Inspiring Story: ಆನಂದ್ ಮಹೇಂದ್ರ ಹೃದಯ ಗೆದ್ದ ವಿಡಿಯೋ ಯಾವುದು? ಇದರಿಂದ ಸಮಾಜಕ್ಕೆ ಪ್ರೇರಣೆ ಏನು?
ಮಹೇಂದ್ರ ಆಂಡ್ ಮಹೇಂದ್ರ ಎಷ್ಟು ದೊಡ್ಡ ಕಂಪನಿ ಎಂದು ಎಲ್ಲರಿಗೂ ಗೊತ್ತು. ದೇಶಕ್ಕೆ ಯಾರಾದರೂ ಕೀರ್ತಿ ತಂದರೆ ಅವರನ್ನು ಪ್ರೋತ್ಸಾಹಿಸಿ ಕಂಪನಿಯ ಮಹೇಂದ್ರ ಆಂಡ್ ಮಹೇಂದ್ರ ಅಧ್ಯಕ್ಷ ಆನಂದ್ ಮಹೇಂದ್ರ ಹಿಂದೆ ಬೀಳುವುದೇ ಇಲ್ಲ. ಸಾಮಾಜಿಕ ತಾಣದಲ್ಲಿ ಸಕ್ರಿಯವಾಗಿರುವ ಆನಂದ್ ಮಹೇಂದ್ರ ತಮ್ಮ ಎಕ್ಸ್ (X) ಖಾತೆಯಲ್ಲಿ ಜೀವನದಲ್ಲಿ ಸಾಧನೆ ಮಾಡಿರುವ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಸೋಮವಾರ ಸಹ ಇಂತಹದ್ದೇ ಒಂದು ಟ್ವೀಟ್ ಮಾಡಿದ್ದು ಸಖತ್ ವೈರಲ್ ಆಗುತ್ತಿದೆ.
ದಿನಂ ಪ್ರತಿ ಸಮಾಜದಲ್ಲಿ ನಡೆಯುವ ಆಗು ಹೋಗುಗಳ ಬಗ್ಗೆ ಆನಂದ್ ಮಹೇಂದ್ರ ಬೆಳಕು ಚೆಲ್ಲುತ್ತಾರೆ. ಸಾಮಾಜಿಕ ತಾಣದಲ್ಲಿ ಆನಂದ್ ಮಹೇಂದ್ರ ಜನರನ್ನು ಹೆಚ್ಚು ಪ್ರೇರೇಪಿಸುವ ಕೆಲವು ವೀಡಿಯೊಗಳೂ ಹಂಚಿಕೊಳ್ಳುತ್ತಾರೆ. ಸೋಮವಾರ ಒಬ್ಬ ಟ್ರಕ್ ಡ್ರೈವರ್ ಒಬ್ಬರ ವಿಡಿಯೋವನ್ನು ಆನಂದ್ ಮಹೇಂದ್ರ ಅವರು ಹಂಚಿಕೊಂಡಿದ್ದಾರೆ. ಮಹೇಂದ್ರ ಆಂಡ್ ಮಹೇಂದ್ರ ಕಂಪನಿಯ ಓನರ್ ಮಾಡಿರುವ ಟ್ವೀಟ್‌ನಲ್ಲಿ ಜನರಿಗೆ ಪ್ರೇರಣೆ ನೀಡುವ ಅಂಶಗಳು ಏನಿವೆ ಎಂಬುದನ್ನು ನೋಡೋಣ.

ಮಹೇಂದ್ರ ಕಂಪನಿಯ ಚೇರ್ಮನ್ ಅವರು ಟ್ರಕ್ ಡ್ರೈವರ್ ಹಾಗೂ ಖ್ಯಾತ ಯೂಟ್ಯೂಬರ್ ಅವರ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಟ್ರಕ್ ಚಾಲಕನೊಬ್ಬ ಟ್ರಕ್‌ನಲ್ಲಿ ಅಡುಗೆ ಮಾಡುತ್ತಿರುವುದು ಕಂಡುಬಂದಿದೆ. ಈ ಟ್ರಕ್ ಚಾಲಕ ಸ್ವತಃ ಅಡುಗೆ ಮಾಡುವುದನ್ನು ವಿಡಿಯೋ ಮಾಡಿದ್ದಾನೆ. ಈ 59 ಸೆಕೆಂಡುಗಳ ವೀಡಿಯೊದಲ್ಲಿ, ಟ್ರಕ್ ಡ್ರೈವರ್ ರಾಜೇಶ್ ರವಾನಿ ತನ್ನ ಟ್ರಕ್‌ನ ಕ್ಯಾಬಿನ್‌ನಲ್ಲಿ ಆಹಾರವನ್ನು ಬೇಯಿಸುತ್ತಿರುವುದನ್ನು ಕಾಣಬಹುದು.
ಈ ಟ್ರಕ್ ಡ್ರೈವರ್ ಕೂಡ ಪ್ರಸಿದ್ಧ ಯೂಟ್ಯೂಬರ್. ಇವರ ಯೂಟ್ಯೂಬ್‌ಗೆ 1.5 ಹಿಂಬಾಲಕರು ಇದ್ದಾರೆ. ಇವರ ಯೂಟ್ಯೂಬ್‌ನಲ್ಲಿ ಹಾಕಿರುವ ವಿಡಿಯೋಗಳು ಸಖತ್ ವೈರಲ್ ಆಗಿರುತ್ತವೆ. ಇವರ ವಿಡಿಯೋಗಳಿಂದಲೇ ಇವರು ಈಗ ಸೆಲೆಬ್ರಿಟಿಯಾಗಿ ಬೆಳೆದಿದ್ದಾರೆ.
