ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್ ಸೋಂಕಿತರಿಗಿಂತ ಜ್ವರ, ಕೆಮ್ಮು ಇಲ್ಲದವರೇ ಡೇಂಜರ್!

|
Google Oneindia Kannada News

ನವದೆಹಲಿ, ಸಪ್ಟೆಂಬರ್.03: ಕೆಮ್ಮು, ನೆಗಡಿ, ಜ್ವರ, ಅತಿಸಾರ, ಉಸಿರಾಟ ಸಮಸ್ಯೆಯಂತಾ ಲಕ್ಷಣ ಕಂಡು ಬಂದವರಲ್ಲಿ ಕೊರೊನಾವೈರಸ್ ಸೋಂಕು ತಗುಲಿರುತ್ತದೆ ಎಂಬುದನ್ನು ಈಗಾಗಲೇ ವೈದ್ಯರು ಕಂಡುಕೊಂಡಿದ್ದಾರೆ. ಇದನ್ನು ಹೊರತಾಗಿ ಆಘಾತ ಹುಟ್ಟಿಸುವಂತಾ ವಿಚಾರ ಬಯಲಾಗಿದೆ.

Recommended Video

The Rock ಕುಟುಂಬಕ್ಕೂ ಕೂಡ ಕೊರೊನ ತಗುಲಿತ್ತು | Oneindia Kannada

ಕೊವಿಡ್-19 ಸೋಂಕಿತ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳಿಗಿಂತಲೂ ರೋಗದ ಲಕ್ಷಣಗಳಿಲ್ಲದ ಕೊವಿಡ್-19 ಸೋಂಕಿತರಲ್ಲಿ ವೈರಸ್ ಗಳ ಪ್ರಮಾಣವು ಹೆಚ್ಚಾಗಿರುತ್ತದೆ ಎನ್ನುವುದು ಡಿಎನ್ಎ ಫಿಂಗರ್ ಪ್ರಿಂಟಿಂಗ್ ಆಂಡ್ ಡಯಾಗ್ನಸ್ಟಿಕ್ಸ್ ಸೆಂಟರ್(ಸಿಡಿಎಫ್ ಡಿ) ನಡೆಸಿದ ಸಂಶೋಧನೆ ವೇಳೆ ತಿಳಿದು ಬಂದಿದೆ.

ತೆಲಂಗಾಣದಲ್ಲಿ 200 ಮಂದಿ ಕೊರೊನಾವೈರಸ್ ಲಕ್ಷಣಗಳೇ ಇಲ್ಲದ ಸೋಂಕಿತರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಲಕ್ಷಣವುಳ್ಳ ಸೋಂಕಿತರಿಗಿಂತಲೂ ಲಕ್ಷಣಗಳಿಲ್ಲದ ಸೋಂಕಿತರಲ್ಲಿ ವೈರಾಣುಗಳ ಸಂಖ್ಯೆ ಹೆಚ್ಚಾಗಿತ್ತು. ಹೀಗಾಗಿ ಲಕ್ಷಣರಹಿತ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಗುರುತಿಸುವುದಕ್ಕೆ ಸಲಹೆ ನೀಡಲಾಗುತ್ತಿದೆ.

ಕೊರೊನಾವೈರಸ್ ಪಾಲಿಸಿ ಮೇಕರ್ಸ್ ಪಾತ್ರವೇನು?

ಕೊರೊನಾವೈರಸ್ ಪಾಲಿಸಿ ಮೇಕರ್ಸ್ ಪಾತ್ರವೇನು?

ಕೊರೊನಾವೈರಸ್ ಸೋಂಕಿನ ಲಕ್ಷಣಗಳಿಲ್ಲದ ಜನರಲ್ಲೇ ಹೆಚ್ಚು ವೈರಾಣುಗಳ ಪ್ರಮಾಣ ಕಂಡು ಬಂದಿರುವ ಬಗ್ಗೆ 'ಪಾಲಿಸಿ ಮೇಕರ್ಸ್'ಗೆ ಮಾಹಿತಿ ನೀಡುವಂತೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಅಸಲಿದೆ ಈ ಪಾಲಿಸಿ ಮೇಕರ್ಸ್ ಎಂದರೆ ಯಾರು ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಕೊರೊನಾವೈರಸ್ ಸೋಂಕು ಹರಡುವಿಕೆ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರ ಮತ್ತು ಜನಪ್ರತಿನಿಧಿಗಳು ನೇಮಿಸಿಕೊಂಡ ವಿಶೇಷ ತಜ್ಞರ ತಂಡದ ಸದಸ್ಯರನ್ನು ಪಾಲಿಸಿ ಮೇಕರ್ಸ್ ಎಂದು ಕರೆಯಲಾಗುತ್ತದೆ. ಸೋಂಕು ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜನರಿಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಈ ಪಾಲಿಸಿ ಮೇಕರ್ಸ್ ಮಾಡುತ್ತಾರೆ.

