ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಟೆಲಿವಿಷನ್ ದಿನಾಚರಣೆ – ಆಗಿನಿಂದ ಈ ಜಮಾನದವರೆಗೆ...

By Lekhaka
|
Google Oneindia Kannada News

ಇದು ವಿಶ್ವ ಟೆಲಿವಿಷನ್ ದಿನಾಚರಣೆ. ಅಂತರ್ಜಾಲದ ಸಂಪರ್ಕದಿಂದಾಗಿ ಲ್ಯಾಪ್ ಟಾಪ್ ಮತ್ತು ಮೊಬೈಲ್ ಸ್ಕ್ರೀನ್ ಗಳಲ್ಲೇ ಅತೀ ಹೆಚ್ಚು ಸಮಯ ಕಳೆಯುತ್ತಿರುವ ಇಂದಿನ ಜಮಾನದಲ್ಲಿ ಟೆಲಿವಿಷನ್ ಅಥವಾ ದೂರದರ್ಶನ ತನ್ನ ಮಹತ್ವ ಉಳಿಸಿಕೊಂಡಿದೆಯೇ ಎಂಬ ಪ್ರಶ್ನೆಯೊಂದು ಸಹಜವಾಗಿ ಎಲ್ಲರನ್ನೂ ಕಾಡುತ್ತದೆ. ಆದರೆ ಖಂಡಿತ ಮನೆ ಮನೆಯಲ್ಲೂ ಟಿವಿ ಇದೆ, ಸಂಜೆ ಹೊತ್ತು ಟಿವಿ ಉರಿಯದ ಮನೆಯೇ ಇತ್ತೀಚೆಗೆ ಕಾಣಿಸುತ್ತಿಲ್ಲ ಅಂದರೆ ಅತಿಶಯೋಕ್ತಿ ಆಗಲಾರದು. ಹೀಗಿರುವಾಗ ಇಂದಿನ ದಿನ ಒಂದು ರೀತಿಯ ಹಬ್ಬವೇ ಆಗಬೇಕಲ್ಲವೇ? ಆದರೆ ಅದೆಷ್ಟೋ ಜನರಿಗೆ ಹೀಗೊಂದು ದಿನಾಚರಣೆ ಇದೆ ಎಂಬುದೇ ಗೊತ್ತಿಲ್ಲ!

Recommended Video

ದೂರದರ್ಶನಕ್ಕೆ 60ರ ಸಂಭ್ರಮ

ಇಂದಿಗೂ ದೂರದರ್ಶನವು ವೀಡಿಯೋ ಬಳಕೆ ಮಾಡುವ ಅತೀ ದೊಡ್ಡ ಮೂಲವಾಗಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಹೇಳುತ್ತದೆ. ವಿಶ್ವದಾದ್ಯಂತ ಟಿವಿ ಹೊಂದಿರುವ ಮನೆಗಳ ಸಂಖ್ಯೆ 2017ರಲ್ಲಿ 1.63 ಮಿಲಿಯನ್ ನಷ್ಟಿದ್ದು, ಅದು 1.74 ಮಿಲಿಯನ್ ಗೆ 2023ರ ವೇಳೆಗೆ ಹೆಚ್ಚುತ್ತದೆ ಎಂದು ಅಧ್ಯಯನವೊಂದನ್ನು ಉಲ್ಲೇಖಿಸಿ ಜಾಗತಿಕ ಸಂಸ್ಥೆ ತಿಳಿಸಿದೆ.

ಆತ್ಮಹತ್ಯೆಗೆ ಯತ್ನಿಸುವ ಆಸೆಗಳನ್ನು ಪದೇ ಪದೇ ಬದುಕಿಸಿಆತ್ಮಹತ್ಯೆಗೆ ಯತ್ನಿಸುವ ಆಸೆಗಳನ್ನು ಪದೇ ಪದೇ ಬದುಕಿಸಿ

ವಿಶ್ವ ದೂರದರ್ಶನ ದಿನಾಚರಣೆಯು ದೃಶ್ಯ ಮಾಧ್ಯಮದ ಶಕ್ತಿಯನ್ನು ಸಂಕೇತಿಸುವ ಮತ್ತು ಹೇಗೆ ದೃಶ್ಯ ಮಾಧ್ಯಮವು ಜನರ ಅಭಿಪ್ರಾಯ ಸಂಗ್ರಹಣೆಯಲ್ಲಿ ಮತ್ತು ವಿಶ್ವದ ರಾಜಕಾರಣದ ಮೇಲೆ ಪರಿಣಾಮವನ್ನುಂಟು ಮಾಡುವ ಶಕ್ತಿಯಾಗಿದೆ ಎಂಬುದನ್ನು ನಿರೂಪಿಸುತ್ತದೆ.

