Get Updates
Get notified of breaking news, exclusive insights, and must-see stories!

#janaagraha ಸಮೀಕ್ಷೆ: ಬೆಂಗಳೂರು ಮಹಾನಗರದ ಮಹಾಪೌರರು ಯಾರು?

ಮುಂಬರುವ ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು, ನಗರ/ವಾರ್ಡ್‌ನ ಆಡಳಿತದ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಜನಾಗ್ರಹ ಸಂಸ್ಥೆ ಸಮೀಕ್ಷೆ ನಡೆಸಿ ವರದಿ ನೀಡಿದೆ.

ಮಹಾಪೌರರು ಮಹಾನಗರ ಪಾಲಿಕೆಯ ಪ್ರಥಮ ಪ್ರಜೆ ಮತ್ತು ಸ್ಥಳೀಯ ಸರ್ಕಾರದ ಮುಖ್ಯಸ್ಥರಾಗಿರುತ್ತಾರೆ. ರಾಷ್ಟ್ರಮಟ್ಟದಲ್ಲಿ ಪ್ರಧಾನಮಂತ್ರಿ, ರಾಜ್ಯ ಮಟ್ಟದಲ್ಲಿ ಮುಖ್ಯಮಂತ್ರಿಗಳು ಎಷ್ಟು ಮುಖ್ಯವೋ ಅಂತೆಯೇ, ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಮಹಾಪೌರರು ಮುಖ್ಯ. ''ಶೇ 2% ನಾಗರಿಕರಿಗೆ ಪ್ರಧಾನಮಂತ್ರಿಗಳು, ಶೇ 9% ನಾಗರಿಕರಿಗೆ ಮುಖ್ಯಮಂತ್ರಿಗಳು ಮತ್ತು ಶೇ 83%ರಷ್ಟು ಬೆಂಗಳೂರಿನ ನಾಗರಿಕರಿಗೆ ಮಹಾಪೌರರು ಯಾರೆಂಬುದೇ ತಿಳಿದಿಲ್ಲ'' ಎಂಬ ಮಾಹಿತಿ ಹೊರ ಬಂದಿದೆ.

ಡಿಸೆಂಬರ್ 16, 2021 ರಿಂದ ಜನವರಿ 2, 2022ರ ಅವಧಿಯಲ್ಲಿ ಬಿಬಿಎಂಪಿಯ 8 ವಲಯಗಳಲ್ಲಿನ 27 ವಾರ್ಡ್‌ಗಳಲ್ಲಿ ಜನಾಗ್ರಹ ಸಂಸ್ಥೆಯು ನಗರ/ವಾರ್ಡ್‌ನ ಆಡಳಿತದ ಬಗ್ಗೆ ಹಾಗೂ ನಾಗರಿಕರಲ್ಲಿ ಅರಿವು ಮೂಡಿಸುವ ಮೂಲಕ ಮುಂಬರುವ ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೋತ್ಸಾಹಿಸುವ ಉದ್ದೇಶದಿಂದ ನಡೆಸಿದ ನಗರ ರಾಜಕೀಯ ಸಮೀಕ್ಷೆಯಿಂದ ತಿಳಿದು ಬಂದಿದೆ.

 ನಗರ ರಾಜಕೀಯ ಸಮೀಕ್ಷೆ

ನಗರ ರಾಜಕೀಯ ಸಮೀಕ್ಷೆ

ಸ್ಥಳೀಯ ಸಮಸ್ಯೆಗಳ ನಿವಾರಣೆಯೊಂದಿಗೆ, ಜನರ ಜೀವನ ಗುಣಮಟ್ಟ ಉತ್ತಮಗೊಳಿಸುವ ಜವಾಬ್ದಾರಿಯು ಸ್ಥಳೀಯ ಪ್ರತಿನಿಧಿಗಳಾದ ಮಹಾಪೌರರು ಮತ್ತು ಪಾಲಿಕೆ ಸದಸ್ಯರಿಗೆ ಸೇರಿದ್ದು, ಆದರೆ ನಾಗರಿಕರಿಗೆ ತಮ್ಮ ಸಮಸ್ಯೆಗಳ ನಿವಾರಣೆಗೆ ಜವಾಬ್ದಾರರು ಹಾಗು ನಿಭಾಯಿಸುವವರು ಯಾರೆಂಬ ಅರಿವೇ ಇಲ್ಲ.

