ಹೊಸ ವರ್ಷದ ಮೊದಲ ದಿನ ಬೆಂಗಳೂರಿನಲ್ಲಿ ಯಾವ ದೇವಸ್ಥಾನಕ್ಕೆ ಭೇಟಿ ನೀಡಬೇಕು ಎಂಬ ಗೊಂದಲವೇ? ಇಲ್ಲಿದೆ ಮಾಹಿತಿ
ಬೆಂಗಳೂರು, ಡಿಸೆಂಬರ್ 28: ಹೊಸ ವರ್ಷದ ಮೊದಲ ದಿನವನ್ನು ಶುಭ ದಿನವಾಗಿ ಆಚರಿಸುವುದು ಎಲ್ಲರ ರೂಢಿ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಲಕ್ಷಾಂತರ ಜನರು ದೇವಾಲಯಗಳಿಗೆ ಭೇಟಿ ನೀಡುವುದು ಸರ್ವೇಸಾಮಾನ್ಯ. ಆದರೆ, ಹೊಸ ವರ್ಷದ ಮೊದಲ ದಿನದಂದು ಯಾವ ದೇವಸ್ಥಾನಗಳಿಗೆ ಭೇಟಿ ನೀಡಬೇಕೆಂಬ ಗೊಂದಲ ಕೆಲವರಲ್ಲಿ ಇರುತ್ತೆ. ಈ ಗೊಂದಲವನ್ನು ಪರಿಹರಿಸುವುದಕ್ಕಾಗಿ ಬೆಂಗಳೂರಿನ ಪ್ರಸಿದ್ಧ ದೇವಸ್ಥಾನಗಳ ಪಟ್ಟಿಯನ್ನು ನಾವು ನಿಮಗೆ ಕೊಡುತ್ತಿದ್ದೇವೆ. ಹೊಸ ವರ್ಷದ ಮೊದಲ ದಿನದಂದು ನೀವು ಈ ಕೆಳಗಿನ ದೇವಸ್ಥಾನಗಳಿಗೆ ಭೇಟಿ ನೀಡಬಹುದು.
1- ದೊಡ್ಡ ಬಸವಣ್ಣ ದೇವಸ್ಥಾನ
ದಕ್ಷಿಣ ಬೆಂಗಳೂರಿನಲ್ಲಿರುವ ದೊಡ್ಡ ಬಸವನ ಗುಡಿ ನಾಡಪ್ರಭು ಕೆಂಪೇಗೌಡರ ಕಾಲದಲ್ಲಿ ನಿರ್ಮಾಣವಾಯಿತು. ಈ ದೇವಾಲಯವು ವಿಶ್ವದ ಅತಿದೊಡ್ಡ ನಂದಿ ಪ್ರತಿಮೆಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇದು 15 ಅಡಿಗಳಷ್ಟು ದೊಡ್ಡದಾಗಿದೆ. ದೇವಾಲಯದ ವಿಶಿಷ್ಟ ಲಕ್ಷಣವೆಂದರೆ ಗೂಳಿಯ (ನಂದಿ) ಎತ್ತರದ ಪ್ರತಿಮೆಯನ್ನು ಒಂದೇ ಬಂಡೆಯಿಂದ ಕೆತ್ತಲಾಗಿದೆ.
'ಕಾರ್ತಿಕ'ದ ಕೊನೆಯ ಸೋಮವಾರ ಮತ್ತು ಮಂಗಳವಾರದಂದು ಕಡಲೆಕಾಯೆ ಪರಿಷೆ ಉತ್ಸವ (ಕಡಲೆಕಾಯಿ ಜಾತ್ರೆ) ಇಲ್ಲಿ ನಡೆಯುತ್ತದೆ. ಜಾತ್ರೆಯಲ್ಲಿ ಭಕ್ತರು ಕಡಲೆಕಾಯಿಯನ್ನು ದೇವರಿಗೆ ಅರ್ಪಿಸುತ್ತಾರೆ. ಇದು ಬೆಂಗಳೂರಿನ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ.

