Infinix: ಸಖತ್ ಫೀಚರ್ ಹೊಂದಿವೆ ಇನ್ಫಿನಿಕ್ಸ್ ಕಂಪನಿಯ ಎರಡು ಮೊಬೈಲ್: ಬೆಲೆ ಎಷ್ಟು?
ಈಗಗಲೇ ಹಲವು ಕಂಪನಿಯ ಮೊಬೈಲ್‌ಗಳು ಗ್ರಾಹರನ್ನು ಸೆಳೆಯುವಲ್ಲಿ ಸಫಲವಾಗುತ್ತಿವೆ. ಈ ನಿಟ್ಟಿನಲ್ಲಿ ಟೆಕ್ ಕಂಪನಿ ಇನ್ಫಿನಿಕ್ಸ್ ಸಹ ಒಂದು. ಮಾರುಕಟ್ಟೆಯಲ್ಲಿ ಈ ಕಂಪನಿಯ ಫೋನ್‌ಗಳಿಗೆ ಬೇಡಿಕೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಕಂಪನಿ ಮತ್ತೊಂದು ಬಜೆಟ್ ಫ್ರೆಂಡ್ಲಿ ಫೋನ್ ಇಂಟ್ರಡ್ಯೂಸ್ ಮಾಡಿದೆ.
ಬಿಡುಗಡೆಗೊಂಡ ಎರಡೂ ಫೋನ್‌ಗಳು ಸಖತ್ ಆಗಿದ್ದು, ಲುಕ್ ಸ್ಟೈಲಿಷ್ ಆಗಿದೆ. ಈ ಫೋನ್‌ಗಳನ್ನು ಕೊಳ್ಳುವಂತೆ ಇದರ ಲುಕ್ ಇದೆ. ಈಗ ಮಾರುಕಟ್ಟೆಯಲ್ಲಿರುವ ಹಲವು ಕಂಪನಿಗಳ ಮೊಬೈಲ್‌ಗಳಿಗೆ ಪೈಪೋಟಿ ನೀಡುವ ಉದ್ದೇಶದಿಂದಲೇ ಇನ್ಫಿನಿಕ್ಸ್ ಈಗ Note 40 Pro 5G' ಮತ್ತು Infinix Note 40 Pro+ 5G ಎಂಬ ಎರಡು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.

Infinix ಈ ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಟೈಟಾನ್ ಗೋಲ್ಡ್ ಮತ್ತು ವಿಂಟೇಜ್ ಗ್ರೀನ್ ಎಂಬ ಎರಡು ಬಣ್ಣ ಆಯ್ಕೆಗಳಲ್ಲಿ ಬಿಡುಗಡೆ ಮಾಡಿದೆ. ಖರೀದಿದಾರರು ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಿಂದ ಈ ಮೊಬೈಲ್ ಖರೀದಿಸಬಹುದು. ಈ ಹೊಸ ಫೋನಿನ ಇನ್ನೊಂದು ವಿಶೇಷತೆ ಅಂದರೆ ಇದು ರಿವರ್ಸ್ ಚಾರ್ಜಿಂಗ್ ವ್ಯವಸ್ಥೆಯನ್ನು ಸಹ ನೀಡಿದೆ.
ಎರಡೂ ಇನ್ಫಿನಿಕ್ಸ್ ಸ್ಮಾರ್ಟ್‌ಫೋನ್‌ಗಳು 6.78-ಇಂಚಿನ 3D ಕರ್ವ್ಡ್ AMOLED ಡಿಸ್ಪ್ಲೇ, 108-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 256GB ಸ್ಟೋರೇಜ್ ಹೊಂದಿವೆ. ಅದೇ ಸಮಯದಲ್ಲಿ, ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ 20W ವೈರ್‌ಲೆಸ್ ಚಾರ್ಜಿಂಗ್ ವ್ಯವಸ್ಥೆಯನ್ನು ಸಹ ಒದಗಿಸಲಾಗಿದೆ.

