ವಾಟ್ಸಾಪ್ ಡೆಸ್ಕ್‌ಟಾಪ್ ಬಳಸಿ ವಾಯ್ಸ್/ವಿಡಿಯೋ ಕರೆ ಹೇಗೆ?
ಅತ್ಯಂತ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಷನ್ ವಾಟ್ಸಾಪ್ ತನ್ನ ಬಳಕೆದಾರರನ್ನು ದಿನದಿಂದ ದಿನಕ್ಕೆ ಕಳೆದುಕೊಳ್ಳುವ ಭೀತಿ ನಡುವೆ ಸೌಲಭ್ಯಗಳನ್ನು ಹೆಚ್ಚಿಸುತ್ತಿದೆ.
ಖಾಸಗಿತನ ನೀತಿ ಮತ್ತು ಸೇವೆಗಳ ನಿಬಂಧನೆಗಳ ಹೊಸ ಅಪ್ಡೇಟ್ ಕುರಿತಂತೆ ಹೈಕೋರ್ಟಿನಲ್ಲಿ ವಿಚಾರಣೆಯನ್ನು ವಾಟ್ಸಾಪ್ ಎದುರಿಸುತ್ತಿದೆ. ಟೆಲಿಗ್ರಾಮ್ ಹಾಗೂ ಸಿಗ್ನಲ್ ತ್ವರಿತ ಮೆಸೇಜಿಂಗ್ ಅಪ್ಲಿಕೇಷನ್ ಗಳಿಗೆ ಪರಿಸ್ಥಿತಿಯ ಲಾಭ ದೊಡ್ಡ ಮಟ್ಟದಲ್ಲೇ ಆಗುತ್ತಿದೆ.
ವಾಟ್ಸಾಪ್ ಈಗ ಬಳಕೆದಾರರ ಗೌಪ್ಯ ಮಾಹಿತಿ, ಚಾಟ್ ಹಿಸ್ಟರಿಯನ್ನು ಮೂಲ ಸಂಸ್ಥೆ ಫೇಸ್ಬುಕ್ ಜೊತೆಗೆ ಹಂಚಿಕೊಳ್ಳಲು ಮುಂದಾಗಿದೆ. ಅತ್ಯಂತ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಷನ್ ವಾಟ್ಸಾಪ್ ತನ್ನ ಬಳಕೆದಾರರಿಗೆ ಇತ್ತೀಚೆಗೆ ಹಲವು ಹೊಸ ಸೌಲಭ್ಯಗಳು, ಕಠಿಣ ಭದ್ರತಾ ನಿಯಮಗಳನ್ನು ಹೊರ ತಂದಿದೆ. ವಾಟ್ಸಾಪ್ ಡೆಸ್ಕ್‌ಟಾಪ್ ಬಳಸಿ ವಾಯ್ಸ್/ವಿಡಿಯೋ ಕರೆ ಸೌಲಭ್ಯ ಭಾರತದಲ್ಲೂ ಲಭ್ಯವಿದ್ದು, ಒಬ್ಬರಿಂದ ಒಬ್ಬರಿಗೆ ಮಾತ್ರ ಸೌಲಭ್ಯ ಬಳಸಬಹುದು, ಗ್ರೂಪ್ ಕಾಲ್ ಇನ್ನೂ ಎನೇಬಲ್ ಆಗಿಲ್ಲ. ಲಭ್ಯವಿರುವ ಸೌಲಭ್ಯ ಬಳಸುವುದು ಹೇಗೆ ಎಂಬ ವಿವರಣೆ ಮುಂದಿದೆ ಓದಿ...