ಆನಂದ್ ಮಹೇಂದ್ರ ಟ್ವೀಟ್‌ನಲ್ಲಿ ಏನಿದೆ?
ರಾಜೇಶ್ ರವಾನಿ ಕಳೆದ 25 ವರ್ಷಗಳಿಂದ ಟ್ರಕ್‌ಗಳನ್ನು ಓಡಿಸುತ್ತಿದ್ದಾರೆ. ಟೆಕ್ನಾಲಜಿ ಬೆಳೆದಂತೆ ಅವರು ತಮ್ಮ ತಮ್ಮ ವೃತ್ತಿಯ ಜೊತೆಗೆ ಆಹಾರ ಮತ್ತು ಪ್ರಯಾಣ ಬ್ಲಾಗಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಈಗ ಅವರು ಯೂಟ್ಯೂಬ್‌ನಲ್ಲಿ 1.5 ಮಿಲಿಯನ್ ಹಿಂಬಾಲಕರು ಇದ್ದಾರೆ. ಇವರನ್ನು ಯೂಟ್ಯೂಬ್ ಸೆಲೆಬ್ರಿಟಿಯಾಗಿ ಮಾಡಿದೆ. ಇತ್ತೀಚೆಗಷ್ಟೇ ತಮ್ಮ ಸಂಪಾದನೆಯಲ್ಲಿ ರಾಜೇಶ್ ರವಾನಿ ಹೊಸ ಮನೆಯನ್ನು ಖರೀದಿಸಿದ್ದಾರೆ.
ರಾಜೇಶ್ ರವಾನಿ ನಿಮ್ಮ ವಯಸ್ಸು ಏನೇ ಇರಲಿ ಅಥವಾ ನಿಮ್ಮ ವೃತ್ತಿ ಎಷ್ಟೇ ವಿನಮ್ರರಾಗಿರಲಿ, ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮತ್ತು ನಿಮ್ಮನ್ನು ನೀವು ಹೊಸ ರೂಪದಲ್ಲಿ ಕಾಣಿಸಿಕೊಳ್ಳಲು ಎಂದು ತಡ ಮಾಡುವುದಿಲ್ಲ. ಇದು ನನ್ನ ಸೋಮವಾರದ ಪ್ರೇರಣೆ. ಎಂದು ಬರೆದುಕೊಂಡಿದ್ದಾರೆ.
ಆನಂದ್ ಮಹೀಂದ್ರಾ ಅವರ ಈ ಪೋಸ್ಟ್‌ಗೆ ನೆಟ್ಟಿಗರು ಭಿನ್ನ ವಿಭಿನ್ನ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಯೂಟ್ಯೂಬರ್ ಹಾಗೂ ಸಾಮಾನ್ಯ ಮನುಷ್ಯನನ್ನು ತಮ್ಮ ಖಾತೆಯಲ್ಲಿ ಬರೆದು ಪ್ರಚಾರ ಮಾಡಿದ್ದಕ್ಕಾಗಿ ಬಳಕೆದಾರರು ಮಹೀಂದ್ರವನ್ನು ಹೊಗಳಿದ್ದಾರೆ. ಒಬ್ಬ ಬಳಕೆದಾರ, 'ಅತ್ಯುತ್ತಮ ವಿಷಯವೆಂದರೆ ಅವನು ತನ್ನ ಚಾಲಕನ ಕೆಲಸವನ್ನು ಬಿಟ್ಟಿಲ್ಲ' ಎಂದು ಬರೆದಿದ್ದಾರೆ. ಈ ಕಾಮೆಂಟ್‌ಗೆ ಪ್ರತಿಕ್ರಿಯೆಯಾಗಿ ಮಹೀಂದ್ರಾ, ಪ್ರತಿಕ್ರಿಯೆ ನೀಡಿದ್ದಾರೆ.
Rajesh Rawani, who’s been a truck driver for over 25 years, added food & travel vlogging to his profession and & is now a celebrity with 1.5M followers on YouTube.
— anand mahindra (@anandmahindra) April 8, 2024
He just bought a new home with his earnings.
He’s demonstrated that no matter your age or how modest your… pic.twitter.com/5ccfwjYOff
ಹೀಗೆ ಆನಂದ್ ಮಹೇಂದ್ರ ಅವರು ಸಮಾಜಿಕ ತಾಣದಲ್ಲಿ ಒಂದಾಲ್ಲ ಒಂದು ಪ್ರೇರಣಾದಾಯಕ ಮೆಸೇಜ್ ಮಾಡಿ ಸಮಾಜಕ್ಕೆ ನವ ಉತ್ಸಾಹ ತುಂಬಿದ್ದಾರೆ. ಆನಂದ್ ಮಹೀಂದ್ರಾ ಅವರ ಪೋಸ್ಟ್‌ನ್ನು ಸುದ್ದಿ ಬರೆಯುವ ಸಮಯದವರೆಗೆ 2.3 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 35 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಸ್ವೀಕರಿಸಿದೆ. ನೂರಾರು ಇಂಟರ್ನೆಟ್ ಬಳಕೆದಾರರು ಹಿರಿಯ ಉದ್ಯಮಿಯ ಪೋಸ್ಟ್‌ಗೆ ಕಾಮೆಂಟ್‌ಗಳನ್ನು ಮಾಡಿದ್ದಾರೆ.












Click it and Unblock the Notifications