ಈ ಫೋನ್‌ನಲ್ಲಿ ಯಾವ ಪ್ರೊಸೆಸರ್ ಇದೆ?
ಇನ್ಫಿನಿಕ್ಸ್ ನೋಟ್ 40 ಪ್ರೊ ಸರಣಿಯ ಎರಡೂ ಸ್ಮಾರ್ಟ್‌ಫೋನ್‌ಗಳು ಮೀಡಿಯಾ ಟೆಕ್ ಡೈಮೆನ್ಷನ್ 7020 ಪ್ರೊಸೆಸರ್ ಅನ್ನು ಹೊಂದಿವೆ. ಇದು ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯ ನಿರ್ವಹಿಸುತ್ತದೆ.
ಡಿಸ್ ಪ್ಲೇ ಹೇಗಿದೆ?
ಇನ್ಫಿನಿಕ್ಸ್ ನೋಟ್ 40 ಪ್ರೊ ಸರಣಿಯ ಸ್ಮಾರ್ಟ್‌ಫೋನ್‌ಗಳು 6.78 ಇಂಚಿನ ಕರ್ವ್ ಡಿಸ್ ಪ್ಲೇ ಹೊಂದಿವೆ. ಅಲ್ಲದೆ ಪೂರ್ಣ ಎಚ್‌ಡಿ ಪ್ಲಸ್ ಅಮೋಲ್ಡ್ 3ಡಿ ಡಿಸ್ ಪ್ಲೇ ಹೊಂದಿರಲಿದೆ. ಈ ಫೋನ್ 120Hz ರಿಫ್ರೆಶ್ ದರವನ್ನು ಹೊಂದಿದೆ. ಇದು 1300 ನಿಟ್‌ಗಳು ಮತ್ತು 1080x2436 ಹೊಂದಿದೆ.
ಎಷ್ಟು ಮೆಗಾ ಪಿಕ್ಸಲ್ ಕ್ಯಾಮೆರಾ ಹೊಂದಿದೆ?
ಇನ್ಫಿನಿಕ್ಸ್ ಮೊಬೈಲ್‌ನ ಹಿಂದಿನ ಪ್ಯಾನೆಲ್‌ನಲ್ಲಿ ಕ್ವಾಡ್ ಸೆಟಪ್‌ನಲ್ಲಿ ಫ್ಲ್ಯಾಷ್ ಲೈಟ್‌ನೊಂದಿಗೆ ಮೂರು ಕ್ಯಾಮೆರಾಗಳನ್ನು ನೀಡಲಾಗಿದೆ. ಪ್ರೈಮರಿ ಕ್ಯಾಮೆರಾ 108 ಮೆಗಾ ಪಿಕ್ಸಲ್ ಹೊಂದಿದೆ. ಕ್ಯಾಮೆರಾ 2MP ಮ್ಯಾಕ್ರೋ ಲೆನ್ಸ್ ಹೊಂದಿದ್ದು, ಮೂರನೇ ಕ್ಯಾಮೆರಾ 2MP ಡೆಪ್ತ್ ಸೆನ್ಸಾರ್ ಹೊಂದಿರಲಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ ಫ್ರಂಟ್ ಕ್ಯಾಮೆರಾ 32 ಮೆಗಾಪಿಕ್ಸೆಲ್ ಹೊಂದಿದೆ.
ಬ್ಯಾಟರಿ ಹೇಗಿದೆ?
ಈ ಫೋನ್‌ನಿನ ಇನ್ನೊಂದು ವೈಶಿಷ್ಟ್ಯ ಎಂದರೆ ಇದು 20W ವೈರ್‌ಲೆಸ್ ಚಾರ್ಜಿಂಗ್ ಮತ್ತು ರಿವರ್ಸ್ ಚಾರ್ಜಿಂಗ್ ವ್ಯವಸ್ಥೆ ಹೊಂದಿದೆ. ಇನ್ಫಿನಿಕ್ಸ್ ನೋಟ್ 40 ಪ್ರೋ ಪ್ಲಸ್ 4600 mAh ಬ್ಯಾಟರಿ ಹೊಂದಿದ್ದು, 100 ವ್ಯಾಟ್ ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ನೋಟ್ 40 ಪ್ರೋ 5000 mAh ಬ್ಯಾಟರಿ ಹೊಂದಿದ್ದು, 45 ವ್ಯಾಟ್ ಚಾರ್ಜಿಂಗ್ ಹೊಂದಿದೆ.
ಈ ಫೋನಿನ ವಿಶೇಷತೆಯೆಂದರೆ ಅದರ ಬ್ಯಾಟರಿ ಮತ್ತು ಚಾರ್ಜಿಂಗ್ ವೈಶಿಷ್ಟ್ಯಗಳು. Infinix ಈ ಫೋನ್ ಸರಣಿಯೊಂದಿಗೆ MagCharge ತಂತ್ರಜ್ಞಾನವನ್ನು ಹೊಂದಿದೆ. ಇದು Apple ನ MagSafe ತಂತ್ರಜ್ಞಾನವನ್ನು ಹೋಲುತ್ತದೆ.
ಬೆಲೆ ಎಷ್ಟು?
ಇನ್ಫಿನಿಕ್ಸ್ ನೋಟ್ 40 ಪ್ರೋ 5ಜಿ ಬೆಲೆ 21,999 ರೂ. ಆಗಿದೆ. ಇದು 8GB RAM ಮತ್ತು 256GB ಇಂಟರ್‌ನಲ್ ಸ್ಟೋರೇಜ್ ಹೊಂದಿದೆ. ಇನ್ಫಿನಿಕ್ಸ್ ನೋಟ್ 40 ಪ್ರೋ+ 5G ಬೆಲೆ 24,999 ರೂಪಾಯಿ ಆಗಿದ್ದು, 12GB RAM ಮತ್ತು 256GB ಸ್ಟೋರೇಜ್ ಹೊಂದಿದೆ.












Click it and Unblock the Notifications