
Indian Air Force Day 2022; ಹೊಸ ಸಮವಸ್ತ್ರ, ಹೊಸ ಸ್ಥಳದಲ್ಲಿ ಪೆರೇಡ್
ಇಂಡಿಯನ್ ಏರ್‌ಫೋರ್ಸ್ ಡೇ ಅಕ್ಟೋಬರ್ 8ರಂದು ನಡೆಯಲಿದೆ. ಹಲವು ಕಾರಣಗಳಿಗೆ ಈ ದಿನ ಈ ವರ್ಷ ಮಹತ್ವ ಪಡೆದುಕೊಂಡಿದೆ. ಭಾರತೀಯ ವಾಯುಪಡೆ 90 ವರ್ಷ ಪೂರ್ಣಗೊಳಿಸಿರುವುದು ಈ ಬಾರಿಯ ವಿಶೇಷತೆಯಾಗಿದೆ.
ಭಾರತದ ಮೂರು ಸೇನಾಪಡೆಗಳಲ್ಲಿ ಏರ್‌ಫೋರ್ಸ್ ಒಂದು. ಭಾರತೀಯ ವಾಯುಪಡೆ ಬ್ರಿಟಿಷರ ಆಡಳಿತದ ಅವಧಿಯಲ್ಲಿ 1932 ಅಕ್ಟೋಬರ್ 8ರಂದು ಮೊದಲ ಬಾರಿಗೆ ರಚನೆಯಾಯಿತು. ಅಲ್ಲಿಂದ ಹಲವು ಯುದ್ಧಗಳಲ್ಲಿ ಇಂಡಿಯನ್ ಏರ್ ಫೋರ್ಸ್ ಸೈನಿಕರು ತಮ್ಮ ಪರಾಕ್ರಮ ತೋರಿದ್ದಾರೆ.
ಇಂದು ವಿಶ್ವ ಹತ್ತಿ ದಿನ- ಇಲ್ಲಿದೆ ಅದರ ಮಹತ್ವ, ಇತಿಹಾಸ
ಭಾರತೀಯ ವಾಯುಪಡೆ ತಾಂತ್ರಿಕವಾಗಿ ಬಹಳ ಮುಂದುವರಿದಿದೆ. ವಾಯುಪಡೆಯ ಸಿಬ್ಬಂದಿವರ್ಗದಲ್ಲಿ ನುರಿತ ತಂತ್ರಜ್ಞರು ಇದ್ದಾರೆ. ದೇಶದ ಸುರಕ್ಷತೆಗಾಗಿ ಅವಿರತವಾಗಿ ಶ್ರಮಿಸುತ್ತಿರುವ ವಾಯುಪಡೆಯ ವೀರ ಯೋಧರಿಗೆ ಗೌರವಾರ್ಥವಾಗಿ ವಾಯುಪಡೆ ದಿನವನ್ನು ಪ್ರತೀ ವರ್ಷ ಅಕ್ಟೋಬರ್ 8ರಂದು ಆಚರಿಸಲಾಗುತ್ತದೆ.
ಹೊಸ ಸ್ಥಳದಲ್ಲಿ ಪರೇಡ್
ಭಾರತೀಯ ವಾಯುಪಡೆ ದಿನವನ್ನು ಪ್ರತೀ ವರ್ಷವೂ ದೆಹಲಿಯ ಹಿಂದೋನ್ ವಾಯುನೆಲೆಯಲ್ಲಿ ಆಚರಿಸಲಾಗುತ್ತಿತ್ತು. ಅದರ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸ್ಥಳ ಬದಲಾವಣೆ ಮಾಡಲಾಗಿದೆ. ಈ ಬಾರಿ ಕಾರ್ಯಕ್ರಮ ಚಂಡೀಗಡದಲ್ಲಿ ನಡೆಯಲಿದೆ.
ಅಕ್ಟೋಬರ್ 8ರಂದು ಚಂಡೀಗಡದ ಏರ್‌ಫೋರ್ಸ್ ಸ್ಟೇಷನ್‌ನಲ್ಲಿ ಬೆಳಗ್ಗೆ ಪೆರೇಡ್ ನಡೆಯಲಿದೆ. ಈ ಬಾರಿಯ ಪೆರೇಡ್‌ನಲ್ಲಿ ಹಗುರ ಹೆಲಿಕಾಪ್ಟರ್ ಪ್ರಚಂಡ್ ಪ್ರಮುಖ ಆಕರ್ಷಣೆ ಎನಿಸಿದೆ.