ಲಕ್ಷಣಗಳಿಲ್ಲದ ಸೋಂಕಿತರನ್ನು ಪತ್ತೆ ಮಾಡುವುದೇ ಮುಖ್ಯ

ಲಕ್ಷಣಗಳಿಲ್ಲದ ಸೋಂಕಿತರನ್ನು ಪತ್ತೆ ಮಾಡುವುದೇ ಮುಖ್ಯ

ಕೊರೊನಾವೈರಸ್ ಸೋಂಕಿನ ಲಕ್ಷಣಗಳಿಲ್ಲದ ಸೋಂಕಿತರನ್ನು ಪತ್ತೆ ಮಾಡುವುದೇ ಬಹಳ ಮುಖ್ಯವಾಗುತ್ತದೆ. ರೋಗದಿಂದ ಪ್ರತಿರಕ್ಷೆ ಹಾಗೂ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವಲ್ಲಿ ಜನರು ಹೆಚ್ಚಿನ ನಿಗಾ ವಹಿಸಬೇಕಾಗುತ್ತದೆ. ಇಲ್ಲದೇ ಹೋದಲ್ಲಿ ಲಕ್ಷಣರಹಿತರಿಂದಲೇ ಸೋಂಕಿನ ಪ್ರಮಾಣ ಮತ್ತು ಮರಣ ಪ್ರಮಾಣವು ಹೆಚ್ಚಾಗುವ ಸಾಧ್ಯತೆಯಿರುತ್ತದೆ ಎಂದು ಸಿಡಿಎಫ್ ಡಿನ ಮುರಳಿ ಧರಣ್ ಭಾಷ್ಯಮ್ ಎಚ್ಚರಿಸಿದ್ದಾರೆ.

ಅಧ್ಯಯನದಿಂದ ಪ್ರತಿರಕ್ಷಾ ಶಾಸ್ತ್ರಜ್ಞರಲ್ಲೇ ಹೆಚ್ಚಿನ ಆತಂಕ

ಅಧ್ಯಯನದಿಂದ ಪ್ರತಿರಕ್ಷಾ ಶಾಸ್ತ್ರಜ್ಞರಲ್ಲೇ ಹೆಚ್ಚಿನ ಆತಂಕ

ಕೊರೊನಾವೈರಸ್ ಸೋಂಕಿನ ಲಕ್ಷಣಗಳಿಲ್ಲದ ವ್ಯಕ್ತಿಗಳಲ್ಲೇ ವೈರಾಣುಗಳ ಪ್ರಮಾಣ ಹೆಚ್ಚಾಗಿರುವುದು ಸಂಶೋಧನಾ ಅಧ್ಯಯನದಿಂದ ಕಂಡು ಬಂದಿದೆ. ಈ ವರದಿಯಿಂದ ಅಚ್ಚರಿ ಉಂಟಾಯಿತು ಎಂದು ಪ್ರತಿರಕ್ಷಾ ಶಾಸ್ತ್ರಜ್ಞ ಸತ್ಯಜಿತ್ ರಾಥ್ ಅಭಿಪ್ರಾಯಪಟ್ಟಿದ್ದಾರೆ. "ಇತರ ಅಧ್ಯಯನಗಳು, ಲೇಖಕರು ಗಮನಿಸಿದಂತೆ ಬೇರೆ ರೀತಿಯಲ್ಲಿ ವರದಿ ಮಾಡಿ," ಎಂದು ನವದೆಹಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಮ್ಯುನೊಲಾಜಿ (ಎನ್‌ಐಐ)ಯ ಪ್ರತಿರಕ್ಷಾ ಶಾಸ್ತ್ರಜ್ಞ ಸತ್ಯಜಿತ್ ರಾಥ್ ತಿಳಿಸಿದ್ದಾರೆ.