ಭೇಟಿಯ ಸಮಯ: ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಮತ್ತು ಸಂಜೆ 5.30 ರಿಂದ ರಾತ್ರಿ 9 ರವರೆಗೆ
2- ದೊಡ್ಡ ಗಣಪತಿ ದೇವಸ್ಥಾನ
ದೊಡ್ಡ ಬಸವನ ಗುಡಿ ದೇವಾಲಯದ ಆವರಣದಲ್ಲಿಯೇ ನೀವು ಈ ದೇವಾಲಯವನ್ನು ಕಾಣಬಹುದು. ಇದು ಬೆಂಗಳೂರಿನ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಇದನ್ನು ಶಕ್ತಿ ಗಣಪತಿ ಅಥವಾ ಸತ್ಯ ಗಣಪತಿ ದೇವಸ್ಥಾನ ಎಂದು ಕರೆಯಲಾಗುತ್ತದೆ. ಬೆಂಗಳೂರಿನಲ್ಲಿ ಅತಿ ದೊಡ್ಡ ಏಕಶಿಲಾ ಗಣೇಶನ ಪ್ರತಿಮೆಗಳನ್ನು ಈ ದೇವಸ್ಥಾನ ಹೊಂದಿದೆ. ಗಣೇಶನ ವಿಗ್ರಹವು 18 ಅಡಿ ಎತ್ತರ ಮತ್ತು 16 ಅಡಿ ಅಗಲವನ್ನು ಹೊಂದಿದೆ.

ಭೇಟಿಯ ಸಮಯ: ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಮತ್ತು ಸಂಜೆ 5 30 ರಿಂದ ರಾತ್ರಿ 9 ರವರೆಗೆ
3- ಇಸ್ಕಾನ್ ದೇವಸ್ಥಾನ
ಬೆಂಗಳೂರಿನಲ್ಲಿರುವ ಇಸ್ಕಾನ್ ದೇವಾಲಯವು ವಿಶ್ವದ ವೈಷ್ಣವರ ಅತಿದೊಡ್ಡ ದೇವಾಲಯಗಳಲ್ಲಿ ಒಂದಾಗಿದೆ. ಇದು ಬೆಂಗಳೂರಿನ ಅತ್ಯಂತ ಪ್ರಸಿದ್ಧ ದೇವಾಲಯಗಳ ಪೈಕಿ ಒಂದು. 1997 ರಲ್ಲಿ ನಿರ್ಮಿಸಲಾದ ಈ ದೇವಸ್ಥಾನವು ಆಕರ್ಷಕ ಮೆರಗನ್ನು ಹೊಂದಿದೆ. ದೇವಾಲಯವು ಕಲ್ಲಿನ ಕೆತ್ತನೆಗಳಿಂದ ಕೂಡಿದೆ. ಈ ದೇವಾಲಯದ ಪ್ರವೇಶದ್ವಾರದಲ್ಲಿ ನೀರಿನ ಕಾರಂಜಿಗಳು ಮತ್ತು ಬೃಹತ್ ಕಮಾನುಗಳಿವೆ.
ದೇವಾಲಯದ ಒಳಗೆ ಆಕರ್ಷಕವಾಗಿ ಅಲಂಕೃತವಾಗಿರುವ ಶ್ರೀಕೃಷ್ಣನ ವಿಗ್ರಹಗಳನ್ನು ಕಾಣಬಹುದು. ದೇವಾಲಯದ ಒಳಗೆ ಐದು ಪ್ರಾರ್ಥನಾ ಮಂದಿರಗಳಿವೆ ಮತ್ತು ಸಂಕೀರ್ಣವೂ ಇದೆ.