World Smile Day 2022 : ವಿಶ್ವ ನಗು ದಿನ : ಥೀಮ್, ಇತಿಹಾಸ, ಪ್ರಾಮುಖ್ಯತೆ ಮತ್ತು ಉಲ್ಲೇಖಗಳು
90 years of Indian Air Force.
— Indian Air Force (@IAF_MCC) October 5, 2022
Detailed planning, precision and coordination : the three major requirements for a good flypast.
IAF preparations are in full swing for the aerial symphony on 08 Oct 22 over Sukhna Lake, Chandigarh.
📸 - AVM PS Karkare pic.twitter.com/DVmN3eL2tG
ಹೊಸ ಯೂನಿಫಾರ್ಮ್
ಭಾರತೀಯ ವಾಯುಪಡೆ ತನ್ನ ಸಿಬ್ಬಂದಿಗೆ ಹೊಸ ಸಮವಸ್ತ್ರ ರಚಿಸಿದೆ. ಶನಿವಾರ ಅದರ ಅನಾವರಣ ಆಗಲಿದೆ. ಹೊಸ ಯೂನಿಫಾರ್ಮ್ ತೊಟ್ಟ ಸೈನಿಕರು ವಾಯುಪಡೆ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

"ಹೊಸ ಸಮವಸ್ತ್ರ ವಿಭಿನ್ನ ಬಟ್ಟೆ, ವಿನ್ಯಾಸ ಮತ್ತು ಡಿಜಿಟಲ್ ಕಮೋಫ್ಲೇಜ್ ಪ್ಯಾಟರ್ನ್ ಹೊಂದಿರುತ್ತದೆ. ಚಂಡೀಗಡದಲ್ಲಿ ಏರ್ ಫೋರ್ಸ್ ಡೇ ಪೆರೇಡ್‌ನಲ್ಲಿ ವಾಯುಪಡೆ ಮುಖ್ಯಸ್ಥರು ಹೊಸ ಯೂನಿಫಾರ್ಮ್ ಅನ್ನು ಅನಾವರಣ ಮಾಡುತ್ತಾರೆ" ಎಂದು ವಾಯುಪಡೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಭೂಸೇನೆಯ ಹೊಸ ಸಮವಸ್ತ್ರಕ್ಕಿಂತ ವಾಯುಪಡೆ ಸಿಬ್ಬಂದಿಯ ಯೂನಿಫಾರ್ಮ್ ತುಸು ಭಿನ್ನವಾಗಿದೆ ಎಂದು ಹೇಳಲಾಗುತ್ತಿದೆ. ಎಂಬತ್ತು ಮತ್ತು ತೊಂಬತ್ತರ ದಶಕಗಳಲ್ಲಿ ಸೇನೆ ಬಳಸುತ್ತಿದ್ದ ಸಮವಸ್ತ್ರದ ರೀತಿಯ ಯೂನಿಫಾರ್ಮ್ ಅನ್ನು ಈಗ ವಾಯುಪಡೆಯವರು ಬಳಸುತ್ತಿದ್ದಾರೆ.
ವೈಮಾನಿಕ ಹಬ್ಬ
ಚಂಡೀಗಡದಲ್ಲಿ ಶನಿವಾರ ನಡೆಯಲಿರುವ ಐಎಎಫ್ ದಿನಾಚರಣೆಯಂದು ಭಾರತದ 80ಕ್ಕೂ ಹೆಚ್ಚು ಫೈಟರ್ ಜೆಟ್‌ಗಳು, ಸಾರಿಗೆ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಹಾರಾಟ ಪ್ರದರ್ಶನ ಮಾಡಲಿವೆ. ಸುಖನಾ ಸರೋವರದ ಮೇಲೆ ಶನಿವಾರ ವೈಮಾನಿಕ ಪ್ರದರ್ಶನ ನೋಡುಗರಿಗೆ ರೋಚಕ ಅನುಭವ ತಂದುಕೊಡಲಿದೆ. ಭಾರತದ ವೈಮಾನಿಕ ಶಕ್ತಿ ಬಹುತೇಕ ನಾಳೆ ಅನಾವರಣಗೊಳ್ಳಲಿದೆ.
