Hero scooter: ಈ ಹೀರೊ ಸ್ಕೂಟರ್ ಕೊಂಡರೆ 40000 ಡಿಸ್ಕೌಂಟ್
ಈ ತಿಂಗಳು, ಹೀರೋ ಮೋಟೋಕಾರ್ಪ್‌ನ ಎಲೆಕ್ಟ್ರಿಕ್ ಬ್ರ್ಯಾಂಡ್ ವಿದಾದ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳಾದ ವಿ1 ಪ್ಲಸ್ ಮತ್ತು ವಿ1 ಪ್ರೊ ಮೇಲೆ ಉತ್ತಮ ಕೊಡುಗೆ ಇದೆ. ಕಂಪನಿಯು ಈ ಎರಡೂ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ರೂ 40,000 ವರೆಗೆ ಭರ್ಜರಿ ಡಿಸ್ಕೌಂಟ್ ನೀಡಲಿದೆ. ಈ ಸ್ಕೂಟರ್‌ಗಳು ರಿಮೂವೇಬಲ್ ಬ್ಯಾಟರಿ ಹೊಂದಿವೆ. ಈ ಎರಡೂ ಸ್ಕೂಟರ್‌ಗಳ ಲುಕ್ ಹಾಗೂ ವಿನ್ಯಾಸ ಸಖತ್ ಆಗಿದೆ.
ಬ್ಯಾಟರಿ ಮತ್ತು ಶಕ್ತಿ
ಈಗಾಗಲೇ ಭಾರೀ ಸದ್ದು ಮಾಡುತ್ತಿರುವ ಹೀರೋ ಕಂಪನಿಯ ಈ ಸ್ಕೂಟರ್‌ನಲ್ಲಿ ಹಲವು ವಿಶೇಷಗಳಿವೆ. ಅದರಲ್ಲಿ ಪ್ರಮುಖವಾಗಿ ವಿದಾ ವಿ1 ಪ್ಲಸ್ 3.44 kWh ಬ್ಯಾಟರಿ ಹಾಗೂ V1 ಪ್ರೊ 3.94 kWh ಬ್ಯಾಟರಿ ಒಳಗೊಂಡಿದೆ. ನೀವು ಒಂದು ವೇಳೆ ಒಮ್ಮೆ ಈ ಸ್ಕೂಟರ್‌ನ್ನು ಫುಲ್ ಚಾರ್ಜ್ ಮಾಡಿದ್ದೇ ಆದಲ್ಲಿ 143 ಕಿಲೋ ಮೀಟರ್ ವರೆಗೆ ಓಡಿಸಬಹುದು. ಈ ಸ್ಕೂಟರ್ ಜಸ್ಟ್ 3.4 ಸೆಕೆಂಡ್‌ಗಳಲ್ಲಿ ಪಿಕಪ್ ತೆಗೆದುಕೊಳ್ಳುತ್ತದೆ.

Hero Vida V1 Plus 3.44 kWh ಬ್ಯಾಟರಿ ಹೊಂದಿದೆ. ಇದಲ್ಲದೇ V1 ಪ್ರೊ 3.94 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಎರಡೂ ರೂಪಾಂತರಗಳು 6 kW ವಿದ್ಯುತ್ ಮೋಟರ್ ಅನ್ನು ಹೊಂದಿವೆ. Vida V1 Plus ನ ಗರಿಷ್ಠ ವೇಗವು 80 kmpl ಆಗಿದೆ. ಪೂರ್ಣ ಚಾರ್ಜ್ ಮಾಡಿದರೆ 143 ಕಿ.ಮೀ ದೂರ ಕ್ರಮಿಸಬಹುದು. 0-40 ಕಿಮೀ ವೇಗವನ್ನು ಹೆಚ್ಚಿಸಲು ಇದು 3.4 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ.
ಈ ಸ್ಕೂಟರ್‌ನ ಇನ್ನೊಂದು ವಿಶೇಷತೆ ಅಂದರೆ ನೀವು ಇದರ ಬ್ಯಾಟರಿಯನ್ನು ತೆಗೆದು ಸಹ ಚಾರ್ಜ್ ಮಾಡಬಹುದು. ಅಷ್ಟೇ ಏಕೆ ಮನೆಯಲ್ಲಿ ಚಾರ್ಜ್ ಮಾಡಬಹುದು. ಈ ಸ್ಕೂಟರ್‌ನಲ್ಲಿ 7-ಇಂಚಿನ TFT ಪರದೆಯನ್ನು ನೀಡಲಾಗಿದೆ. ಇದರಲ್ಲಿ ಹಲವು ಸ್ಮಾರ್ಟ್ ಫೀಚರ್‌ಗಳು ಇವೆ.

ವಿದಾ ಸ್ಕೂಟರ್ ಅನ್ನು ರಿವರ್ಸ್ ಅಸಿಸ್ಟ್, ಟು-ವೇ ಥ್ರೊಟಲ್ ಮತ್ತು ತ್ವರಿತ ಓವರ್‌ಟೇಕ್‌ಗಳಿಗಾಗಿ ಬೂಸ್ಟ್ ಮೋಡ್‌ಗೆ ಶಿಫ್ಟ್ ಸಹ ಮಾಡಬಹುದು. ನೀವು ಅವುಗಳನ್ನು ಚಾರ್ಜ್ ಮಾಡಬಹುದಾದ ಕಂಪನಿಯಿಂದ ಪೋರ್ಟಬಲ್ ಚಾರ್ಜರ್ ಲಭ್ಯವಿದೆ.
ಬೆಲೆ ಮತ್ತು ಕೊಡುಗೆಗಳು
Hero Vida V1 Plus ಬೆಲೆ 1,02,700 ರೂ ಆಗಿದ್ದರೆ, Vida V1 Pro ಬೆಲೆ 1,30,200 ರೂ. ಆಗಿರುವ ಸಾಧ್ಯತೆ ಇದೆ. ನೀವು ಈ ತಿಂಗಳು ಈ ಸ್ಕೂಟರ್ ಪಡೆದರೆ 40,000 ರೂ.ವರೆಗೆ ಪ್ರಯೋಜನಗಳನ್ನು ಪಡೆಯಬಹುದು. 10,000 ಸಬ್ಸಿಡಿ ಪ್ರಯೋಜನದ ಲಾಭವನ್ನು ಪಡೆಯುತ್ತೀರಿ.












Click it and Unblock the Notifications