Infinix: ಭರ್ಜರಿ ಗೇಮಿಂಗ್ ಫೀಚರ್‌ ಹೊಂದಿರುವ ಮೊಬೈಲ್‌ ಬಿಡುಗಡೆ ಸಜ್ಜು

ನೀವು ನಿಮ್ಮ ಮೊಬೈಲ್‌ನಲ್ಲಿ ಹೆಚ್ಚಾಗಿ ಗೇಮ್‌ಗಳನ್ನು ಆಡುತ್ತೀರಾ. ಬೇರೆ ಮೊಬೈಲ್‌ ತೆಗೆದುಕೊಳ್ಳುವ ಪ್ಲ್ಯಾನ್‌ ಏನಾದ್ರೂ ಇದೆಯಾ. ಕೊಂಚ ದಿನ ಕಾಯಿರಿ. ನಿಮಗೆ ನಿಮ್ಮ ಬಜೆಟ್‌ಗೆ ಸೂಟ್‌ ಆಗುವ ಹಾಗೆ ಒಂದು ಫೋನ್‌ ಲಾಂಚ್‌ ಆಗಲು ಸಿದ್ಧವಾಗಿದೆ. ಇದರ ಭರ್ಜರಿ ಲುಕ್‌ ಹಾಗೂ ಪರ್ಫಾಮೆನ್ಸ್‌ ನೋಡಿದರೆ, ನೀವು ತೆಗೆದುಕೊಳ್ಳುವುದು ಗ್ಯಾರಂಟಿ.

ಮಾರುಕಟ್ಟೆಯಲ್ಲಿ ಹಲವು ವಿದಧ ಮೊಬೈಲ್‌ಗಳು ಇವೆ. ಹಲವು ಕಂಪನಿಗಳು ಹಲವು ವಯೋಮಾನದ ಜನ ಹಾಗೂ ಅವರ ಬಳಕೆಗೆ ಅನುಗುಣವಾಗಿ ಮೊಬೈಲ್‌ಗಳನ್ನು ತಯಾರಿಸಲಾಗುತ್ತದೆ. ಒಂದೊಂಬ್ಬರಿಗೆ ಕ್ಯಾಮೆರಾ ಚೆನ್ನಾಗಿದ್ದರೆ ಸಾಕು ಅನಿಸುತ್ತದೆ. ಇನ್ನು ಕೆಲವರಿಗೆ ಡಿಸ್‌ಪ್ಲೇ ಮೇಲೆ ಮೋಹ ಇರುತ್ತದೆ. ಇನ್ನು ಚಿಪ್‌ ಸೆಟ್, ಪ್ರೊಸೆಸರ್‌ ಬಗ್ಗೆಯೂ ಜನ ಒಂದು ಕಣ್ಣು ಹಾಯಿಸುತ್ತಾರೆ. ಇನ್ನು ಕೆಲವು ಜನ ಮ್ಯೂಸಿಕ್‌, ಫಿಲ್ಮ್‌ ನೋಡಲು ಬಳಸುತ್ತಾರೆ. ಹೆಚ್ಚಾಗಿ ಯುವಕರು ಮೊಬೈಲ್‌ನಲ್ಲಿ ಗೇಮ್‌ ಆಡಲು ಇಷ್ಟ ಪಡುತ್ತಾರೆ. ಈ ಸೆಗ್ಮೆಂಟ್‌ಗೆ ಮತ್ತೊಂದು ಫೋನ್‌ ಲಾಂಚ್‌ ಆಗಿದೆ.

Infinix GT 20 Pro Specs Price and Design Renders Leak Ahead of India Launch

ಗೇಮಿಂಗ್ ಸ್ಮಾರ್ಟ್‌ಫೋನ್‌ ಲಾಂಚ್

ಇನ್ಫಿನಿಕ್ಸ್ ಕಂಪನಿ ತನ್ನ ಗ್ರಾಹಕರನ್ನು ತನ್ನತ್ತ ಹಿಡಿದಿಟ್ಟುಕೊಳ್ಳಲು ಹೊಸ ಹೊಸ ಪ್ಲ್ಯಾನ್‌ಗಳನ್ನು ಮಾಡುತ್ತಲೆ ಇದೆ. ಇದರ ಭಾಗವಾಗಿ ಇನ್ನೇನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಇನ್ಫಿನಿಕ್ಸ್‌ ಮತ್ತೊಂದು ಭರ್ಜರಿ ಗೇಮಿಂಗ್ ಫೋನ್ ಲಾಂಚ್ ಮಾಡಲು ತಯಾರಿ ನಡೆಸಿದೆ. ಗೇಮರ್ಸ್‌ಗಳನ್ನೇ ಗಮನದಲ್ಲಿಟ್ಟುಕೊಂಡು ಈ ಫೋನ್ ಲಾಂಚ್‌ ಮಾಡಲು ಸಿದ್ಧವಾಗಿದೆ ಇನ್ಫಿನಿಕ್ಸ್.