ಅಸಾಧಾರಣವಾಗಿ ಏರಿಕೆಯಾದ ಕೊವಿಡ್-19 ಕೇಸ್

ಅಸಾಧಾರಣವಾಗಿ ಏರಿಕೆಯಾದ ಕೊವಿಡ್-19 ಕೇಸ್

ಕೊರೊನಾವೈರಸ್ ಸೋಂಕಿತರ ಪ್ರಮಾಣವು ಅಸಾಧಾರಣ ಮಟ್ಟಯಲ್ಲಿ ಏರಿಕೆಯಾಗಿದೆ. ಹೈದ್ರಾಬಾದ್ ರೀತಿಯ ನಗರದಲ್ಲಿ ಕೊವಿಡ್-19 ಸಂಖ್ಯೆ ಏರಿಕೆ ಮೇಲೆ ಹೆಚ್ಚಿನ ಅಧ್ಯಯನ ನಡೆಸಲಾಗಿದ್ದು, ಏಪ್ರಿಲ್ ಎರಡನೇ ವಾರದಿಂದ ರಾಜ್ಯದಲ್ಲಿ ಪ್ರತಿನಿತ್ಯ ಸೋಂಕಿತ ಪ್ರಕರಣಗಳು 2 ಸಾವಿರಕ್ಕಿಂತ ಹೆಚ್ಚಾಗಿರುವುದು ಬೆಳಕಿಗೆ ಬಂದಿತು. ಕಳೆದ 24 ಗಂಟೆಗಳಲ್ಲಿ 2817 ಹೊಸ ಕೊವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆಯು 1.33 ಲಕ್ಷಕ್ಕೆ ಏರಿಕೆಯಾಗಿದೆ. 1 ಲಕ್ಷಕ್ಕಿಂತ ಹೆಚ್ಚು ಸೋಂಕಿತರು ಗುಣಮುಖರಾಗಿದ್ದರೆ, 856 ಜನರು ಇದುವರೆಗೂ ಮಹಾಮಾರಿಗೆ ಬಲಿಯಾಗಿದ್ದಾರೆ.

ಒಟ್ಟು ಮಾದರಿಯಲ್ಲಿ ಶೇ.95ರಷ್ಟು ಸೋಂಕಿತರಲ್ಲಿ 20ಬಿ ತಳಿ

ಒಟ್ಟು ಮಾದರಿಯಲ್ಲಿ ಶೇ.95ರಷ್ಟು ಸೋಂಕಿತರಲ್ಲಿ 20ಬಿ ತಳಿ

ಕೊರೊನಾವೈರಸ್ ಸೋಂಕಿತರಲ್ಲಿ ಹಲವು ರೀತಿಯ ವೈರಾಣುಗಳು ಪತ್ತೆಯಾಗಿರುವುದು ಈಗಾಗಲೇ ವೈದ್ಯಕೀಯ ಸಂಶೋಧನೆಗಳಲ್ಲಿ ತಿಳಿದು ಬಂದಿದೆ. ಹೈದರಾಬಾದ್ ಮತ್ತು ಸುತ್ತಮುತ್ತಲಿನ 210 ರೋಗಿಗಳಿಂದ ಕೊರೊನಾವೈರಸ್ ಮಾದರಿಗಳ ಸಂಗ್ರಹಿಸಿ ಈ ಬಗ್ಗೆ ವಿಶ್ಲೇಷಿಸಲಾಯಿತು. ವೈದ್ಯಕೀಯ ಸಂಶೋಧನೆ ಸಂದರ್ಭದಲ್ಲಿ ಶೇ.95ರಷ್ಟು ಲಕ್ಷಣರಹಿತ ಕೊವಿಡ್-19 ಸೋಂಕಿತರಲ್ಲಿ '20ಬಿ' ತಳಿಯ ವೈರಸ್ ಪತ್ತೆಯಾಗಿದೆ. ಉಳಿದ ಶೇ.5ರಷ್ಟು ಸೋಂಕಿತರಲ್ಲಿ ಬೇರೆ ತಳಿ ಮತ್ತು ಉಪತಳಿಯ ವೈರಸ್ ಗಳು ಪತ್ತೆಯಾಗಿವೆ.

