ಆನ್‌ಲೈನ್‌ನಲ್ಲಿ ಮತದಾರರ ಗುರುತಿನ ಚೀಟಿಯಲ್ಲಿ ನಿಮ್ಮ ವಸತಿ ವಿಳಾಸ ಹೀಗೆ ನವೀಕರಿಸಿ
ನವದೆಹಲಿ, ಜನವರಿ 17: ಮತದಾರರ ಗುರುತಿನ ಚೀಟಿಯು ನಿಮ್ಮ ಚುನಾವಣಾ ವಾರ್ಡ್ ಅಥವಾ ವಿಭಾಗ ಅಥವಾ ವಿಧಾನಸಭೆ ಕ್ಷೇತ್ರದಲ್ಲಿ ಮತ ಚಲಾಯಿಸಲು ನಿಮಗೆ ಸಹಾಯ ಮಾಡುವ ಪ್ರಮುಖ ಗುರುತಿನ ದಾಖಲೆಗಳಲ್ಲಿ ಒಂದಾಗಿದೆ. ಮುಂದಿನ ತಿಂಗಳು ದೇಶದ ಐದು ರಾಜ್ಯಗಳಾದ ಪಂಜಾಬ್, ಉತ್ತರಾಖಂಡ, ಉತ್ತರ ಪ್ರದೇಶ, ಗೋವಾ ಮತ್ತು ಮಣಿಪುರದಲ್ಲಿ ಚುನಾವಣೆ ನಡೆಯಲಿದೆ. ಈ ಪಂಚ ರಾಜ್ಯಗಳ ಚುನಾವಣೆಗಾಗಿ ತಯಾರಿ ನಡೆಯುತ್ತಿರುವಾಗ ನಮ್ಮ ಮತದಾರರ ಗುರುತಿನ ಚೀಟಿಯಲ್ಲಿನ ವಸತಿ ವಿಳಾಸವು ನವೀಕೃತವಾಗಿದೆಯೇ ಎಂದು ನಾವು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ.
ನಿಮ್ಮ ಕ್ಷೇತ್ರದಲ್ಲಿ ಮತ ಚಲಾಯಿಸಲು, ನಿಮ್ಮ ಮತದಾರರ ಗುರುತಿನ ಚೀಟಿಯಲ್ಲಿ ಆ ಕ್ಷೇತ್ರದ ವಿವರಗಳು ಮತ್ತು ವಿಳಾಸವನ್ನು ಹೊಂದಿರಬೇಕು. ಇತ್ತೀಚಿನ ದಿನಗಳಲ್ಲಿ ವಾಸಸ್ಥಳವನ್ನು ಬದಲಾಯಿಸಿದವರು ಮತದಾರರ ಗುರುತಿನ ಚೀಟಿಯನ್ನು ನವೀಕರಿಸಬೇಕು. ಇದರಿಂದಾಗಿ ನೀವು ಮತ ಚಲಾವಣೆ ಮಾಡುವಾಗ ಯಾವುದೆ ತೊಂದರೆ ಉಂಟಾಗಲಾರದು.
ನಿಮ್ಮ ಹೊಸ ವಿಳಾಸವನ್ನು ನಿಮ್ಮ ಮತದಾರರ ಗುರುತಿನ ಚೀಟಿಯಲ್ಲಿ ಅಪ್‌ಡೇಟ್ ಮಾಡಲು ನೀವು ಬಯಸಿದರೆ ನೀವು ಮೊದಲು ಈ ಬಗ್ಗೆ ಮಾಹಿತಿಯನ್ನು ಆನ್‌ಲೈನ್ ಮೂಲಕ ಸಲ್ಲಿಕೆ ಮಾಡಬೇಕಾಗುತ್ತದೆ. ಫಾರ್ಮ್ ಅನ್ನು ಭರ್ತಿ ಮಾಡಲು ಬಯಸುವ ಎಲ್ಲಾ ಬಳಕೆದಾರರು ಮತದಾರರ ಅಧಿಕೃತ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಅಂದರೆ https://voterportal.eci.gov.in ಗೆ ಭೇಟಿ ನೀಡಬೇಕು. ಹಾಗಾದರೆ ನಿಮ್ಮ ಗುರುತಿನ ಚೀಟಿಯಲ್ಲಿ ವಿಳಾಸವನ್ನು ಹೇಗೆ ಅಪ್‌ಡೇಟ್ ಮಾಡುವುದು ಎಂದು ತಿಳಿಯಲು ಮುಂದೆ ಓದಿ...

ಮತದಾರರ ಗುರುತಿನ ಚೀಟಿಯಲ್ಲಿನ ವಿಳಾಸವನ್ನು ನವೀಕರಿಸಲು ಕೆಳಗಿನ ಹಂತಗಳನ್ನು ಅನುಸರಿಸಿ
* https://voterportal.eci.gov.in ಗೆ ಭೇಟಿ ನೀಡಿ
* Shifted to other Place (ಬೇರೆ ಸ್ಥಳಕ್ಕೆ ಬದಲಾಯಿಸಲಾಗಿದೆ) ಫಾರ್ಮ್ ಅನ್ನು ಆಯ್ಕೆಮಾಡಿ
* ಮತದಾರರ ಗುರುತಿನ ಚೀಟಿ ಸಂಖ್ಯೆ ಸಲ್ಲಿಸಿ
* ಉಲ್ಲೇಖಿತ ನಿಮ್ಮ ವಿವರಗಳನ್ನು ಪರಿಶೀಲಿಸಿ
* ನೀವು ವಿಧಾನಸಭಾ ಕ್ಷೇತ್ರದ ಹೊರಗೆ ಅಥವಾ ವಿಧಾನಸಭಾ ಕ್ಷೇತ್ರದೊಳಗೆ ಸ್ಥಳಾಂತರಗೊಂಡಿದ್ದರೆ ಸೂಕ್ತವಾದ ಆಯ್ಕೆಯನ್ನು ಆರಿಸಿ
* ಅದರ ನಂತರ ನಿಮ್ಮ ಹೊಸ ವಿಳಾಸವನ್ನು ಭರ್ತಿ ಮಾಡಿ, ಚಿತ್ರ ಮತ್ತು ಸಂಬಂಧಿತ ದಾಖಲೆಗಳನ್ನು ಅಪ್‌ಲೋಡ್ ಮಾಡಿ
* ಕೊನೆಯದಾಗಿ, ಎಲ್ಲಾ ವಿವರಗಳನ್ನು ಪರಿಶೀಲಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿದರೆ ಪ್ರಕ್ರಿಯೆ ಸಂಪೂರ್ಣವಾಗಲಿದೆ.
ಇಸಿಐ ವೆಬ್‌ಸೈಟ್‌ನಲ್ಲಿ ನೀವು ಅದೇ ಕ್ಷೇತ್ರದೊಳಗೆ ನಿವಾಸವನ್ನು ಮತ್ತೊಂದು ಸ್ಥಳಕ್ಕೆ ಬದಲಾಯಿಸಿದರೆ, ನೀವು ಫಾರ್ಮ್ 8A ಅನ್ನು ಭರ್ತಿ ಮಾಡಬೇಕು ಎಂದು ಉಲ್ಲೇಖಿಸಲಾಗಿದೆ. ಹೆಸರು, ಫೋಟೋ, ವಯಸ್ಸು, EPIC ಸಂಖ್ಯೆ, ವಿಳಾಸ, ಹುಟ್ಟಿದ ದಿನಾಂಕ, ವಯಸ್ಸು, ಸಂಬಂಧಿಕರ ಹೆಸರು, ಸಂಬಂಧದ ಪ್ರಕಾರ, ಲಿಂಗ ಮೊದಲಾದ ಯಾವುದೇ ಬದಲಾವಣೆಯನ್ನು ಮಾಡಲು, ನೀವು ಫಾರ್ಮ್ 8 ಅನ್ನು ಭರ್ತಿ ಮಾಡಬೇಕು.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಆರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಪಂಜಾಬ್, ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ವಿಧಾನಸಭೆ ಕ್ಷೇತ್ರದ ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಪಂಚ ರಾಜ್ಯಗಳ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಪ್ರಸ್ತುತ ಉತ್ತರ ಪ್ರದೇಶ, ಮಣಿಪುರ, ಗೋವಾ ಮತ್ತು ಉತ್ತರಾಖಂಡದಲ್ಲಿ ಬಿಜೆಪಿ ಆಡಳಿತವಿದೆ. ಉಳಿದಂತೆ ಪಂಜಾಬ್‌ನಲ್ಲಿ ಮಾತ್ರ ಕಾಂಗ್ರೆಸ್ ಆಡಳಿತವಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications