ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣೇಶ ಚತುರ್ಥಿ: ಮನೆಯಲ್ಲೇ "ಪರಿಸರ ಸ್ನೇಹಿ" ಗಣಪನನ್ನು ಮಾಡುವುದು ಹೇಗೆ?

|
Google Oneindia Kannada News

ಗಣೇಶ ಚತುರ್ಥಿ ಸಮೀಪಿಸುತ್ತಿದ್ದು ತರಹೇವಾರಿ ಗಣಪತಿ ಮೂರ್ತಿಗಳು ಮಾರ್ಕೇಟಿನಲ್ಲಿ ರಾರಾಜಿಸುತ್ತಿವೆ. ರಾಸಾಯನಿಕ ಬಳಸಿದ ಮೂರ್ತಿಗಳಿಗಿಂತ ಪರಿಸರ ಸ್ನೇಹಿ ಮೂರ್ತಿಗಳ ಕುರಿತು ಜನರಲ್ಲಿ ಕುತೂಹಲ ಹೆಚ್ಚಾಗಿದೆ. ವರ್ಷದಿಂದ ವರ್ಷಕ್ಕೆ ಈ ಕುರಿತು ಜಾಗೃತಿಯೂ ಹೆಚ್ಚಾಗುತ್ತಿದೆ. ಆ ಜಾಗೃತಿಯ ಪರಿಣಾಮ ಪರಿಸರ ಸ್ನೇಹಿ ಮೂರ್ತಿಗಳಿಗೂ ಬೇಡಿಕೆ ಹೆಚ್ಚಾಗಿದೆ.

ಹಾಗೆ ನೋಡಿದರೆ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ಮಾರ್ಕೆಟಿಗೆ ಹೋಗಿ ಕೊಂಡು ತರಬೇಕು ಅಂತೇನಿಲ್ಲ. ಮನೆಯಲ್ಲೆ ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿಯೇ ಯಾವುದೇ ಖರ್ಚಿಲ್ಲದೆ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ಮಾಡಿಕೊಳ್ಳಬಹುದಾಗಿದೆ. ಹೇಗೆ ಮಾಡಿಕೊಳ್ಳುವುದು? ಬೇಕಾಗುವ ಸಾಮಗ್ರಿಗಳೇನು? ಯಾವ್ಯಾವ ಥರದ ಮೂರ್ತಿಗಳನ್ನು ಮಾಡಿಕೊಳ್ಳಬಹುದು?

 ಮಣ್ಣಿನ ಗಣಪ

ಮಣ್ಣಿನ ಗಣಪ

ಮಣ್ಣಿನ ಗಣಪನನ್ನು ಮಾಡುವುದು ತುಂಬಾನೇ ಸುಲಭ. ಹಳ್ಳಿಯಲ್ಲಿ ಬೆಳೆದವರಿಗೆ ತಾವು ಚಿಕ್ಕವರಿದ್ದಾಗ ಮಣ್ಣಿನ ಗಣಪನನ್ನು ಮಾಡಲು ಪ್ರಯತ್ನಿಸಿದ್ದು ನೆನಪಿನಲ್ಲಿರುತ್ತದೆ. ಅವು ಆಟಕ್ಕೆ ಮಾಡುವ ಗಣಪ ಆಗಿದ್ದರಿಂದ ಹೇಗೆ ಮಾಡಿದರೂ ನಡೆಯುತ್ತಿತ್ತು ಮತ್ತು ಎಷ್ಟು ಚಿಕ್ಕದಿದ್ದರೂ ನಡೆಯುತ್ತಿತ್ತು. ಆದರೆ ಪೂಜೆಗೆ ಕೂರಿಸುವ ಗಣಪ ಲಕ್ಷಣವಾಗಿದ್ದರೆ ಚೆನ್ನ ಮತ್ತು ತುಸು ದೊಡ್ಡ ಗಣಪನಿದ್ದರೆ ಚೆನ್ನ. ಹಾಗಿದ್ದರೆ ಮಣ್ಣು ಬಳಸಿಕೊಂಡು ಲಕ್ಷಣವಾಗಿರುವ ಗಣಪನನ್ನು ಮಾಡುವುದು ಹೇಗೆ?

 ಮಣ್ಣಿನ ಗಣಪ ಮಾಡುವ ವಿಧಾನ

ಮಣ್ಣಿನ ಗಣಪ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು; ಹರಲು (ಕ್ಲೇ), ನೀರು, ಟೂತ್ ಪಿಕ್ಸ್ ಅಥವಾ ಹಲ್ಲಿನ ಕಡ್ಡಿಗಳು, ಬಳಸಿಬಿಟ್ಟ ಪೆನ್‌ ಕ್ಯಾಪ್.

