Sapota Fruit Health Benefits: ಆಟ ಆಡುತ್ತಾ ತಿನ್ನು ಸಪೋಟಾ.... ಕಂದು ಬಣ್ಣದ ಹಣ್ಣು ತಿಂದರೆ ಆರೋಗ್ಯಕ್ಕಿಲ್ಲ ತೊಂದರೆ..

ಅಂಡಾಕಾರದ ಅಥವಾ ದುಂಡಗಿನ ಆಕಾರದಲ್ಲಿರುವ ಕಂದು ಚರ್ಮದ ಸಪೋಟಾ ಅನೇಕ ಜನರ ನೆಚ್ಚಿನ ಹಣ್ಣು. ಈ ಸಪೋಟಾ ಹಣ್ಣು ಸಿಹಿ ರುಚಿಯನ್ನು ಹೊಂದಿದ್ದು, ಸಾಕಷ್ಟು ಪೋಷಕಾಂಶಗಳನ್ನು ಒಳಗೊಂಡಿರುವ ಪೌಷ್ಠಿಕ ಹಣ್ಣು ಕೂಡ ಆಗಿದೆ.

ಸಪೋಟಾ ಹಣ್ಣನ್ನು 'ಚಿಕು' ಎಂದೂ ಕರೆಯುತ್ತಾರೆ. ಈ ಸಪೋಟ ಮಧ್ಯ ಅಮೇರಿಕಾ, ವಿಶೇಷವಾಗಿ ಮೆಕ್ಸಿಕೋ, ಬೆಲೀಜ್‌ನ ಮಳೆಕಾಡುಗಳಲ್ಲಿ ಹೇರಳವಾಗಿ ಲಭ್ಯವಿರುವ ಸ್ಥಳೀಯ ಹಣ್ಣಾಗಿದೆ. ಈ ಹಣ್ಣು ಭಾರತದಲ್ಲೂ ಲಭ್ಯವಿದೆ.

 Sapota Fruit Health Benefits

ಅದರಲ್ಲೂ ಸಪೋಟಾ ಉತ್ಪಾದನೆಯಲ್ಲಿ ಕರ್ನಾಟಕವೇ ಭಾರತದಲ್ಲೇ ನಂಬರ್ ಒನ್. ಅದರ ನಂತರ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಸಪೋಟಾವನ್ನು ಹೆಚ್ಚು ಬೆಳೆಯಲಾಗುತ್ತದೆ.

ಸಪೋಟಾದಲ್ಲಿರುವ ಪೋಷಕಾಂಶಗಳು

ಮಾವಿನ ಹಣ್ಣಿನಂತೆ ಸಪೋಟಾದಲ್ಲಿ ಕ್ಯಾಲೋರಿ ಅಧಿಕವಾಗಿದೆ. ಇದು ಫೈಬರ್ ಮತ್ತು ವಿಟಮಿನ್ಗಳಲ್ಲಿ ಸಮೃದ್ಧವಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ ಇದು ವಿಟಮಿನ್ ಎ ಮತ್ತು ವಿಟಮಿನ್ ಸಿ ಯಂತಹ ಪೋಷಕಾಂಶಗಳನ್ನು ಹೊಂದಿದೆ. ಇದು ಚರ್ಮದ ಆರೋಗ್ಯವನ್ನು ಸುಧಾರಿಸುವ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ಈ ಹಣ್ಣಿನಲ್ಲಿ ಪೊಟ್ಯಾಸಿಯಮ್, ಸೋಡಿಯಂ, ತಾಮ್ರ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ರಂಜಕದಂತಹ ಅಗತ್ಯ ಪೋಷಕಾಂಶಗಳು ಸಮೃದ್ಧವಾಗಿವೆ.

ಇಷ್ಟೆಲ್ಲಾ ಪೋಷಕಾಂಶಗಳನ್ನು ಹೊಂದಿರುವ ಸಪೋಟಾ ಹಣ್ಣನ್ನು ಅದರ ಋತುವಿನಲ್ಲಿ ಪ್ರತಿದಿನ ಸೇವಿಸಿದರೆ ದೇಹದಲ್ಲಿ ಹಲವಾರು ಅದ್ಭುತಗಳು ನಡೆಯುತ್ತವೆ. ಹಾಗಾದರೆ ಸಪೋಟಾ ಹಣ್ಣನ್ನು ತಿನ್ನುವುದರಿಂದ ಆಗುವ ಇನ್ನಷ್ಟು ಆರೋಗ್ಯಕರ ಪ್ರಯೋಜನಗಳನ್ನು ತಿಳಿಯೋಣ.

 Sapota Fruit Health Benefits

ಸಪೋಟಾ ಹಣ್ಣನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳು:-

1. ದೇಹದಲ್ಲಿ ಶಕ್ತಿ ಹೆಚ್ಚಿಸುವ ಸಪೋಟಾ

ಸಪೋಟಾದಲ್ಲಿ ಗ್ಲೂಕೋಸ್ ಮತ್ತು ಕ್ಯಾಲೋರಿ ಅಧಿಕವಾಗಿದೆ. ಇವೆರಡೂ ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಹಾಗಾಗಿ ವ್ಯಾಯಾಮ ಮಾಡಿ ವಿಪರೀತ ದೈಹಿಕ ಆಯಾಸ ಎದುರಿಸುವವರು ದಿನನಿತ್ಯ ಸಪೋಟಾ ಹಣ್ಣನ್ನು ಸೇವಿಸಿದರೆ ದೇಹಕ್ಕೆ ತ್ವರಿತ ಶಕ್ತಿ ಸಿಗುತ್ತದೆ.

2. ರೋಗನಿರೋಧಕ ಶಕ್ತಿ ಸುಧಾರಿಸುವ ಹಣ್ಣು

ಸಪೋಟಾದಲ್ಲಿ ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳಿವೆ. ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಮುಖ್ಯವಾಗಿ ಇದರಲ್ಲಿರುವ ಪಾಲಿಫಿನಾಲ್‌ಗಳು ದೇಹದಿಂದ ಹಾನಿಕಾರಕ ವಿಷವನ್ನು ತೆಗೆದುಹಾಕುತ್ತವೆ ಮತ್ತು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಈ ಹಣ್ಣಿನಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಆ್ಯಂಟಿ ವೈರಸ್ ಗುಣವಿರುವುದರಿಂದ ದೇಹದಲ್ಲಿರುವ ಸೂಕ್ಷ್ಮಾಣುಗಳನ್ನು ನಾಶಪಡಿಸಿ ದೇಹವನ್ನು ರಕ್ಷಿಸುತ್ತದೆ. ಆದ್ದರಿಂದ ನೀವು ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಲು ಬಯಸಿದರೆ, ಪ್ರತಿದಿನ ಸಪೋಟಾ ತಿನ್ನಿರಿ.

 Sapota Fruit Health Benefits

3. ಚರ್ಮದ ಆರೋಗ್ಯ ಈ ಹಣ್ಣಿನಲ್ಲಿದೆ

ಸಪೋಟಾ ಚರ್ಮದ ಆರೋಗ್ಯಕ್ಕೆ ಅಗತ್ಯವಾದ ಎಲ್ಲಾ ಪೋಷಕಾಂಶಗಳಾದ ಜೀವಸತ್ವಗಳು, ಖನಿಜಗಳು, ರೋಗ ನಿರೋಧಕ ಶಕ್ತಿ ಮತ್ತು ಫೈಬರ್ ಅನ್ನು ಒಳಗೊಂಡಿದೆ. ಮುಖ್ಯವಾಗಿ ಇದು ವಿಟಮಿನ್ ಇ ಯಲ್ಲಿ ಸಮೃದ್ಧವಾಗಿದೆ. ಇದು ಚರ್ಮವನ್ನು ತೇವಗೊಳಿಸುತ್ತದೆ ಮತ್ತು ಅದರ ಆಂಟಿ-ಆಕ್ಸಿಡೆಂಟ್ ಅಂಶವು ತ್ವಚೆಗೆ ವಯಸ್ಸಾಗುವುದನ್ನು ತಡೆಯುತ್ತದೆ ಮತ್ತು ತ್ವಚೆಯ ಯೌವನವನ್ನು ಹೆಚ್ಚಿಸುತ್ತದೆ.

4. ಕರುಳಿನ ಆರೋಗ್ಯ ಸುಧಾರಣೆ

ಸಪೋಟಾ ಫೈಬರ್‌ನಲ್ಲಿ ಸಮೃದ್ಧವಾಗಿದೆ. ಇದು ಹೊಟ್ಟೆಯ ಆಮ್ಲವನ್ನು ತಟಸ್ಥಗೊಳಿಸುವ ಟ್ಯಾನಿನ್ ಅನ್ನು ಹೊಂದಿರುತ್ತದೆ. ಹೀಗಾಗಿ ಇದು ಅಸಿಡಿಟಿ ಸಮಸ್ಯೆಯನ್ನು ತಡೆಯುತ್ತದೆ. ಇಷ್ಟು ಮಾತ್ರವಲ್ಲದೆ ಹಣ್ಣಿನಲ್ಲಿ ಅನೇಕ ರೋಗಗಳಿಂದ ದೇಹವನ್ನು ರಕ್ಷಿಸುವ ಗುಣಗಳು ಇವೆ. ಇದು ಮಲಬದ್ಧತೆಯನ್ನು ನಿವಾರಿಸುತ್ತದೆ ಮತ್ತು ಕರುಳಿನ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ.

5. ಮೂಳೆಗಳಿಗೆ ಬಲ ನೀಡುವ ಸಪೋಟಾ

ಸಪೋಟಾದಲ್ಲಿ ಕ್ಯಾಲ್ಸಿಯಂ, ಫಾಸ್ಪರಸ್ ಮತ್ತು ಕಬ್ಬಿಣದಂತಹ ಪೋಷಕಾಂಶಗಳು ಹೇರಳವಾಗಿದ್ದು ಮೂಳೆಗಳ ಬಲಕ್ಕೆ ಅವಶ್ಯಕವಾಗಿದೆ. ಆದ್ದರಿಂದ ಪ್ರತಿನಿತ್ಯ ಒಂದು ಸಪೋಟಾವನ್ನು ಸೇವಿಸುವುದರಿಂದ ಮೂಳೆ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಬಹುದು. ಅಲ್ಲದೆ ಇದರಲ್ಲಿರುವ ಅಗತ್ಯ ಖನಿಜಗಳು ದೇಹದ ವಿವಿಧ ಕಾರ್ಯಗಳನ್ನು ನಿಯಂತ್ರಿಸುತ್ತದೆ ಮತ್ತು ಮೂಳೆಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.

 Sapota Fruit Health Benefits

6. ಗರ್ಭಿಣಿಯರಿಗೆ ಒಳ್ಳೆಯದು ಈ ಕಂದು ಬಣ್ಣದ ಹಣ್ಣು

ಸಪೋಟಾದಲ್ಲಿ ಕಾರ್ಬೋಹೈಡ್ರೇಟ್ ಮತ್ತು ಅಗತ್ಯ ಪೋಷಕಾಂಶಗಳು ಅಧಿಕವಾಗಿವೆ. ಆದ್ದರಿಂದ ಗರ್ಭಿಣಿಯರು ಪ್ರತಿದಿನ ಈ ಹಣ್ಣನ್ನು ಸೇವಿಸಿದರೆ, ಗರ್ಭಾವಸ್ಥೆಯಲ್ಲಿ ಅನುಭವಿಸುವ ದೈಹಿಕ ಆಯಾಸವನ್ನು ಕಡಿಮೆ ಮಾಡುತ್ತದೆ ಮತ್ತು ಗರ್ಭಾವಸ್ಥೆಯ ಲಕ್ಷಣಗಳಾದ ವಾಕರಿಕೆ ಮತ್ತು ತಲೆತಿರುಗುವಿಕೆಯನ್ನು ಕಡಿಮೆ ಮಾಡುತ್ತದೆ.

7. ರಕ್ತದೊತ್ತಡ ನಿಯಂತ್ರಿಸುವ ಹಣ್ಣು

ಸಪೋಟಾ ಹಣ್ಣಿನಲ್ಲಿ ಮೆಗ್ನಿಶಿಯಂ ಇದೆ. ಇವು ರಕ್ತನಾಳಗಳನ್ನು ಸಡಿಲವಾಗಿಡಲು ಸಹಾಯ ಮಾಡುತ್ತವೆ. ಜೊತೆಗೆ ಈ ಹಣ್ಣಿನಲ್ಲಿರುವ ಪೊಟ್ಯಾಸಿಯಮ್ ರಕ್ತದೊತ್ತಡ ಮತ್ತು ರಕ್ತದ ಹರಿವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ. ಹಾಗಾಗಿ ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಸಪೋಟಾ ಸೇವಿಸಿದರೆ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.

8. ಕ್ಯಾನ್ಸರ್ ವಿರುದ್ಧ ಹೋರಾಡುವ ಹಣ್ಣು

ಸಪೋಟಾದಲ್ಲಿರುವ ಫೈಬರ್, ವಿಟಮಿನ್ ಎ, ವಿಟಮಿನ್ ಬಿ ಮತ್ತು ವಿಟಮಿನ್ ಸಿ ಹೊರತುಪಡಿಸಿ, ಸಪೋಟಾದಲ್ಲಿ ಆಂಟಿಆಕ್ಸಿಡೆಂಟ್ ಅಧಿಕವಾಗಿದೆ. ಹಾಗಾಗಿ ಸಪೋಟವನ್ನು ಪ್ರತಿನಿತ್ಯ ಸೇವಿಸಿದರೆ ಶ್ವಾಸಕೋಶ, ಕರುಳು ಮತ್ತಿತರ ರೋಗಗಳ ಅಪಾಯವನ್ನು ತಡೆಯುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+