ನೀವು ಗೇಮರ್ ಆಗಿದ್ದರೆ Infinix GT 20 Pro ನಿಮ್ಮನ್ನು ಆಕರ್ಷಿಸುವದರಲ್ಲಿ ಯಾವುದೇ ಡೌಟ್ ಇಲ್ಲ. ಗೇಮಿಂಗ್ ಅನುಭವವನ್ನು ಹೆಚ್ಚಿಸಲು, ಕಂಪನಿಯು ಈ ಸ್ಮಾರ್ಟ್‌ಫೋನ್‌ನಲ್ಲಿ ಶಕ್ತಿಯುತ ಚಿಪ್‌ಸೆಟ್ ಅನ್ನು ನೀಡಿದೆ. ಗೇಮಿಂಗ್ ಅನುಭವವನ್ನು ಸುಧಾರಿಸಲು ಇನ್ಫಿನಿಕ್ಸ್ ಈ ಫೋನ್‌ ಲಾಂಚ್‌ ಮಾಡಿದೆ.

Infinix GT 20 Pro Specs Price and Design Renders Leak Ahead of India Launch

ಭರ್ಜರಿ ಪ್ರೊಸೆಸರ್

Infinix GT 20 Pro ಡೈಮೆನ್ಷನ್ 8200 ಶಕ್ತಿಯುತ ಗೇಮಿಂಗ್ ಚಿಪ್‌ಸೆಟ್ ಅನ್ನು ಹೊಂದಿದೆ. ಗೇಮಿಂಗ್ ಸಮಯದಲ್ಲಿ ಈ ಫೋನ್ ಬಿಸಿಯಾಗುವುದಿಲ್ಲ ಮತ್ತು ಸ್ಮಾರ್ಟ್‌ಫೋನ್ ವಿಳಂಬವಿಲ್ಲದೆ ಕಾರ್ಯನಿರ್ವಹಿಸುತ್ತದೆ. ಈ ಇತ್ತೀಚಿನ ಫೋನ್‌ನಲ್ಲಿ ನೀವು 120fps ನಲ್ಲಿ ಗೇಮಿಂಗ್ ಮಾಡಬಹುದು.

ಡಿಸ್‌ಪ್ಲೇ ಹೇಗಿದೆ?

ಇನ್ಫಿನಿಕ್ಸ್ ಜಿಟಿ 20 ಪ್ರೋ ನಲ್ಲಿ ಉತ್ತಮ ಲುಕ್‌ ಹೊಂದಿದೆ. ಈ ಮೊಬೈಲ್‌ ಪಾರದರ್ಶಕ ಬ್ಯಾಕ್ ಪ್ಯಾನೆಲ್ ಅನ್ನು ನೀಡಿದ್ದು, ಆಕರ್ಷಕವಾಗಿ ಕಾಣುತ್ತದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಬಳಕೆದಾರರಿಗೆ 6.78 ಇಂಚಿನ AMOLED ಡಿಸ್‌ಪ್ಲೇ ನೀಡಲಿದೆ. ಇದರಲ್ಲಿ ನೀವು 1300 ನಿಟ್‌ಗಳಿಗಿಂತ ಹೆಚ್ಚು ಹೊಳಪನ್ನು ಪಡೆಯಬಹುದು. ಹೀಗಾಗಿ ಈ ಫೋನ್‌ನನ್ನು ನೀವು ಸೂರ್ಯನ ಬೆಳಕಿನಲ್ಲೂ ಸುಲಭವಾಗಿ ಬಳಸಬಹುದು. ಇದು 144Hz ನ ರಿಫ್ರೆಶ್ ದರವನ್ನು ಹೊಂದಿದೆ. ಈ ಮೊಬೈಲ್‌ 12GB RAM ವರೆಗೂ ಬೆಂಬಲಿಸುತ್ತದೆ.

Infinix GT 20 Pro Specs Price and Design Renders Leak Ahead of India Launch

ಎಷ್ಟು ಮೆಗಾ ಪಿಕ್ಸಲ್‌ ಕ್ಯಾಮೆರಾ ಹೊಂದಿದೆ?

Infinix GT 20 Pro ನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಇದರ ಪ್ರೈಮರಿ ಕ್ಯಾಮೆರಾ 108 ಮೆಗಾಪಿಕ್ಸೆಲ್ ಹೊಂದಿದ್ದು. ಸೆಕೆಂಡರಿ ಕ್ಯಾಮೆರಾ 2 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಇದು ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 32-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಿದೆ. ಸ್ಮಾರ್ಟ್‌ಫೋನ್‌ಗೆ ಶಕ್ತಿ ನೀಡಲು, ಇದು 5000mAh ಬ್ಯಾಟರಿ ನೀಡಲಿದ್ದು, 45 ವ್ಯಾಟ್‌ ಚಾರ್ಜಿಂಗ್ ಅನ್ನು ನೀಡಲಿದೆ. ಈ ಫೋನ್‌ ಮೇನಲ್ಲಿ ಲಾಂಚ್‌ ಆಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+