 ವಿಶ್ವ ದೂರದರ್ಶನ ದಿನಾಚರಣೆಯ ಇತಿಹಾಸ

ವಿಶ್ವ ದೂರದರ್ಶನ ದಿನಾಚರಣೆಯ ಇತಿಹಾಸ

ವಿಶ್ವದ ಮೊದಲ ಟೆಲಿವಿಷನ್ ಫೋರಂ ನವೆಂಬರ್ 21, 1996ರಲ್ಲಿ ನಡೆಯಿತು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಈ ದಿನವನ್ನು ವಿಶ್ವ ದೂರದರ್ಶನ ದಿನವನ್ನಾಗಿ ಆಚರಿಸುವುದಕ್ಕೆ ತೀರ್ಮಾನ ಮಾಡಿತು. ಸಂವಹನ ಮತ್ತು ಜಾಗತೀಕರಣದಲ್ಲಿ ದೂರದರ್ಶನ ವಹಿಸುವ ಪಾತ್ರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ಥಳೀಯವಾಗಿ ಜೊತೆಗೆ ಜಾಗತಿಕವಾಗಿ ಸಾಕಷ್ಟು ಭೇಟಿಗಳು ಮತ್ತು ಸಭೆಗಳು ಇಂದು ನಡೆಯುತ್ತವೆ.

ವಿಶ್ವ ದೂರದರ್ಶನ ದಿನವು ಸರ್ಕಾರಗಳು, ಸುದ್ದಿ ಸಂಸ್ಥೆಗಳು ಮತ್ತು ವ್ಯಕ್ತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹೇಗೆ ನಿಖರತೆಯುಳ್ಳ, ಪ್ರಶ್ನೆಗೆ ಅರ್ಹವಿರುವ ಸಮಯದಲ್ಲಿ ಪಕ್ಷಪಾತವಿಲ್ಲದ ಮಾಹಿತಿಯನ್ನು ತಲುಪಿಸುವಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂಬ ಬಗ್ಗೆ ಸೂಚಿಸುತ್ತದೆ.

ಆದರೆ ಈಗಾಗಲೇ ಅತೀ ಹೆಚ್ಚು ಟಿವಿ ನೋಡುವಿಕೆಯು ವ್ಯಕ್ತಿಯ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತಿದೆ, ಸಂಬಂಧವನ್ನು ದೂರಗೊಳಿಸುತ್ತಿದೆ, ಅನಾರೋಗ್ಯಕ್ಕೆ ಕಾರಣವಾಗುತ್ತಿದೆ ಎಂಬುದನ್ನು ಸಾಬೀತುಪಡಿಸಿರುವ ನಿಟ್ಟಿನಲ್ಲಿ ಸದ್ಯ ಆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಿಕೆಯ ಅಗತ್ಯತೆ ಕೂಡ ಕಾಣುತ್ತಿದೆ.

 ಮಕ್ಕಳ ಮೇಲೆ ಪರಿಣಾಮ ಎಂದ ಅಧ್ಯಯನಗಳು

ಮಕ್ಕಳ ಮೇಲೆ ಪರಿಣಾಮ ಎಂದ ಅಧ್ಯಯನಗಳು

ಇತ್ತೀಚೆಗೆ ಜಮಾ ಪೀಡಿಯಾಟ್ರಿಕ್ಸ್ ನಲ್ಲಿ ಪ್ರಕಟವಾದ ಮತ್ತು ಡೈಲಿ ಮೇಲ್ ಉಲ್ಲೇಖಿಸಿದ ಅಧ್ಯಯನವೊಂದರಲ್ಲಿ ಅತೀ ಹೆಚ್ಚು ದೂರದರ್ಶನ ವೀಕ್ಷಿಸಿದ ಮತ್ತು ವೀಡಿಯೋ ಗೇಮ್ ಗಳನ್ನು ನೋಡಿದ ಮಕ್ಕಳು ಶಾಲೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದಿಲ್ಲ, ಜೊತೆಗೆ ಮಾನಸಿಕವಾಗಿ ವೀಕ್ ಆಗಿರುತ್ತಾರೆ ಎಂದು ಹೇಳಿದೆ.

ಆದರೆ ಹೆಚ್ಚಿನವರಿಗೆ ಟೆಲಿವಿಷನ್ ಮಾನಸಿಕ ನೆಮ್ಮದಿ ನೀಡುವ, ಸಮಯ ದೂಡುವ ಮತ್ತು ಮನರಂಜನೆ ನೀಡುವ ವಸ್ತುವಾಗಿದೆ. ಎಲ್ಲಾ ಋಣಾತ್ಮಕ ಅಧ್ಯಯನಗಳನ್ನು ಹೊರತುಪಡಿಸಿಯೇ ಹೇಳುವುದಾದರೆ ವಿಜ್ಞಾನಿಗಳು ಕೂಡ ಒಂದು ನಿರ್ದಿಷ್ಟ ಸಮಯವನ್ನು ಟಿವಿ ಮುಂದೆ ಕಳೆಯುವುದರಲ್ಲಿ ಯಾವುದೇ ತಪ್ಪಿಲ್ಲ ಎಂಬುದಾಗಿ ತಿಳಿಸುತ್ತಾರೆ.

