Karnataka Government; 2024ನೇ ಸಾಲಿನ ಜಯಂತಿಗಳ ಆಚರಣೆ; ದಿನಾಂಕ
ಕರ್ನಾಟಕದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರವೊಂದನ್ನು ಕಳಿಸಿದೆ. 2023-24ನೇ ಸಾಲಿನ ಜಯಂತಿಗಳನ್ನು ಆಚರಣೆ ಮಾಡುವ ಕುರಿತು ಇದರಲ್ಲಿ ದಿನಾಂಕಗಳನ್ನು ಪ್ರಕಟಿಸಲಾಗಿದೆ.
ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಈ ಪತ್ರವನ್ನು ಬರೆದಿದ್ದಾರೆ. ಕಚೇರಿ ಪತ್ರ ದಿನಾಂಕ 25/5/2023, ಸರ್ಕಾರದ ಆದೇಶ ದಿನಾಂಕ 18/09/2015ರ ಜಯಂತಿಗಳ ಆಚರಣೆಯ ಮಾರ್ಗಸೂಚಿಗಳನ್ನು ಉಲ್ಲೇಖ ಮಾಡಲಾಗಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ 2023-24ನೇ ಸಾಲಿನ ಆರ್ಥಿಕ ವರ್ಷದಲ್ಲಿ ಆಚರಿಸಬೇಕಾದ ಜಯಂತಿಗಳ ವಿವರಗಳನ್ನು ಕಳುಹಿಸಲಾಗಿತ್ತು. 2024ನೇ ಸಾಲಿನ ಕ್ಯಾಲೆಂಡರ್ ಇರದೇ ಇರುವುದರಿಂದ ಅದರಲ್ಲಿ ಕೆಲವು ಜಯಂತಿಗಳ ನಿಖರವಾದ ದಿನಾಂಕವನ್ನು ಗುರುತಿಸಲು ಸಾಧ್ಯವಾಗಿರುವುದಿಲ್ಲ.
ಪ್ರಸ್ತುತ 2024ನೇ ಸಾಲಿನ ಕ್ಯಾಲೆಂಡರ್ ಪರಿಶೀಲಿಸಿ 2024ನೇ ಸಾಲಿನ ಜನವರಿಯಿಂದ ಡಿಸೆಂಬರ್ ತಿಂಗಳಿನಲ್ಲಿ ಆಚರಿಸಬೇಕಾದ ಜಯಂತಿಗಳ ದಿನಾಂಕಗಳ ಪಟ್ಟಿಯನ್ನು ಈ ಪತ್ರದೊಂದಿಗೆ ಲಗತ್ತಿಸಿದ್ದು, ಸದರಿ ಜಯಂತಿಗಳನ್ನು ಮಾರ್ಗಸೂಚಿಯನ್ವಯ ಆಚರಣೆ ಮಾಡಬೇಕೆಂದು ತಿಳಿಸಲಾಗಿದೆ.
2024ನೇ ಸಾಲಿನ ಜಯಂತಿಗಳು | ||
| ಕ್ರ,ಸಂ | ಜಯಂತಿ | ದಿನಾಂಕ |
| 1 | ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ | 1/1/2024 |
| 2 | ಶಿವಯೋಗಿ ಸಿದ್ದರಾಮ ಜಯಂತಿ | 15/1/2024 |
| 3 | ಮಹಾಯೋಗಿ ವೇಮನ ಜಯಂತಿ | 19/1/2024 |
| 4 | ಅಂಬಿಗರ ಚೌಡಯ್ಯ ಜಯಂತಿ | 21/1/2024 |
| 5 | ಮಡಿವಾಳ ಮಾಚಿದೇವ ಜಯಂತಿ | 1/2/2024 |
| 6 | ಕಾಯಕ ಶರಣರ ಜಯಂತಿ | 10/2/2024 |
| 7 | ಶ್ರೀ ಸಂತ ಸೇವಾಲಾಲ್ ಜಯಂತಿ | 15/2/2024 |
| 8 | ಸವಿತಾ ಮಹರ್ಷಿ ಜಯಂತಿ | 16/2/2024 (ರಥ ಸಪ್ತಮಿ) |
| 9 | ಛತ್ರಪತಿ ಶಿವಾಜಿ ಜಯಂತಿ | 19/2/2024 |
| 10 | ಸಂತ ಕವಿ ಸರ್ವಜ್ಞ ಜಯಂತಿ | 20/2/2024 |
| 11 | ಶ್ರೀ ರೇಣುಕಾಚಾರ್ಯ ಜಯಂತಿ | 23/3/2024 |
| 12 | ಶ್ರೀ ಯೋಗಿನಾರೇಯಣ ಯತೀಂದ್ರರ ಜಯಂತಿ | 25/3/2024 |
| 13 | ಶ್ರೀ ಅಗ್ನಿಬನ್ನಿರಾಮ ಜಯಂತಿ | 28/3/2024 |
| 15 | ದೇವರ ದಾಸಿಮಯ್ಯ ಜಯಂತಿ | 13/4/2024 |
| 16 | ಭಗವಾನ್ ಮಹಾವೀರ ಜಯಂತಿ | 21/4/2024 |
| 17 | ಅಕ್ಕ ಮಹಾದೇವಿ ಜಯಂತಿ | 23/4/2024 |
| 18 | ಬಸವಜಯಂತಿ | 10/5/2024 |
| 19 | ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ | 10/5/2024 |
| 20 | ಶ್ರೀ ಶಂಕರಾಚಾರ್ಯ ಜಯಂತಿ | 12/5/2024 |
| 21 | ಶ್ರೀ ಭಗೀರಥ ಜಯಂತಿ | 30/5/2024 |
| 22 | ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ | 4/6/2024 |
| 23 | ಶ್ರೀ ಕೆಂಪೇಗೌಡ ಜಯಂತಿ | 27/6/2024 |
| 24 | ಡಾ. ಫ. ಗು. ಹಳಕಟ್ಟಿಯವರ ಜನ್ಮದಿನ | 2/7/2024 |
| 25 | ಹಡಪದ ಅಪ್ಪಣ್ಣ ಜಯಂತಿ | 21/7/2024 |
| 26 | ನುಲಿಯ ಚಂದಯ್ಯ ಜಯಂತಿ | 19/8/2024 |
| 27 | ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ | 20/8/2024 |
| 28 | ಶ್ರೀ ಕೃಷ್ಣ ಜಯಂತಿ | 26/8/2024 |
| 29 | ವಿಶ್ವಕರ್ಮ ಜಯಂತಿ | 17/9/2024 |
| 30 | ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ | 23/10/2024 |
| 31 | ವೀರವನಿತೆ ಒನಕೆ ಓಬವ್ವ ಜಯಂತಿ | 11/11/2024 |
| 32 | ಕನಕ ಜಯಂತಿ | 18/11/2024 |
| 33 | ವಿಶ್ವಮಾನವ ದಿನಾಚರಣೆ | 29/12/2024 |












Click it and Unblock the Notifications