ಆವ್ರೋ, ಡಾರ್ನಿಯರ್, ಚೇತಕ್, ಚೀತಾ ಹೊರತುಪಡಿಸಿ ಭಾರತೀಯ ವಾಯುಪಡೆಯ ಬಹುತೇಕ ಯುದ್ಧವಿಮಾನಗಳು ಭಾರತೀಯ ವಾಯುಪಡೆ ದಿನದ ಪ್ರದರ್ಶನದಲ್ಲಿ ಕಸರತ್ತು ನಡೆಸಲಿವೆ.
ಒಂದೊಂದು ರಫೇಲ್, ಜಾಗ್ವಾರ್, ತೇಜಸ್ ಮತ್ತು ಮಿರೇಜ್ 2000 ಜೆಟ್‌ಗಳು ಸೇರಿ ಸೆಖೋನ್ ರಚನೆಯಲ್ಲಿ ಪ್ರದರ್ಶನ ಮಾಡುತ್ತಿರುವುದು ವಿಶೇಷ. ಪರಮವೀರ ಚಕ್ರ ಪಡೆದ ವಾಯುಪಡೆ ಅಧಿಕಾರಿ ನಿರ್ಮಲ್‌ಜೀತ್ ಸಿಂಗ್ ಸೇಖೋನ್ ಸ್ಮರಣಾರ್ಥ ಈ ರಚನೆ ಮಾಡಲಾಗಿದೆ.
ಹಾಗೆಯೇ, ಬೇರೆ ಬೇರೆ ವಿಮಾನ, ಹೆಲಿಕಾಪ್ಟರ್, ಜೆಟ್‌ಗಳ ಸಂಯೋಜನೆಯಿಂದ ವಿವಿಧ ರಚನೆಗಳಲ್ಲಿ ವೈಮಾನಿಕ ಪ್ರದರ್ಶನಗಳು ಜನರ ಕಣ್ಮನ ಸೂರೆಗೊಳ್ಳಲಿವೆ.
ಸೆಖೋನ್ ಫಾರ್ಮೋಶನ್ ಅಲ್ಲದೇ, ಆಕಾಶಗಂಗಾ, ಎನ್‌ಸೈನ್, ಬಿಗ್ ಬಾಯ್, ಏಕಲವ್ಯ, ತ್ರಿಶೂಲ್, ಮೆಹರ್, ಶಂಶೇರ್, ವಜ್ರ, ಸಾರಂಗ್, ಸೂರ್ಯಕಿರಣ್ ರಚನೆ ಬಹಳ ಜನಪ್ರಿಯವಾದ ಸಂಯೋಜನೆಗಳಾಗಿವೆ.
ಏಕಲವ್ಯ ಫಾರ್ಮೇಶನ್‌ನಲ್ಲಿ ಎಂಐ-35 ಆಕ್ರಮಕ ಹೆಲಿಕಾಪ್ಟರ್ ಮುನ್ನಡೆಯಲ್ಲಿರುತ್ತದೆ. ಅದರ ಜೊತೆಗೆ ನಾಲ್ಕು ಅಪಾಚೆ ಚಾಪರ್‌ಗಳು ಇರುತ್ತವೆ. ಸಿ-17 ಹೆವಿ ಲಿಫ್ಟ್ ಏರ್‌ಕ್ರಾಫ್ಟ್‌ನಿಂದ ಗ್ಲೋಬ್ ಫಾರ್ಮೇಶನ್‌ನಲ್ಲಿ ಪ್ರದರ್ಶನವಾಗುತ್ತದೆ. ಇನ್ನು, ಒಂಬತ್ತು ಹಾಕ್-132 ಏರ್‌ಕ್ರಾಫ್ಟ್‌ಗಳಿಂದ ಸೂರ್ಯಕಿರಣ್ ಫಾರ್ಮೇಶನ್ ಆಗುತ್ತದೆ.
(ಒನ್ಇಂಡಿಯಾ ಸುದ್ದಿ)