Isha Foundation: ಈಶ ಫೌಂಡೇಶನ್ ಬಳಿ ಹೀಗೂ ನಡೆಯುತ್ತಿದೆಯಾ?

ಸಿಲಿಕಾನ್‌ ಸಿಟಿ ಬೆಂಗಳೂರಿಗರ ಪಾಲಿಗೆ ವೀಕೆಂಡ್‌ ಪಿಕ್ನಿಕ್‌ ಸ್ಪಾಟ್‌ ಅಂದ್ರೆ ಅದು ಪಕ್ಕದ ಚಿಕ್ಕಬಳ್ಳಾಪುರ ಬಳಿ ಇರುವ ಈಶ ಫೌಂಡೇಶನ್‌ (Isha Foundation). ಬೈಕ್‌, ಕಾರ್‌ನಲ್ಲಿ ಹೋದ್ರೆ ಸುಮಾರು ಒಂದು ಗಂಟೆಗೆಲ್ಲ ಈ ಸ್ಥಳ ಸೇರಿಕೊಳ್ಳಬಹುದು. ಮಹಾಶಿವನ ಭಕ್ತರಂತೂ ಈ ಜಾಗಕ್ಕೆ ವಾರದಲ್ಲಿ ಏನಿಲ್ಲ ಅಂದ್ರೂ ಎರಡು ಮೂರು ಸಲ ಹೋಗಿಯೇ ಬರುತ್ತಾರೆ. ಇನ್ನು ಪ್ರೇಮಿಗಳಂತೂ ಲಾಂಗ್‌ ರೈಡ್‌ ಹೆಸರಲ್ಲಿ ಇಲ್ಲಿಗೆ ಹೋಗಿ ಸುತ್ತಾಡಿ ಬರುತ್ತಾರೆ. ಹಾಗಾಗಿ ಪ್ರತಿದಿನವೂ ಈ ಜಾಗದಲ್ಲಿ ಜನಜಂಗುಳಿ ಇದ್ದೇ ಇರುತ್ತದೆ.

ಪರಮಶಿವನ ನೆಲೆಯಾಗಿರುವ ಈ ಜಾಗದಲ್ಲಿ ಮಾಂಸಾಹಾರಕ್ಕೆ ಅವಕಾಶ ನೀಡಲಾಗಿಲ್ಲ. ಹಾಗಾಗಿ ಈಶ ಫೌಂಡೇಶನ್‌ ಸುತ್ತಮುತ್ತಲೂ ಯಾವುದೇ ಮಾಂಸಾಹಾರದ ಹೋಟೆಲ್‌ಗಳೂ ಇಲ್ಲ. ಆದರೆ, ಇದೀಗ ಈಶನ ಸಮ್ಮುಖದಲ್ಲೇ ಬಿರಿಯಾನಿ ಘಮಲು ಜೋರಾಗಿ ಎದ್ದಿದೆ ಎನ್ನುವ ಆರೋಪ ಕೇಳಿಬಂದಿದೆ.

Isha Foundation Has Lodged a Complaint About The Preparation Of Biryani

ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದ್ದು, ಈಶ ಫೌಂಡೇಷನ್‌ಗೆ ಸೇರಿದ ಜಾಗದಲ್ಲಿ ಕೆಲವರು ಸೇರಿ ಚಿಕನ್‌ ಬಿರಿಯಾನಿ ತಯಾರಿಸಿ, ಪಾರ್ಟಿ ಮಾಡಿದ್ದಾರೆ ಎನ್ನಲಾಗಿದೆ. ಚಿಕ್ಕಬಳ್ಳಾಪುರದ ಆವಲಗುರ್ಕಿ ಬಳಿ ಇರುವ ಈಶ ಯೋಗ ಕೇಂದ್ರಕ್ಕೆ ಸೇರಿದ ಪಾರ್ಕಿಂಗ್‌ ಸ್ಥಳದಲ್ಲಿ ಈ ಅವಾಂತರ ನಡೆದಿದ್ದು, ಚಿಕನ್ ಬಿರಿಯಾನಿ ತಯಾರಿಸಿದವರ ವಿರುದ್ಧ ಈಶ ಫೌಂಡೇಶನ್‌ ಸಿಬ್ಬಂದಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಸ್ಟೇಷನ್‌ಗೆ ದೂರು ಕೂಡ ಕೊಟ್ಟಿದ್ದಾರೆ ಎನ್ನಲಾಗಿದೆ.

