
ಬ್ಯಾಚುಲರ್ಸ್ ಬೆಚ್ಚಿ ಬೀಳುವ ಸುದ್ದಿ: ಈ ದೇಶದಲ್ಲಿ ಮದುವೆ ಆಗದಿದ್ರೆ ಮುಗೀತು ಕಥೆ!
ವಯಸ್ಸು 18 ದಾಟಿದರೆ ಮುಗೀತು ಮದುವೆ ಚಿಂತೆ ಪೋಷಕರಿಗೆ ಶುರುವಾಗಿ ಬಿಡುತ್ತೆ. ಬೇಗ ಮಗಳ ಮದುವೆ ಮಾಡಬೇಕು, ಆದಷ್ಟು ಬೇಗ ಮಗನಿಗೊಂದು ಹೆಣ್ಣು ಹುಡುಕಬೇಕು ಅನ್ನೋ ಚಿಂತೆ ಎಲ್ಲಾ ಪೋಷಕರನ್ನೂ ಕಾಡುತ್ತದೆ. ಆದರೆ ಡನ್ಮಾರ್ಕ್ ನಗರದಲ್ಲಿ ಮದುವೆಯಾಗದಿದ್ದರೆ ಮುಂದೇನಪ್ಪಾ ಅನ್ನೋ ಚಿಂತೆ ಯುವಕ-ಯುವತಿಯನ್ನೇ ಹೆಚ್ಚಾಗಿ ಕಾಡುತ್ತದೆ.
ನಾನು ಓದಬೇಕು, ಕೆಲಸಕ್ಕೆ ಸೇರಿಕೊಳ್ಳಬೇಕು, ಉದ್ಯೋಗದಲ್ಲಿ ಉನ್ನತಿ ಸಾಧಿಸಬೇಕು ಅಂದುಕೊಳ್ಳುವ ಪ್ರತಿಯೊಬ್ಬರು ಮದುವೆಯಿಂದ ಅಂತರ ಕಾಯ್ದುಕೊಳ್ಳುತ್ತಾರೆ. ಸಿಂಗಲ್ ಆಗಿದ್ದರೆ ಸಾಧನೆ ಸಾಧ್ಯ ಎನ್ನುವ ಮನೋಭಾವ ಈಗಿನ ಯುವ ಪೀಳಿಗೆಯಲ್ಲಿದೆ. ಇದರ ಮಧ್ಯೆ ಇದೊಂದು ರಾಷ್ಟ್ರದಲ್ಲಿನ ಆಚರಣೆಯು ಮದುವೆಯಾಗದವರಲ್ಲಿ ಭಯವನ್ನು ಹುಟ್ಟಿಸುತ್ತದೆ.
'ಒಡೆದ ಹೃದಯ'ಗಳ ಬಗ್ಗೆ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮೆಸೇಜ್!
ಡೆನ್ಮಾರ್ಕ್ ನೆಲದಲ್ಲಿ ಮದುವೆ ಆಗದಿರುವ ಯುವಕ-ಯುವತಿಯರು ಬೀದಿಯಲ್ಲಿ ನಡೆದುಕೊಂಡು ಹೋಗುವುದಕ್ಕೂ ಆತಂಕ ಪಡುವಂತಹ ಪರಿಸ್ಥಿತಿ ಸೃಷ್ಟಿಯಾಗಿ ಬಿಟ್ಟಿದೆ. ಆ ರಾಷ್ಟ್ರದಲ್ಲಿನ ಒಂದೇ ಒಂದು ಆಚರಣೆಯು ಬ್ಯಾಚುಲರ್ಸ್ ಬದುಕಿನಲ್ಲಿ ಭಯ ಛಾಯೆ ಆವರಿಸುವಂತೆ ಮಾಡಿ ಬಿಟ್ಟಿದೆ. ಹಾಗಿದ್ದಲ್ಲಿ ಆ ರಾಷ್ಟ್ರದಲ್ಲಿರುವ ವಿಲಕ್ಷಣ ಆಚರಣೆಯೇನು?, ಮದುವೆ ಆಗದವರಿಗೆ ಆ ದೇಶದಲ್ಲಿ ಜನರು ಕೊಡುವ ಶಿಕ್ಷೆಯಾದರೂ ಏನು?, 25 ದಾಟಿದ ಮಂದಿ ಮನೆ ಹೊಸ್ತಿಲು ದಾಟುವುದಕ್ಕೆ ಯಾಕೆ ಹೆದರುತ್ತಾರೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಮದುವೆ ಯಾವಾಗ ಅಂತಾ ಕೇಳೋರಿಗೇನೂ ಕಮ್ಮಿಯಿಲ್ಲ!
