ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣ ಜನ್ಮಾಷ್ಟಮಿ ಶುಭಾಶಯ ತಿಳಿಸಲು ವಾಟ್ಸಪ್ ಸ್ಟಿಕ್ಕರ್ ಬಳಕೆ ಹೇಗೆ?

|
Google Oneindia Kannada News

ಬೆಂಗಳೂರು ಆಗಸ್ಟ್ 18: ಶ್ರಾವಣ ಮಾಸ ಕೃಷ್ಣ ಪಕ್ಷದ ಅಷ್ಟಮಿಯಂದು ಹುಟ್ಟಿದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಗುರುವಾರ ಹಾಗೂ ಆಗಸ್ಟ್ 19ರಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಗೋಕುಲಾಷ್ಟಮಿ ಆಚರಣೆ ಕುರಿತು ನೀವು ವಾಟ್ಸಪ್‌ಗಳಲ್ಲಿ ಶುಭಾಶಯ ತಿಳಿಸಲು ಸಿಕ್ಕರ್‌ಗಳು ಲಭ್ಯವಿದ್ದು, ಅವುಗಳನ್ನು ಬಳಸಬಹುದಾಗಿದೆ.

ಹಿಂದೂಗಳ ಪಾಲಿಕೆಗೆ ಪವಿತ್ರ ಆಚರಣೆ ಆಗಿರುವ ಕೃಷ್ಣ ಜನ್ಮಾಷ್ಟಮಿ-2022 ತ್ರಿಮೂರ್ತಿಗಳಲ್ಲಿ ಒಬ್ಬರಾದ ವಿಷ್ಣುವಿನ ಎಂಟನೇ ಅವತಾರ ಎಂಬ ನಂಬಿಕೆಯೂ ಇದೆ. ಈ ಗೋಕುಲಾಷ್ಟಮಿ ಆಚರಣೆ ವೇಳೆ ಭಕ್ತರು ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ದೇವಾಲಯಗಳು ಹೂಗಳಿಂದ ಅಲಂಕಾರಗೊಂಡರೆ, ಮನೆಗಳು ವರ್ಣರಂಜಿತ ದೀಪಗಳಿಂದ ಕಂಗೊಳಿಸುತ್ತಿರುತ್ತವೆ. ಎಲ್ಲೆಡೆ ಸಂಭ್ರಮದ ವಾತಾವರಣ ಕಳೆಗಟ್ಟಿರುತ್ತದೆ.

ಹೀಗೊಂದು ಪ್ರಸ್ತಾಪ: ಹಿಂದೂ ರಾಷ್ಟ್ರವಾದರೆ ಭಾರತ, ವಾರಣಾಸಿಯೇ ರಾಜಧಾನಿ!ಹೀಗೊಂದು ಪ್ರಸ್ತಾಪ: ಹಿಂದೂ ರಾಷ್ಟ್ರವಾದರೆ ಭಾರತ, ವಾರಣಾಸಿಯೇ ರಾಜಧಾನಿ!

ಕಳೆದ ಎರಡು ವರ್ಷದಲ್ಲಿ ಕೊರೋನಾ ಪಿಡುಗಿನಿಂದಾಗಿ ಭಗವಾನ್ ಶ್ರೀ ಕೃಷ್ಣ ಜನ್ಮಾಷ್ಟಮಿ ಸೇರಿದಂತೆ ಯಾವ ಹಬ್ಬಗಳು ಅಷ್ಟಾಗಿ ವಿಜೃಂಭಣೆಯಿಂದ ಜರುಗಿಲ್ಲ. ಹೀಗಾಗಿಯೇ ಜನರು ಗುಂಪು ಗೂಡುವುದು, ಹಬ್ಬದ ಶುಭಾಶಯವನ್ನು ಮೌಖಿಕವಾಗಿ ವಿನಿಮಯ ಮಾಡಿಕೊಳ್ಳುವುದಕ್ಕಿಂತ ವಾಟ್ಸಪ್ ಸ್ಟಿಕ್ಕರ್, ಸಂದೇಶಗಳ ಮೂಲಕವೇ ತಿಳಿಸುವಲ್ಲಿ ಒಗ್ಗಿಕೊಂಡಿದ್ದಾರೆ. ಸ್ನೇಹಿತರು, ಅತ್ಯಾಪ್ತರು, ಬಂಧುಗಳಿಗೆ ಧನ್ಯವಾದ, ಶುಭಾಶಯ ತಿಳಿಸಲು ನಡೆಸುವ ಈ ವಾಟ್ಸಪ್ ಸಂದೇಶ, ಸ್ಟಿಕ್ಕರ್ ವಿನಿಮಯ ಈಗಲೂ ಮುಂದುವರಿದಿದೆ.

How to use WhatsApp stickers to wish Krishna Janmashtami?

