• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಂಬರುವ ಚಂಡಮಾರುತಗಳ ಚೆಂದದ ಹೆಸರುಗಳಿವು!

|

ಅರ್ನಬ್, ಶಹೀನ್, ಗುಲಾಬ್, ಅಗ್ನಿ ಹೀಗೆ ಮುಂಬರುವ ಚಂಡಮಾರುತಗಳ ಹೆಸರುಗಳನ್ನು ಹವಾಮಾನ ಇಲಾಖೆ ಮುಂದಿಟ್ಟಿದೆ. ಸುಮಾರು 169 ಹೆಸರುಗಳನ್ನು 13 ರಾಷ್ಟ್ರಗಳು ನಿರ್ಧರಿಸಿವೆ. ಹಿಂದೂ ಮಹಾಸಾಗರ, ಅರೇಬಿಯನ್ ಸಮುದ್ರ ಹಾಗೂ ಬಂಗಾಳ ಕೊಲ್ಲಿಗಳಲ್ಲಿ ಈ ಚಂಡಮಾರುತ ಕಾಣಿಸಲಿವೆ.

   ಆಗಿರುವ ಅನ್ಯಾಯ ಸರಿಪಡಿಸಿ ಪ್ರತಿಯೊಬ್ಬರಿಗೂ 10 ಸಾವಿರ ಕೊಡಿ..! | D K Shivakumar

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಸಾಮಾನ್ಯವಾಗಿ ಸ್ತ್ರೀನಾಮಗಳನ್ನೇ ಹೆಚ್ಚಾಗಿ ಚಂಡ ಮಾರುತಗಳಿಗೆ ಇಡಲಾಗುತ್ತದೆ ಎಂಬ ನಂಬಿಕೆ ಇದೆ. ಆದರೆ, ಇದು ಅರ್ಧಸತ್ಯ ಮಾತ್ರ. ಪೂರ್ವ ನಿರ್ಧಾರಿತ ಪಟ್ಟಿಯಂತೆ ಅರ್ಧದಷ್ಟು ಮಾತ್ರ ಮಹಿಳೆಯರ ಹೆಸರಿರುತ್ತದೆ. ಮಿಕ್ಕಂತೆ ಪುರುಷರು, ಹಕ್ಕಿಗಳ ಹೆಸರನ್ನು ಇಡಲಾಗುತ್ತದೆ. ಹಿಂದೂ ಮಹಾ ಸಾಗರವನ್ನು ಹಂಚಿಕೊಂಡಿರುವ ರಾಷ್ಟ್ರಗಳು ಒಂದೊಂದಾಗಿ ಚಂಡಮಾರುತಕ್ಕೆ ಹೆಸರಿಡುವ ಅವಕಾಶ ಗಿಟ್ಟಿಸುತ್ತಾರೆ.

   ಚಂಡಮಾರುತಕ್ಕೆ ಮಹಿಳೆಯರ ಹೆಸರನ್ನಿಡುತ್ತಾರೆ ಏಕೆ?

   ಜನರು ಸುಲಭವಾಗಿ ನೆನಪಲ್ಲಿಟ್ಟುಕೊಳ್ಳಬಹುದಾದ ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಸರಳವಾದ ಹೆಸರನ್ನು ಬಳಸಲಾಗುತ್ತಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಚಂಡಮಾರುತಗಳಿಗೆ ಹೆಸರನ್ನಿಟ್ಟರೆ ಅದರ ಕಾಲ, ಗುಣ ಹೀಗೆ ಹಲವು ವಿಷಯಗಳನ್ನ ಸುಲಭವಾಗಿ ಸಂಗ್ರಹಿಸಿಡಬಹುದು ಎಂದು ಹವಾಮಾನ ತಜ್ಞರು ಹೇಳುತ್ತಾರೆ. ಅಗ್ನಿ, ಆಕಾಶ, ಬಿಜ್ಲಿ, ಜಲ್ ಅಲ್ಲದೆ, ಲೆಹರ್, ಮೇಘ್, ಸಾಗರ್, ವಾಯು ಭಾರತದ ಪಟ್ಟಿಯಲ್ಲಿದೆ. ನಿಲೋಫರ್, ತಿತ್ಲಿ, ಬುಲ್ ಬುಲ್ ಪಾಕಿಸ್ತಾನ ನೀಡಿದ ಹೆಸರುಗಳಾಗಿವೆ.

   ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

   2014ರ ಹೆಸರುಗಳ ಪಟ್ಟಿಯ ಕೊನೆ ಹೆಸರು

   2014ರ ಹೆಸರುಗಳ ಪಟ್ಟಿಯ ಕೊನೆ ಹೆಸರು

   2014ರಲ್ಲಿ ಎಂಟು ರಾಷ್ಟ್ರಗಳಿಂದ ಬಂದ ಚಂಡಮಾರುತ ಹೆಸರುಗಳ ಪಟ್ಟಿಯಲ್ಲಿರುವ ಅಂತಿಮ ಹೆಸರು ಈಗ ಮುಂಬರುವ ಮೊದಲ ಚಂಡಮಾರುತಕ್ಕೆ ಸಿಗಲಿದೆ. ಥೈಲ್ಯಾಂಡ್ ನೀಡಿರುವ ''ಅಂಫಾನ್''(Amphan) ಕೊನೆ ಹೆಸರಾಗಿದ್ದು, ಬಂಗಾಳ ಕೊಲ್ಲಿಯಲ್ಲಿ ಮುಂದೆ ಕಾಣಿಸಿಕೊಳ್ಳಲಿದೆ. 2018ರಲ್ಲಿ ಮುಂಬರುವ ಚಂಡಮಾರುತಕ್ಕೆ ಹೆಸರಿಡಲು ಹೊಸ ಸಮಿತಿ ರಚನೆಯಾಗಿದ್ದು, ಈ ಸಮಿತಿ ನೀಡುವ ಹೆಸರುಗಳ ಕ್ರಮದಲ್ಲೇ ಮುಂಬರುವ ಚಂಡಮಾರುತಗಳನ್ನು ಹೆಸರಿಸಲಾಗುತ್ತದೆ ಎಂದು ಹವಾಮಾನ ಇಲಾಖೆ ಪ್ರಧಾನ ನಿರ್ದೇಶಕ ಮೃತ್ಯುಂಜಯ್ ಮಹಾಪಾತ್ರ ವಿವರಿಸಿದ್ದಾರೆ.

   ಹಿಂದೂ ಮಹಾಸಾಗರ ಹಂಚಿಕೊಂಡ ರಾಷ್ಟ್ರಗಳು

   ಹಿಂದೂ ಮಹಾಸಾಗರ ಹಂಚಿಕೊಂಡ ರಾಷ್ಟ್ರಗಳು

   ತಮಿಳುನಾಡು, ಆಂಧ್ರಪ್ರದೇಶ ಕರಾವಳಿ ಭಾಗದಲ್ಲಿ ಏಳುವ ಭಾರಿ ಅಲೆಗಳಿಗೆ ಸುಲಭವಾಗಿ ಹೆಸರಿಡುವುದನ್ನು ಇಲಾಖೆ ಅಭ್ಯಾಸ ಮಾಡಿಕೊಂಡಿದೆ. ಬಾಂಗ್ಲಾದೇಶ, ಭಾರತ, ಇರಾನ್, ಮಾಲ್ಡೀವ್ಸ್, ಮ್ಯಾನ್ಮಾರ್, ಓಮಾನ್, ಪಾಕಿಸ್ತಾನ,ಕತಾರ್,ಸೌರಿ ಅರೇಬಿಯಾ, ಯುಎಇ, ಯೆಮನ್ಮ, ಶ್ರೀಲಂಕಾ ಮತ್ತು ಥಾಯ್ಲೆಂಡ್ ಹೀಗೆ ಎಂಟು ರಾಷ್ಟ್ರಗಳು ಹಿಂದೂ ಮಹಾಸಾಗರ ವ್ಯಾಪ್ತಿಗೆ ಬರುತ್ತದೆ. 2000ರ ವರ್ಷದಿಂದ ಚಂಡಮಾರುತಗಳಿಗೆ ಹೆಸರನ್ನಿಡುವ ಪರಿಪಾಠ ರೂಢಿಗೆ ಬಂದಿದೆ. 2004ರಲ್ಲಿ ನಾಮಕರಣಕ್ಕೆ ಹೊಸ ಸೂತ್ರ ಬಳಕೆ ತರಲಾಗಿದೆ.ಮೇಲ್ಕಂಡ ರಾಷ್ಟ್ರಗಳು ಸರದಿ ಪ್ರಕಾರ ಚಂಡಮಾರುತಗಳಿಗೆ ಹೆಸರನ್ನಿಡುತ್ತವೆ.

