ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ಕಂಪನಿಯಲ್ಲಿ ಕನ್ನಡ ಡಿಂಡಿಮ ಕಾರಣ, ಸವಾಲುಗಳು

By ಮಧು ಚಂದ್ರ ಹೆಚ್. ಬಿ., ಭದ್ರಾವತಿ
|
Google Oneindia Kannada News

ಮಾನವನು ಅನ್ನ ಸಂಪಾದನೆಗಾಗಿ ಮತ್ತು ಪರಿಸರದಲ್ಲಾಗುವ ಬದಲಾವಣೆಗಾಗಿ ತನ್ನ ನೆಲೆ ಬದಲಾಯಿಸಿ ವಲಸೆ ಹೋದ. ಪ್ರಾಣಿ-ಪಕ್ಷಿಗಳು ತಮ್ಮ ಆಹಾರ, ಸಂತಾನ, ಸುರಕ್ಷೆತೆಗಾಗಿ ತಮ್ಮ ನೆಲೆ ಬದಲಾಯಿಸಿ ವಲಸೆ ಕೈಗೊಂಡವು. ಆಧುನಿಕ ಮಾನವರು ಸಹ ನೆಮ್ಮದಿ, ಹೊಸ ಚೈತನ್ಯಕ್ಕಾಗಿ, ವ್ಯಾಪಾರ, ಅಧ್ಯಯನ, ಸಾಂಸ್ಕೃತಿಕ ವಿನಿಮಯಕ್ಕಾಗಿ ಇಂದಿಗೂ ಸಹ ವಲಸೆ ಹೋಗುತ್ತಲೇ ಇದ್ದಾರೆ.

ಇಂದು ತಾವು ನೆಲೆಸಿದ ಪ್ರದೇಶದ ಭಾಷೆ, ಆಚಾರ-ವಿಚಾರ ಸಂಪ್ರದಾಯಗಳನ್ನು ಅರಿಯದೆ ಬದುಕಿದರೆ ಹಲವಾರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಸಹ ಸ್ಥಳೀಯ ಭಾಷೆಯ ಅರಿವು ಹೆಚ್ಚು ಮಹತ್ವ ಪಡೆಯುತ್ತದೆ.

ಕನ್ನಡ ಧ್ವಜ ಹಾರಿಸಿಲ್ಲವೆಂದು ಪ್ರಶಸ್ತಿಯನ್ನೇ ನಿರಾಕರಿಸಿದ ವಿದ್ಯಾರ್ಥಿ, ಪೋಷಕರುಕನ್ನಡ ಧ್ವಜ ಹಾರಿಸಿಲ್ಲವೆಂದು ಪ್ರಶಸ್ತಿಯನ್ನೇ ನಿರಾಕರಿಸಿದ ವಿದ್ಯಾರ್ಥಿ, ಪೋಷಕರು

ಮಾಹಿತಿ ತ್ರಂತ್ರಜ್ಞಾನದ ಕ್ರಾಂತಿಯಿಂದಾಗಿ ಬೆಂಗಳೂರು ನಗರ ಪಿಂಚಣಿಗರ ಸ್ವರ್ಗ ಎಂಬ ಹೆಸರನ್ನು ಬದಿಗಿಟ್ಟು ಭಾರತದ ಸಿಲಿಕಾನ್ ವ್ಯಾಲಿ ಎಂಬ ಹೆಸರು ಪಡೆದುಕೊಂಡು ಎಗ್ಗಿಲ್ಲದೇ ಬೆಳೆಯತೊಡಗಿತು. ಬಹುರಾಷ್ಟ್ರೀಯ ಕಂಪನಿಗಳು ಒಂದೊಂದಾಗಿ ತಲೆಯೆತ್ತುತ್ತಿದಂತೆ ಬೆಂಗಳೂರಿಗೆ ವಲಸಿಗರ ದಂಡಯಾತ್ರೆಯ ಪರ್ವ ಆರಂಭವಾಯಿತು. ಇಂದಿಗೆ ಬೆಂಗಳೂರಿನಲ್ಲಿ ನೆಲೆಸಿರುವರ ಪೈಕಿ ಶೇಕಡಾ 30 ಹೆಚ್ಚು ವಾಸಿಗಳು ಕನ್ನಡ ಬಾರದ ವಲಸಿಗರು.