ಈ ನಿಟ್ಟಿನಲ್ಲಿ ಜನ ಪ್ರತಿನಿಧಿ ಹಾಗು ನಾಗರಿಕರ ನಡುವಿನ ಸಂಬಂಧಗಳನ್ನು ಬೆಸೆಯುವ ಮತ್ತು ಅಂತರವನ್ನು ಭರ್ತಿ ಮಾಡುವ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ನಾಗರಿಕರಿಗೆ ತಮ್ಮ ಸ್ಥಳೀಯ ನಗರ ರಾಜಕೀಯದ ಬಗ್ಗೆ ಜ್ಞಾನವಿದೆ, ಆದರೆ ಜನರು ಸ್ಥಳೀಯವಾಗಿ ಅಗತ್ಯವಾದ ಸಂಪರ್ಕ ಹೊಂದಿಲ್ಲದಿರುವುದನ್ನು ತಿಳಿಯಪಡಿಸುತ್ತದೆ.

ಅನಿಯಮಿತ ಚುನಾವಣೆಯು ನಾಗರಿಕರಲ್ಲಿ ರಾಜಕೀಯ ಭಾಗವಹಿಸುವಿಕೆಯನ್ನು ಕುಂಠಿತಗೊಳಿಸುವುದರೊಂದಿಗೆ, ರಾಜಕೀಯ ಸಂಪರ್ಕವನ್ನು ಕಡಿತಗೊಳಿಸುತ್ತದೆ.

ಸ್ಥಳೀಯ ಸರ್ಕಾರವು ರಾಜ್ಯದ ನಿರ್ಬಂಧಿತ ಪ್ರದೇಶದೊಳಗೆ ಸರ್ಕಾರದ ಕ್ರಮಗಳನ್ನು ನಿರ್ಧರಿಸುವ ಮತ್ತು ಕಾರ್ಯಗತಗೊಳಿಸುವ ಅಧಿಕಾರವನ್ನು ಹೊಂದಿರುತ್ತದೆ. ಅವು ನಿರ್ದಿಷ್ಟ ಜನಸಂಖ್ಯೆಯ ನಗರ ಅಥವಾ ಪಟ್ಟಣಕ್ಕಾಗಿ ಕಾರ್ಯನಿರ್ವಹಿಸುತ್ತವೆ. ಅಧಿಕಾರ ವಿಕೇಂದ್ರೀಕರಣ ಮತ್ತು ಸ್ಥಳೀಯ ಚುನಾವಣೆಯ ಆಧಾರದ ಮೇಲೆ ಸ್ಥಳೀಯ ಸ್ವ-ಸರ್ಕಾರವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

 ರಾಜಕೀಯ ಭಾಗವಹಿಸುವಿಕೆಯನ್ನು ಕುಂಠಿತ

ರಾಜಕೀಯ ಭಾಗವಹಿಸುವಿಕೆಯನ್ನು ಕುಂಠಿತ

2015 ರಲ್ಲಿ ಬಿಬಿಎಂಪಿಯ ಕೊನೆಯ ಸ್ಥಳೀಯ ಚುನಾವಣೆ ನಡೆದಿದ್ದು 2020 ರಲ್ಲಿ ನಡೆಯಬೇಕಿದ್ದ ಚುನಾವಣೆಯು ನಾನಾ ಕಾರಣಗಳಿಂದ ಮುಂದೂಡಲ್ಪಡುತ್ತಿದೆ. ಇದು ನಾಗರಿಕರಲ್ಲಿ ರಾಜಕೀಯ ಭಾಗವಹಿಸುವಿಕೆಯನ್ನು ಕುಂಠಿತಗೊಳಿಸುತ್ತಿದ್ದು, ರಾಜಕೀಯ ಸಂಪರ್ಕವನ್ನು ಕಡಿತಗೊಳಿಸುತ್ತಿದೆ.

ನಾಗರಿಕರ ಸ್ಥಳೀಯ ಸಮಸ್ಯೆಗಳ ನಿವಾರಣೆಗೆ ಮಹಾಪೌರರು, ಕೌನ್ಸಿಲರ್‌ಗಳು ಎಷ್ಟು ಮುಖ್ಯವೋ ಸ್ಥಳೀಯ ಸಂಸ್ಥೆಗಳು, ಸಮಿತಿಗಳು ಅಷ್ಟೇ ಮುಖ್ಯ. ಆದರೆ ಕಳೆದ 2 ವರ್ಷದಿಂದ ಬಿಬಿಎಂಪಿಯ ಚುನಾವಣೆ ನಡೆಯದೆ ಸ್ಥಳೀಯ ಸಂಸ್ಥೆಗಳು, ಸಮಿತಿಗಳು ಅಸ್ತಿತ್ವದಲ್ಲಿಲ್ಲ.

ಸ್ಥಳೀಯ ಸಮಸ್ಯೆಗಳಿಗೆ ಕಾಳಜಿ ವಹಿಸುವ ಯಾವುದೇ ಕ್ರಿಯಾಶೀಲ ಮಹಾಪೌರರು ಹಾಗು ಕೌನ್ಸಿಲರ್ ನೇಮಕಗೊಂಡಿಲ್ಲ. ಇದರಿಂದ ಜನ ಸಾಮಾನ್ಯರ ಸಮಸ್ಯೆಗಳು ಹೆಚ್ಚಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಸ್ಥಳೀಯ ಸರ್ಕಾರಗಳು ಬಲಿಷ್ಠವಾಗಬೇಕು ಅದಕ್ಕೆ ಚುನಾವಣೆಗಳು ಕಾಲಕಾಲಕ್ಕೆ ನಡೆಯಬೇಕು. ಆಗ ಮಾತ್ರ ಸ್ಥಳೀಯ ಸಮಸ್ಯೆಗಳ ನಿವಾರಣೆಯ ಮೂಲಕ ಅಭಿವೃದ್ಧಿ ಸಾಧ್ಯ.

 ಮತ ಚಲಾವಣೆಯಲ್ಲಿ ಸಮಸ್ಯೆ ಕಂಡು ಬರುತ್ತಿದೆ

ಮತ ಚಲಾವಣೆಯಲ್ಲಿ ಸಮಸ್ಯೆ ಕಂಡು ಬರುತ್ತಿದೆ

ಚುನಾವಣೆಗಳು, ಅಸ್ತಿತ್ವದಲ್ಲಿರುವ ರಾಜಕೀಯ ವ್ಯವಸ್ಥೆ ಮತ್ತು ಆಡಳಿತದ ಕಾನೂನುಬದ್ಧಗೊಳಿಸುವಿಕೆಯ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ. ಚುನಾವಣೆಯಲ್ಲಿ ಭಾಗವಹಿಸುವ ಕ್ರಿಯೆಯು ಸರ್ಕಾರದ ಕಾನೂನುಬದ್ಧತೆ ಮತ್ತು ಹೊಣೆಗಾರಿಕೆಯಲ್ಲಿ ನಾಗರಿಕರ ನಂಬಿಕೆಯನ್ನು ಹೆಚ್ಚಿಸುತ್ತದೆ. ಈ ಅಧ್ಯಯನದಲ್ಲಿ ಲಭ್ಯವಾದ ದತ್ತಾಂಶಗಳು ತಿಳಿಸುವಂತೆ 2018ರ ಕರ್ನಾಟಕ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಕ್ರಮವಾಗಿ ಶೇ 85% ಮತ್ತು ಶೇ 91% ರಷ್ಟು ನಾಗರಿಕರು ಮತ ಚಲಾವಣೆಯಲ್ಲಿ ಭಾಗವಹಿಸಿದ್ದಾರೆ.

ಇನ್ನುಳಿದ ನಾಗರಿಕರು ಪ್ರಯತ್ನಿಸಿದರೂ ಕೂಡಾ ಮತದಾರರ ಪಟ್ಟಿಗೆ ತಮ್ಮ ಹೆಸರು ನೋಂದಾಯಿಸುವಲ್ಲಿ, ಮತ ಚಲಾವಣೆಯಲ್ಲಿ ಸಮಸ್ಯೆ ಕಂಡು ಬರುತ್ತಿದೆ ಎಂದು ವರದಿಸಿರುವುದು ವಿಷಾದನೀಯ. ಕೊನೆಯ ಬಿಬಿಎಂಪಿಯ ಸ್ಥಳೀಯ ಚುನಾವಣೆಯಲ್ಲಿ ಶೇ 57% ರಷ್ಟು ನಾಗರಿಕರು ಮತದಾನ ಚಲಾವಣೆ ಮಾಡಿದ್ದು, ಇನ್ನುಳಿದ ನಾಗರಿಕರು ಮತ ಚಲಾವಣೆಯಲ್ಲಿ ಆಸಕ್ತಿ ತೋರಿಲ್ಲ.

 ಚುನಾವಣೆಗಳ ಪ್ರಾಮುಖ್ಯತೆ

ಚುನಾವಣೆಗಳ ಪ್ರಾಮುಖ್ಯತೆ

ಅಂತೆಯೇ 2015 ರ ನಡೆದ ಬಿಬಿಎಂಪಿ ಚುನಾವಣೆಯ ಮತದಾನದ ಪ್ರಮಾಣ ಶೇ 49.31% ರಷ್ಟಿದ್ದು, ಮೇಲ್ಮಟ್ಟದ ಚುನಾವಣೆಗಳಿಗೆ ಹೋಲಿಸಿದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಾಗರಿಕರು ಭಾಗವಹಿಸುವಿಕೆಯ ಆಸಕ್ತಿ ತೋರುತಿಲ್ಲದಿರುವುದು, ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಪ್ರಾಮುಖ್ಯತೆ ಕುಂದುತ್ತಿರುವುದನ್ನು ಖಾತ್ರಿಗೊಳಿಸುತ್ತದೆ.

ನಾಗರಿಕರಿಗೆ ಸ್ಥಳೀಯ ಮಟ್ಟದ ಆಡಳಿತಕ್ಕಿಂತ ಮೇಲ್ಮಟ್ಟದ ಆಡಳಿತದ ಬಗ್ಗೆ ಹೆಚ್ಚಾಗಿ ತಿಳಿದಿರುವಂತೆ, ಮತ್ತೊಂದು ಉದಾಹರಣೆಯಂತೆ ಮತದಾನದಲ್ಲೂ ಜನರು ಸ್ಥಳೀಯ ಮಟ್ಟದ ಚುನಾವಣೆಗಳಿಗಿಂತ ರಾಷ್ಟ್ರಮಟ್ಟದ ಚುನಾವಣೆಗಳಲ್ಲಿ ಜನರು ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ.

ಇದು ನಾಗರಿಕರಿಗೆ ಉತ್ತಮ ಸ್ಥಳೀಯ ಸೇವೆಗಳನ್ನು ಪಡೆಯುವಲ್ಲಿ ಹಿನ್ನೆಡೆಯನ್ನುಂಟು ಮಾಡುತ್ತಿದೆ. ಹೊಸ ತಂತ್ರಜ್ಞಾನಗಳನ್ನು ಬಳಕೆ, ಮತದಾರರ ಪಟ್ಟಿ ನಿರ್ವಹಣೆ ಪ್ರಕ್ರಿಯೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಯಾವುದೇ ಪ್ರಯತ್ನಗಳು ನಡೆಯುತಿಲ್ಲದಿರುವುದೇ ನಾಗರಿಕರಲ್ಲಿ ನಿರಾಸಕ್ತಿ ಮೂಡಿಸಲು ಕಾರಣವಾಗಿದೆ ಎಂದರೆ ತಪ್ಪಾಗಲಾರದು.

 ಸಮೂಹ ಮಾಧ್ಯಮದ ಬಳಕೆ ನಾಗರಿಕರ ಭಾಗವಹಿಸುವಿಕೆ

ಸಮೂಹ ಮಾಧ್ಯಮದ ಬಳಕೆ ನಾಗರಿಕರ ಭಾಗವಹಿಸುವಿಕೆ

ಸ್ಥಳೀಯ ಮಟ್ಟದ ಚುನಾವಣೆಗಳಿಗಿಂತ ರಾಷ್ಟ್ರಮಟ್ಟದ ಚುನಾವಣೆಗಳೇ ಹೆಚ್ಚಾಗಿ ಮಾಧ್ಯಮಗಳ ಪ್ರಸಾರವನ್ನು ಪಡೆಯುತ್ತಿವೆ. ಚುನಾವಣಾ ಪ್ರಚಾರದಲ್ಲಿ ಸಮೂಹ ಮಾಧ್ಯಮದ ಬಳಕೆ ನಾಗರಿಕರ ಭಾಗವಹಿಸುವಿಕೆಯನ್ನು ವರ್ಧಿಸಲು ಸಹಾಯಕವಾದವು. ಸಾಮಾನ್ಯವಾಗಿ ಮೇಲ್ಮಟ್ಟದ ಚುನಾವಣೆಗಳು ಸ್ಥಳೀಯ ಮಟ್ಟದ ಚುನಾವಣೆಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದ್ದು ಹೆಚ್ಚಿನ ಪ್ರಸಾರವನ್ನು ಹಿಂದಿನಿಂದಲೂ ಪಡೆದುಕೊಂಡು ಬಂದಿವೆ.