ತೆಲಂಗಾಣದಲ್ಲಿ ಶೇ.100ರಷ್ಟು ಸೋಂಕಿತರಲ್ಲಿ 20ಬಿ ವೈರಸ್

ತೆಲಂಗಾಣದಲ್ಲಿ ಶೇ.100ರಷ್ಟು ಸೋಂಕಿತರಲ್ಲಿ 20ಬಿ ವೈರಸ್

ಕಳೆದ ಮೇ ತಿಂಗಳಿನಿಂದ ಜುಲೈ ತಿಂಗಳವರೆಗೂ ತೆಲಂಗಾಣದಲ್ಲಿ ಸಾವಿರಾರು ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಶೇ.100ರಷ್ಟು ಸೋಂಕಿತರಲ್ಲಿ 20ಬಿ ವೈರಸ್ ಇರುವುದು ಪತ್ತೆಯಾಗಿದೆ. ಅಂದರೆ ರೋಗದ ಲಕ್ಷಣಗಳಿಲ್ಲದ ಸೋಂಕಿತರಿಂದಲೇ ಅತಿಹೆಚ್ಚು ಕೊವಿಡ್-19 ಪ್ರಕರಣಗಳು ಹರಡಿರುವುದು ಸಂಶೋಧನೆ ವೇಳೆ ತಿಳಿದು ಬಂದಿದೆ. ಮೇ ತಿಂಗಳನಿಂದ ಇತ್ತೀಚಿಗೆ ಪತ್ತೆಯಾದ ಸೋಂಕಿತರಲ್ಲಿ 2 ರಿಂದ 3 ತಳಿಯ ವೈರಸ್ ಕಂಡು ಬಂದಿರುವುದನ್ನು ತಜ್ಞರು ಪಟ್ಟಿ ಮಾಡಿದ್ದಾರೆ. ಅದರಲ್ಲಿ 20ಬಿ ತಳಿಯ ವೈರಸ್ ಅತಿಹೆಚ್ಚಿನ ಪ್ರಮಾಣದಲ್ಲಿರುವುದನ್ನು ಕಂಡು ಹಿಡಿಯಲಾಗಿದೆ.

ಲಕ್ಷಣವಿಲ್ಲದವರಿಗೆ ಕೊರೊನಾವೈರಸ್ ಸೋಂಕು

ಲಕ್ಷಣವಿಲ್ಲದವರಿಗೆ ಕೊರೊನಾವೈರಸ್ ಸೋಂಕು

ತೆಲಂಗಾಣದಲ್ಲಿ ಮೇ ತಿಂಗಳಿನಿಂದ ಜುಲೈವರೆಗೆ ಸಂಗ್ರಹಿಸಿದ ರಕ್ತ, ಗಂಟಲು ದ್ರವದ ಮಾದರಿ ತಪಾಸಣೆ ನಡೆಸಲಾಯಿತು. ಈ ವೇಳೆ ರೋಗದ ಲಕ್ಷಣ ಉಳ್ಳವರಿಗೆ ಹೋಲಿಸಿದ್ದಲ್ಲಿ ಲಕ್ಷಣ ಇಲ್ಲದವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಪತ್ತೆಯಾಗಿದೆ. 15 ರಿಂದ 62 ವರ್ಷದೊಳಗಿನ ಜನರನ್ನು ಕೊವಿಡ್-19 ತಪಾಸಣೆಗೆ ಒಳಪಡಿಸಲಾಗಿದ್ದು, ಶೇ.61ರಷ್ಟು ಪುರುಷರು ಮತ್ತು ಶೇ.39ರಷ್ಟು ಮಹಿಳೆಯರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.

ಕೊವಿಡ್-19 ಲಕ್ಷಣವಿಲ್ಲದವರಲ್ಲೇ ಹೆಚ್ಚು ವೈರಸ್!

ಕೊವಿಡ್-19 ಲಕ್ಷಣವಿಲ್ಲದವರಲ್ಲೇ ಹೆಚ್ಚು ವೈರಸ್!

ಕೊರೊನಾವೈರಸ್ ಸೋಂಕಿತ ಪ್ರಕರಣಗಳ ವಿತರಣೆಯನ್ನು ವಿಜ್ಞಾನಿಗಳು ಆವರ್ತ ಮೌಲ್ಯಗಳ ಜೊತೆಗೆ ಹೋಲಿಸಿದ್ದಾರೆ. ರೊಗದ ಲಕ್ಷಣಗಳಿಲ್ಲದ ಸೋಂಕಿತರಲ್ಲಿ ವೈರಸ್ ಗಳ ಪ್ರಮಾಣವು ತೀರಾ ಕಡಿಮೆಯಾಗಿರುತ್ತದೆ. ಆದರೆ ರೋಗದ ಲಕ್ಷಣಗಳೇ ಇಲ್ಲದ ಸೋಂಕಿತರಲ್ಲಿ ವೈರಾಣುಗಳ ಪ್ರಮಾಣವು ಹೆಚ್ಚಾಗಿರುವುದು ಸಂಶೋಧನೆ ವೇಳೆ ಕಂಡು ಬಂದಿದೆ. ಜೂನ್ ಅಂತ್ಯದ ವೇಳೆಗೆ ವಿಶ್ಲೇಷಿಸಲಾದ ಕೊವಿಡ್-19 ಮಾದರಿಗಳಲ್ಲಿ ಲಕ್ಷಣ ಇಲ್ಲದವರಲ್ಲೇ ಹೆಚ್ಚಿನ ವೈರಸ್ ಗಳು ಕಂಡು ಬಂದಿವೆ ಎಂದು ತಜ್ಞರು ತಿಳಿಸಿದ್ದಾರೆ.

