ ಕ್ಷೇತ್ರದ ಒಟ್ಟು ಮತದಾರರು 2,63,860. ಇವರಲ್ಲಿ 1,39,086 ಪುರುಷ, 1,24,747 ಮಹಿಳೆಯರು ಮತ್ತು 20 ಇತರರು.

ಜಯನಗರ; ಸೌಮ್ಯಾ ರೆಡ್ಡಿ (ಕಾಂಗ್ರೆಸ್)

ಜಯನಗರ; ಸೌಮ್ಯಾ ರೆಡ್ಡಿ (ಕಾಂಗ್ರೆಸ್)

ಜಯನಗರ ಕ್ಷೇತ್ರದ ಹಾಲಿ ಶಾಸಕಿ ಕಾಂಗ್ರೆಸ್‌ನ ಸೌಮ್ಯಾ ರೆಡ್ಡಿ. ರಾಮಲಿಂಗಾ ರೆಡ್ಡಿ ಪುತ್ರಿ. ಪಕ್ಷದ ಯುವ ನಾಯಕಿಗೆ ಈ ಬಾರಿಯೂ ಟಿಕೆಟ್ ಸಿಗುವುದರಲ್ಲಿ ಅನುಮಾನಗಳಿಲ್ಲ.

2018ರ ಚುನಾವಣೆಯಲ್ಲಿ ಬಿಜೆಪಿ ಬಿ. ಎನ್‌. ವಿಜಯಕುಮಾರ್‌ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ಆದರೆ ಚುನಾವಣಾ ಪ್ರಚಾರದ ವೇಳೆ ಅವರು ಹೃದಯಾಘಾತದಿಂದ ಮೃತಪಟ್ಟರು. ಬಳಿಕ ಬಿ. ಎನ್. ಪ್ರಹ್ಲಾದ್‌ರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಲಾಯಿತು. 51,568 ಮತಗಳನ್ನು ಪಡೆದು ಸೋಲು ಕಂಡರು.

ಈ ಬಾರಿ ಮಾಜಿ ಬಿಬಿಎಂಪಿ ಸದಸ್ಯರಾದ ಸಿ.ಕೆ.ರಾಮಮೂರ್ತಿ, ಎನ್. ಆರ್. ರಮೇಶ್ ಟಿಕೆಟ್ ಆಕಾಂಕ್ಷಿಗಳು. ಯಾರಿಗೆ ಟಿಕೆಟ್ ಸಿಗಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಜೆಡಿಎಸ್‌ ಕಾಳೇಗೌಡರು ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ಆದರೆ ಬಳಿಕ ಅವರು ಪ್ರಚಾರ ಸ್ಥಗಿತಗೊಳಿಸಿ ಕಾಂಗ್ರೆಸ್‌ನ ಸೌಮ್ಯಾ ರೆಡ್ಡಿ ಬೆಂಬಲಿಸಿದರು.

ಜಯನಗರ ಕ್ಷೇತ್ರದ ಒಟ್ಟು ಮತದಾರರು 2,03,184. ಪುರುಷರು 1,02,668 ಮತ್ತು ಮಹಿಳೆಯರು1,00,501.

ಬೊಮ್ಮನಹಳ್ಳಿ; ಬಿಜೆಪಿಯ ಸತೀಶ್ ರೆಡ್ಡಿ

ಬೊಮ್ಮನಹಳ್ಳಿ; ಬಿಜೆಪಿಯ ಸತೀಶ್ ರೆಡ್ಡಿ

ಬೊಮ್ಮನಹಳ್ಳಿ ಕ್ಷೇತ್ರದ ಶಾಸಕರು ಬಿಜೆಪಿಯ ಎಂ. ಸತೀಶ್ ರೆಡ್ಡಿ. ಈ ಬಾರಿಯ ಚುನಾವಣೆಯಲ್ಲಿಯೂ ಅವರು ಟಿಕೆಟ್ ಪಡೆಯುವುದು ಖಚಿತವಾಗಿದೆ. ಟಿಕೆಟ್ ನಿರಾಕರಣೆ ಮಾಡಲು ಕಾರಣಗಳು ಸಹ ಪಕ್ಷದ ಬಳಿ ಇಲ್ಲ.

ಕಾಂಗ್ರೆಸ್‌ನಿಂದ ಕಳೆದ ಬಾರಿ ಸುಷ್ಮಾ ರಾಜಗೋಪಾಲ್ ರೆಡ್ಡಿ ಕಣಕ್ಕಿಳಿದಿದ್ದರು. 64,701 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದಿದ್ದರು. ಈ ಬಾರಿ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಕ್ಷೇತ್ರದ ಟಿಕೆಟ್‌ಗೆ ಅರ್ಜಿ ಹಾಕಿದ್ದಾರೆ. ಇದರಿಂದಾಗಿ ಚುನಾವಣಾ ಕಣವೂ ರಂಗೇರಿದೆ.

ಜೆಡಿಎಸ್ ಕಳೆದ ಬಾರಿ ಟಿ. ಆರ್. ಪ್ರಸಾದ್ ಗೌಡ ಕಣಕ್ಕಿಳಿಸಿತ್ತು. ಪಡೆದಿದ್ದು ಕೇವಲ 9379 ಮತ. ಕ್ಷೇತ್ರದಲ್ಲಿ ಪಕ್ಷ ಪ್ರಭಾವ ಹೊಂದಿಲ್ಲ.

ಕ್ಷೇತ್ರದ ಒಟ್ಟು ಮತದಾರರು 4,05,039. ಪುರುಷರು 2,19,335 ಮಹಿಳೆಯರು 1,85,633 ಮತ್ತು ಇತರರು 69.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+