ಕೊವಿಡ್-19 ಲಸಿಕೆ ಬೇಕೇ; ಈ ದಾಖಲೆಗಳೊಂದಿಗೆ ನಿಯಮ ಅನುಸರಿಸಿ!

ನವದೆಹಲಿ, ಜನವರಿ.16: ಜಗತ್ತಿನಾದ್ಯಂತ ಜನರ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಮಹಾಮಾರಿ ಕೊರೊನಾವೈರಸ್ ಸೋಂಕಿನ ವಿರುದ್ಧ ಭಾರತದಲ್ಲಿ ಲಸಿಕೆ ವಿತರಣೆ ಅಭಿಯಾನ ಶುರುವಾಗಿದೆ. ಶನಿವಾರ ಬೆಳಗ್ಗೆ 10.30ಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಲಸಿಕೆ ವಿತರಣೆಗೆ ಚಾಲನೆ ನೀಡಿದ್ದಾರೆ.

Recommended Video

      ಕೋವಿನ್‌ ಆಪ್‌ ಲಸಿಕೆ ವಿತರಣೆಯಲ್ಲಿ ಹೇಗೆ ಕೆಲಸ ಮಾಡುತ್ತೆ? ಇಲ್ಲಿದೆ ನೋಡಿ ಮಾಹಿತಿ | Oneindia Kannada

      ಭಾರತದಲ್ಲಿ ಮೊದಲ ಹಂತದಲ್ಲಿ 3 ಕೋಟಿ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಕೊರೊನಾ ವಾರಿಯರ್ಸ್ ಗೆ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಯನ್ನು ನೀಡಲಾಗುತ್ತದೆ. ಎರಡನೇ ಹಂತದಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಲಸಿಕೆ ನೀಡಲು ಆದ್ಯತೆ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.

      ಮೂರನೇ ಹಂತದಲ್ಲಿ ರಾಜಕೀಯ ಪ್ರತಿನಿಧಿಗಳ ಆದಿಯಾಗಿ ಸಾರ್ವಜನಿಕರಿಗೆ ಕೊವಿಡ್-19 ಲಸಿಕೆ ನೀಡುವುಕ್ಕೆ ತೀರ್ಮಾನಿಸಲಾಗಿದೆ. ಹಾಗಿದ್ದಲ್ಲಿ ಲಸಿಕೆ ಪಡೆದುಕೊಳ್ಳುವುದಕ್ಕೆ ಹೆಸರು ನೋಂದಾಯಿಸಿಕೊಳ್ಳುವುದು ಹೇಗೆ. ಹೆಸರು ನೋಂದಣಿಗೆ ಬೇಕಾದ ದಾಖಲೆಗಳು ಯಾವುವು. ಹೆಸರು ನೋಂದಣಿ ಮಾಡಿಕೊಂಡ ಮತ್ತು ಲಸಿಕೆ ಹಾಕಿಸಿಕೊಂಡರ ಪತ್ತೆಗೆ ಸರ್ಕಾರದ ವ್ಯವಸ್ಥೆ ಹೇಗಿದೆ ಎನ್ನುವುದರ ಕುರಿತು ಒಂದು ವರದಿ ಇಲ್ಲಿದೆ.

      ಲಸಿಕೆಗೆ ಹೆಸರು ನೋಂದಾವಣಿ ಹೇಗೆ?

      ಲಸಿಕೆಗೆ ಹೆಸರು ನೋಂದಾವಣಿ ಹೇಗೆ?