ಕನ್ನಡ ಧ್ವಜವೇ ಇಲ್ಲದೆ ಕನ್ನಡ ರಾಜ್ಯೋತ್ಸವ: ಸರ್ಕಾರದ ವಿರುದ್ಧ ಆಕ್ರೋಶ ಕನ್ನಡ ಧ್ವಜವೇ ಇಲ್ಲದೆ ಕನ್ನಡ ರಾಜ್ಯೋತ್ಸವ: ಸರ್ಕಾರದ ವಿರುದ್ಧ ಆಕ್ರೋಶ

ಅದರಲ್ಲೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದುಡಿಯುವವರಲ್ಲಿ ಶೇಕಡಾ 50 ಕ್ಕೂ ಹೆಚ್ಚು ಮಂದಿ ಕನ್ನಡ ಗೊತ್ತಿರದ ವಲಸಿಗರು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದುಡಿಯುವವರಿಗೆ ಆಂಗ್ಲ ಭಾಷೆಯ ಜ್ಞಾನ ಅತ್ಯವಶ್ಯಕ. ಆದರೆ, ಕಚೇರಿಯಿಂದಾಚೆ ವ್ಯವಹರಿಸಲು ಕನ್ನಡವೇ ಬೇಕು. ಕನ್ನಡ ಮಾತನಾಡಲು ಬಾರದಿದ್ದಲ್ಲಿ 'ಕನ್ನಡ್ ಗೊತ್ತಿಲ್ಲ' ಎಂಬ ಪದ ಬಳಕೆಯನ್ನು ಸಹ ಕರಗತ ಮಾಡಿಕೊಂಡಿದ್ದಾರೆ.

ಕನ್ನಡೇತರರ ಕನ್ನಡ ಶಾಲೆಗೆ ಒಂದು ವರ್ಷದ ಹರ್ಷ!ಕನ್ನಡೇತರರ ಕನ್ನಡ ಶಾಲೆಗೆ ಒಂದು ವರ್ಷದ ಹರ್ಷ!

ಇಂತಹವರ ಜೊತೆ ವ್ಯಹರಿಸಲು ಕನ್ನಡಿಗರು ಹಿಂದಿ, ಇಂಗ್ಲಿಷ್ ಬಳಕೆ ಮಾಡುವುದು ಅನಿವಾರ್ಯವಾಗಿದೆ. ಇದು ಹೀಗೆ ಮುಂದುವರಿದರೆ ಕನ್ನಡೇತರರು ಕನ್ನಡ ಕಲಿಯುವುದಿಲ್ಲ ಹಾಗಾಗಿ ನಾವೇ ಅವರಿಗೆ ಕನ್ನಡ ಕಲಿಸುವ ಅವಕಾಶ ತಾನಾಗಿ ಒದಗಿದೆ ಎಂದರೆ ತಪ್ಪಾಗಲಾರದು.