ಗ್ರೂಪ್ ವಾಯ್ಸ್ /ವಿಡಿಯೋ ಕಾಲಿಂಗ್ ಸೌಲಭ್ಯ
ಗ್ರೂಪ್ ವಾಯ್ಸ್ /ವಿಡಿಯೋ ಕಾಲಿಂಗ್ ಸೌಲಭ್ಯಗಳಿಗಿಂತ ಹೆಚ್ಚು ಸುರಕ್ಷಿತವಾಗಿದೆ ಎಂದು ವಾಟ್ಸಾಪ್ ಹೇಳಿದೆ. 2016ರಲ್ಲೇ ಒಬ್ಬರಿಂದ ಒಬ್ಬರಿಗೆ ವಿಡಿಯೋ ಕಾಲ್ ಮಾಡುವ ಸೌಲಭ್ಯ ನೀಡಲಾಗಿತ್ತು. ಆದರೆ, ಗ್ರೂಪ್ ವಿಡಿಯೋ ಕಾಲಿಂಗ್ ಸೌಲಭ್ಯ 2018ರ ವೇಳೆ ಮೊಬೈಲ್ ಆಪ್‌ನಲ್ಲಿ ಲಭ್ಯವಾಗಿದೆ. ಆದರೆ, ಕೊರೊನಾ ಸಂಕಷ್ಟ ಕಾಲದಲ್ಲಿ ವಾಟ್ಸಾಪ್ ಡೆಸ್ಕ್‌ಟಾಪ್ ಹೆಚ್ಚಾಗಿದ್ದು, ಇದನ್ನು ಬಳಸಿ ವಾಯ್ಸ್, ವಿಡಿಯೋ ಕಾಲ್ ಮಾಡುವ ಬಗ್ಗೆ ಹೆಚ್ಚು ಪ್ರಚಾರ ಸಿಕ್ಕಿಲ್ಲ.

ಡೆಸ್ಕ್‌ಟಾಪ್ ಆಪ್ ಬಳಸಿ ವಾಯ್ಸ್/ವಿಡಿಯೋ ಕರೆ
ಮೊಬೈಲ್ ಬದಲಿಗೆ ಡೆಸ್ಕ್‌ಟಾಪ್ ಮೂಲಕ ವಾಟ್ಸಾಪ್ ಬಳಸುವವರು ಬ್ರೌಸರ್‌ನಲ್ಲಿ ವಾಟ್ಸಾಪ್ ವೆಬ್ ಬಳಸುವುದನ್ನು ಕಲಿತಿರುತ್ತಾರೆ. ಇದಲ್ಲದೆ ಇನ್ನೊಂದು ವಿಧಾನದಲ್ಲೂ ಡೆಸ್ಕ್‌ಟಾಪ್ ಮೂಲಕ ವಾಟ್ಸಾಪ್ ಬಳಸಬಹುದು.
ಭಾರತದಲ್ಲಿ ಸದ್ಯ ವಾಟ್ಸಾಪ್ ಡೆಸ್ಕ್‌ಟಾಪ್ ಆವೃತ್ತಿ ಕಳೆದ ಮೂರು ತಿಂಗಳಿನಿಂದ ಲಭ್ಯವಿದ್ದು, ಕಾಲ ಕಾಲಕ್ಕೆ ಅಪ್ಡೇಟ್ ಅಗುತ್ತಿದೆ. ನಿಮ್ಮ ಸಿಸ್ಟಮ್ ನಲ್ಲಿ ವಾಟ್ಸಾಪ್ ಡೆಸ್ಕ್‌ಟಾಪ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ(https://www.whatsapp.com/download). ವಿಂಡೋಸ್ 32 ಬಿಟ್, 64 ಬಿಟ್ ಅಲ್ಲದೆ ಮ್ಯಾಕ್ಒಎಸ್ ನಲ್ಲೂ ಇದು ಲಭ್ಯವಿದೆ.
ಈ ವಾಯ್ಸ್/ ವಿಡಿಯೋ ಕರೆ ಸೌಲಭ್ಯ ವರ್ಕ್ ಆಗಬೇಕಾದರೆ ವಿಂಡೋಸ್ 10 64 ಬಿಟ್ ಆವೃತ್ತಿ 1903 ಅಥವಾ ಅದಕ್ಕಿಂತ ಸುಧಾರಿತ ಆವೃತ್ತಿಯನ್ನು ಹೊಂದಿರಬೇಕು. ಮ್ಯಾಕ್ ಒಎಸ್ 10.13 ಇರಬೇಕು.