ಇದಕ್ಕೆ ಪುಷ್ಟಿಕೊಡುವಂತೆ, ಈ ಸಮೀಕ್ಷೆಯಲ್ಲಿ ದೊರೆತ ಅಂಕಿಅಂಶಗಳ ಪ್ರಕಾರ ಶೇ 59% ರಷ್ಟು ನಾಗರಿಕರು ಬಿಬಿಎಂಪಿ ಚುನಾವಣೆಗಳು ಇತರ ಚುನಾವಣೆಗಳಿಗಿಂತ ಕಡಿಮೆ ಪ್ರಸಾರವನ್ನು ಪಡೆಯುತ್ತವೆ ಎಂದು, ಶೇ12% ರಷ್ಟು ನಾಗರಿಕರು ಇತರ ಚುನಾವಣೆಗಳಿಗಿಂತ ಹೆಚ್ಚಿನ ಪ್ರಸಾರವನ್ನು ಹಾಗೂ ಶೇ15% ರಷ್ಟು ನಾಗರಿಕರು ಇತರ ಚುನಾವಣೆಗಳಂತೆಯೇ ಮಾಧ್ಯಮಗಳಲ್ಲಿ ಪ್ರಸಾರವನ್ನು ಪಡೆಯುತ್ತವೆ ಎಂಬ ಜನಾಭಿಪ್ರಾಯವನ್ನು ನೀಡಿದ್ದಾರೆ.

 ಸಮೂಹ ಮಾಧ್ಯಮವು ಮುಕ್ತ ಸಮಾಜಕ್ಕೆ ಅಮೂಲ್ಯವಾದ ಸೇವೆ

ಸಮೂಹ ಮಾಧ್ಯಮವು ಮುಕ್ತ ಸಮಾಜಕ್ಕೆ ಅಮೂಲ್ಯವಾದ ಸೇವೆ

ಅರ್ಧಕ್ಕಿಂತಲೂ ಹೆಚ್ಚಿನ ನಾಗರಿಕರು ಬಿಬಿಎಂಪಿ ಚುನಾವಣೆಗಳಿಗೆ ಸಾಕಷ್ಟು ಸಮೂಹ ಮಾಧ್ಯಮ ಪ್ರಸಾರದ ಅವಶ್ಯಕತೆ ಇದೆ ಎಂಬ ಸತ್ಯವನ್ನು ತಿಳಿಸಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳು, ಜನರ ಜೀವನದ ಗುಣಮಟ್ಟದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಸಮೂಹ ಮಾಧ್ಯಮವು ಮುಕ್ತ ಸಮಾಜಕ್ಕೆ ಅಮೂಲ್ಯವಾದ ಸೇವೆಯನ್ನು ಒದಗಿಸುತ್ತದೆ. ನಾಗರಿಕರ ಹಾಗೂ ಸ್ಥಳೀಯ ಸಮಸ್ಯೆಗಳ ಚಿತ್ರಣವನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡುತ್ತವೆ. ಅಂತಹ ಮಾಧ್ಯಮಗಳು ಬಿಬಿಎಂಪಿ ಚುನಾವಣೆಗಳ ಪ್ರಚಾರ, ಪ್ರಕ್ರಿಯೆ, ಜನಾಭಿಪ್ರಾಯಗಳ ಸಂಗ್ರಹಣೆಯಂತಹ ಕಾರ್ಯಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವುದು ಅನಿವಾರ್ಯವಾಗಿದೆ.

ನಗರ ಸ್ಥಳೀಯ ಆಡಳಿತ ಸದೃಢವಾಗಬೇಕು, ಸ್ಥಳೀಯ ಪ್ರತಿನಿಧಿಗಳ ಸಂಪರ್ಕವು ಜನರಿಗೆ ಸಾರ್ವಜನಿಕ ಸೇವಾ ಸೌಲಭ್ಯಗಳನ್ನು ಪಡೆಯಲು ನಗರದ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲು ಸಹಾಯ ಮಾಡುವುದು.