ಕನ್ನಡ ಕಲಿಸುವುದು ಸವಾಲಿನ ಕೆಲಸ

ಕನ್ನಡ ಕಲಿಸುವುದು ಸವಾಲಿನ ಕೆಲಸ

ಮಾಹಿತಿ ತಂತ್ರಜ್ಞಾನ ಸೇವೆ ನೀಡುವ ಕಂಪನಿಗಳಲ್ಲಿ ಕನ್ನಡಕ್ಕೆ ಪೂರಕವಾದ ವಾತಾವರಣವಿದ್ದರೆ ಕನ್ನಡ ಕಲಿಕೆ ತರಗತಿ ಆರಂಭಿಸಲು ಯಾವುದೇ ತೊಂದರೆಯಿಲ್ಲ. ಇಲ್ಲದಿದ್ದರೆ ನಾವಾಗಿಯೇ ಆಡಳಿತ ಮಂಡಳಿಯನ್ನು ಒಪ್ಪಿಸುವ ಕಾರ್ಯಕ್ಕೆ ಕೈ ಹಾಕುವುದು ಒಂದು ರೀತಿಯಲ್ಲಿ ಸವಾಲಿನ ಕೆಲಸವೆನ್ನಬಹುದು. ಒಮ್ಮೆ ಅನುಮತಿ ಸಿಕ್ಕರೆ ಮುಂದಿನದು ಎಲ್ಲವೂ ಸಲೀಸಾಗಿ ನಡೆಯುತ್ತವೆ.

ಮೊಟ್ಟ ಮೊದಲಿಗೆ ಕನ್ನಡ ಪಾಠ ಮಾಡಲು ಆಸಕ್ತಿಯಿರುವ ಕನ್ನಡ ಸೇವಕರನ್ನು ಹುಡುಕಿ ಒಂದು ತಂಡ ಕಟ್ಟಿ ನಂತರ ಕನ್ನಡ ತರಗತಿಗಳ ರೋಪುರೇಷೆಯನ್ನು ಸಿದ್ದಪಡಿಸಿ ಮಾನವ ಸಂಪನ್ನಮೂಲ ಇಲಾಖೆಯ ಅಧಿಕಾರಿಗಳ ಕಡೆಯಿಂದ 'ನಮ್ಮ ಸಂಸ್ಥೆಯಲ್ಲಿ ಕನ್ನಡೇತರರಿಗೆ ಕನ್ನಡ ಕಲಿಕೆಯ ತರಗತಿಗಳು ಆರಂಭವಾಗಲಿವೆ , ಆಸಕ್ತರು ಕೆಳಕಂಡ ಮಿಂಚಂಚೆಯಲ್ಲಿರುವವನ್ನು ಸಂಪರ್ಕಿಸಿ' ಎಂಬ ಮಿಚಂಚೆ ಕಳುಹಿಸಿದ ನಂತರ ಕನ್ನಡ ತರಗತಿಗಳಿಗೆ ಅಧಿಕೃತ ಚಾಲನೆ ಸಿಕ್ಕಂತಾಗುತ್ತದೆ.

ಕನ್ನಡ ಕಲಿಕಾ ಶಾಲೆ

ಕನ್ನಡ ಕಲಿಕಾ ಶಾಲೆ

ಹೆಸರು ನೋಂದಾಯಿಸಿದ ಆಸಕ್ತರ ಪಟ್ಟಿ ಮಾಡಿ ಒಂದೊಂದಾಗಿ ಬ್ಯಾಚ್ ಮೂಲಕ ಕನ್ನಡ ತರಗತಿಗಳನ್ನು ಆರಂಭಿಸಬೇಕು. ಕನ್ನಡವನ್ನು ಮತ್ತೊಬ್ಬರಿಗೆ ಕಲಿಸುವುದು ಕಷ್ಟವಲ್ಲ. ಆದರೆ, ಕನ್ನಡ ಕಲಿಕೆಯ ಬಗ್ಗೆ ಆಸಕ್ತಿ ಬರುವ ಹಾಗೆ ಸ್ವಯಂ ಪ್ರೇರಣೆಯಿಂದ ಕಲಿಸುವುದು ಎಂದಿಗೂ ಅತ್ಯಂತ ಸವಾಲಿನ ಕೆಲಸ. ಕನ್ನಡ ಕಲಿಕೆ ತರಗತಿಗಳನ್ನು ಆರಂಭಿಸುವ ಮುನ್ನ ಪಠ್ಯವನ್ನು ಸಿದ್ದಪಡಿಸಬೇಕು. ಪಠ್ಯಕ್ರಮವು ದೈನಂದಿನ ಚಟುವಟಿಕೆಗೆಗಳಿಗೆ ಪೊರಕವಾಗಿದ್ದಲ್ಲಿ ಮಾತ್ರ ಕನ್ನಡ ಕಲಿಯುವ ಮನಸ್ಸಿಗೆ ಕನ್ನಡದ ಕಂಪು ತಲುಪುವುದು.