ನಿಮ್ಮ ಕಂಪ್ಯೂಟರಲ್ಲಿ ಏನೇನಿರಬೇಕು?
ವಾಟ್ಸಾಪ್ ವಾಯ್ಸ್/ ವಿಡಿಯೋ ಕರೆ ಸೌಲಭ್ಯ ಬಳಸಲು
* ಆಡಿಯೋ ಔಟ್ ಪುಟ್ ಸಾಧನ, ಮೈಕ್ರೋಫೋನ್, ವೆಬ್ ಕಾಮ್ ಅಥವಾ ಪ್ರತ್ಯೇಕವಾಗಿ ಸೇರಿಸಿದ ಕ್ಯಾಮೆರಾ ಬೇಕಾಗುತ್ತದೆ.
* ನಿಮ್ಮ ಮೊಬೈಲ್ ಫೋನ್ ಹಾಗೂ ಡೆಸ್ಕ್ ಟಾಪ್ ಸಂಪರ್ಕಿಸಲು ಹಾಗೂ ಈ ಸೌಲಭ್ಯ ಬಳಸಲು ಇಂಟರ್ನೆಟ್ ಕನೆಕ್ಷನ್.
* ನಿಮ್ಮ ಕಂಪ್ಯೂಟರ್ ಮೈಕ್ರೋಫೋನ್ ಹಾಗೂ ಕ್ಯಾಮೆರಾ ಬಳಸಲು ವಾಟ್ಸಾಪ್‌ಗೆ ಅನುಮತಿ.
ಇಷ್ಟಿದ್ದರೆ ವಾಟ್ಸಾಪ್ ವಾಯ್ಸ್/ ವಿಡಿಯೋ ಕರೆ ಮಾಡಲು ವೇದಿಕೆ ಸಿದ್ಧವಾದಂತೆ.

ವಾಟ್ಸಾಪ್ ಡೆಸ್ಕ್‌ಟಾಪ್ ಕರೆ ಚಾಲನೆ ವಿಧಾನ
* ವಾಟ್ಸಾಪ್ ಡೆಸ್ಕ್‌ಟಾಪ್ ಅಪ್ಲಿಕೇಷನ್ ಕ್ಲಿಕ್ ಮಾಡಿ ರನ್ ಮಾಡಿ.
* ನಿಮ್ಮ ಫೋನ್ ಬಳಸಿ QR ಕೋಡ್ ಸ್ಕ್ಯಾನ್ ಮಾಡಿ, ಅನುಮತಿ ನೀಡಿ
* ನಿಮ್ಮ ವಾಟ್ಸಾಪ್ ಅಕೌಂಟ್ ಓಪನ್ ಆಗುತ್ತದೆ. ಬಳಿಕ ಕರೆ ಮಾಡಬೇಕಾದ ಖಾತೆ ಆಯ್ಕೆ ಮಾಡಿಕೊಳ್ಳಿ
* ಚಾಟ್ ಬಾಕ್ಸಿನ ಮೇಲ್ಭಾಗದಲ್ಲಿ ಕಾಣುವ ವಾಯ್ಸ್ ಕಾಲ್ ಐಕಾನ್ ಅಥವಾ ವಿಡಿಯೋ ಐಕಾನ್ ಕ್ಲಿಕ್ ಮಾಡಿ
* ಮೊಬೈಲ್ ನೆರವಿಲ್ಲದೆ ಡೆಸ್ಕ್‌ಟಾಪ್ ಆಪ್ ಕರೆ ಸಂಪರ್ಕ ಸಾಧ್ಯವಾಗಲಿದೆ.

ಡೆಸ್ಕ್‌ಟಾಪ್ ಕರೆ ಸೌಲಭ್ಯಗಳು
ವಾಯ್ಸ್, ವಿಡಿಯೋ ಕರೆ, ವಾಯ್ಸ್ ಮ್ಯೂಟ್ ಮಾಡುವುದು, ಕ್ಯಾಮೆರಾ ಆಫ್ ಮಾಡುವುದು, ವಾಯ್ಸ್ ಕರೆಯಿಂದ ವಿಡಿಯೋ ಕರೆಗೆ ಜಂಪ್ ಆಗುವುದು, ಒಳಬರುವ ಕರೆ ಸ್ವೀಕರಿಸುವುದು ಅಥವಾ ನಿರಾಕರಿಸುವುದು, ಯಾವುದೇ ಸಮಯದಲ್ಲಿ ಕರೆ ಬಂದ್ ಮಾಡುವುದು ಎಲ್ಲವೂ ಸದ್ಯಕ್ಕೆ ಲಭ್ಯವಿದೆ. ಆದರೆ, ಗ್ರೂಪ್ ಕರೆ, ಕರೆ ವರ್ಗಾವಣೆ, ಕರೆ ರೆಕಾರ್ಡಿಂಗ್ ಹಾಗೂ ಹಂಚಿಕೆ ಸಾಧ್ಯವಿಲ್ಲ, ಈ ಎಲ್ಲಾ ಸೌಲಭ್ಯಗಳನ್ನು ಶೀಘ್ರದಲ್ಲೇ ನೀಡುವ ಭರವಸೆಯನ್ನು ವಾಟ್ಸಾಪ್ ನೀಡಿದೆ.
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ












Click it and Unblock the Notifications