 ಮೇಲ್ಮಟ್ಟದ ಆಡಳಿತದ ಬಗ್ಗೆ ಹೆಚ್ಚಾಗಿ ತಿಳಿದಿರುವುದು

ಮೇಲ್ಮಟ್ಟದ ಆಡಳಿತದ ಬಗ್ಗೆ ಹೆಚ್ಚಾಗಿ ತಿಳಿದಿರುವುದು

ಸ್ಥಳೀಯವಾಗಿ ಸಾರ್ವಜನಿಕ ಸೇವಾ ಸೌಲಭ್ಯಗಳನ್ನು ಪಡೆಯಲು ಹಾಗು ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಸ್ಥಳೀಯ ಆಡಳಿತದ ಬಗ್ಗೆ ಅರಿವನ್ನು ಹೊಂದಿರಬೇಕು. ಆದರೆ ಬೆಂಗಳೂರಿನ ನಾಗರಿಕರಿಗೆ ಸ್ಥಳೀಯ ಮಟ್ಟದ ಆಡಳಿತಕ್ಕಿಂತ ಮೇಲ್ಮಟ್ಟದ ಆಡಳಿತದ ಬಗ್ಗೆ ಹೆಚ್ಚಾಗಿ ತಿಳಿದಿರುವುದು ದೊರೆತ ದತ್ತಾಂಶದಿಂದ ತಿಳಿದು ಬಂದಿದೆ.

ಶೇ 61% ರಷ್ಟು ನಾಗರಿಕರು ವಾರ್ಡ್ ಹೆಸರನ್ನು, ಶೇ 57% ನಾಗರಿಕರು ವಾರ್ಡ್ ಕೌನ್ಸಿಲರ್‌ರನ್ನು, ಶೇ 17% ನಾಗರಿಕರು ಮಹಾಪೌರರನ್ನು ಸರಿಯಾಗಿ ಗುರುತಿಸಿದ್ದಾರೆ. ಕಸಸಂಗ್ರಹ/ವಿಂಗಡಣೆ/ವಿಲೇವಾರಿ, ನೀರಿನ ಲಭ್ಯತೆ/ಸ್ವಚ್ಛತೆ, ಫುಟ್‌ಪಾತ್‌ಗಳ ಗುಣಮಟ್ಟ/ಕೊರತೆ, ಹಾಗು ಟ್ರಾಫಿಕ್/ಜನ ಸಂದಣಿಯು ಬೆಂಗಳೂರಿನ ದೊಡ್ಡ ಸಮಸ್ಯೆಗಳೆಂದು ಎಂದು ನಾಗರಿಕರು ಅಭಿಪ್ರಾಯ ಪಟ್ಟಿದ್ದಾರೆ.

 ನಾಗರಿಕರು ವೈಯಕ್ತಿಕ ಸಹಾಯ

ನಾಗರಿಕರು ವೈಯಕ್ತಿಕ ಸಹಾಯ

ಈ ಸಮಸ್ಯೆಗಳನ್ನು ಪರಿಹರಿಸಲು ಶೇ 39% ರಷ್ಟು ನಾಗರಿಕರು ಕೌನ್ಸಿಲರ್ ಜವಾಬ್ದಾರರು ಎಂದರೆ, ಶೇ 16% ರಷ್ಟು ನಾಗರಿಕರು ಶಾಸಕರು ಜವಾಬ್ದಾರರು ಎಂದು ಅಭಿಪ್ರಾಯ ಪಟ್ಟಿರುವುದು ತಿಳಿದು ಬಂದಿದೆ. ನಾಗರಿಕರು ವೈಯಕ್ತಿಕ ಸಹಾಯಕ್ಕಾಗಿ, ಸಮುದಾಯ ಅಭಿವೃದ್ಧಿಗಾಗಿ ಸರ್ಕಾರದಿಂದ ದೊರೆಯುವ ಅಭಿವೃದ್ಧಿ ಯೋಜನೆಗಳ ಕುರಿತು ವಾರ್ಡ್ ಕೌನ್ಸಿಲರಿಗಿಂತ (ಶೇ 12%) ಶಾಸಕರನ್ನು ಹೆಚ್ಚಾಗಿ (ಶೇ22%) ಭೇಟಿಯಾಗಿದ್ದಾರೆ.