ಗಣಪನನ್ನು ಮಾಡಲು ಬಳಸುವ ಹರಲು ಜಾಸ್ತಿ ಜಿಗುಟಾಗಿರದಿರಲಿ ಹಾಗೆಯೇ ಜಾಸ್ತಿ ಗಟ್ಟಿಯೂ ಆಗಿರದಿಲಿ. ಹಾಗಾಗಿ ನೀರು ಬೆರೆಸಿಕೊಳ್ಳುವಾಗ ನಿಧಾನವಾಗಿ ಇಷ್ಟಿಷ್ಟೇ ನೀರು ಬೆರೆಸಿಕೊಳ್ಳುವುದು ಉತ್ತಮ. ನಂತರ ಆ ಹರಲನ್ನು ಗಣಪತಿಯ ಬೇರೆ ಬೇರೆ ಭಾಗಗಳನ್ನು ಮಾಡಿಕೊಳ್ಳಲು ವಿಂಗಡಿಸಿಕೊಳ್ಳಬೇಕು. ಚಿಕ್ಕ ಚಿಕ್ಕ ಭಾಗಗಳಿಗೆ ಸ್ವಲ್ಪ ಹರಲನ್ನು ದೊಡ್ಡ ಭಾಗಗಳಿಗೆ ಜಾಸ್ತಿ ಹರಲನ್ನು ವಿಂಗಡಿಸಿಟ್ಟುಕೊಳ್ಳಬೇಕು. ಮೊದಲಿಗೆ ಗಣಪ ಕೂರುವ ಆಧಾರವನ್ನು ಮಾಡಿಕೊಳ್ಳಬೇಕು. ಹರಲನ್ನು ಚಪಾತಿ ಆಕಾರಕ್ಕೆ ಮಾಡಿಕೊಂಡರೆ ಆಧಾರ ಸಿದ್ಧವಾಗುತ್ತದೆ. ನೆನಪಿರಲಿ ಚಪಾಯಿಯಷ್ಟು ತೆಳ್ಳನೆಯ ಆಧಾರ ಮಾಡಿಕೊಳ್ಳಬಾರದು. ಆದರ ದಪ್ಪವಾಗಿದ್ದಷ್ಟು ಒಳ್ಳೆಯದು. ಆಧಾರದ ನಂತರ ಹೊಟ್ಟೆ ಮಾಡಿಕೊಳ್ಳಬೇಕು. ಹೊಟ್ಟೆ ಮಾಡಿಕೊಳ್ಳಲು ಜಾಸ್ತಿಯೇ ಹರಲು ಬೇಕಾಗುತ್ತದೆ.

 ಸೃಜನಶೀಲತೆಗೆ ತಕ್ಕಂಗೆ ಗಣಪತಿಯ ಮೂರ್ತಿ ಮೂಡುತ್ತದೆ

ಸೃಜನಶೀಲತೆಗೆ ತಕ್ಕಂಗೆ ಗಣಪತಿಯ ಮೂರ್ತಿ ಮೂಡುತ್ತದೆ

ಆ ಹರಲನ್ನು ದುಂಡಗಿನ ಆಕಾರ ಮಾಡಿಕೊಂಡು ಹಲ್ಲಿನಕಡ್ಡಿಗಳ ಸಹಾಯದಿಂದ ಅಂದರೆ ಅವನ್ನು ಚುಚ್ಚಿ ಆಧಾರದ ಮೇಲೆ ಕೂರಿಸಿಕೊಳ್ಳಬೇಕು. ನಂತರ ಕಾಲುಗಳಿಗಾಗಿ ವಿಂಗಡಿಸಿಟ್ಟುಕೊಂಡ ಹರಲಿನಲ್ಲಿ ಚಿಕ್ಕ ಚಿಕ್ಕ ಕಾಲುಗಳನ್ನು ಮಾಡಿ ಹಲ್ಲಿನ ಕಡ್ಡಿಗಳಿಗೆ ಸಿಕ್ಕಿಸಿ ಹೊಟ್ಟೆಯ ಕೆಳಗೆ ಅಂದರೆ ಆಧಾರದ ಮೇಲೆ ಇಡಬೇಕಾಗುತ್ತದೆ. ಇದೇ ರೀತಿ ಕೈಗಳನ್ನು ಮಾಡಿಕೊಳ್ಳಬೇಕು. ಇದಾದನಂತೆ ಗಣಪತಿಯ ಮುಖ. ಇದಕ್ಕು ಕೂಡ ಹರಲನ್ನು ದುಂಡಗಿನ ಆಕಾರಕ್ಕೆ ಮಾಡಿಕೊಂಡಿಬೇಕಾಗುತ್ತದೆ. ಮತ್ತು ಹೊಟ್ಟೆಗೆ ಜೋಡಿಸುವ ಮುಂಚೆಯೇ ಪೆನ್ ಕ್ಯಾಪ್‌ ಸಹಾಯದಿಂದ ಕಣ್ಣುಗಳನ್ನು ಬಿಡಿಸಿಕೊಂಡಿರಬೇಕಾಗುತ್ತದೆ. ಆ ದುಂಡಗಿನ ಆಕಾರವನ್ನು ಹೊಟ್ಟೆಯ ಮೇಲೆ, ಅಂದರೆ ಶಿರಭಾಗದಲ್ಲಿ ಕಡ್ಡಿಯ ಮೂಲಕ ಜೋಡಿಸಬೇಕು. ಇದಾದ ನಂತರ ಕಿವಿಗಳನ್ನೂ ಸೊಂಡಿಲನ್ನೂ ಮಾಡಿ ಜೋಡಿಸಬೇಕು. ಕೊನೆಯದಾಗಿ ಕಿರೀಟವನ್ನು ಮಾಡಿ ಜೋಡಿಸಿಕೊಳ್ಳಬೇಕು. ಮಣ್ಣಿನ ಗಣಪನನ್ನು ಮಾಡಬೇಕೆಂದಾಗ ನೆನಪಿಟ್ಟುಕೊಳ್ಳಬೇಕಾದ ಮುಖ್ಯ ವಿಷಯವೆಂದರೆ ಹರಲನ್ನು ವಿಂಗಡಿಸಿಕೊಟ್ಟುಕೊಳ್ಳುವುದು. ಅದು ಗೊತ್ತಾದರೆ ಮುಂದಿನ ವಿಧಾನ ತಂತಾನೇ ಗೊತ್ತಾಗುತ್ತದೆ. ನಿಮ್ಮ ಸೃಜನಶೀಲತೆಗೆ ತಕ್ಕಂಗೆ ಗಣಪತಿಯ ಮೂರ್ತಿ ಮೂಡುತ್ತದೆ.

 ಅಕ್ಕಿ ಹಿಟ್ಟಿನ ಗಣಪ ಮಾಡುವ ವಿಧಾನ

ಅಕ್ಕಿ ಹಿಟ್ಟಿನ ಗಣಪ ಮಾಡುವ ವಿಧಾನ

ಅಕ್ಕಿಹಿಟ್ಟಿನಿಂದ ಮೋದಕವನ್ನಷ್ಟೇ ಅಲ್ಲ ಮೋದಕವನ್ನು ಇಷ್ಟಪಡುವ ಗಣಪನನ್ನೂ ಮಾಡಬಹುದಾಗಿದೆ. ಅಕ್ಕಿ ಹಿಟ್ಟಿನ ಗಣಪನನ್ನು ಮಾಡುವುದು ಮಣ್ಣಿನ ಗಣಪ ಮಾಡಿದಷ್ಟು ಸುಲಭವಲ್ಲವಾದರೂ ಅಷ್ಟು ಕಷ್ಟವೇನಲ್ಲ. ಆದರೆ ಇಲ್ಲಿ ಮುಖ್ಯವಾಗಿ ಜಾಗರೂಕರಾಗಿರಬೇಕಾದದ್ದು ಹಿಟ್ಟನ್ನು ತಯಾರಿಸಿಕೊಳ್ಳುವಾಗ. ಇನ್ನೊಂದು ನೆನಪಿಡಬೇಕಾದ ವಿಷಯವೆಂದರೆ ಹಿಟ್ಟಿನ ಗಣಪನನ್ನು ಎರಡು ದಿನಗಳ ಕಾಲ ಮಾತ್ರ ಕೂರಿಸಬಹುದು. ಜಾಸ್ತಿ ದಿನ ಇಡಲಿಕ್ಕಾಗುವುದಿಲ್ಲ,
ಬೇಕಾಗುವ ಸಾಮಗ್ರಿಗಳು - ಅಕ್ಕಿಹಿಟ್ಟು, ಹಲ್ಲಿನ ಕಡ್ಡಿಗಳು (ಟೂತ್ ಪಿಕ್ಸ್‌), ಪೆನ್ ಕ್ಯಾಪ್‌, ಎಣ್ಣೆ ಮಾಡುವ ವಿಧಾನ - ಇಲ್ಲು ಕೂಡ ಮಣ್ಣಿನ ಗಣಪ ಮಾಡಬೇಕಾದಾಗ ವಿಂಗಡಿಸಿಕೊಳ್ಳುವಂತೆ ಹಿಟ್ಟನ್ನು ಬೇರೆ ಬೇರೆ ಭಾಗಗಳಿಗೆ ವಿಂಗಡಿಸಿಕೊಳ್ಳಬೇಕು. ಕಡ್ಡಿಗಳ ಮೂಲಕ ಭಾಗಗಳನ್ನು ಜೋಡಿಸಿಕೊಳ್ಳಬೇಕು. ಹಿಟ್ಟು ಕೈಗೆ ಹತ್ತಿಕೊಳ್ಳದಂತೆ ಕಾಯ್ದುಕೊಳ್ಳಲು ಅಡುಗೆ ಎಣ್ಣೆಯನ್ನು ಕೈ ಹಚ್ಚಿಕೊಂಡರೆ ಸುಲಭವಾಗುತ್ತದೆ.

English summary
How to Make Ecofriendly Ganesha Idols at Home: 5 Easy & Beautiful Ideas, Clay idols, Rice flour idol, Newspaper clay idol, Newspaper clay idol, Plant idol Check here Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X