ದರ್ಶನ ಸಮಯ: ಬೆಳಗ್ಗೆ 4.15 ರಿಂದ ಬೆಳಿಗ್ಗೆ 5, ಬೆಳಿಗ್ಗೆ 7.15 ರಿಂದ ಮಧ್ಯಾಹ್ನ 1 ಮತ್ತು ಸಂಜೆ 4 ರಿಂದ ರಾತ್ರಿ 8.30
4- ಕೋಟೆ ವೆಂಕಟೇಶ್ವರ ದೇವಸ್ಥಾನ
ಬಸವನಗುಡಿಯ ಕೃಷ್ಣರಾಜೇಂದ್ರ(ಕೆಆರ್) ರಸ್ತೆಯಲ್ಲಿ ವೆಂಕಟೇಶ್ವರ ದೇವಸ್ಥಾನವಿದೆ. ಇದನ್ನು 1689 ರಲ್ಲಿ ನಿರ್ಮಿಸಲಾಯಿತು. ಇದು ಬೆಂಗಳೂರಿನ ಅತ್ಯಂತ ಹಳೆಯ ಮತ್ತು ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ವಿಶಿಷ್ಟವಾದ ದ್ರಾವಿಡ ಮತ್ತು ವಿಜಯನಗರದ ವಾಸ್ತುಶಿಲ್ಪ ಶೈಲಿಗಳಿಂದ ಕಟ್ಟಲ್ಪಟ್ಟಿದೆ. ದೇವಾಲಯ ಗರ್ಭಗುಡಿಯಲ್ಲಿ ಭಗವಾನ್ ವೆಂಕಟರಮಣನ ಸುಂದರವಾದ ಪ್ರತಿಮೆ ಇದೆ.
ದೇವಾಲಯದ ಗೋಡೆಗಳ ಮೇಲೆ, ಬ್ರಹ್ಮ, ಶಿವ ಮತ್ತು ವಿಷ್ಣುವಿನ ಸುಂದರವಾದ ಕೆತ್ತನೆಗಳನ್ನು ನೋಡಬಹುದು. ದೇವಾಲಯವು ಪ್ರತಿದಿನ ಸಾಕಷ್ಟು ಪ್ರವಾಸಿಗರನ್ನು ಸೆಳೆಯುತ್ತದೆ. ದೇವಾಲಯದ ಕಂಬಗಳ ಮೇಲಿನ ಸುಂದರವಾದ ಕೆತ್ತನೆಗಳು ಮತ್ತು ಶಾಸನಗಳನ್ನು ನೋಡಬಹುದು.

ಭೇಟಿಯ ಸಮಯ: ಭಾನುವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 3 ರಿಂದ ರಾತ್ರಿ 8 ರವರೆಗೆ ಮತ್ತು ಶನಿವಾರದಂದು ಬೆಳಿಗ್ಗೆ 9 ರಿಂದ ರಾತ್ರಿ 9 ರವರೆಗೆ
5- ಬನಶಂಕರಿ ದೇವಸ್ಥಾನ
ಬೆಂಗಳೂರಿನಲ್ಲಿರುವ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಬನಶಂಕರಿ ದೇವಸ್ಥಾನವು ಬನಶಂಕರಿ ಅಮ್ಮನಿಗೆ ಸಮರ್ಪಿತವಾಗಿದೆ. ಇದನ್ನು 1915 ರಲ್ಲಿ ಅತ್ಯಂತ ಸರಳವಾಗಿ ನಿರ್ಮಿಸಲಾಯಿತು. ಈ ದೇವಾಲಯದ ವಿಶಿಷ್ಟತೆಯೆಂದರೆ ಬನಶಂಕರಿ ಅಮ್ಮನ ಭಕ್ತರು ರಾಹುಕಾಲದಲ್ಲಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಮಂಗಳವಾರ, ಶುಕ್ರವಾರ ಮತ್ತು ಭಾನುವಾರಗಳಂದು ದೇವಸ್ಥಾನವು ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ
ಸ್ಥಳ: ಬನಶಂಕರಿ ಬಸ್ ನಿಲ್ದಾಣದ ಹತ್ತಿರ.
ಭೇಟಿಯ ಸಮಯ: ಬೆಳಿಗ್ಗೆ 6 ರಿಂದ ರಾತ್ರಿ 8 ರವರೆಗೆ
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications