2022 ರಲ್ಲಿ ಭಾರತೀಯರು ಅತಿ ಹೆಚ್ಚು ಆರ್ಡರ್ ಮಾಡಿದ ಖಾದ್ಯ ಬಿರಿಯಾನಿ
ಚೆನ್ನೈ, ಡಿಸೆಂಬರ್ 17: ಬಿರಿಯಾನಿಯು ಭಾರತೀಯರ ಅತಿ ಮೆಚ್ಚಿನ ಖಾದ್ಯಗಳಲ್ಲಿ ಒಂದು. ಈ ರುಚಿಕಟ್ಟಾದ ಖಾದ್ಯಕ್ಕೆ ಮನಸೋಲದ ಆಹಾರ ಪ್ರಿಯರೇ ಇಲ್ಲ.
ಸತತವಾಗಿ ಏಳನೇ ವರ್ಷಗಳ ಕಾಲ ಸ್ವಿಗ್ಗಿಯಲ್ಲಿ ಅತಿ ಹೆಚ್ಚು ಆರ್ಡರ್ ಮಾಡಲಾದ ಖಾದ್ಯವೆಂದರೆ ಬಿರಿಯಾನಿ.
2022ರಲ್ಲಿ ಅತಿ ಹೆಚ್ಚು ಮಂದಿ ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ್ದೂ ಬಿರಿಯಾನಿಯನ್ನೇ ಎಂದು ಸ್ವಿಗ್ಗಿ ಕಂಪನಿ ಹೇಳಿಕೊಂಡಿದೆ.

ಈ ವರ್ಷದಲ್ಲಿ ಪ್ರತಿ ನಿಮಿಷಕ್ಕೆ ಸುಮಾರು 137 ಬಿರಿಯಾನಿಗಳನ್ನು (ಸೆಕೆಂಡಿಗೆ 2.28 ಬಿರಿಯಾನಿಗಳ ಲೆಕ್ಕ) ಸ್ವಿಗ್ಗಿಯಲ್ಲಿ ಆರ್ಡರ್ ಮಾಡಲಾಗಿದೆ.
ಬಾಯಿ ರುಚಿಗೆ ಹೆಸರುವಾಸಿಯಾದ ಮಸಾಲೆ ದೋಸೆ ಸ್ವಿಗ್ಗಿಯಲ್ಲಿ ಎರಡನೇ ಅತಿ ಹೆಚ್ಚು ಆರ್ಡರ್ ಮಾಡಿದ ಭಕ್ಷ್ಯವಾಗಿದೆ.
ತಿಂಡಿಗಳ ವಿಚಾರಕ್ಕೆ ಬಂದಾಗ, 2022 ರಲ್ಲಿ 40 ಲಕ್ಷಕ್ಕೂ ಹೆಚ್ಚು ಆರ್ಡರ್‌ಗಳು ಸಮೋಸಕ್ಕೆ ಬಂದಿವೆ. ಇದು ತಿಂಡಿಗಳಲ್ಲಿ ಅತಿ ಹೆಚ್ಚು ಆರ್ಡರ್ ಮಾಡಿಸಿಕೊಂಡ ತಿಂಡಿಯಾಗಿದೆ.
ತಡರಾತ್ರಿಯ ಆರ್ಡರ್‌ಗಳಿಗೆ ಸಂಬಂಧಿಸಿದಂತೆ, ಸ್ವಿಗ್ಗಿ ಅಪ್ಲಿಕೇಶನ್‌ನಲ್ಲಿ 22 ಲಕ್ಷ ಪಾಪ್‌ಕಾರ್ನ್ ಆರ್ಡರ್‌ಗಳನ್ನು ಮಾಡಲಾಗಿದೆ.

ರಾತ್ರಿ 10 ಗಂಟೆಯ ನಂತರ ಬಹುಪಾಲು ಭಾರತೀಯ ಆಹಾರಪ್ರಿಯರ ಬೇರೆ ದೇಶಗಳ ಆಹಾರಕ್ಕೆ ಹೆಚ್ಚು ಹಾತೊರೆಯುತ್ತಾರೆ ಎಂದು ಸ್ವಿಗ್ಗಿ ತಿಳಿಸಿದೆ.
ಸ್ವಿಗ್ಗಿ ಡೇಟಾಬೇಸ್‌ನಲ್ಲಿರುವ ಮಾಹಿತಿಯ ಪ್ರಕಾರ, ಸುಶಿ, ಮೆಕ್ಸಿಕನ್ ಬೌಲ್‌ಗಳು, ಕೊರಿಯನ್ ಮಸಾಲೆಯುಕ್ತ ರಾಮೆನ್ ಮತ್ತು ಇಟಾಲಿಯನ್ ಪಾಸ್ಟಾದ ಆರ್ಡರ್‌ಗಳಲ್ಲಿ ಹೆಚ್ಚಳವನ್ನು ಕಾಣಬಹುದಾಗಿದೆ.
ಗುಲಾಬ್ ಜಾಮೂನ್ ಅನ್ನು 27 ಲಕ್ಷ ಬಾರಿ ಆರ್ಡರ್ ಮಾಡಲಾಗಿದೆ. ಇದು ಟಾಪ್ ಡೆಸರ್ಟ್ ಆಗಿದೆ. 16 ಲಕ್ಷ ಆರ್ಡರ್‌ಗಳೊಂದಿಗೆ ರಾಸ್ಮಲೈ ಮತ್ತು 10 ಲಕ್ಷಕ್ಕೂ ಹೆಚ್ಚು ಆರ್ಡರ್‌ಗಳೊಂದಿಗೆ ಚಾಕೊ ಲಾವಾ ಕೇಕ್ ಅನ್ನು ಆರ್ಡರ್ ಮಾಡಲಾಗಿದೆ.
ಸ್ವಿಗ್ಗಿಯಲ್ಲಿ ಆಹಾರ ಖಾದ್ಯಗಳನ್ನು ಆರ್ಡರ್ ಮಾಡಿದ ಭಾರತದ ಅಗ್ರ ನಗರವಾಗಿ ಬೆಂಗಳೂರು ಹೊರಹೊಮ್ಮಿದೆ. ಸ್ವಿಗ್ಗಿ ಅಪ್ಲಿಕೇಶನ್‌ನಿಂದ ಬೆಂಗಳೂರಿನ ಹೆಚ್ಚು ಗ್ರಾಹಕರು ಹಲವಾರು ಪ್ರಯೋಜನಗಳನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಮುಂಬೈ, ಹೈದರಾಬಾದ್ ಮತ್ತು ದೆಹಲಿ ನಂತರದ ಸ್ಥಾನದಲ್ಲಿವೆ.












Click it and Unblock the Notifications