ಭಾವನೆಗಳನ್ನು ವಾಟ್ಸಪ್ ನಲ್ಲಿ ಸ್ಟಿಕ್ಕರ್‌ಗಳ ಮೂಲಕ ಇಲ್ಲವೇ ವಿಡಿಯೋ ಮೂಲಕ ವ್ಯಕ್ತಪಡಿಸುವವರು ಅಸಂಖ್ಯಾತರಿದ್ದಾರೆ. ಸದ್ಯ ಶ್ರೀ ಕೃಷ್ಣ ಜನ್ಮಾಷ್ಟಮಿ ಇದ್ದು ಮುಂದೆ ಸಾಲು ಸಾಲು ಹಬ್ಬಗಳು ಎದುರಾಗಲಿವೆ. ಈ ಸಂಬಂಧ ಶುಭಾಶಯ ವಿನಿಮಯ ಮಾಡಲು ಸ್ಟಿಕ್ಕರ್‌ಗಳು, ವಿಡಿಯೋಗಳು ವಾಟ್ಸಪ್‌ಗಳಲ್ಲಿ ಲಭ್ಯವಿವೆ. ಅವುಗಳನ್ನು ಸುಲಭವಾಗಿ ಬಳಸಿಕೊಂಡು ನಿಮ್ಮ ಆಪ್ತರಿಗೆ ಕಳುಹಿಸಬಹುದಾಗಿದೆ. ಅವುಗಳ ಬಳಕೆ, ಡೌನ್‌ಲೋಡ್‌ಗಾಗಿ ಇಲ್ಲಿನ ಮಾರ್ಗ ಅನುಸರಿಸಿ.

ಶುಭಾಶಯ ಸಿಕ್ಕರ್‌ ಡೌನ್‌ ಮಾಡಿಕೊಳ್ಳಿ

ಕೃಷ್ಣ ಜನ್ಮಾಷ್ಟಮಿ ಸೇರಿದಂತೆ ವಿವಿಧ ಹಬ್ಬಗಳ ಸ್ಟಿಕ್‌ಗಳು ಲಭ್ಯವಿವೆ. ಅದಕ್ಕಾಗಿ ನೀವು ನಿಮ್ಮ ಸ್ಮಾರ್ಟ್ ಫೋನ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್‌ ತೆರೆಯಿರಿ ನಂತರ ಮೇಲ್ಭಾಗದಲ್ಲಿರುವ ಹುಡುಕಾಟ ಪಟ್ಟಿಯಲ್ಲಿ ಜನ್ಮಾಷ್ಟಮಿ ಸ್ಟಿಕ್ಕರ್‌ಗಳು ಇಲ್ಲವೇ ಜನ್ಮಾಷ್ಟಮಿ ವೀಡಿಯೊ ಎಂದು ಬರೆದು ಹುಡುಕಲು ಆರಂಭಿಸಿ. ನಂತರ ನೀವು ಇಷ್ಟಪಡುವ ಸ್ಟಿಕ್ಕರ್ ಅಪ್ಲಿಕೇಶನ್‌ಗಳ ಸಾಲುಗಳಲ್ಲಿ ಕೃಷ್ಣ ಜನ್ಮಾಷ್ಟಮಿಯ ಅಪ್ಲಿಕೇಶನ್‌ ಕ್ಲಿಕ್‌ ಮಾಡುವ ಮೂಲಕ ನಿಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ.

ಡೌನ್‌ಲೋಡ್‌ ಆದ ನಂತರ ಅಪ್ಲಿಕೇಶನ್‌ ಅನ್ನು ಮೊಬೈಲ್‌ನಲ್ಲಿ ತೆರೆದು ಟ್ಯಾಪ್ ಮಾಡಿದರೆ (+) ಐಕಾನ್ / ಆಡ್ ಬಟನ್ ಒತ್ತಿ ನೀವು ಬಳಸಲು ಬಯಸುವ ಸ್ಟಿಕ್ಕರ್ ಅಪ್ಲಿಕೇಶನ್ ಅನ್ನು ಆಯ್ಕೆ ಮಾಡಿಕೊಳ್ಳಿ. ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸ್ಅಪ್‌ ತೆರೆದು ಅಲ್ಲಿ ನೀವು ಹಂಚಿಕೊಳ್ಳಲು ಬಯಸುವ ಸ್ಟಿಕ್ಕರ್ ಇರುವ ಚಾಟ್‌ ಮೇಲೆ ಕ್ಲಿಕ್ ಮಾಡಬೇಕು. ಆ ಚಾಟ್‌ಗಳಲ್ಲಿ ಇರುವ ಜಿಎಫ್‌ಐ, ಸ್ಟಿಕ್ಕರ್‌ಗಳಲ್ಲಿ ಯಾವುದರ ಮೇಲಾದರೂ ಟ್ಯಾಪ್ ಮಾಡಿದರೆ ಅದು ನೀವು ಹಂಚಿಕೊಳ್ಳುವ ವ್ಯಕ್ತಿಯ ವಾಟ್ಸಪ್‌ಗೆ ಹೋಗುತ್ತದೆ.

How to use WhatsApp stickers to wish Krishna Janmashtami?

ಸ್ಟಿಕ್ಕರ್ ಅಪ್ಲಿಕೇಶನ್‌ಗಳನ್ನು ವಾಟ್ಸಪ್‌ಗೆ ಸೇರಿಸಲು ಐಫೋನ್ (ಆಪಲ್) ಬಳಕೆದಾರರಿಗೆ ಅನುಮತಿಸುವುದಿಲ್ಲ. ಅವರು ವಾಟ್ಸಪ್‌ ಮೂಲಕ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಂದ ಸ್ಟಿಕ್ಕರ್‌ಗಳನ್ನು ಹಂಚುವಂತೆ ಕೇಳಬಹುದು.

English summary
Smartphone users How to use WhatsApp stickers to wish for Krishna Janmashtami festival?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X