   ಚಂಡಮಾರುತಕ್ಕೆ ಹೆಣ್ಣಿನ ಹೆಸರುಗಳೇ ಏಕೆ?

   ಚಂಡಮಾರುತಕ್ಕೆ ಹೆಣ್ಣಿನ ಹೆಸರುಗಳೇ ಏಕೆ?

   ಇದು ಕೂಡಾ ಕುತೂಹಲಕಾರಿಯಾಗಿದೆ.ಚಂಡಿಯಂತೆ ಆಡುವ ಮಾರುತಗಳಿಗೆ ಸ್ತ್ರೀಲಿಂಗ ನಾಮಗಳೇ ಇದೆ ಏಕೆ? ಎಂಬ ಪ್ರಶ್ನೆ ಥಟ್ಟನೆ ಬರುವುದು ಸಹಜ. ಎರಡನೇ ಮಹಾ ಸಮರದ ಸಮಯದಲ್ಲಿ ಸುಮಾರು 1950 ರಲ್ಲಿ ವಿಶ್ವ ಹವಾಮಾನ ಸಂಸ್ಥೆ (WMO) ಹಾಗೂ ಮಿಲಿಟರಿ ಹವಾಮಾನ ತಜ್ಞ ಮೊದಲ ಬಾರಿಗೆ ಮಹಿಳೆಯರ ಹೆಸರುಗಳನ್ನು ಚಂಡಮಾರುತಗಳಿಗೆ ಇಡಲು ಆರಂಭಿಸಿದರು. WMO ಅಕ್ಷರ ಮಾಲೆ ಪ್ರಕಾರ ಹೆಸರುಗಳನ್ನು ಬದಲಾಯಿಸುತ್ತಾ ಹೋಗಲು ನಿರ್ಧರಿಸಿತು. ಇದು ಕೂಡಾ ಚಂಡಮಾರುತ ಹೊಡೆತಕ್ಕೆ ಸಿಲುಕಿದ ದೇಶಗಳ ಮನವಿ ಮೇರೆಗೆ ಹೆಸರುಗಳನ್ನು WMO ಸೂಚಿಸುತ್ತಾ ಬಂದಿದೆ. ಒಮ್ಮೆ ಬಳಸಿದ ಹೆಸರನ್ನು 10 ವರ್ಷಗಳವರೆಗೂ ಬಳಸುವುದಿಲ್ಲ. ಇದು ಐತಿಹಾಸಿಕವಾಗಿ ಹಾಗೂ ವಿಮೆ ಹಿಂಪಡೆಯುವುದಕ್ಕೆ ಸುಲಭವಾಗುವಂಥ ವ್ಯವಸ್ಥೆಯಾಗಿದೆ. ಕೆಲವೊಮ್ಮೆ ಪುರುಷರ ಹೆಸರನ್ನು ಇಡಲಾಗಿದೆ.

   ವಿಶ್ವ ಹವಾಮಾನ ಸಂಸ್ಥೆ(WMO) ಪಟ್ಟಿ

   ವಿಶ್ವ ಹವಾಮಾನ ಸಂಸ್ಥೆ(WMO) ಪಟ್ಟಿ

   ಪ್ರಸ್ತುತ ವಿಶ್ವ ಹವಾಮಾನ ಸಂಸ್ಥೆ(WMO) ಸುಮಾರು 6 ಪಟ್ಟಿ ಹೊಂದಿದ್ದು ಸುಮಾರು 21 ಹೆಸರುಗಳಿದೆ.( Q, U, X, Y ಹಾಗೂ Z ಅಕ್ಷರದಿಂದ ಬರುವ ಹೆಸರುಗಳನ್ನು ಬಳಕೆ ಮಾಡುತ್ತಿಲ್ಲ) ಪ್ರತಿ 6 ವರ್ಷಕ್ಕೊಮ್ಮೆ ಪಟ್ಟಿ ಬದಲಾಗುತ್ತದೆ. 2005ರಲ್ಲಿ ಆದಂತೆ ವರ್ಷದಲ್ಲಿ 21ಕ್ಕೂ ಅಧಿಕ ಚಂಡ ಮಾರುತ ಕಂಡು ಬಂದರೆ ಇಂಗ್ಲೀಷ್ ವರ್ಣಮಾಲೆ ಬದಲಿಗೆ ಗ್ರೀಕ್ ವರ್ಣಮಾಲೆ ಅಕ್ಷರದಂತೆ ಹೆಸರು ಸೂಚಿಸಲಾಗುತ್ತದೆ. ಒಂದು ಸಾಗರದಲ್ಲಿ ಕಾಣಿಸಿಕೊಂಡ ಚಂಡಮಾರುತ ಮತ್ತೊಂದು ಸಾಗರಕ್ಕೆ ಸಾಗುವಷ್ಟರಲ್ಲೇ ಅವಸಾನ ಹೊಂದಿ ಮತ್ತೆ ಮೊದಲಿಂದ ಮೇಲಕ್ಕೇದ್ದರೆ ಹೆಸರಿಡುವುದು ಕಷ್ಟ ಕಷ್ಟ. ಆಗ 'ಐಡೆಂಟಿಟಿ' ಬಿಕ್ಕಟ್ಟು ತಲೆ ದೋರುತ್ತದೆ.

   ಪ್ರತಿ ರಾಷ್ಟ್ರದಿಂದ 13 ಹೆಸರುಗಳು

   ಪ್ರತಿ ರಾಷ್ಟ್ರದಿಂದ 13 ಹೆಸರುಗಳು

   ಬಾಂಗ್ಲಾದೇಶ: ಅರ್ನಬ್

   ಕತಾರ್: ಶಹೀನ್

   ಪಾಕಿಸ್ತಾನ: ಲುಲು

   ಭಾರತ: ಗತಿ, ತೇಜ್, ಮರಸು, ಆಗ್, ನೀರ್

   ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಹಾಗೂ ಅರೇಬಿಯನ್ ಸಮುದ್ರಗಳಲ್ಲಿ ವರ್ಷಕ್ಕೆ ಕನಿಷ್ಠ ಐದು ಚಂಡಮಾರುತಗಳನ್ನು ಕಾಣಬಹುದು. ಈಗ ನೀಡಿರುವ ಹೆಸರುಗಳು ಮುಂದಿನ 25 ವರ್ಷಗಳಿಗೆ ಸಾಕು ಎಂದು ಮಹಾಪಾತ್ರ ಹೇಳಿದ್ದಾರೆ.

   ಅಮೆರಿಕದಲ್ಲಿ ಹೆಸರಿಡುವ ಪದ್ಧತಿ

   ಅಮೆರಿಕದಲ್ಲಿ ಹೆಸರಿಡುವ ಪದ್ಧತಿ

   ಅಮೆರಿಕದಲ್ಲಿ ಸಮಸಂಖ್ಯೆಯ ಬಿರುಗಾಳಿಗಳಿಗೆ ಮಹಿಳೆಯ ಹೆಸರುಗಳು, ಬೆಸಸಂಖ್ಯೆಯ ಬಿರುಗಾಳಿಗಳಿಗೆ ಪುರುಷರ ಹೆಸರುಗಳನ್ನು ಇಡಲಾಗುತ್ತದೆ. ವರ್ಷದ ಮೊದಲ ಬಿರುಗಾಳಿಗೆ ಎ ಅಕ್ಷರ ನಂತರ ಬಿ ಅಕ್ಷರ ಹೀಗೆ ಸರಣಿ ಮುಂದುವರೆಯುತ್ತದೆ. ಇದರ ಜತೆಗೆ ಚಂಡಮಾರುತವೇಳುವ ಪ್ರದೇಶಗಳ ನಿರ್ದಿಷ್ಟ ದೇಶಗಳು ನಾಮಕರಣದ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತವೆ. ಅಟ್ಲಾಂಟಿಕ್, ಪೆಸಿಫಿಕ್ ಸಾಗರದಲ್ಲಿ ಅಬ್ಬರಿಸುವ ಚಂಡಮಾರುತಗಳ ಪಟ್ಟಿ ಇಲ್ಲಿ ಸಿಗಲಿದೆ. (http://www.nhc.noaa.gov/aboutnames.shtml)

   English summary
   Shaheen, Gulab, Tej, Agni, Aag are among the 169 names decided by 13 countries for christening future cyclones in the north Indian Ocean, the Arabian Sea and the Indian Ocean, the India Meteorological Department said.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X