      ಕೊರೊನಾ ಲಸಿಕೆಗಾಗಿ ನಿಮ್ಮ ಹೆಸರು ನೋಂದಾಯಿಸಲು ನಿಮಗೆ ಪ್ಯಾನ್ ಕಾರ್ಡ್, ಪಿಂಚಣಿ ಕಾರ್ಡ್, ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ, ಎಂಎನ್‌ಆರ್‌ಇಜಿಎ ಜಾಬ್ ಕಾರ್ಡ್ ಅಥವಾ ಚಾಲನಾ ಪರವಾನಗಿಯಂತಹ ಗುರುತಿನ ಚೀಟಿಯ ಅಗತ್ಯವಿದೆ. ಈ ಪುರಾವೆಗಳು ಮಾತ್ರ ಅದಕ್ಕೆ ಮಾನ್ಯತೆ ಹೊಂದಿರುತ್ತವೆ. ನಿಮ್ಮ ರಾಜ್ಯ ಸ್ಥಳೀಯ ಸಂಸ್ಥೆಯು ಶೀಘ್ರದಲ್ಲೇ ಆನ್‌ಲೈನ್ ನೋಂದಣಿ ಸೌಲಭ್ಯ ಪ್ರಾರಂಭಿಸುತ್ತದೆ. ಅಲ್ಲಿಯವರೆಗೆ, ನೀವು ತಾಳ್ಮೆಯಿಂದಿರಬೇಕು. ಆನ್‌ಲೈನ್ ನೋಂದಣಿಯನ್ನು ಪೋಸ್ಟ್ ಮಾಡಿ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ನೀವು SMS ಬರುತ್ತದೆ. ಅದರಲ್ಲಿ ಲಸಿಕೆ ನೀಡುವ ದಿನಾಂಕ, ಸ್ಥಳ ಮತ್ತು ಸಮಯವನ್ನು ತಿಳಿಸಲಾಗಿರುತ್ತದೆ.

      ಕೊವಿಡ್ ಲಸಿಕೆ ಇಂಟೆಲಿಜೆನ್ಸ್ ನೆಟ್ ವರ್ಕ್ (Co-WIN) ವ್ಯವಸ್ಥೆ"- ಈ ಡಿಜಿಟಲೈಸ್ಡ್ ಪ್ಲಾಟ್ ಫಾರ್ಮ್ ನ್ನು ನೈಜ-ಸಮಯದ ಆಧಾರದ ಮೇಲೆ ಕೊರೊನಾವೈರಸ್ ಲಸಿಕೆಗಾಗಿ ಸೇರ್ಪಡೆಗೊಂಡ ಫಲಾನುಭವಿಗಳನ್ನು ಪತ್ತೆಹಚ್ಚಲು ಬಳಸಲಾಗುತ್ತದೆ.

      ಪ್ಲೇ-ಸ್ಟೋರ್ ನಲ್ಲಿ ಕೊ-ವಿನ್ ಅಪ್ಲಿಕೇಶನ್ ಲಭ್ಯವಿದೆಯೇ?

      ಪ್ಲೇ-ಸ್ಟೋರ್ ನಲ್ಲಿ ಕೊ-ವಿನ್ ಅಪ್ಲಿಕೇಶನ್ ಲಭ್ಯವಿದೆಯೇ?

      "ಗೂಗಲ್ ಪ್ಲೇ ಸ್ಟೋರ್‌ನಿಂದ ಸದ್ಯಕ್ಕೆ ಯಾವುದೇ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬೇಡಿ. ಏಕೆಂದರೆ ಅಧಿಕೃತ ಅಪ್ಲಿಕೇಶನ್ ಇನ್ನೂ ಬಿಡುಗಡೆಯಾಗಿಲ್ಲ. ಪ್ಲೇ ಸ್ಟೋರ್‌ನಲ್ಲಿ ಈಗಾಗಲೇ ಕೊ-ವಿನ್ ಎಂಬ ಹೆಸರಿನ ಅನೇಕ ಅಪ್ಲಿಕೇಶನ್‌ಗಳು ಇರಬಹುದು. ಆದರೆ, ಸರ್ಕಾರದ ಕೊ-ವಿನ್ ಅಪ್ಲಿಕೇಶನ್ ಪ್ರಸ್ತುತ ಪೂರ್ವ-ನಿರ್ಮಾಣ ಹಂತದಲ್ಲಿದ್ದು, ಗೂಗಲ್ ಪ್ಲೇ ಅಥವಾ ಆಪ್ ಸ್ಟೋರ್‌ನಲ್ಲಿ ನೇರವಾಗಿ ಸಿಗುವುದಿಲ್ಲ. ಮೊದಲ ಹಂತದಲ್ಲಿ ಲಸಿಕೆ ಪಡೆಯಲು ಆರೋಗ್ಯ ಸಿಬ್ಬಂದಿಯ ದತ್ತಾಂಶ ಸಂಗ್ರಹಿಸಲಾಗಿದೆ. 75 ಲಕ್ಷಕ್ಕೂ ಹೆಚ್ಚು ಆರೋಗ್ಯ ಅಧಿಕಾರಿಗಳು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ.

      ಕೊವಿಡ್-19 ಲಸಿಕೆ ನೋಂದಣಿಗೆ ಅಗತ್ಯ ದಾಖಲೆಗಳು

      ಕೊವಿಡ್-19 ಲಸಿಕೆ ನೋಂದಣಿಗೆ ಅಗತ್ಯ ದಾಖಲೆಗಳು

      ಭಾವಚಿತ್ರ ಹೊಂದಿರುವ ಕೆಳಗಿನ ಯಾವುದೇ ಗುರುತಿನ ಚೀಟಿಯನ್ನು ನೋಂದಣಿ ಸಮಯದಲ್ಲಿ ನೀಡಬಹುದು:

      • ಆಧಾರ್ ಕಾರ್ಡ್
      • ಚಾಲನಾ ಪರವಾನಿಗೆ
      • ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಿದ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್
      • ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯಡಿ (ಎಂಜಿಎನ್‌ಆರ್‌ಇಜಿಎ) ನೀಡಿದ ಉದ್ಯೋಗ ಪ್ರಮಾಣಪತ್ರ
      • ಸಂಸದರು/ ಶಾಸಕರು / ಅಧಿಕೃತವಾಗಿ ನೀಡಿದ ಗುರುತಿನ ಚೀಟಿ
      • ಪ್ಯಾನ್ ಕಾರ್ಡ್
      • ಬ್ಯಾಂಕ್ / ಅಂಚೆ ಕಚೇರಿಯಿಂದ ನೀಡಿದ ಪಾಸ್‌ಬುಕ್‌
      • ಪಾಸ್‌ಪೋರ್ಟ್
      • ಪಿಂಚಣಿ ದಾಖಲೆ
      • ಭಾವಚಿತ್ರ ಹೊಂದಿರುವ ಸೇವಾ ಗುರುತಿನ ಚೀಟಿ
      • ಕೇಂದ್ರ / ರಾಜ್ಯ ಸರ್ಕಾರ / ಪಿಎಸ್ಯುಗಳು / ಸಾರ್ವಜನಿಕ ಕಂಪನಿಗಳು ನೌಕರರಿಗೆ ನೀಡಿರುವ ಭಾವಚಿತ್ರವುಳ್ಳ ಉದ್ಯೋಗದ ಗುರುತಿನ ಚೀಟಿ
      • ಮತದಾರರ ಗುರುಚಿನ ಚೀಟಿ
      • ಎನ್‌ಪಿಆರ್ ಅಡಿಯಲ್ಲಿ ಆರ್‌ಜಿಐ ನೀಡಿದ ಸ್ಮಾರ್ಟ್ ಕಾರ್ಡ್
      ಕೊವಿಡ್-19 ಲಸಿಕೆ ಪಡೆದ ನಂತರ ಮುಂದೇನು?

      ಕೊವಿಡ್-19 ಲಸಿಕೆ ಪಡೆದ ನಂತರ ಮುಂದೇನು?

      ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಕೆಲವು ನಿಯಮಗಳಿವೆ. ಅದರಂತೆ ಲಸಿಕೆ ನೀಡುವ ಸ್ಥಳವನ್ನು ಕಾಯುವ ಕೊಠಡಿ, ಲಸಿಕಾ ಕೊಠಡಿ ಹಾಗೂ ನಿಗಾ ಕೊಠಡಿ ಎಂದು ವಿಭಾಗಿಸಲಾಗಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಸ್ಯಾನಿಟೈಸರ್ ಬಳಸುವುದನ್ನು ಕಡ್ಡಾಯಗೊಳಿಸಲಾಗುತ್ತದೆ. ಲಸಿಕೆ ಪಡೆದ ವ್ಯಕ್ತಿಯು ತಕ್ಷಣವೇ ಹೋಗುವುದಕ್ಕೆ ಅವಕಾಶ ಇರುವುದಿಲ್ಲ. ಬದಲಿಗೆ ಕನಿಷ್ಠ ಸಮಯ ಅದೇ ಸ್ಥಳದಲ್ಲಿ ವಿಶ್ರಾಂತಿ ತೆಗೆದುಕೊಳ್ಳಬೇಕಾಗುತ್ತದೆ. ಈ ವೇಳೆಯಲ್ಲೇ ಲಸಿಕೆ ಪಡೆದ ವ್ಯಕ್ತಿಯ ದೇಹದಲ್ಲಿ ಆಗುವ ಬದಲಾವಣೆಗಳ ಮೇಲೆ ತೀವ್ರ ನಿಗಾ ವಹಿಸಲಾಗುತ್ತದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+