ಕನ್ನಡ ಕಲಿಕೆಯಲ್ಲಿ ಆಂಗ್ಲ ಭಾಷೆಯ ಪಾತ್ರ ಮಹತ್ವದ್ದು. ನಾವು ಇಂಗ್ಲಿಷ್ ಬಳಸಿ ಕನ್ನಡ ಹೇಳಿಕೊಡುವುದರಿಂದ ಇಂಗ್ಲಿಷ್ ಶಬ್ದಗಳ ಜೊತೆ ಶುದ್ದ ಕನ್ನಡ ಪದಗಳ ಪರಿಚಯ ನೀಡಬೇಕು. ಉದಾಹರಣೆಗೆ Our ಎನ್ನುವ ಪದಕ್ಕೆ 'ನಮ್ಮ ಬೆಂಗಳೂರು' 'ನಮ್ಮ ಮೇಟ್ರೋ' ಹಾಗೂ 'ಮುಂದಿನ ನಿಲ್ದಾಣ ಕೆಂಪೇಗೌಡ ಬಸ್ ನಿಲ್ದಾಣ ಬಾಗಿಲುಗಳು ಎಡಕ್ಕೆ ತೆರೆಯಲಿವೆ', 'ನೀವು ಕರೆ ಮಾಡಿದ ಚಂದಾದಾರರು ಈಗ ವ್ಯಾಪ್ತಿ ಪ್ರದೇಶದಲ್ಲಿ ಇಲ್ಲ, ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ' ಜೊತೆಗೆ ಮ್ಯಾಚ್ ಮಾಡಿದಾಗ ಮಾತ್ರ ಕನ್ನಡ ಪದಗಳು ಸುಲಭವಾಗಿ ನಾಟುತ್ತವೆ.

ಕನ್ನಡ ಕಲಿಕೆ ಆರಂಭ ಹೇಗೆ?

ಕನ್ನಡ ಕಲಿಕೆ ಆರಂಭ ಹೇಗೆ?

ಕನ್ನಡ ಕಲಿಕೆ ಆರಂಭವಾಗುವುದು 'ನಮಸ್ಕಾರ, ನನ್ನ ಹೆಸರಿನಿಂದ... ನಂತರ ಹೇಗಿದಿರಾ?.. ಕನ್ನಡ ಗೊತ್ತಾ? ಯಿಂದ ಕನ್ನಡ ಗೊತ್ತು ವರೆಗೆ, ಭೂತ ಭವಿಷ್ಯತ್ ಹಾಗೂ ವರ್ತಮಾನ ಕಾಲದಲ್ಲಿ ಕ್ರಿಯಾ ಪದಗಳ ಬಳಸಿ ಸರಳ ವಾಕ್ಯಗಳ ರಚನೆಯಿಂದ ಸಣ್ಣ ಸಣ್ಣ ಸಂಭಾಷಣೆಗೆ ಸಿದ್ದಗೊಳಿಸುವಂತೆ ಪದಗಳ ರಚನೆ. ಇದಲ್ಲದೇ ಕನ್ನಡ ಎಫ್.ಎಂ ಹಾಗೂ ಕನ್ನಡ ನ್ಯೂಸ್ ಚಾನೆಲ್‌ಗಳಲ್ಲೂ ಕೇಳಿ, ಕಚೇರಿಯಲ್ಲಿನ ಮಿತ್ರರು ಹಾಗೂ ಸಹೋದ್ಯೋಗಿಗಗಳು, ಕಚೇರಿ ಹಾಗೂ ಮನೆ ಕೆಲಸದವರ ಹತ್ತಿರ ಕನ್ನಡದಲ್ಲೇ ಸಂಭಾಷಣೆ ನಡೆಸಿ ಅವರ ಅಭಿಪ್ರಾಯ ಪಡೆದು ನಮಗೆ ತಿಳಿಸುವಂತೆ ಹೇಳುತ್ತೇವೆ.