ಮೊನ್ನೆ (ಭಾನುವಾರ) ಇಲ್ಲಿ ಪಾರ್ಕಿಂಗ್‌ ಪ್ರದೇಶಕ್ಕೆ ಐದಾರು ಮಂದಿ ಅಕ್ರಮವಾಗಿ ಪ್ರವೇಶಿಸಿದ್ದು, ಈ ಬಗ್ಗೆ ವಿಚಾರಿಸಿದಾಗ ಅವರು ಜೋರು ಮಾಡಿದ್ದಾರೆ. ನಾವು ಇಲ್ಲೇ ಪಕ್ಕದ ಗ್ರಾಮಸ್ಥರು, ಸ್ವಲ್ಪ ಸಮಯ ಬಿಟ್ಟು ಹೋಗುತ್ತೇವೆʼ ಎಂದಿದ್ದಾರೆ. ಅಲ್ಲದೆ ನಮ್ಮನ್ನು ಇಲ್ಲಿನ ಕೆಲವರು ಕಳಿಸಿದ್ದಾಗಿ ಜೋರು ಮಾಡಿದ್ದರಂತೆ. ಬಳಿಕ ಸಿಬ್ಬಂದಿ ಪೊಲೀಸರನ್ನು ಕರೆಸಿದ್ದಾರೆ. ಆದರೂ ಅವರು ಅಲ್ಲಿಂದ ಹೋಗಲಿಲ್ಲ. ಕೊನೆಗೆ ಸಿಬ್ಬಂದಿ ಮೊಬೈಲ್‌ನಲ್ಲಿ ಅವರ ವಿಡಿಯೋ ರೆಕಾರ್ಡ್‌ ಮಾಡಿಕೊಳ್ಳಲು ಮುಂದಾದಾಗ ಅಶ್ಲೀಲವಾಗಿ ನಿಂದಿಸಿ, ಅವಾಜ್‌ ಕೂಡ ಹಾಕಿದ್ದಾರೆ.

ಬಳಿಕ ಮಧ್ಯಾಹ್ನ ಇನ್ನೂ ಕೆಲವರ ಜೊತೆ ಬಂದು ಪಾರ್ಕಿಂಗ್‌ ಸ್ಥಳದ ಸಮೀಪದಲ್ಲೇ ದೇವಸ್ಥಾನದ ಬಳಿಯಿದ್ದ ಕಸ ಕಡ್ಡಿಯನ್ನು ತಂದು ಬೆಂಕಿ ಹಚ್ಚಿದ್ದರು. ಬಳಿಕ ಅಲ್ಲಿಯೇ ಚಿಕನ್ ಬಿರಿಯಾನಿ ಕೂಡ ತಯಾರಿಸಿದ್ದರು. ಇದೇ ಜಾಗದ ಸಮೀಪದಲ್ಲಿ ಆದಿಯೋಗಿಯ ಬೃಹತ್‌ ಮೂರ್ತಿ, ನಂದಿ, ಮಹಾಶೂಲ ಹಾಗೂ ನಾಗಮಂಟಪ, ಯೋಗೇಶ್ವರಲಿಂಗ ಇತ್ತು. ಇದನ್ನು ಭಕ್ತರು ಪವಿತ್ರವಾದ ಸ್ಥಳ ಎಂದೇ ನಂಬಿದ್ದಾರೆ. ಇಂತಹ ಸ್ಥಳದಲ್ಲಿ ಮಾಂಸಾಹಾರ ತಂದು ಅಪವಿತ್ರಗೊಳಿಸುವ ಕೆಲಸಕ್ಕೆ ಮುಂದಾಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

Isha Foundation Has Lodged a Complaint About The Preparation Of Biryani

ಈ ಘಟನೆ ನಡೆದಾಗ ಅಲ್ಲಿ ಹಲವು ಕಾರುಗಳು ಕೂಡ ನಿಲ್ಲಿಸಲಾಗಿತ್ತು. ಬಿರಿಯಾನಿ ತಯಾರಿಸುವುದನ್ನು ಕಂಡು ಅಲ್ಲಿಗೆ ಬಂದಿದ್ದ ಭಕ್ತರೆಲ್ಲ ಮುಜುಗರಕ್ಕೆ ಒಳಗಾದರು. ಬಳಿಕ ಘಟನಾ ಸ್ಥಳದಲ್ಲಿ ನೂರಾರು ಜನ ಸೇರಿ, ಇನ್ನೇನು ಗಲಾಟೆ ನಡೆಸಯುವ ಸಾಧ್ಯತೆಯೂ ಇತ್ತು. ಹಾಗಾಗಿ ಪೊಲೀಸರಿಗೆ ಮಾಹಿತಿ ನೀಡಿ ಅವರನ್ನು ಸ್ಥಳದಿಂದ ಕಳುಹಿಸಿದ್ದಾರೆ. ಈ ವ್ಯಕ್ತಿಗಳು ಈ ಹಿಂದೆಯೂ ಹಲವು ಬಾರಿ ಇಲ್ಲಿಗೆ ಅಕ್ರಮವಾಗಿ ಪ್ರವೇಶಿಸಿ, ಗಲಾಟೆ ಮಾಡುತ್ತಿದ್ದರು ಎಂದೂ ಹೇಳಲಾಗಿದೆ.

ಸಾವಿರಾರು ಭಕ್ತರು ಬರುವ ಸ್ಥಳದಲ್ಲಿ ಗಲಾಟೆ ಮಾಡಲೆಂದೇ ಇವರು ಇಲ್ಲಿಗೆ ಬರುತ್ತಿದ್ದಾರೆ ಎಂದು ಆರೋಪಿಸಿ, ಇವರ ವಿರುದ್ಧ ಕೇಸ್‌ ದಾಖಲಿಸಿ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ದೂರು ಕೊಟ್ಟಿದ್ದಾರಂತೆ. ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದನ್ನು ತಡೆಯಿರಿ ಎಂದೂ ಮನವಿ ಮಾಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದರಿಂದ ಶಿವನ ಭಕ್ತರಿಗೆಲ್ಲ ಬೇಸರವಾಗಿದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+