ಹುತಾತ್ಮ ಅಣ್ಣನ ಪ್ರತಿಮೆಗೆ ರಾಖಿ ಕಟ್ಟಿ ಕಣ್ಣೀರಿಟ್ಟ ತಂಗಿ
ರಕ್ಷಾ ಬಂಧನದ ದಿನ ಬಂದರೆ ಅದೆಷ್ಟು ಹೃದಯಸ್ಪರ್ಶಿ ಘಟನೆ- ಸನ್ನಿವೇಶಗಳು ವರದಿ ಆಗುತ್ತವೆ! ಅಂಥ ವರದಿಗಳ ಪೈಕಿ ಒಂದು ಛತ್ತೀಸ್ ಗಢದಿಂದ ಬಂದಿದೆ. ಈ ಬಗ್ಗೆ ಓದಿದರೆ ಎಂಥವರ ಕಣ್ಣಾಲಿಗಳೂ ಒದ್ದೆಯಾಗುತ್ತವೆ. ಈ ಸಹೋದರಿ ಇದ್ದ ತನ್ನ ಒಬ್ಬನೇ ಸೋದರನನ್ನು ಕಳೆದುಕೊಂಡಿದ್ದು, ಆತನ ಸಮಾಧಿ ಬಳಿ ಇರುವ ಪ್ರತಿಮೆಗೆ ರಾಖಿ ಕಟ್ಟಿದ್ದಾರೆ.
ನಾಲ್ಕು ವರ್ಷದ ಹಿಂದೆ ಸುಕ್ಮಾ ಸೆಕ್ಟರ್ ನಲ್ಲಿ ನಡೆ ನಕ್ಸಲ್ ದಾಳಿಯಲ್ಲಿ ಪೊಲೀಸ್ ಕಾನ್ ಸ್ಟೇಬಲ್ ರಾಜೇಶ್ ಗಾಯಕ್ ವಾಡ್ ಹುತಾತ್ಮರಾಗಿದ್ದರು. ಅವರ ತಂಗಿ ಶಾಂತಿ ಉಡ್ಕೆ ಇಂದು (ಭಾನುವಾರ, ಆಗಸ್ಟ್ ಇಪ್ಪತ್ತಾರು) ಸಮಾಧಿ ಬಳಿ ಇರುವ ಪ್ರತಿಮೆಗೆ ರಾಖಿ ಕಟ್ಟಿದ್ದು, ಹೀಗೆ ಕಳೆದ ನಾಲ್ಕು ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ.

ನನ್ನ ಜತೆಗೆ ಒಡಹುಟ್ಟಿದ್ದು ಅಣ್ಣ ಒಬ್ಬನೇ. ಅವನೆಂದರೆ ನನಗೆ ಬಹಳ ಪ್ರೀತಿ. ಅವನಿಗೂ ನನ್ನ ಮೇಲೆ ಅಷ್ಟೇ ಪ್ರೀತಿ ಇತ್ತು. ಸುಕ್ಮಾ ಸೆಕ್ಟರ್ ನ ತೋಂಗ್ ಪಾಲ್ ನಲ್ಲಿ ಅವನ ಪೋಸ್ಟಿಂಗ್ ಇತ್ತು. ನಾಲ್ಕು ವರ್ಷಗಳ ಹಿಂದೆ ಹುತಾತ್ಮನಾದ. ಆಗಿನಿಂದ ಇಲ್ಲಿಗೆ ಬಂದು, ಪ್ರತಿ ವರ್ಷ ರಕ್ಷಾಬಂಧನ ಕಟ್ಟುತ್ತಿದ್ದೀನಿ. ಅವನಿಲ್ಲ ಅನ್ನೋ ದುಃಖ ನಾನು ಬದುಕಿರುವ ತನಕ ಕಾಡುತ್ತಲೇ ಇರುತ್ತದೆ ಎನ್ನುತ್ತಾರೆ ಶಾಂತಿ.












Click it and Unblock the Notifications