ಆದಷ್ಟು ನಿಮಗೆ ಗೊತ್ತಿರುವ ಕನ್ನಡ ಪದ ಬಳಸಿ ಎಂದು ಸಲಹೆ ನೀಡುತ್ತೇವೆ. ಅವರ ಕನ್ನಡ ಕಲಿಕೆ ಶಿಶುವಿಹಾರದ ಕಂದನಿಂದ ಹಿಡಿದು ಅವರ ಪ್ರಯತ್ನಕ್ಕೆ ತಕ್ಕಂತೆ ಹಂತ ಹಂತವಾಗಿ ಪ್ರಭುದ್ದ ಹಂತಕ್ಕೆ ಬರುತ್ತದೆ. ಮುಂದೆ ಕನ್ನಡ ರಾಜ್ಯೋತ್ಸವ ಮತ್ತೆ ಯಾವುದಾದರೂ ಕನ್ನಡ ಕಾರ್ಯಕ್ರಮದಲ್ಲಿ ಅವರು ತಾವಾಗಿ ಆಸಕ್ತಿಯಿರುವ ವಿಷಯದ ಬಗ್ಗೆ ತಮ್ಮದೇ ಅದ ಅನುಭವವನ್ನು ಅತ್ಯಂತ ಸಾರ್ಥಕತೆಯಿಂದ ಎಲ್ಲರ ಮುಂದೆ ಹಂಚಿಕೊಳ್ಳುತ್ತಾರೆ.

ಕನ್ನಡ ಕಲಿಸಿದ್ದಕ್ಕೆ ನಮಗೂ ಸಹ ಕನ್ನಡಾಂಬೆಗೆ ಅಲ್ಪ ಋಣ ತಿರಿಸಿದಂತ ಭಾವ ಆಗುತ್ತದೆ. ಕನ್ನಡ ಕಲಿಕೆಯ ಜೊತೆಗೆ ಕರ್ನಾಟಕದ ಪ್ರವಾಸಿ ಸ್ಥಳಗಳು, ಹಬ್ಬ ಹರಿದಿನಗಳು , ಅಡಿಗೆ ತಿನಿಸುಗಳು, ಪ್ರಸಿದ್ದ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ಸಹ ನೀಡುತ್ತೇವೆ.

ಕನ್ನಡ ಕಲಿಕೆಗೆ ಪ್ರಮುಖ ಕಾರಣಗಳು

ಕನ್ನಡ ಕಲಿಕೆಗೆ ಪ್ರಮುಖ ಕಾರಣಗಳು

ಮಕ್ಕಳು ಶಾಲೆಯಲ್ಲಿ ಓದುತ್ತಿದ್ದರೆ, ಕನ್ನಡವು ಸಹ ಪಠ್ಯದಲ್ಲಿ ಇರುತ್ತದೆ. ಹಾಗಾಗಿ ಮಕ್ಕಳಿಗೆ ಪಾಠ ಹೇಳುವ ಸಲುವಾಗಿಯೂ ಸಹ ಕನ್ನಡ ಕಲಿಯಬೇಕು. ತಮ್ಮ ಮಕ್ಕಳು ಕನ್ನಡ ಗೊತ್ತಿರುವ ಮಕ್ಕಳ ಹತ್ತಿರ ಸುಲಲಿತವಾಗಿ ಸಂಭಾಷಣೆಯಲ್ಲಿ ತೊಡಗಿರುವುದನ್ನು ಕಂಡು ತಾವು ಕನ್ನಡ ಕಲಿಯಬೇಕು ಎನ್ನುವ ಅಭಿಲಾಷೆ ಹೊಂದಿದ್ದಾರೆ.

ನೆರೆಹೊರೆಯವರು ಕನ್ನಡದವರಾಗಿದ್ದಾರೆ, ನಾವು ಕನ್ನಡಿಗರ ಆಚಾರ ವಿಚಾರ ಹಬ್ಬ ಹರಿದಿನಗಳ ಆಚರಣೆಯ ಮಹತ್ವ ಅರಿಯಲು ಹಾಗೂ ಸ್ನೇಹ ಸಂಪಾದನೆಗೆ ಕನ್ನಡವೇ ರಹದಾರಿ ಪತ್ರ.
ಕಚೇರಿ ಹಾಗೂ ಮನೆಯ ಕೆಲಸದವರು ಕನ್ನಡದವರೆ ಆಗಿದ್ದೂ ಅನ್ಯ ಭಾಷೆ ತಿಳಿಯದೆ ಇದ್ದರೆ, ವ್ಯವಹಾರಿಸಲು ಕನ್ನಡ ಬೇಕು.

ಕನ್ನಡವೇ ಪ್ರಧಾನ ಭಾಷೆ

ಕನ್ನಡವೇ ಪ್ರಧಾನ ಭಾಷೆ

ಸಂತೆ, ಪೇಟೆ, ಬೀದಿ ಬದಿಯ ವ್ಯಾಪಾರಿಗಳ ಜೊತೆ ವ್ಯಾಪಾರದಲ್ಲಿ ತಸು ಚೌಕಾಸಿ ಮಾಡಲು ಕನ್ನಡವೇ ಅಸ್ತ್ರ.ಆಟೋ, ಬಸ್ ಮತ್ತು ಇತರ ಸಾರ್ವಜನಿಕ ಸಮೂಹ ಸಾರಿಗೆ ವ್ಯವಸ್ಥೆಯಲ್ಲಿ ಕನ್ನಡವೇ ಪ್ರಧಾನ ವ್ಯಾವಹಾರಿಕ ಭಾಷೆ .

ಇದಲ್ಲದೇ ಹಲವಾರು ವಲಸಿಗರು ಸ್ವಪ್ರೇರಣೆಯಿಂದ ವಾರಾಂತ್ಯದಲ್ಲಿ ಹಳ್ಳಿಗಳಿಗೆ ಇಲ್ಲವೇ ಯಾವುದಾದರೂ ಶಾಲೆಗೆಗಳಿಗೆ ತೆರಳಿ ಸೇವ ಕಾರ್ಯದಲ್ಲಿ ತೊಡಗುತ್ತಾರೆ , ಇವರಿಗೆ ಕನ್ನಡ ಗೊತ್ತಿದ್ದರೆ ಸಂಭಾಷಣೆ ಸುಲಭ ಹಾಗೂ ಅವರ ಸೇವೆಯನ್ನು ಸುಲಭವಾಗಿ ತಲುಪಿಸಬಹುದು.

ಇತ್ತೀಚೆಗೆ ಬಹು ರಾಷ್ಟ್ರೀಯ ಸಂಸ್ಥೆಗಳು 'ಕಾರ್ಪೋರೇಟ್ ಸೋಷಿಯಲ್ ರೆಸ್ಪಾಂಸಿಬಿಲಿಟೀ' ಎಂಬ ಧ್ಯೇಯ ಹೊಂದಿದ್ದು ತಾವು ಸಹ ಸಮಾಜಕ್ಕೆ ತಮ್ಮ ಇತಿಮಿತಿಯಲ್ಲಿ ಸೇವೆ ಮಾಡಲು ಮುಂದಾಗಿವೆ. ಹಾಗಾಗಿ ಸೇವೆಗೆ ಕನ್ನಡ ಭಾಷೆ ಗೊತ್ತಿರಬೇಕಾದ ಅನಿವಾರ್ಯತೆಯಿದೆ.

ಇವೆಲ್ಲಕ್ಕಿಂತ ಮಿಗಿಲಾಗಿ ಸ್ವಪ್ರೇರಣೆಯಿಂದ ನಾನು ಹಲವಾರು ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿದ್ದೇನೆ ಹಾಗಾಗಿ ಕನ್ನಡ ಕಲಿಯಬೇಕು ಎನ್ನುವ ಆಸಕ್ತಿಯಿದೆ ಎನ್ನುವವರು ಹಲವಾರು ಮಂದಿ.

ಐಟಿಯಲ್ಲಿ ಕನ್ನಡ ಕಲಿಕೆ ಅಷ್ಟು ಸಲಿಸಲ್ಲ

ಐಟಿಯಲ್ಲಿ ಕನ್ನಡ ಕಲಿಕೆ ಅಷ್ಟು ಸಲಿಸಲ್ಲ

ಇದಲ್ಲದೆ ನಾನು ಕನ್ನಡ ಸಾಹಿತ್ಯದ ಬಗ್ಗೆ ತಿಳಿಯ ಬೇಕು ಹಾಗೂ ಅಧ್ಯಯನ ಮಾಡಬೇಕು. ಹಾಗಾಗಿ ನಾನು ಕನ್ನಡ ಓದಲು , ಬರೆಯಲು ಹಾಗೂ ಮಾತನಾಡಲು ಕನ್ನಡ ಕಲಿಯಬೇಕು ಎನ್ನುವ ಪ್ರೇರಣೆಯಿದೆ.
ಐಟಿ ಸಂಸ್ಥೆಗಳಲ್ಲಿ ಕನ್ನಡ ಕಲಿಕೆ ಅಷ್ಟು ಸಲಿಸಲ್ಲ, ಸವಾಲುಗಳು ಅನೇಕ ನಾವು ನಮ್ಮ ಸಮಯದ ಜೊತೆಗೆ ಸಹೋದ್ಯೋಗಿಗಳ ಸಮಯಕ್ಕೆ ಮಹತ್ವ ನೀಡಬೇಕು. ನಾವು ನಮ್ಮ ದೈನಂದಿನ ಕಚೇರಿ ಕೆಲಸದಲ್ಲಿ ಒಂದಿಷ್ಟು ಸಮಯ ಮಿಸಲಿಡಬೇಕು.

ಆಡಳಿತ ಮಂಡಳಿಯನ್ನು ಒಪ್ಪಿಸಬೇಕು, ಕನ್ನಡ ಪಾಠ ಮಾಡಿದರೆ ಅದು ಪ್ರೊ ಕನ್ನಡಿಗ ಅನ್ನುವ ಟ್ಯಾಗ್ ಕೂಡ ಕಟ್ಟಿ ಕೊಳ್ಳಬೇಕು. ಕೆಲವೊಂದು ಸಂಸ್ಥೆಗಳಲ್ಲಿ ಕನ್ನಡ ಪಾಠ ನಡೆಸಲು ಅನುಮತಿ ನಿರಾಕರಿಸಿದ ನಿದರ್ಶನಗಳಿವೆ.

ಕನ್ನಡ ಕಲಿಕೆಯಿಂದ ಮೇಲೆ ನೀಡಿದ ಕಾರಣಗಳಿಗೆ ಹಲವಾರು ಮಿತ್ರರಿಗೆ ಉತ್ತರ ಸಿಕ್ಕಿದೆ, ಮಿತ್ರರನ್ನು ಸಹ ಗುರುವಿನಂತೆ ನೋಡುವಂತೆ ಮಾಡುವ ಭಾವ ಕೇವಲ ಭಾಷೆಗಿದೆ. ಹಲವಾರು ಕನ್ನಡೇತರರು ಇಂದು ಕನ್ನಡಿಗರಾಗಿದ್ದಾರೆ, ನಾಡು ನುಡಿಯನ್ನು ಪ್ರೀತಿಸುವಂತಾಗಿದ್ದರೆ. ಒಂದರ್ಥದಲ್ಲಿ ಹೇಳುವುದಾದರೆ ಕನ್ನಡೇತರ ಕನ್ನಡ ಹಾಗೂ ಕರ್ನಾಟಕದ ಬಗ್ಗೆ ಮನೋಭಾವವೇ ಬದಲಾಗಿದೆ.

English summary
Importance of learning Kannada people who working in IT companies in Bengaluru and challenges to start Kannada teaching class. Here are the write up by Madhu Chandra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X