ರೋಗ ನಿರೋಧಕ ಶಕ್ತಿ ಮತ್ತು ಆರೋಗ್ಯ ಸ್ಥಿತಿಯು ಮುಖ್ಯ

ರೋಗ ನಿರೋಧಕ ಶಕ್ತಿ ಮತ್ತು ಆರೋಗ್ಯ ಸ್ಥಿತಿಯು ಮುಖ್ಯ

"ಲಕ್ಷಣರಹಿತ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಮತ್ತು ಹೆಚ್ಚಿನ ವೈರಾಣು ಪ್ರಮಾಣ ಹೊಂದಿರುವ ಜನರ ನಡುವೆ ತುಲನಾತ್ಮಕ ಸಂಬಂಧ ಗಮನಿಸಿದ್ದೇವೆ. ಆದಾಗ್ಯೂ, ಜನಸಂಖ್ಯಾಶಾಸ್ತ್ರ ಮತ್ತು ಮಾದರಿ ಸಂಗ್ರಹಣೆಯ ಸಮಯದಲ್ಲಿ ರೋಗಿಯ ಒಟ್ಟಾರೆ ರೋಗನಿರೋಧಕ ಶಕ್ತಿ ಮತ್ತು ಆರೋಗ್ಯ ಸ್ಥಿತಿ ಸೇರಿದಂತೆ ಅನೇಕ ಅಂಶಗಳ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ" ಎಂದು ಸಿಡಿಎಫ್ ಡಿನ ಮುರಳಿ ಧರಣ್ ಭಾಷ್ಯಮ್ ಎಚ್ಚರಿಸಿದ್ದಾರೆ.

ಈ ಲಕ್ಷಣ ಕಂಡು ಬಂದರೆ ಕೊರೊನಾವೈರಸ್ ಕನ್ಫರ್ಮ್!

ಈ ಲಕ್ಷಣ ಕಂಡು ಬಂದರೆ ಕೊರೊನಾವೈರಸ್ ಕನ್ಫರ್ಮ್!

ಕೊರೊನಾವೈರಸ್ ಸೋಂಕು ತಗುಲಿರುವ ವ್ಯಕ್ತಿಯಲ್ಲಿ ಮೊದಲು ಜ್ವರ ಕಾಣಿಸಿಕೊಳ್ಳುತ್ತದೆ. ಇದರ ಬೆನ್ನಲ್ಲೇ ಕೆಮ್ಮು, ಮೂಳೆಗಳಲ್ಲಿ ಸೆಳೆತ ಅಥವಾ ನೋವು, ವಾಕರಿಕೆ ಮತ್ತು ವಾಂತಿ ಆಗುತ್ತದೆ. ಇದಾದ ನಂತರದಲ್ಲಿ ಅತಿಸಾರ ಕಾಣಿಸಿಕೊಳ್ಳುತ್ತದೆ ಎಂದು ಕೊವಿಡ್-19 ಸೋಂಕಿತರ ಲಕ್ಷಣಗಳ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಜ್ವರ, ಕೆಮ್ಮು, ಮೂಳೆಗಳಲ್ಲಿ ಸೆಳೆತ ಅಥವಾ ನೋವು, ವಾಕರಿಕೆ ಮತ್ತು ವಾಂತಿ, ಅತಿಸಾರ ಕ್ರಮವು ಕೊರೊನಾವೈರಸ್ ಸೋಂಕಿತರ ಲಕ್ಷಣವನ್ನು ಗುರುತುಪಡಿಸಿಕೊಳ್ಳುವುದಕ್ಕೆ ಸಹಕಾರಿಯಾಗಲಿದೆ.

English summary
Indian Scientists Find Higher Viral Load In Asymptomatic Coronavirus Patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X