Sexual Predator: ಕಾಮ ಪಿಪಾಸುಗಳನ್ನು ಗುರುತಿಸುವುದು ಹೇಗೆ?
ಬೆಂಗಳೂರು, ಏಪ್ರಿಲ್. 28: ಸದ್ಯ ಕರ್ನಾಟಕದಲ್ಲಿ ಮಾತ್ರವಲ್ಲದೇ ರಾಷ್ಟ್ರಾದ್ಯಾಂತ ಸದ್ದು ಮಾಡುತ್ತಿರುವುದು ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಸುದ್ದಿ. ಸಾವಿರಾರು ವಿಡಿಯೋಗಳಿವೆ ಎಂದು ಹೇಳಲಾಗುತ್ತಿರುವ ಈ ವಿಷಯವನ್ನು ತನಿಖೆ ಮಾಡಲು ಈಗಾಗಲೇ ಸರ್ಕಾರ ಎಸ್‌ಐಟಿ ರಚಿಸಿದೆ. ಇಂತಹ ವಿಷಯಗಳು ಬಂದಾಗಲೆಲ್ಲಾ ಲೈಂಗಿಕ ದೌರ್ಜನ್ಯದಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದು ಚರ್ಚೆಯ ವಿಷಯವಾಗುತ್ತದೆ.
ಇನ್ನು, ಕಾಮ ಪಿಪಾಸು ಎಂದರೆ ಒಪ್ಪಿಗೆಯಿಲ್ಲದೇ, ಅನುಚಿತವಾಗಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಲೈಂಗಿಕ ಸಂಪರ್ಕವನ್ನು ಬಯಸುವವರು. ಇವರು ಲೈಂಗಿಕ ಕಿರುಕುಳ, ಆಕ್ರಮಣ, ಅತ್ಯಾಚಾರ ಮತ್ತು ಮಕ್ಕಳ ಮೇಲೆ ಲೈಂಗಿಕ ಹಲ್ಲೆಯಂತಹ ಲೈಂಗಿಕ ಅಪರಾಧಗಳನ್ನು ಮಾಡಿರಬಹುದು ಅಥವಾ ಮಾಡದಿರಬಹುದು. ಆದರೆ ಎಲ್ಲಾ ಕಾಮ ಪಿಪಾಸುಗಳು ಒಂದು ರೀತಿಯಲ್ಲಿ ಅನುಚಿತ ಸಂಪರ್ಕವನ್ನು ಹುಡುಕುತ್ತಾರೆ. ಆದರೆ, ಆನೇಕ ಸಂದರ್ಭಗಳಲ್ಲಿ ಇದು ಸಂತ್ರಸ್ತರ ಗಮನಕ್ಕೆ ಬಂದಿರುವುದಿಲ್ಲ.

ಈ ಕಾಮ ಪಿಪಾಸುಗಳು ತುಂಬಾ ಸೂಕ್ಮ್ಮ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಲು ಹಲವು ತಂತ್ರಗಳನ್ನು ಬಳಸುತ್ತಾರೆ. ಹಾಗೇಯೇ ತಮ್ಮ ನಿಜವಾದ ಉದ್ದೇಶವನ್ನು ಮರೆಮಾಚುತ್ತಾರೆ ಎಂದು ಹಲವು ಸೈಕೋಥೆರಪಿಸ್ಟ್‌ಗಳು ಹೇಳುತ್ತಾರೆ. ಹೀಗಾಗಿಯೇ ನಾವು ಕಾಮ ಪಿಪಾಸುಗಳ ನಡವಳಿಕೆಯ ಮಾದರಿಗಳು ಮತ್ತು ಗುಣಲಕ್ಷಣಗಳನ್ನು ಹೇಗೆ ಗುರುತಿಸಬಹುದು ಎಂಬುದನ್ನು ಇಲ್ಲಿ ತಿಳಿಯಬಹುದು.
1. ತಮ್ಮ ಲೈನ್ ಕ್ರಾಸ್ ಮಾಡುವುದು
ಕಾಮ ಪಿಪಾಸುಗಳು ನಿರಂತರವಾಗಿ ವೈಯಕ್ತಿಕ ಗಡಿಗಳನ್ನು ದಾಟಬಹುದು ಅಥವಾ ಗೊತ್ತಿದ್ದರೂ ನಿರ್ಲಕ್ಷಿಸಬಹುದು. ಅದರಲ್ಲಿ ಒಪ್ಪಿಗೆಯಿಲ್ಲದೆ ಸುಮ್ಮನೆ ಸ್ಪರ್ಶಿಸುವುದು ಅಥವಾ ಅನಗತ್ಯ ಲೈಂಗಿಕ ಕಾಮೆಂಟ್‌ಗಳನ್ನು ಮಾಡುತ್ತಿರುವುದು. ಈ ವೇಳೆ ನಿಮ್ಮ ಅಭಿಪ್ರಾಯವನ್ನು ಗೌರವಿಸದೇ ಇರುವುದು.