ಸಾಮಾನ್ಯವಾಗಿ ವಯಸ್ಸು 25 ದಾಟಿದರೆ ನಿಮ್ಮ ಮಗಳ ಮದುವೆ ಯಾವಾಗ, ನಿಮ್ಮ ಮಗನ ಮದುವೆ ಯಾವಾಗ ಅಂತಾ ಕೇಳೋರು ಕಾಮನ್. ಯಾಕೆ ಇನ್ನೂ ಮದುವೆ ಮಾಡಿಲ್ಲ ಅಂತಾ ಮುಂದೆ ಕೇಳುವ ಮಂದಿ ಹಿಂದೆ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುವ ಘಟನೆಗಳೂ ಸಹ ನಡೆಯುತ್ತವೆ. ಇಷ್ಟು ವರ್ಷವಾದರೂ ಮದುವೆಯಾಗಿಲ್ಲ ಎಂದರೆ ಆಕೆಯಲ್ಲಿ ಅಥವಾ ಅವನಲ್ಲೇ ಏನೋ ಲೋಪವಿರಬೇಕು ಎಂದು ಹೀಯಾಳಿಸುವ ಮಂದಿಯೂ ಇರುತ್ತಾರೆ. ಆದರೆ ಡೆನ್ಮಾರ್ಕ್ ಮಂದಿ ಮಾತ್ರ ಈ ಎಲ್ಲದ್ದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗುತ್ತಾರೆ.

ಮದುವೆಯಾಗದಿದ್ದರೆ ಮೈ ಮೇಲೆ ಮಸಾಲಾ ಪುಡಿ!
ಡೆನ್ಮಾರ್ಕ್ ನಗರದಲ್ಲಿ 25 ವರ್ಷ ದಾಟಿದರೂ ಮದುವೆಯಾಗದ ಬ್ಯಾಚುಲರ್ಸ್ ನಡೆದುಕೊಂಡು ಹೋಗುವುದು ಕಷ್ಟವಾಗುತ್ತದೆ. ಏಕೆಂದರೆ ಹೀಗೆ ಬ್ಯಾಚುಲರ್ ಆಗಿರುವ ಯುವಕ-ಯುವತಿಯರ ಮೇಲೆ ಸ್ನೇಹಿತರು ಮತ್ತು ಕುಟುಂಬಸ್ಥರೇ ಮಸಾಲೆಯನ್ನು ಎಸೆಯುತ್ತಾರೆ. ಮೈ ತುಂಬಾ ಮಸಾಲಾ ಪುಡಿಯನ್ನು ಎರಚುತ್ತಾರೆ. ಅದೇ ರೀತಿ ವಯಸ್ಸು ಹೆಚ್ಚು ಹೆಚ್ಚು ಆದಂತೆ ಇನ್ನೂ ಹೆಚ್ಚು ಹೆಚ್ಚು ಅವಮಾನವನ್ನು ಈ ನಗರದಲ್ಲಿ ಜನರು ಎದುರಿಸಬೇಕಾಗುತ್ತದೆ.

ಸ್ನೇಹಿತರು ಮತ್ತು ಬಂಧುಗಳಿಂದ ದಾಲ್ಚಿನ್ನಿ ಅಭಿಷೇಕ
ಮದುವೆಯಾಗದ ತನ್ನ ಗೆಳಯ-ಗೆಳತಿಯ ಮೇಲೆ ಸ್ನೇಹಿತರು ಮತ್ತು ಸಂಬಂಧಿಗಳೇ ದಾಲ್ಚಿನ್ನಿಯನ್ನು ಎಸೆಯುತ್ತಾರೆ. ಈ ದಾಲ್ಚಿನ್ನಿಯನ್ನು ದಾಟಿ ಹೋಗುವುದು ಬಲು ಕಷ್ಟವಾಗುತ್ತದೆ. ಏಕೆಂದರೆ ಮೈ ಮೇಲೆ ಎರಚಿದ ದಾಲ್ಚಿನ್ನಿಯು ಮೈಗೆ ಅಂಟಿಕೊಳ್ಳುವಂತೆ ನೀರನ್ನು ಸಿಂಪಡಿಸಲಾಗುತ್ತದೆ. ಇದು ದೀರ್ಘಕಾಲದ ಸಂಪ್ರದಾಯ ಎಂದು ಡ್ಯಾನಿಶ್ ವ್ಯಕ್ತಿಯೊಬ್ಬರು ಹೇಳುತ್ತಾರೆ. ಮಸಾಲೆ ಮಾರಾಟಗಾರರು ಯಾವಾಗಲೂ ಪ್ರಯಾಣಿಸುವರಾಗಿದ್ದು, ಸಿಂಗಲ್ ಆಗಿಯೇ ಉಳಿದುಕೊಳ್ಳುತ್ತಾರೆ. ಆದ್ದರಿಂದ ಅವರು ಯಾರೊಂದಿಗಾದರೂ ನೆಲೆಸಲು ಸಾಕಷ್ಟು ಸಮಯ ಇರುವುದಿಲ್ಲ. ಅವರು ಒಂದೇ ಸ್ಥಳದಲ್ಲಿ ಇರುವುದಿಲ್ಲ. ಈ ಮಾರಾಟಗಾರರಲ್ಲಿ ಅನೇಕರು ಎಂದಿಗೂ ಮದುವೆ ಆಗುವುದಿಲ್ಲ, ಹೀಗಾಗಿ ಅವರನ್ನು ಪೆಬರ್ಸ್ವೆಂಡ್ಸ್ ಎಂದು ಹೇಳಲಾಗುತ್ತದೆ. ಹಾಗೆಂದರೆ 'ಪೆಪ್ಪರ್ ಡ್ಯೂಡ್ಸ್'. ಒಂಟಿ ಮಹಿಳೆಯನ್ನು ಹೀಗೆ 'ಪೆಬರ್ಮೊ' ಅಥವಾ 'ಪೆಪ್ಪರ್ ಮೇಡನ್' ಎಂದು ಕರೆಯಲಾಗುತ್ತದೆ.

30 ದಾಟಿದ ಬ್ಯಾಚುಲರ್ಸ್ ಮೈ ಮೇಲೆ ಮೆಣಸು!
ಡ್ಯಾನಿಷ್ ಯುವಕ-ಯುವತಿಯರು ಬ್ಯಾಚುಲರ್ಸ್ ಆಗಿ ಇರುವುದಕ್ಕೆ ಬಯಸುವುದಿಲ್ಲ. ಏಕೆಂದರೆ ಇಲ್ಲಿ ವಯಸ್ಸು ಹೆಚ್ಚಾದಂತೆ ಶಿಕ್ಷೆಯ ವೈಖರಿ ಹಾಗೂ ಪ್ರಮಾಣ ಹೆಚ್ಚಾಗುತ್ತಲೇ ಹೋಗುತ್ತದೆ. 30ನೇ ಹುಟ್ಟುಹಬ್ಬದಂದು ದಾಲ್ಚಿನ್ನಿಯ ಬದಲು ಮೆಣಸನ್ನು ಜನರಿಗೆ ಎರಚಲಾಗುತ್ತದೆ. ಕೆಲವೊಮ್ಮೆ ಮೊಟ್ಟೆಗಳನ್ನು ಸಹ ಮಿಶ್ರಣ ಮಾಡಿ ಹಾಕುತ್ತಾರೆ, ಇದರಿಂದ ಮೆಣಸಿನ ಪುಡಿಯು ಮೈಗೆ ಸರಿಯಾಗಿ ಅಂಟಿಕೊಳ್ಳುತ್ತದೆ. ಡೆನ್ಮಾರ್ಕ್‌ನಲ್ಲಿ ಮದುವೆಯಾಗುವ ಪುರುಷರ ಸರಾಸರಿ ವಯಸ್ಸು 34 ಮತ್ತು ಮಹಿಳೆಯರಿಗೆ 32 ಆಗಿದೆ. ಈ ಆಚರಣೆಗಳಲ್ಲ ಶಿಕ್ಷೆಗಿಂತ ಹೆಚ್ಚಾಗಿ, ಸಂಪ್ರದಾಯವು ತಮಾಷೆಯಾಗಿ ಪರಿಗಣಿಸಲ್ಪಟ್ಟಿದೆ. ಊರಿನ ಜನರೆಲ್ಲರೂ ಖುಷಿಯಿಂದ ಈ ಸಮಯವನ್ನು ಎಂಜಾಯ್ ಮಾಡುತ್ತಾರೆ.