ಬೆಂಗಳೂರಿನ ನಾಗರಿಕರಿಗೆ ತಮ್ಮ ಸ್ಥಳೀಯ ಸಮಸ್ಯೆಗಳ ಹೊಣೆಗಾರಿಗೆ ಕೌನ್ಸಿಲರ್ಗಳದೆಂದು ತಿಳಿದಿದೆ, ದುರಾದೃಷ್ಟಾವತ್ ಅದೇ ಸಮಯದಲ್ಲಿ ನಗರದ ಸಮಸ್ಯೆಗಳಿಗೆ ನಿಜವಾಗಿಯೂ ಯಾರು ಜವಾಬ್ದಾರರು ಎಂದು ಅವರಿಗೆ ತಿಳಿದಿಲ್ಲ. ಕೌನ್ಸಿಲರ್‌ಗಳ ಚುನಾವಣೆ ಆಯ್ಕೆ ಬಗ್ಗೆ ಅರಿವನ್ನು ಹೊಂದಿರುವ ನಾಗರಿಕರಿಗೆ ಮಹಾಪೌರರ ಚುನಾವಣೆ ಆಯ್ಕೆ ಬಗ್ಗೆ ಅರಿವೇ ಇಲ್ಲ.ಕೌನ್ಸಿಲರ್‌ಗಳೊಂದಿಗೆ ಒಡನಾಟ ಹೊಂದಿದ್ದರೂ ತಮ್ಮ ಸ್ಥಳೀಯ ಸಮಸ್ಯೆಗಳಿಗೆ ಮೇಲ್ಮಟ್ಟದ ಪ್ರತಿನಿಧಿಗಳನ್ನು ಅವಲಂಬಿಸುತ್ತಿದ್ದಾರೆ. ಸ್ಥಳೀಯ ರಾಜಕೀಯ ಪ್ರತಿನಿಧಿಗಳು ಮತ್ತು ನಾಗರಿಕರು ನಡುವಿನ ಸಂಬಂಧವನ್ನು ಉನ್ನತಗೊಳಿಸುವ ಪ್ರಯತ್ನಗಳು ಇಂದು ನಡೆಯಬೇಕಿದೆ.

 ಮುಕ್ತಾಯವಾಕ್ಯ

ಮುಕ್ತಾಯವಾಕ್ಯ

ಪ್ರಜಾಪ್ರಭುತ್ವದ ಸರ್ಕಾರದ ಅಡಿಯಲ್ಲಿ, ಸೈದ್ಧಾಂತಿಕವಾಗಿ, ನಾಗರಿಕರಿಗೆ ಪ್ರತಿನಿಧಿಗಳ ಮೇಲೆ ಪ್ರಭಾವ ಬೀರಲು ಉತ್ತಮ ಅವಕಾಶವನ್ನು ನೀಡಬೇಕು. ಪ್ರತಿಯೊಬ್ಬ ನಾಗರಿಕನಿಗೆ ರಾಜಕೀಯ ಜೀವನದಲ್ಲಿ ಭಾಗವಹಿಸಲು, ಅವರ ಹಿತಾಸಕ್ತಿಗಳನ್ನು ರಕ್ಷಿಸಲು, ಯಾವುದೇ ಅಂಶಗಳ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲು, ಸೈದ್ಧಾಂತಿಕವಾಗಿ ತಮ್ಮದೇ ಆದ "ಶಕ್ತಿ" ಯನ್ನು ಆಯ್ಕೆ ಮಾಡಲು, ರಾಜಕೀಯದಲ್ಲಿ ಆಸಕ್ತಿಯನ್ನು ತೋರಿಸಲು ಹೊಂದಿರುವ ಹಕ್ಕಿನ ಬಗ್ಗೆ ಅರಿವು ಮೂಡಿಸುವುದರ ಮೂಲಕ ಸ್ಥಳೀಯ ಚುನಾವಣೆಗಳ ಬಗ್ಗೆ ನಾಗರಿಕರಲ್ಲಿ ಧನಾತ್ಮಕತೆಯನ್ನು ತರಬೇಕಾಗಿದೆ.

ಪ್ರಸ್ತುತವಾಗಿ ನಾಗರಿಕರು ಸ್ಥಳೀಯ ಸರ್ಕಾರಕ್ಕಿಂತ, ರಾಜ್ಯ ಹಾಗು ರಾಷ್ಟ್ರ ಮಟ್ಟದ ಸರ್ಕಾರಗಳ ಬಗ್ಗೆ ಉತ್ತಮವಾದ ಜ್ಞಾನವನ್ನು ಹೊಂದಿದ್ದಾರೆ. ನಾಗರಿಕರು ಮೇಯರ್, ಕೌನ್ಸಿಲರ್ ಬಗ್ಗೆ ತಿಳಿದಿದ್ದರೂ ಸಹ ಅವರ ಕಾರ್ಯ ಹೊಣೆಗಾರಿಕೆಗಳ ಬಗ್ಗೆ ಅರಿವನ್ನು ಮೂಡಿಸಬೇಕಾಗಿದೆ.

 ನಾಗರಿಕರನ್ನು ಸಬಲೀಕರಣಗೊಳಿಸಬೇಕಾಗಿದೆ

ನಾಗರಿಕರನ್ನು ಸಬಲೀಕರಣಗೊಳಿಸಬೇಕಾಗಿದೆ

ಕೌನ್ಸಿಲರ್‌ಗಳೊಂದಿಗೆ ಒಡನಾಟ ಹೊಂದಿದ್ದರೂ ತಮ್ಮ ಕೊಂದುಕೊರತೆಗಳಿಗಾಗಿ ಉನ್ನತ ಮಟ್ಟದ ಪ್ರತಿನಿಧಿಗಳನ್ನು ಅವಲಂಬಿಸುತ್ತಿದ್ದಾರೆ. ಸ್ಥಳೀಯ ಅಭಿವೃದ್ದಿಗಾಗಿ, ಸ್ಥಳೀಯ ಚುನಾವಣೆಗಳಲ್ಲಿ ಸಕ್ರಿಯ ಭಾಗವಹಿಸುವಿಕೆಯನ್ನು ಪ್ರೇರೇಪಿಸುವುದರ ಮೂಲಕ ಅವರ ವಾರ್ಡ್ ಅಭಿವೃದ್ಧಿಗೆ ಬಲಿಷ್ಠ ಹಾಗು ಉತ್ತಮ ನಾಯಕನನ್ನು ಹೊಂದಲು ನಾಗರಿಕರನ್ನು ಸಬಲೀಕರಣಗೊಳಿಸಬೇಕಾಗಿದೆ. ಸ್ಥಳೀಯ ಸಮಸ್ಯೆಗಳಿಗೆ ಉತ್ತಮ ಪರಿಹಾರ ಒದಗಿಸುವುದರ ಮೂಲಕ ಜನರ ಜೀವನಮಟ್ಟ ಉತ್ತಮವಾಗಬಹುದು.

ಇದಕ್ಕಾಗಿ ಸ್ಥಳೀಯ ನಾಗರಿಕರ ಹಾಗು ಸ್ಥಳೀಯ ನಾಯಕರ ನಡುವಿನ ಸಂಪರ್ಕದ ಅಂತರವನ್ನು ನೀಗಿಸಿ ನಾಗರಿಕರಿಗೆ ಲಭ್ಯವಿರುವ ಸಾರ್ವಜನಿಕ ಸೇವಾ ಸೌಲಭ್ಯಗಳನ್ನು ಪಡೆಯುವಂತಹ ಪ್ರಯತ್ನಗಳು ಇಂದು ನೆಡೆಯಬೇಕಿದೆ. ಬಹುಶಃ ವಾರ್ಡ್ ಸಮಿತಿಗಳಂತಹ ಕಾರ್ಯಕ್ರಮಗಳನ್ನು ಸಬಲೀಕರಣಗೊಳಿಸಿ ವ್ಯವಸ್ಥಿತ ರೀತಿಯಲ್ಲಿ ಅನುಷ್ಠಾನಗೊಳಿಸುವುದು ಅವಶ್ಯಕವಾಗಿದೆ. ಸ್ಥಳೀಯ ಅಭಿವೃದ್ಧಿಯಲ್ಲಿ ''ಮೇಯರ್'' ರನ್ನು ನಗರದ ಪ್ರಥಮ ಪ್ರಜೆ ಎಂದು ಖ್ಯಾತಗೊಳಿಸಬೇಕಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+