2. ಮ್ಯಾನಿಪುಲೇಟ್ ಮಾಡುವ ವರ್ತನೆ
ಇನ್ನು ಈ ಕಾಮ ಪಿಪಾಸುಗಳು ತಮ್ಮ ಬೆರಗುಗೊಳಿಸುವ ಮಾತುಗಳ ಮೂಲಕ ಜನರನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ. ಆಗ್ಗಾಗೆ ವ್ಯಕ್ತಿಗೆ ಉಡುಗೊರೆಗಳು, ಅಭಿನಂದನೆಗಳು ಅಥವಾ ವಿಶೇಷ ಗಮನವನ್ನು ನೀಡುವುದುಕೂಡ ಸೇರಿರುತ್ತದೆ. ಇದಕ್ಕೆ ಪ್ರತಿಯಾಗಿ ಏನನ್ನಾದರೂ ನಿರೀಕ್ಷಿಸಬಹುದು. ಅದು ಲೈಂಗಿಕತೆ ಕೂಡ ಆಗಿರಬಹುದು.

3. ಎಲ್ಲರಿಂದ ಪ್ರತ್ಯೇಕಗೊಳಿಸುವುದು
ಈ ವ್ಯಕ್ತಿಗಳು ಯಾರನ್ನು ಟಾರ್ಗೆಟ್ ಮಾಡಿರುತ್ತಾರೋ ಅವರನ್ನು ಅವರ ಸ್ನೇಹಿತರು, ಕುಟುಂಬ ಅಥವಾ ಇತರ ಬೆಂಬಲಿಗರಿಂದ ದುರ ಮಾಡಲು ಪ್ರಯತ್ನ ಪಡುತ್ತಾರೆ. ಆಗಾಗ್ಗೆ ತಮ್ಮ ಕಾರ್ಯಗಳು ಮತ್ತು ಉದ್ದೇಶಗಳನ್ನು ರಹಸ್ಯವಾಗಿರಿಸುತ್ತಾರೆ. ಬಳಿಕ ಪರಿಸ್ಥಿತಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಕುಶಲತೆಯಿಂದ ನಿರ್ವಹಿಸಲು ಪ್ರಯತ್ನಿಸುತ್ತಾರೆ.
4. ಲೈಂಗಿಕತೆಯ ಗೀಳು
ಕಾಮ ಪಿಪಾಸುಗಳಲ್ಲಿ ಲೈಂಗಿಕತೆಯ ಬಗ್ಗೆ ಅಸ್ವಾಭಾವಿಕ ಕಾಳಜಿ, ನಿರಂತರವಾಗಿ ಲೈಂಗಿಕ ದಿಕ್ಕಿನಲ್ಲಿ ಸಂಭಾಷಣೆಗಳನ್ನು ನಡೆಸುವುದು ಅಥವಾ ಅತಿಯಾದ ಲೈಂಗಿಕವಾಗಿ ಅಸ್ಪಷ್ಟ ವಸ್ತುಗಳನ್ನು ಹೊಂದಿರುವುದು ಕೂಡ ನಿಮಗೆ ಎಚ್ಚರಿಕೆಯ ಸಂಕೇತವಾಗಿರಬಹುದು.
5. ಅಶ್ಲೀಲ ವಸ್ತುಗಳ ಹಂಚಿಕೆ
ಆಗ್ಗಾಗಿ ಈ ಕಾಮ ಪಿಪಾಸುಗಳು ಅಧಿಕಾರ ಮತ್ತು ನಿಯಂತ್ರಣವನ್ನು ಹೇರುವ ಸಾಧನವಾಗಿ, ಅಶ್ಲೀಲ ಅಥವಾ ಕೆಟ್ಟ ವಸ್ತುಗಳನ್ನು ಬೆದರಿಕೆಯ ರೂಪದಲ್ಲಿ ಹಂಚಿಕೊಳ್ಳಬಹುದು.
6. ಒತ್ತಾಯ ಮತ್ತು ಒತ್ತಡ
ಕಾಮ ಪಿಪಾಸುಗಳು ಇತರ ವ್ಯಕ್ತಿಯ ಭಾವನೆಗಳು ಮತ್ತು ಹಕ್ಕುಗಳನ್ನು ನಿರ್ಲಕ್ಷಿಸಿ ತಮಗೆ ಬೇಕಾದುದನ್ನು ಪಡೆಯಲು ಬಲಾತ್ಕಾರ ಮತ್ತು ನಿರಂತರ ಒತ್ತಡವನ್ನು ಹಾಕಬಹುದು. ಅವರು ಸಂತ್ರಸ್ತರಲ್ಲಿರುವ ತಪ್ಪಿತಸ್ಥ ಭಾವನೆ, ಬೆದರಿಕೆ ಅಥವಾ ಇತರ ರೀತಿಯ ಭಾವನಾತ್ಮಕ ಅಂಶಗಳನ್ನು ತಮ್ಮ ಸಹಾಯಕ್ಕೆ ಬಳಸಿಕೊಳ್ಳಬಹುದು.
7. ಹಿಂಸೆ ಅಥವಾ ಲೈಂಗಿಕ ಅಪರಾಧಗಳ ಇತಿಹಾಸ
ಇವರುಗಳಿಗೆ ಹೆಚ್ಚಿನ ಸಂದರ್ಭಗಳಲ್ಲಿ ಹಿಂಸಾತ್ಮಕ ನಡವಳಿಕೆ ಅಥವಾ ಈ ಹಿಂದೆ ಲೈಂಗಿಕ ಅಪರಾಧಗಳ ಇತಿಹಾಸವು ಇರಬಹುದು. ಕ್ರಿಮಿನಲ್ ಅಥವಾ ಲೈಂಗಿಕವಾಗಿ ಆಕ್ರಮಣಕಾರಿ ನಡವಳಿಕೆಯ ಇತಿಹಾಸದ ಬಗ್ಗೆ ನಿಮಗೆ ತಿಳಿದಿದ್ದರೆ ಅವರ ಬಗ್ಗೆ ಜಾಗರೂಕರಾಗಿರುವುದು ಮುಖ್ಯ.
8. ಸಹಾನುಭೂತಿಯ ಕೊರತೆ ಮತ್ತು ಒಪ್ಪಿಗೆಗಾಗಿ ನಿರ್ಲಕ್ಷ್ಯ
ಇವರುಗಳು ಸಾಮಾನ್ಯವಾಗಿ ತಮ್ಮ ಬಲಿಪಶುಗಳ ಬಗ್ಗೆ ಸಹಾನುಭೂತಿಯನ್ನು ಹೊಂದಿರುವುದಿಲ್ಲ. ಜೊತೆಗೆ ಇವರಿಗೆ ಅವರ ಒಪ್ಪಿಗೆ ಬೇಕು ಎಂಬ ಪರಿಕಲ್ಪನೆಯು ಇರುವುದಿಲ್ಲ. ಇತರ ವ್ಯಕ್ತಿಯ ಯೋಗಕ್ಷೇಮ ಮತ್ತು ಸ್ವಾಯತ್ತತೆಯನ್ನು ಪರಿಗಣಿಸದೆ ತಮ್ಮ ಲೈಂಗಿಕ ಬಯಕೆಗಳನ್ನು ಪೂರೈಸುವ ವಸ್ತುಗಳಂತೆ ಇತರರನ್ನು ಟ್ರಿಟ್ ಮಾಡುತ್ತಾರೆ.
9. ಕಂಟ್ರೋಲ್ ಡೈನಾಮಿಕ್ಸ್
ಕಾಮ ಪಿಪಾಸುಗಳು ಸಾಮಾನ್ಯವಾಗಿ ಪವರ್ ಡೈನಾಮಿಕ್ಸ್‌ನಲ್ಲಿ ಇರುತ್ತಾರೆ. ಇತರ ವ್ಯಕ್ತಿಯ ಮೇಲೆ ಅಧಿಕಾರ ಅಥವಾ ಪ್ರಾಬಲ್ಯವನ್ನು ಸ್ಥಾಪಿಸಲು ಬಯಸುತ್ತಾರೆ. ಅವರು ತಮ್ಮ ಸ್ಥಾನ, ಪ್ರಭಾವ ಅಥವಾ ಸಂಪನ್ಮೂಲಗಳನ್ನು ಇತರರನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಸಾಧನವಾಗಿ ಬಳಸಬಹುದು.
10. ನಿರಾಕರಣೆ ಮತ್ತು ಹೊಣೆಗಾರಿಕೆಯನ್ನು ನಿರ್ಲಕ್ಷಿಸುವುದು
ಕಾಮ ಪಿಪಾಸುಗಳು ಯಾವಾಗಲೂ ಇತರರ ನಿರಾಕರಣೆಯನ್ನು ನಿರ್ಲಕ್ಷಿಸುತ್ತಾರೆ. ಅವರಿಗೆ "ಇಲ್ಲ" ಎಂಬ ಉತ್ತರವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ತಮ್ಮ ಕ್ರಿಯೆಗಳಿಗೆ ಹೊಣೆಗಾರಿಕೆಯ ಪ್ರಜ್ಞೆಯನ್ನು ಪ್ರದರ್ಶಿಸುವುದಿಲ್ಲ. ಅವರಿಂದ ಉಂಟಾದ ಹಾನಿಯನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಾರೆ. ಬದಲಿಗೆ ಬಲಿಪಶುವನ್ನು ಹೆಚ್ಚಾಗಿ ದೂಷಿಸುತ್ತಾರೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications