International Labour Day 2022: ಕಾರ್ಮಿಕರ ದಿನ ದಿನಾಂಕ, ಇತಿಹಾಸ ಮತ್ತು ಈ ದಿನದ ಮಹತ್ವ
ಪ್ರತಿ ವರ್ಷ ಮೇ 1 ರಂದು ಹೆಚ್ಚಿನ ದೇಶಗಳಲ್ಲಿ ಅಂತರರಾಷ್ಟ್ರೀಯ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಸಮಾಜಕ್ಕಾಗಿ ನೌಕರರ ಕೊಡುಗೆಗಳು ಮತ್ತು ತ್ಯಾಗಗಳನ್ನು ಗೌರವಿಸಲಾಗುತ್ತದೆ. ಭಾರತದಲ್ಲಿ ಇದನ್ನು ಮೇ ದಿನ ಎಂದೂ ಕರೆಯುತ್ತಾರೆ. 1923 ರಲ್ಲಿ ಕಾಮ್ರೇಡ್ ಸಿಂಗರವೇಲರ್ ನೇತೃತ್ವದ ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದೂಸ್ತಾನ್, ದೇಶದಲ್ಲಿ ಮೊದಲ ಬಾರಿಗೆ ಕಾರ್ಮಿಕರ ದಿನದ ಆಚರಣೆಗಳನ್ನು ಆಯೋಜಿಸಿತು. ಅಂದಿನಿಂದ ಇಂದಿನವರೆಗೆಗೂ ಭಾರತದಲ್ಲಿ ಕಾರ್ಮಿಕರ ದಿನವನ್ನು ಆಚರಿಸುಲಾಗುತ್ತದೆ. ಜೊತೆಗೆ ಕಾರ್ಮಿಕರ ದಿನಾಚರಣೆಯಂದು ಸರ್ಕಾರ ಎಲ್ಲರಿಗೂ ರಾಷ್ಟ್ರೀಯ ರಜೆ ನೀಡಬೇಕು ಎಂದು ನಿರ್ಣಯ ಅಂಗೀಕರಿಸಿತು. ಹೀಗಾಗಿ ಪ್ರತಿ ವರ್ಷ ಕಾರ್ಮಿಕರ ದಿನಾಚರಣೆಯಂದು ಸರ್ಕಾರಿ ರಜೆಯನ್ನು ನೀಡಲಾಗುತ್ತದೆ. ಇದು 140ನೇ ವರ್ಷದ ಅಂತಾರಾಷ್ಟ್ರೀಯ ಕಾರ್ಮಿಕರ ದಿನವಾಗಿದೆ.
ಕಾರ್ಮಿಕರ ದಿನವನ್ನು ಭಾರತದಾದ್ಯಂತ ಹಿಂದಿಯಲ್ಲಿ 'ಅಂತರಾಷ್ಟ್ರೀಯ ಶ್ರಮಿಕ್ ದಿವಸ್'(Antarrashtriya Shramik Diwas), ತಮಿಳಿನಲ್ಲಿ 'ಉಳಪಾಲರ್ ನಾಲ್' (Uzhaopalar Naal)ಮತ್ತು ಮರಾಠಿಯಲ್ಲಿ 'ಕಾಮ್ಗರ್ ದಿವಾಸ್' (Kamgar din) ಸೇರಿದಂತೆ ವಿವಿಧ ಶೀರ್ಷಿಕೆಗಳಲ್ಲಿ ಆಚರಿಸಲಾಗುತ್ತದೆ. 1923 ರಲ್ಲಿ ಭಾರತದ ಮದ್ರಾಸ್ ಪ್ರಾಂತ್ಯವು ತನ್ನ ಚೊಚ್ಚಲ ಕಾರ್ಮಿಕ ದಿನವನ್ನು ಆಚರಿಸಿತು. ಮೇ 1 ಅನ್ನು ಮಹಾರಾಷ್ಟ್ರ ದಿನ ಮತ್ತು ಗುಜರಾತ್ ದಿನ ಎಂದೂ ಕರೆಯಲಾಗುತ್ತದೆ.
ಹೆಚ್ಚಿನ ದೇಶಗಳಲ್ಲಿ ಕಾರ್ಮಿಕ ದಿನದಂದು ಸಾರ್ವಜನಿಕ ಮತ್ತು ಸರ್ಕಾರಿ ಕಚೇರಿಗಳು, ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚಲಾಗುತ್ತದೆ. ಈ ದಿನದಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಮತ್ತು ಶ್ರಮಿಕ ಕಾರ್ಮಿಕರಿಗೆ ಗೌರವ ಸಲ್ಲಿಸಲಾಗುತ್ತದೆ. ವ್ಯಾಪಾರ ಸಂಘಗಳು ಮೆರವಣಿಗೆಗಳನ್ನು ಆಯೋಜಿಸುತ್ತವೆ. ಕೆಲಸದ ಸ್ಥಳದಲ್ಲಿ ಸಮಾನತೆಯ ಅಗತ್ಯವನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಈ ದಿನದ ಸ್ಮರಣಾರ್ಥ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಅಂತರಾಷ್ಟ್ರೀಯ ಕಾರ್ಮಿಕ ದಿನದ ಇತಿಹಾಸ
ಅಮೆರಿಕನ್ ಉದ್ಯೋಗಿಗಳು ಕಠೋರ ಕಾರ್ಮಿಕ ನಿಯಮಗಳು, ಕಾರ್ಮಿಕರ ಹಕ್ಕುಗಳ ಉಲ್ಲಂಘನೆ, ಕೆಟ್ಟ ಕೆಲಸದ ಪರಿಸ್ಥಿತಿಗಳು ಮತ್ತು ಭಯಾನಕ ಕೆಲಸದ ಸಮಯಗಳ ವಿರುದ್ಧ ಪ್ರತಿಭಟನೆಯನ್ನು ಪ್ರಾರಂಭಿಸಿದರು. ದಿನವೊಂದಕ್ಕೆ 8 ಗಂಟೆಗಳ ಕೆಲಸವನ್ನು ನಿಗದಿಗೊಳಿಸಬೇಕೆಂಬ ಕಾರ್ಮಿಕರ ಚಳವಳಿ 1860 ರಿಂದ ಆರಂಭವಾಯಿತು. ಚಳವಳಿಗಾಗಿ ಅಮೆರಿಕ, ಕೆನಡಾ, ದೇಶಗಳಲ್ಲಿ ಕಾರ್ಮಿಕ ಸಂಘಟನೆಗಳು ಅಸ್ತಿತ್ವಕ್ಕೆ ಬಂದವು. ದಿನವೊಂದಕ್ಕೆ 10 ರಿಂದ 14 ಗಂಟೆಗಳ ಕಾಲ ಬಲವಂತವಾಗಿ ದುಡಿಸಿಕೊಳ್ಳುವುದನ್ನು ಈ ಸಂಘಟನೆಗಳು ವಿರೋಧಿಸಿದವು.
ಅಮೆರಿಕದ ಷಿಕಾಗೋ ಸಾವಿರಾರು ಕಾರ್ಮಿಕ ಸಂಘಟನೆಗಳ ಕೇಂದ್ರವಾಯಿತು. 1886 ಮೇ 1, ಕಾರ್ಮಿಕ ಹೋರಾಟಗಳ ಇತಿಹಾಸದಲ್ಲಿ ಒಂದು ಮಹತ್ವದ ಘಟ್ಟ. ಲಕ್ಷಾಂತರ ಕಾರ್ಮಿಕರು 8 ಗಂಟೆಗಳ ಕೆಲಸದ ನಿಗದಿಗೆ ಪ್ರತಿಭಟನೆ ಆರಂಭಿಸಿದ್ದರು. ಈ ಹೋರಾಟದಲ್ಲಿ ಎಷ್ಟೋ ಕಾರ್ಮಿಕರು ಪ್ರಾಣತ್ಯಾಗ ಮಾಡಿದರು. ಹೀಗಾಗಿ 1916 ರವರೆಗೂ ಯುನೈಟೆಡ್ ಸ್ಟೇಟ್ಸ್ ಎಂಟು ಗಂಟೆಗಳ ಕೆಲಸ ಸಮಯವನ್ನು ನಿಗಧಿಪಡಿಸಿತು. ಕಾರ್ಮಿಕ ಹೋರಾಟಕ್ಕೆ ಸಿಕ್ಕ ಯಶಸ್ಸಿನ ನೆನಪಿಗಾಗಿ ಹಾಗೂ ಮೃತ ಕಾರ್ಮಿಕರ ಗೌರವಾರ್ಥ ಮೇ 1 ರಂದು ಕಾರ್ಮಿಕರ ದಿನವಾಗಿ ಆಚರಿಸಲಾಗುತ್ತಿದೆ. ಈ ಬಲಿದಾನಗಳ ಫಲವಾಗಿ ಕೆಲಸದ ಅವಧಿಯು ವಿಶ್ವದಾದ್ಯಂತ ಎಂಟು ಗಂಟೆಗಳಿಗೆ ಮಿತಿಗೊಂಡಿತು.

ಹೀಗಾಗಿ ಸ್ವೀಡನ್, ಫ್ರಾನ್ಸ್, ಪೋಲೆಂಡ್, ಫಿನ್ಲ್ಯಾಂಡ್, ನಾರ್ವೆ, ಸ್ಪೇನ್, ಜರ್ಮನಿ ಮತ್ತು ಇಟಲಿ ಸೇರಿದಂತೆ ಹಲವು ಯುರೋಪಿಯನ್ ದೇಶಗಳಲ್ಲಿ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ. ಜೊತೆಗೆ ದಕ್ಷಿಣ ಅಮೆರಿಕಾದಲ್ಲಿ, ಕ್ಯೂಬಾ, ಮೆಕ್ಸಿಕೋ, ಗಯಾನಾ, ಪೆರು, ಉರುಗ್ವೆ, ಬ್ರೆಜಿಲ್, ಅರ್ಜೆಂಟೀನಾ ಮತ್ತು ಚಿಲಿಯಲ್ಲಿ ಆಚರಿಸಲಾಗುತ್ತದೆ. ಕೆನಡಾ, US ಮತ್ತು ಆಸ್ಟ್ರೇಲಿಯಾದಲ್ಲಿ ವರ್ಷವಿಡೀ ವಿವಿಧ ಸಮಯಗಳಲ್ಲಿ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ.












Click it and Unblock the Notifications