ಮದುವೆ ಆಗೋ ತನಕ ಮಗ ಸಿಟಿಲಿ ಇರಲಿ, ಆಮೇಲೆ ಮನೆಗೆ ಬರಲಿಮದುವೆ ಆಗೋ ತನಕ ಮಗ ಸಿಟಿಲಿ ಇರಲಿ, ಆಮೇಲೆ ಮನೆಗೆ ಬರಲಿ

 ಟಿವಿ ಸಂಶೋಧನೆ ಮಾಡಿದ ವಿಜ್ಞಾನಿಗಳು

ಟಿವಿ ಸಂಶೋಧನೆ ಮಾಡಿದ ವಿಜ್ಞಾನಿಗಳು

ಪಾಲ್ ನಿಪ್ಕೋ 1884ರಲ್ಲಿ ಮೊದಲ ಬಾರಿಗೆ ಟೆಲಿವಿಷನ್ ನ ಕಚ್ಚಾ ಯಂತ್ರವನ್ನು ನಿರ್ಮಿಸಿದ್ದರು. ಇದು 24 ರಂಧ್ರಗಳನ್ನು ಹೊಂದಿದ್ದ ನೂಲುವ ಡಿಸ್ಕ್ ಅನ್ನು ಆಧರಿಸಿತ್ತು ಮತ್ತು ವಿದ್ಯುತ್ ಸಿಗ್ನಲ್ ಗೆ ಧನ್ಯವಾದದ ಚಿತ್ರಗಳನ್ನು ವರ್ಗಾವಣೆ ಮಾಡಿತ್ತು.

ನಿಪ್ಕೋ ಅವರು ಪ್ರಯೋಗಾಲಯದಲ್ಲಿ ಮಾಡಿಲ್ಲದೇ ಇದ್ದುದ್ದರಿಂದ ಈ ರೀತಿಯ ಮತ್ತಷ್ಟು ಅಧ್ಯಯನವನ್ನು ಕೈಗೊಳ್ಳುವುದಕ್ಕೆ ಹಲವರು ಆಸಕ್ತಿ ತೋರಿದರು. ವ್ಲಾಡಿಮಿರ್ ಕೆ ಜ್ವರಿಕಿನ್, ಜಾನ್ ಲೋಗಿ ಬೈರ್ಡ್, ಪಾಲ್ ನಿಪ್ಜ್ಕೋ, ಚಾರ್ಲ್ಸ್ ಫ್ರಾನ್ಸಿಸ್ ಜೆಂಕಿನ್ಸ್ ಟು ಫಿಲೋ ಟಿ ಫಾರ್ನ್ಸ್ವರ್ತ್ ಸೇರಿದಂತೆ ಹಲವು ವಿಜ್ಞಾನಿಗಳು ನಮ್ಮ ಇಂದಿನ ಟಿವಿ ಕೊಡುಗೆ ನೀಡಿದವರೇ ಆಗಿದ್ದಾರೆ.

 ದೂರದರ್ಶನದ ಪ್ರವರ್ತಕ ಫಿಲೋ ಟೇಲರ್ ಫಾನ್ಸ್ ವರ್ತ್

ದೂರದರ್ಶನದ ಪ್ರವರ್ತಕ ಫಿಲೋ ಟೇಲರ್ ಫಾನ್ಸ್ ವರ್ತ್

1927 ರಲ್ಲಿ ಫಿಲೋ ಟೇಲರ್ ಫಾನ್ಸ್ ವರ್ತ್ ಅನ್ನುವ ಅಮೇರಿಕಾದ ವಿಜ್ಞಾನಿಯೊಬ್ಬರು ಮೊದಲ ಬಾರಿಗೆ ಸಂಪೂರ್ಣ ಕ್ರಿಯಾತ್ಮಕ ವೀಡಿಯೋ ಕ್ಯಾಮರಾ ಟ್ಯೂಬ್ ನ ಆವಿಷ್ಕಾರ ಮಾಡಿದರು. ಆಶ್ಚರ್ಯದ ವಿಷಯವೇನೆಂದರೆ 21 ವರ್ಷದ ಈ ವ್ಯಕ್ತಿ ತನ್ನ 14ನೇ ವಯಸ್ಸಿನವರೆಗೂ ಮನೆಯಲ್ಲಿ ವಿದ್ಯುತ್ ಇಲ್ಲದೆ ವಾಸವಿದ್ದರಂತೆ! ಇದು ಸಂಪೂರ್ಣ ಎಲೆಕ್ಟ್ರಾನಿಕ್ ಟೆಲಿವಿಷನ್ ಸಿಸ್ಟಮ್ ಆಗಿತ್ತು. ಅದೇ ಕಾರಣಕ್ಕೆ ಈ ವ್ಯಕ್ತಿಯನ್ನು ದೂರದರ್ಶನದ ಪ್ರವರ್ತಕ ಎಂದು ಕೂಡ ಕರೆಯಲಾಗುತ್ತದೆ.

English summary
Today is World Television Day. In this regard here is a history of television and how it is invented over a period of time,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X